ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ನಕ್ಕುಬಿಡಿ ಒಮ್ಮೆ.... :)

"ನಗುವುದು ಸಹಜ ಧರ್ಮ..ನಗಿಸುವುದು ಪರಧರ್ಮ.." ನಗು ಎನ್ನುವುದು ಮನುಷ್ಯ ಜೀವನದ ಅವಿಭಾಜ್ಯ ಅಂಗ..ಮನುಷ್ಯ ಒಂದುವೇಳೆ ನಘು ಎನ್ನುವುದನ್ನು ಮರೆತರೆ ಏನಾಗಬಹುದೆಂದು ಊಹಿಸಲು ಅಸಾಧ್ಯ.

ನಿನ್ನೆ ಭಾನುವಾರ ಬೇಸರ ಕಳೆಯಲೆಂದು ಟಿವಿ ನೋಡುತ್ತಾ ಕುಳಿತಿದ್ದೆ..ಚಾನೆಲ್ ಬದಲಾಯಿಸುವಾಗ ಯಾವದೋ ಒಂದು ಕನ್ನಡ ಚಾನೆಲ್ಲಿನಲ್ಲಿ ಹಾಸ್ಯದ ಕಾರ್ಯಕ್ರಮ ಮೂಡಿ ಬರುತ್ತಾ ಇತ್ತು.. ಹಾಸ್ಯಕವಿ ದುಂಡಿರಾಜರು ಆ ಕಾರ್ಯಕ್ರಮದ ನಿರೂಪಕರು..ಮೊದಲಿನಿಂದಲೂ ನಾನು ಅವರ ಅಭಿಮಾನಿ.ಈ ಹಾಸ್ಯಕವಿಗಳ ಸಮಯ ಪ್ರಜ್ಞೆ ಹೇಗಿರುತ್ತದೆ ಎಂದರೆ  ದಿನ ನಿತ್ಯದ ಜೀವನದ ಆಗು ಹೋಗುಗಳನ್ನು,ನಾವಾಡುವ ಸಾಮಾನ್ಯ ಭಾಷೆಯಲ್ಲೇ ಹಾಸ್ಯವನ್ನು ಹುಡುಕುವವರು ಅವರು..ಆ ಕಾರ್ಯಕ್ರಮದ ಮೂಲ ಉದ್ದೇಶ ಏನೆಂದರೆ ನಮ್ಮ ರಾಜ್ಯದ ಮೂಲೆ ಮೂಲೆ ಅಲ್ಲಿ ಇರುವ ಹಾಸ್ಯ ಕವಿಗಳನ್ನು ಆಹ್ವಾನಿಸಿ ಅವರ ಪ್ರತಿಭೆಗೆ, ಕವಿತೆಗಳಿಗೆ, ಅಣಕುಗಳಿಗೆ ವೇದಿಕೆ ಒದಗಿಸುವುದು. ಜೊತೆಗೆ ದುಂಡಿರಾಜರ ಹಾಸ್ಯ ರಸಾಯನವು ಹರಿಯುತ್ತದೆ.. ಅಲ್ಲಿ ವಾಚಿಸಿದ ನನಗೆ ಇಷ್ಟವಾದ ಕೆಲವೊಂದನ್ನು ಎತ್ತಿಟ್ಟಿದ್ದೇನೆ.. ಓದಿ ನಕ್ಕುಬಿಡಿ ಒಮ್ಮೆ...

