ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ನಾನೂ ಮತ್ತು ನನ್ನ ಪಚೀತಿಯೂ

 
ಇತ್ತೀಚಿಗೆ ನೀನು ಏನೂ ಬರೆಯುತ್ತಿಲ್ಲ. ಇನ್ನೆರಡು ತಿಂಗಳಿಗೆ ೧ ವರ್ಷ ಆಗುತ್ತದೆ ಬ್ಲಾಗ್  ಬರೆದು. ಹೋಗೆ ಎಂದು ಇವನು ಅಲವತ್ತು ಕೊಳ್ಳುತ್ತಿದ್ದರೆ ನಾನು ನನ್ನ ಪಾಡಿಗೆ ಟಿ .ವಿ ರಿಮೋಟ್  ಅಲ್ಲಿ  642 ಎನ್ನುವ ನಂಬರ್ ಅನ್ನೇ ಒತ್ತುತ್ತಿದ್ದೆ . ಅದು ನಮ್ಮ ಮನೆಯಲ್ಲಿ ಈ ಟಿ .ವಿ ಪ್ರಸಾರ ಮಾಡೋ ನಂಬರ್ .. ಟಿ .ವಿ ಅಲ್ಲಿ ಯಾವದೋ ಸೀರಿಯಲ್  ಬರುತ್ತಿತ್ತು. ಆದರೆ ಇಂದೇಕೋ 
ಸೀರಿಯಲ್ ನೋಡುವ ಮನಸ್ಸು ಅವನ ಮಾತುಗಳನ್ನು ಕೇಳಿದಮೇಲೆ ನನ್ನಲ್ಲಿ ಇರಲಿಲ್ಲ. ಹೌದಲ್ಲವೇ ನಾನು ಬರಹಗಳನ್ನು 
ಕುಟ್ಟದೇ ಒಂದು ವರ್ಷ ಆಯಿತೆ?  ಅಯ್ಯೋ ರಾಮ ನನ್ನ ಬ್ಲಾಗ್ ಇದೆಯೇ  ಅಥವಾ ಅದು ಹೊಸ ಹೊಸ ಬರಹಗಾರರ ನಡುವೆ 
ಎಲ್ಲೋ ಕಳೆದು ತಳ ಸೇರಿದೆಯೇ?.. ಒಂದು ರೀತಿಯ ಆತಂಕ ನನ್ನಲ್ಲಿ ಉಂಟಾಗುತ್ತಿದ್ದಂತೆ ಯಾವ ನೆಚ್ಚಿನ ಧಾರಾವಾಹಿ ಆದರೂ ನನಗೆ ಹಿಡಿಸಿತು ಹೇಳಿ . ಸರಿ ನಾಳೆ ಒಂದು ಬಾರಿ ನೋಡೇ ಬಿಡಬೇಕು ಅಂತ ಮನಸ್ಸು ಅಂದುಕೊಂಡರು ಅವನಲ್ಲಿ ಮಾತ್ರ ಹೇಳಲಿಲ್ಲ . 
 
ಮಲಗುತ್ತಿದ್ದಂತೆ ಅಯ್ಯೋ ಇತ್ತೀಚಿಗೆ ಬರೆಯಲಂತೂ ಬರೆಯುತ್ತಿಲ್ಲ, ಏನನ್ನಾದರೂ ಓದಿದ್ದೆನೆಯೇ  ಅದು ಇಲ್ಲ. ಮನೆಯ ಥಂಡಿಗೆ  ಇದ್ದ ಪುಸ್ತಕಗಳೆಲ್ಲ ನನ್ನ ಬುದ್ಧಿ ಅಂತೆ ಮಂಕಾಗಿ ಮೂಲೆಯಲ್ಲಿ ಕುಳಿತಿವೆ ..ಇದೊಂದು ವರ್ಷದಲ್ಲಿ ನಾನು ಮಾಡಿದ್ದಾದರೂ ಎನು. ನೋಡುತ್ತಿರುವ ಒಂದು ಧಾರಾವಾಹಿಯೂ ಕೊನೆ ಕಾಣಲಿಲ್ಲ .ಮೊದ  ಮೊದಲು ಅವನು ಕ್ರಿಕೆಟ್  ನೋಡುತ್ತಿದ್ದನ್ನು ತಪ್ಪಿಸಲು ಧಾರಾವಾಹಿಯ ಮೊರೆ ಹೋಗಿದ್ದೆ ತಪ್ಪಾ ಯಿತೇ . ಏನಾರು ಇರಲಿ. ನಾಳೆ ಏನಾದರು ಬರೆದೇ  ಬಿಡಬೇಕು  ಎಂದು ಮಲಗಿದಮೇಲೆ ನಿದ್ದೆ ಹತ್ತಿದ್ದೆ ತಿಳಿಯಲಿಲ್ಲ . 
 
ಮರುದಿನ ಬೆಳಗ್ಗೆ ಎಲ್ಲ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಮನಸ್ಸಿನಲ್ಲಿ ಇದ್ದ ಆತಂಕ ದಲ್ಲೇ ಬ್ಲಾಗ್ ಓಪನ್ ಮಾಡಬೇಕು ಅಂದು ಕೊಂಡರೆ ನನ್ನ ಬ್ಲಾಗ್ ವಿಳಾಸ ನನಗೆ ಮರೆತು ಹೋಗಬೇಕೇ.. ಇದೇನಪ್ಪ ಎಂದೂ ಮತ್ತು ಹೆಚ್ಚಾದ ಆತಂಕದಲ್ಲಿ  ಯಾರನ್ನಾದರೂ ಕೇಳೋಣ ಅಂದು ಕೊಂಡರೆ ಯಾರನ್ನ ಕೇಳಲಿ . ಒಂದು ರೀತಿಯ ನಾಚಿಕೆಯ ವಿಷಯ. ಕೇಳಿದವರು ಏನೆಂದು ಕೊಂಡಾರೂ. ಬ್ಲಾಗ್ ಎನ್ನುವುದು ನನ್ನ ಮಗುವಂತೆ, ನನ್ನ ಭಾಗವಂತೆ ಎಂದೆಲ್ಲಾ  ನಾನೆ ಬರೆದು, ನನ್ನ ವಿಳಾಸ ಏನೆಂದು ಕೇಳಿದರೆ ಕೇಳಿದವರು ನಕ್ಕು ಬಿಟ್ಟಾರು . ಏನೇ ಇರಲಿ ನಾನೆ ನೆನಪು ಮಾಡಬೇಕು . ಕೇಳಿದರೆ ನಾ ಬರೆಯುವುದಲ್ಲಾ  ಸುಳ್ಳಾ ದಿತು.  ಹಾಗೆ ಹೀಗೆ ಹುಡಕಿ ಕೊನೆಗೆ ನನ್ನ ಫೇಸ್ ಬುಕ್ ಅಕೌಂಟ್ ಅಲ್ಲೇ ಇದ್ದ ನನ್ನ ವಿಳಾಸ ಓಪನ್  ಮಾಡಿದರೆ ನನ್ನಂತೆ ಬರೆಯದೆ ಇದ್ದವರು ