ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಸುಮ್ಮನೆ..

 
ಪದೆ ಪದೆ ನೋಡಿದರೂ  ಹೊಸದೇನೂ ಇಲ್ಲ.
ಅವೇ ನಾ ಬರೆದ ಹಳೆಯ ಸಾಲುಗಳು,
ಹೊಸ ಸಾಲುಗಳಿಗೆ ಬರವೆಂದೇನೂ ಅಲ್ಲ,
ಬರೆಯಲು ಸಮಯವಿಲ್ಲ ಎನ್ನುವದಕ್ಕಿಂತ  ಬೇಡದೆ ಹೋದ ಆಲಸ್ಯ..

ಇರುವ ಪುಸ್ತಕಗಳೂ ಧೂಳು ಹಿಡಿಯುತ್ತಿವೆ,
ವರೆಸುವ, ಸರಿ ಇರಿಸುವ ಕೆಲಸವಷ್ಟಕ್ಕೆ ಮುಗಿಯುತ್ತಿದೆ
ನನ್ನ ಸಮಯ ಪೇಜು ತಿರುಗಿಸುವತ್ತಲೂ ಇಲ್ಲ
ನಾನೇ ಎಂದರೆ ನನಗೆ  ಒಂಥರಾ ಹಾಸ್ಯ..

ಒಮ್ಮೊಮ್ಮೆ ನಿಟ್ಟುಸಿರು, ಒಮ್ಮೊಮ್ಮೆ ಸಂತಸ  ಮತ್ತೊಮ್ಮೆ ಬೇಜಾರು
ಬರೆಯದೆ ಇರುವವಳೂ ನಾನೊಬ್ಬಳೆ ಅಲ್ಲ,
ನನ್ನಂತೆ ಹಲವರು, ಅವರವರದೇ ಪ್ರಪಂಚ
ಅಂಥವರ ಗುಂಪಿಗೆ ನಾನು ಒಂದು ಸದಸ್ಯ.....

 

6 comments:

ಬರೆಯಲಾಗಲಿಲ್ಲವಲ್ಲ ಎನ್ನುವ ಕೊರಗು ಪ್ರತಿ ಕವಿಗೂ ಕಾಡಲೇ ಬೇಕು. ಆಗಲೇ ನಿಜ ಕಾವ್ಯೋದ್ಭವ... ಒಳ್ಳೆಯ ಕವನ...

 

ಬದ್ರಿಯವರ ಮಾತು ಸರಿ....
ಆದರೆ ಬರೆಯದೇ ಇರುವವರ ಗುಂಪಿಗೆ ಸದಸ್ಯನಾಗಿ
ಬರೆಯುವವರ ಗುಂಪನ್ನು ಬಿಟ್ಟು ಬಿಡಬೇಡ.....

ನೀನು ಬರೆಯುವವರ ಗುಂಪಲ್ಲಿದ್ದರೇನೇ ಚಂದ....ಖುಷಿ...

ಬರೆಯದೇ ಇರುವುದಕ್ಕೆ ಬರೆದ ಒಳ್ಳೆಯ ಸಾಲುಗಳು...

 

ಓಹ್ ತುಂಬಾ ದಿನಗಳ ನಂತರ ನಿಮ್ಮ ಬ್ಲಾಗ್ ಗೆ ಬಂದೆ....
ಹಮ್...ಬರೆಯುವುದು...ಬಿಡಿ ಭಾವದ ಅಭಿವ್ಯಕ್ತಿ ಮುಖ್ಯ ಮಾಧ್ಯಮ ಯಾವುದಾದರೇನು...ಪದಗಳನ್ನು ಕೂಡಿಸಿದರೆ ಕವನ,ಹಂಗೆ ಹರಿಯಬಿಟ್ಟರೆ ಮಾತು.....

 

ಈ ಕವಿತೆ ಓದಿದ ಮೇಲೆ ನನ್ನ ಅಭಿಪ್ರಾಯ ಹೀಗಿದೆ
ನೀವು ಕವಿತೆ , ಕವಿತ್ವದ ಹತ್ತಿರಾ ಹೋಗ್ತಾ ಇದ್ದೀರಾ . ಸಂತೋಷದ ವಿಷಯ . ಶಬ್ದಗಳ ಜೋಡಣೆ ಕಾವ್ಯ ಆದರೆ ಕವಿತ್ವ ಸಾಯುತ್ತೆ
ಸತ್ಯದ ದಿಗ್ದರ್ಶನದಿಂದ ಮತ್ತು ಅನುಭವದಿಂದ ಅದೇ ಧಾರಾಕಾರವಾಗಿ ಹುಟ್ಟುವ ಕವಿತೆ ಆಗಬೇಕು .

ಪ್ರಸನ್ನ ಹಾವನೂರ (your regular reader )

 

ತುಂಬಾ ಚೆನ್ನಾಗಿ ಬರಿಯುತ್ತಿರ...ನನಗಂತು ಇಷ್ಟವಾಯಿತು. ಯಾಕೆ ನಿಧಾನಿಸುತ್ತೀರಿ...?
ತಿಂಗಳಿಗೊಂದಾದರೂ ಕವಿತೆ ಅಥವಾ ಲೇಖನ ಬರೆಯಿರಿ.

 

Post a Comment