* ಹೆಣ್ಣು ಗಂಡನನ್ನು ವರಿಸುವುದು ಸ್ವಯoವರ
  ಆದರೆ, ಗಂಡು ಹೆಣ್ಣನ್ನು ವರಿಸುವುದು ಸ್ವಯಂ"ವರಿ"  ??
* ನಮ್ಮ ಮನೆಯಲ್ಲಿ ಎಲ್ಲದನ್ನೂ ತೀರ್ಮಾನಿಸುವುದು ಅಪ್ಪನೇ
   ಆದರೆ, ಅಮ್ಮನಿಂದ ಪಡೆದು ಅಪ್ಪಣೆ!!!!!!!!
* ರೋಗಿ ಹೆಂಡತಿ  ಗಂಡನಿಗೆ ನಿದ್ರೆ ಉಂಟೆ ಪಾಪ..
   ಸಾಗಿದವು ಚಿಂತೆಗಳು ಒಂದರ ಹಿಂದೆ ಒಂದು..
   ಹೇಗಿದೆಯೋ ಮುಖಬಣ್ಣ ಎರಡನೇ ಹೆಂಡತಿಗೆ..
   ಜಗ ಹೀಗೆ ಅವಅವರಿಗೆ  ನೋಡಯ್ಯ ತಿಮ್ಮ!!!!
*  ಅವಳದ್ದು ಸಿಮ್ಮಾ ರಾಶಿ
    ಅವನದು ಮೇಷ ರಾಶಿ
    ಮಕ್ಕಳಿಗೆ ಬಾರಿ ಕೇಶ ರಾಶಿ!!!
* ಸತ್ಯ ಹೇಳಿದರೆ ಆಗುವುದು ಗದ್ದಲ ಹರತಾಳ
   ಪಕ್ಕದ ಮನೆಯಾಕೆಗೆ ಚೆಲುವೆ ಎಂದರೆ,
   ಹೆಂಡತಿ ಸುಮ್ಮನೆ ಇರ್ತಾಳ....???!!!


* ಡೊಳ್ಳು ಹೊಟ್ಟೆ ಖಾಲಿ ಖಾಲಿ ಜನನಾಯಕ..

  ಯಾವಾಗಲೂ ತಿನ್ನೋದೆನ ನಿನ್ನ ಕಾಯಕ..
   ಓದೋದಕ್ಕೆ ಬರೋಲ್ಲ, ಬರೆಯೋಕು ಬರೋಲ್ಲ..
   ಮಂತ್ರಿ ಹೆಂಗೆ ಅಗ್ತಿಯಪ್ಪ..????
  (ತಿರುಪತಿ ತಿರುಮಲ ಎಂಬ ಹಾಡಿನ remake )
* ಮಾವ  ಮಾವ ಇಲ್ಲಿ ಮರೆಯಾದೆ..
  ಹೋಗ್ತಾ ಇದೆ ಇಲ್ಲಿ ಅಳಿಯನ ಮರ್ಯಾದೆ...
* ನಾನೇಕೆ ಬಡವನು, ನಾನೇಕೆ ಪರದೇಶಿ
   ಸೋಮಾರಿ ಹೇ ಮಾವ ನೀನಿರುವ ತನಕ..

   ಬೂಟು ಕೊಡಿಸುವವ ನೀನೆ,ಪಾಲಿಶ್ ಹಾಕುವವ ನೀನೆ 
   ಉಡಲು,ತೊಡಲು ಅರಿವೇ ಕೊಡಿಸುವವ ನೀನೆ..
   ಮಾಡದೇ ಬಾಣoತಿಯ ಬಾಣoತನ ಮಾಡಿಸುವವನು ನೀನೆ..
   ನಾನೇಕೆ ಬಡವನು ನೀನಿರುವ ತನಕ...
* ನಿನ್ನೆ ಯಾಕೆ, ಇಂದು ಈಕೆ..
   ನಾಳೆ ಮತ್ತೊಬ್ಬಳೆ....
   ಹೀಗೆ ಬದಲು ಮಾಡಲು
   ಹೆಣ್ಣು ಟಿವಿ ಚಾನೆಲ್ಲೇ.....??? 

23 comments:

Nakku 'bitte' :).....
hahahahaha

 

ಹಾಹಾ....
ಉಳಿದಿದ್ದೆಲ್ಲ ಪೋಸ್ಟುಗಳ ಮಧ್ಯೆ ಇದು ಒಂದು ಹೊಸದು..

