ಹೀಗೆ ಬೆಳಗ್ಗೆ ಒಮ್ಮೆ ಮಾತಿಗೆ ಸಿಕ್ಕಿದ ಕರಾವಳಿ ರೈಲು ಬ್ಲಾಗಿನ ತಮ್ಮ " ವಾಣಿ ಅಕ್ಕ ಒಂದು ಕವನ ಬರಿತ್ಯನೆ ಈ ಫೋಟೋ ನೋಡಿ, ನಂಗ ೩ ಜನ ಈಗಲೇ ಬರದ್ಯ"ಎಂದಾಗ ಒಮ್ಮೆಲೇ ಕಸಿವಿಸಿ ಆದರೂ ಏಕೆ ಬರೆಯಬಾರದು ಅನ್ನಿಸಿದ್ದು ಸುಳ್ಳಲ್ಲ..ಇಲ್ಲಿಯವರೆಗೆ ನಾನು ನನಗನ್ನಿಸಿದ್ದನ್ನು ಬರೆದಿದ್ದೇನೆಯೇ ಹೊರತು ಒಂದು ಚೌಕಟ್ಟಿನ ಒಳಗೆ ಬರೆಯುವ ಪ್ರಯತ್ನ ಮಾಡಿರಲಿಲ್ಲ.ಅದು ಫೋಟೋ ನೋಡಿ ಬರೆಯುವ ಸಾಹಸ ಮಾಡಿರಲಿಲ್ಲ.ಕೊನೆಗೂ ಅವನ ಕೋರಿಕೆಗೆ ಮಣಿದು ಅವ ಕಳುಹಿಸಿದ ಪ್ರವೀಣ್[http://nenapinasaalu.blogspot.com] ತೆಗೆದ ಫೋಟೋ ನೋಡಿ ನನ್ನ ಮನಸಿಗೆ ಬಂದ ಒಂದಷ್ಟು ಸಾಲುಗಳನ್ನು ಬರೆದಿದ್ದೇನೆ..ಈಗಾಗಲೇ ಇದು ಕರಾವಳಿ ರೈಲು ಬ್ಲಾಗಿನಲ್ಲಿ ಹಾಕಿದೆ[ಬರೆದ ನಾಲ್ಕು ಕವನ ಗಳು 'ಒಂದು ಜೀವ ,ನಾಲ್ಕು ಭಾವ 'ಎಂಬ ಹೆಸರಿನಲ್ಲಿ http://karavalirail.blogspot.com].ನಾನು ಬರೆದ ಸಾಲುಗಳನ್ನು ಇಲ್ಲಿ ಹಾಕಿದ್ದೇನೆ.ಓದಿ ಹೇಗಿದೆ ಅಂತ ನಿಮ್ಮ ಅಭಿಪ್ರಾಯ ತಿಳಿಸಿ...
ನೆತ್ತಿ ಸುಡುವ ಬಿಸಿಲಿನಲಿ
ನೆರಳ ಹುಡುಕಿಹ ಜೀವವೇ
ಕುಸಿದು ಕುಳಿತೇಯಾ ಬದುಕ ವಾಸ್ತವವ ನೆನೆದು..
ಹಸಿರಾದ ಪೈರು,ಮಾಗಿ ಸೊಂಪಾದ ಕಾಳು
ಜಳ್ಳಾಗಿ ಉರುಳಿ ಹಾರಿದವೇ
ವಿಧಿಯ ಕ್ರೌರ್ಯಕ್ಕೆ ತಲೆಬಾಗಿ ಮಣಿದು...
ಒಂಟಿ ಬಯಲಿನಲಿ,ಒಂಟಿ ಮರದ ಅಳಲು
ಸೋತ ರಟ್ಟೆಯ ಕಷ್ಟ ಕೇಳುವವರಾರಿಲ್ಲ
ಹರಿದ ಕಣ್ಣೀರು,ಕರಗಿ ಸೊರಗಿ ಬೆವರಾಗಿ ಸುರಿದು....
ಮರುಗದಿರು ಜೀವವೇ,ಮತ್ತೆ ಚಿಗುರದು ಹುಲ್ಲು
ಸಾಗಿ ಸವೆಯಲೇ ಬೇಕು ಬದುಕ ದಾರಿ...
ಹುಟ್ಟಿಸಿದ ದೇವರು ಹುಲ್ಲನೀಯುವ ತನಕ
ಸಲ್ಲಬೇಕು ಬರಡು ಭೂಮಿಗೂ ನೀರು ನ್ಯಾಯದಲ್ಲಿ......

16 comments:
wow wonderful kavana...
ವಾಣಿ,
ತುಂಬಾ ಚೆನ್ನಾಗಿ ಬಂಜು ಕವಿತೆ.. ಅದರಲ್ಲೂ ಮೊದಲ ಹಾಗೂ ಕೊನೆಯ ಪ್ಯಾರಾ ತುಂಬಾ ಇಷ್ಟ ಆತು.
nice lines..
ಫೋಟೋದಲ್ಲಿನ ಭಾವವನ್ನು ಸಮರ್ಥವಾಗಿ ಬಿಂಬಿಸುವ ಕವಿತೆ ವಾಣಿ , ಚೆನ್ನಾಗಿದೆ .
Nice yaar..:)
chenda iddu Vani...
ಮರುಗದಿರು ಜೀವವೇ,ಮತ್ತೆ ಚಿಗುರದು ಹುಲ್ಲು
ಸಾಗಿ ಸವೆಯಲೇ ಬೇಕು ಬದುಕ ದಾರಿ...
