ಹವ್ಯಾಸವಾಗಿ ಬರವಣಿಗೆ ಹೇಗೋ, ಹಾಗೆ ಅಡುಗೆಯ ಹುಚ್ಚು ನನ್ನಲ್ಲಿ..ಹೊಸತನ್ನು ಕಲಿಯುವ, ಮಾಡುವ ಅಭ್ಯಾಸ...ನಾನು ಕಲಿಯುವುದು ಮಾಡುವುದು ನಮಗೆ ಸಿಗುವ ಅತ್ಯಂತ ಸರಳ ವಸ್ತುಗಳಿಂದಲೇ..ಆಫೀಸ್ ನಲ್ಲಿ ಫ್ರೀ ಇದ್ದಾಗ ಅಡುಗೆ ತಾಣಗಳನ್ನು ನೋಡಿ,ನನಗೆ ಇಷ್ಟವಾದದ್ದನ್ನು ಬರೆದು ಕೊಂಡು ನಾನು ಮನೆಗೆ ಹೋದಾಗ ಟ್ರೈ ಮಾಡುತ್ತೇನೆ..ಆದರೆ ಇಲ್ಲಿಯವರೆಗೆ ನಾನು ಯಾರಿಂದಲೂ ಯಾಕಾದರೂ ಹೊಸತನ್ನು ಮಾಡುತ್ತಳೊ ಎಂದು ಬೈಸಿಕೊಂಡಿಲ್ಲ.. ತಕ್ಕಮಟ್ಟಿಗೆ ಚೆನ್ನಾಗೆ ಮಾಡುತ್ತೇನೆ..ಹಾಗೆ ಮೊನ್ನೆ ಮನೆಗೆ ಹೋದಾಗ ಅಡುಗೆ ಕಾರ್ಯಕ್ರಮವನ್ನು ನೋಡುತ್ತಿದ್ದೆ.ದಾಲ್ ರೈಸ್ ಮಾಡುವುದನ್ನು ತೋರಿಸುತ್ತ ಇದ್ದರು.. ನಾನು ಇದು ಹೋಟೆಲಿನಲ್ಲಿ ತಿನ್ನುವ ಕಿಚಡಿ ಇರಬೇಕೆಂದು ಅಂದು ಕೊಂಡೆ..ಅಮ್ಮ ಕೂಡ ಅದೇ ಇರಬೇಕೆಂದು ಹೇಳಿದರು..ಆಮೇಲೆ ಮಾಡುವ ವಿಧಾನ ನೋಡಿದ ಮೇಲೆ ಬೇರೇನೆ ಅನ್ನಿಸಿತು..ಟ್ರೈ ಮಾಡಿದೆ.. ಚೆನ್ನಾಗಿತ್ತು...ಆಫೀಸ್ ಗೆ,ಮಕ್ಕಳ ಲಂಚ್ ಬಾಕ್ಸ್ ಗೆ ಚೆನ್ನಾಗಿ ಇರತ್ತೆ..ನೀವು ಟ್ರೈ ಮಾಡಿ.ಹೇಗಿದೆ ಅಂತ ಹೇಳಿ..
ಬೇಕಾದ ಸಾಮಗ್ರಿಗಳನ್ನು ನಿಮ್ಮ ರುಚಿಗೆ,ಪ್ರಮಾಣಕ್ಕೆ ತಕ್ಕಂತೆ ಬಳಸಿ..
ಸಾಮಗ್ರಿಗಳು..
ಅಕ್ಕಿ, ತೊಗರಿಬೇಳೆ, ಶುಂಟಿ,ಬೆಳ್ಳುಳ್ಳಿ,ಕೆಂಪು ಮೆಣಸಿನ ಪುಡಿ, ಟೊಮೇಟೊ,ಕೊತ್ತಂಬರಿ ಸೊಪ್ಪು,ಗರಂ ಮಸಾಲ,ಹಸಿಮೆಣಸಿನ ಕಾಯಿ,ಈರುಳ್ಳಿ, ಒಗ್ಗರಣೆಗೆ ಎಣ್ಣೆ,ಅರಿಸಿನ,ಸಾಸಿವೆ,ಬೇವಿನ ಸೊಪ್ಪು ಹಾಗು ರುಚಿಗೆ ತಕ್ಕಷ್ಟು ಉಪ್ಪು,ಸ್ವಲ್ಪ ಸಕ್ಕರೆ, ನಿಂಬೆ ರಸ...
ವಿಧಾನ
ಮೊದಲು ಒಂದು ಬಾಣಲಿ ಯಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ,ಅದು ಕಾದ ನಂತರ ಸಾಸಿವೆ, ಹೆಚ್ಚಿಕೊಂಡ ಈರುಳ್ಳಿ ಹಾಕಿ ಫ್ರೈ ಮಾಡಬೇಕು..ಆಮೇಲೆ ಅರಿಸಿನ ಬೆವಿನಸೋಪ್ಪನ್ನು ಹಾಕಬೇಕು..ನಂತರ ಸಣ್ಣದಾಗಿ ಹೆಚ್ಚಿಕೊಂಡ ಟೊಮೇಟೊ, ಶುಂಟಿ ಬೆಳ್ಳುಳ್ಳಿ ಪೇಸ್ಟ್ ನೊಂದಿಗೆ ಬೇಯಲು ನೀರನ್ನು ಹಾಕಬೇಕು..ನೀರು ಚೆನ್ನಾಗಿ ಕುದಿ ಬಂದಮೇಲೆ ಖಾರ ಬೇಕಾದಷ್ಟೇ ಕೆಂಪು ಮೆಣಸಿನ ಪುಡಿ,ಗರಂ ಮಸಾಲ ಪರಿಮಳಕ್ಕೆ ಉದ್ದವಾಗಿ ಹೆಚ್ಚಿಕೊಂಡ ಹಸಿಮೆಣಸಿನ ಕಾಯನ್ನು,ಕೊತ್ತಂಬರಿ ಸೊಪ್ಪನ್ನು ಹಾಕಬೇಕು..
ಕುಕ್ಕರಿನಲ್ಲಿ ಪ್ರಮಾಣಕ್ಕೆ ತಕ್ಕಂತೆ ಅಕ್ಕಿ, ಅದಕ್ಕೆ ತಕ್ಕಂತೆ ತೊಗರಿಬೇಳೆ [ ಒಂದು ಕಪ್ ಅಕ್ಕಿಗೆ ಕಾಲು ಕಪ್ ಬೇಳೆಯಂತೆ] ಹಾಗು ಬಾಣಲಿ ಯಲ್ಲಿ ಮಾಡಿಕೊಂಡ ಮಿಶ್ರಣವನ್ನು ಹಾಕಿ, ಉಪ್ಪು,ಸಕ್ಕರೆ ,ನಿಂಬೆ ರಸ ಬೆರೆಸಿ ,೩ ವಿಸಲ್ ಹಾಕಿಸಿದರೆ ದಾಲ್ ರೈಸ್ ತಿನ್ನಲು ರೆಡಿ..,ಇದು ಆರೋಗ್ಯದಯಕವು ಅಲ್ಲದೆ ,ಮಾಡಲು ತುಂಬಾ ಸುಲಭವಾದ ರೈಸ್ ಬಾತ್ .