ಮಜಾ ಇದ್ದು:)p

 

ವಾಣಿ ಶ್ರೀ ಭಟ್ ಮೇಡಂ ಹಾಸ್ಯ ರಸಾಯನ ಚೆನ್ನಾಗಿದೆ.ಥ್ಯಾಂಕ್ಸ್

--
ಪ್ರೀತಿಯಿಂದ ನಿಮ್ಮವ ಬಾಲು.

 

"ಹೆಣ್ಣು ಗಂಡನನ್ನು ವರಿಸುವುದು ಸ್ವಯoವರ ಆದರೆ, ಗಂಡು ಹೆಣ್ಣನ್ನು ವರಿಸುವುದು ಸ್ವಯಂ "ವರಿ"..."

ಚನ್ನಾಗಿದೆ ದುಂಡಿರಾಜ್ ಅವರ ಹಾಸ್ಯ ಹನಿಗಳು :)

 

ವಾಣಿ,

ಚಾನಗಿದ್ದು ಕಣೆ.. ನಾನಂತೂ ಫುಲ್ ನಕ್ಕು ಬಿಟ್ಟಿ.... :D :D

 

ಎಲ್ಲರು ಮನಸ್ಸು ತುಂಬಿ ನಕ್ಕಿದಕ್ಕೆ ಧನ್ಯವಾದಗಳು...

 

ನಗೆ ಹನಿಗಳು ತುಂಬಾ ಚೆನ್ನಾಗಿವೆ... :-)

 

:-) :-) :-) :-) :-) :-) :-) :-) :-) :-) :-) :-)

 

he cholo idde hanigavana.......

 

good one..dundi raj is awesome

 

ha ha ha.. chennagiddu.. adare eega baruva TV karyakrama.. nage habbadalli tinukidaru nagu barolla.. Dundirajaradu bharapoora hasya.. nangu ista

 

I am happy to say that I have been at the studio while this program recorded. It is a Kasturi tv's program. I am a cameraman over there. Thanks for good article.

 

ನಗೆ ಹನಿಗಳು ತುಂಬಾ ಚೆನ್ನಾಗಿವೆ.vanishri.

 

ಚೆನ್ನಾಗಿದೆ... ಎಸ್ಟೊಂದು ರಸವತ್ತಾಗಿ ಬರೆದಿದ್ದೀರಿ, ನಿಮ್ಮ ಹವ್ಯಾಸ ಮುಂದುವರಿಸಿ. ಬರವಣಿಗೆ ಅನ್ನೋದು ಗಾಡ್ ಗಿಫ್ಟ್. ಇದು ಎಲ್ಲರಿಗೂ ಸಿಗದ ಅದ್ರಷ್ಟ. ಹಾಸ್ಯ ಪ್ರಜ್ಞೆಯಿಂದ ಬರೆಯುವ ಬರಹಗಾರರು ವಿರಳ. ಹೀಗಿರುವಾಗ ತಾವು ವ್ರತ್ತಿಯಲ್ಲಿ ಎಂಜಿನಿಯರ್ ಆಗಿ ಈ ಹವ್ಯಾಸ ಬೆಳಸಿಕೊಂಡಿದ್ದು ಸಂತೋಷ. ನಿಜಕ್ಕೂ ಖುಷಿಯಾಯ್ತು.

 

ಧನ್ಯವಾದಗಳು.. ನೀವು ನನ್ನ ಬರಹದ ಜೊತೆಗೆ ನನ್ನ ಹವ್ಯಾಸವನ್ನು ಮೆಚ್ಚಿದ್ದಕ್ಕಾಗಿ..

 

ದಾಲ್ ರೈಸ್ ಬದ್ಲು ಬೇಳೆ ಅನ್ನ ಅನ್ನಿ ಅಲ್ಲ?

ಚೆನ್ನಾಗಿದೆ.
ಕನ್ನಡಿಗ

 

Blog chenda iddu. article ella odta idde.
visit my blog also : www.nandikal.blogspot.com

 

Post a Comment