ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಸುಮ್ಮನೆ..

 
ಪದೆ ಪದೆ ನೋಡಿದರೂ  ಹೊಸದೇನೂ ಇಲ್ಲ.
ಅವೇ ನಾ ಬರೆದ ಹಳೆಯ ಸಾಲುಗಳು,
ಹೊಸ ಸಾಲುಗಳಿಗೆ ಬರವೆಂದೇನೂ ಅಲ್ಲ,
ಬರೆಯಲು ಸಮಯವಿಲ್ಲ ಎನ್ನುವದಕ್ಕಿಂತ  ಬೇಡದೆ ಹೋದ ಆಲಸ್ಯ..

ಇರುವ ಪುಸ್ತಕಗಳೂ ಧೂಳು ಹಿಡಿಯುತ್ತಿವೆ,
ವರೆಸುವ, ಸರಿ ಇರಿಸುವ ಕೆಲಸವಷ್ಟಕ್ಕೆ ಮುಗಿಯುತ್ತಿದೆ
ನನ್ನ ಸಮಯ ಪೇಜು ತಿರುಗಿಸುವತ್ತಲೂ ಇಲ್ಲ
ನಾನೇ ಎಂದರೆ ನನಗೆ  ಒಂಥರಾ ಹಾಸ್ಯ..

ಒಮ್ಮೊಮ್ಮೆ ನಿಟ್ಟುಸಿರು, ಒಮ್ಮೊಮ್ಮೆ ಸಂತಸ  ಮತ್ತೊಮ್ಮೆ ಬೇಜಾರು
ಬರೆಯದೆ ಇರುವವಳೂ ನಾನೊಬ್ಬಳೆ ಅಲ್ಲ,
ನನ್ನಂತೆ ಹಲವರು, ಅವರವರದೇ ಪ್ರಪಂಚ
ಅಂಥವರ ಗುಂಪಿಗೆ ನಾನು ಒಂದು ಸದಸ್ಯ.....