ಹುಟ್ಟಿಸಿದ ದೇವರು ಹುಲ್ಲನೀಯುವ ತನಕ
ಸಲ್ಲಬೇಕು ಬರಡು ಭೂಮಿಗೂ ನೀರು ನ್ಯಾಯದಲ್ಲಿ......
sooper lines ... nammura nagigondu Jai !
Vanishri,
The poem and photo makes the reader feel that he is in that place and experiencing it. Good outcome.
'ಶ್ರೀ' ಮಾನ್ಯರೆ,
ನಿಮ್ಮೆಲ್ಲರ ಕವನಗಳನ್ನು ಓದಿದೆ. ಪೈಪೋಟಿಗೆ ಇಳಿದಿರುವಂತೆ ಒಂದಕ್ಕಿಂತ ಇನ್ನೊಂದು ಸೊಗಸಾಗಿ ಮೂಡಿಬಂದಿವೆ.
ಒಳ್ಳೆ ಪ್ರಯತ್ನ. ಎಲ್ಲರಿಗೂ ಅಭಿನಂದನೆಗಳು.
ಹೀಗೆ ವಿವಿಧ ಪ್ರಯೋಗಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮೆಲ್ಲರಿಂದ ವಿಭಿನ್ನ, ವಿನೂತನ ಬರಹಗಳು ಬರಲೆಂಬ ಹಾರೈಕೆ.
ಈ ಕವನದಲ್ಲಿ ಜೀವನ ಚಕ್ರದ ಇಳಿ ಸಂಜೆಯ ಚಿತ್ರಣ ಪರಿಣಾಮಕಾರಿಯಾಗಿ ಅನಾವರಣಗೊಂಡಿದೆ.
ಕೊನೆಯ ಸಾಲುಗಳು ನೊಂದ ಜೀವಕ್ಕೆ ಸಮಾಧಾನ ನೀಡುವ ಭರವಸೆಯ ಕಿರಣದಂತಿವೆ.
ಈ ಭರವಸೆಯ ಬೆಳಕಿನಲ್ಲಿ ಜೀವನ ನಿಂತಿದೆ..
"ಸಾಗಿ ಸವೆಯಲೇ ಬೇಕು ಬದುಕ ದಾರಿ..." tumba ishta aatu. tumba dinagala nantara ondu olle kavana odale sikkiddakke khushi aatu. heege bareeta iri...
ಹಾಯ್ ವಾಣಿಶ್ರೀ,
ಒಂದು ಚೌಕಟ್ಟಿನೊಳಗೆ ಬರಿಯ ನಿನ್ನ ಮೊದಲ ಪ್ರಯತ್ನ ತುಂಬಾನೆ ಚೆನ್ನಾಗಿ ಬಂಜು. ನಿನ್ನ ಪದ ಪ್ರಯೋಗ ತುಂಬಾನೆ ಪ್ರಭಾವಿಯಾಗಿ ಬಂಜು.
ಅದ್ರಲ್ಲೂ
"ಕುಸಿದು ಕುಳಿತೆಯಾ ಬದುಕ ವಾಸ್ತವವ ಮರೆತು
ವಿಧಿಯ ಕ್ರೌರ್ಯಕ್ಕೆ ತಲೆಬಾಗಿ ಮಣಿದು
ಸೋತ ರಟ್ಟೆಯ ಕಷ್ಟ ಕೇಳುವವರಾರಿಲ್ಲ
ಹರಿದ ಕಣ್ಣೀರು,ಕರಗಿ ಸೊರಗಿ ಬೆವರಾಗಿ ಸುರಿದು
ಮರುಗದಿರು ಜೀವವೇ,ಮತ್ತೆ ಚಿಗುರದು ಹುಲ್ಲು
ಸಾಗಿ ಸವೆಯಲೇ ಬೇಕು ಬದುಕ ದಾರಿ
ಹುಟ್ಟಿಸಿದ ದೇವರು ಹುಲ್ಲನೀಯುವ ತನಕ
ಸಲ್ಲಬೇಕು ಬರಡು ಭೂಮಿಗೂ ನೀರು ನ್ಯಾಯದಲ್ಲಿ"
ಇದಸ್ಟೂ ಸಾಲುಗಳು ತುಂಬಾನೆ ಹಿಡಿಸಿದ್ದು ನಂಗೆ.
ಹೀಂಗೆ ಬೇರೆ ಬೇರೆ ತರದ್ ಪ್ರಯತ್ನ ಇನ್ನು ಮುಂದೆನೂ ಬರಲಿ.......
tumba chenaagiddu!
ಚೆನ್ನಾಗಿದೆ ರೀ...
nice
ಹಾಯ್
ವಾಣಿ
ಸುಂದರವಾಗಿದೆ. ಓದಿದ ಮೇಲೆ ನನ್ನ ಮನಸ್ಸಿನ ಬಾವನೆಗಳೇ ಇಲ್ಲಿವೆಯೇನೋ ಎನಿಸಿತ್ತು. ನೇರ ದಿಟ್ಟ ನಿರಂತರವಾಗಿರಲಿ ಬರವಣಿಗೆ
Nice Lines..
ಮನಸ್ಸಿನ ಭಾವನೆಗಳು ನಿರಂತರ...ನೈಸ್ lines ..
ನಿಮ್ಮವ,
ರಾಘು.
Post a Comment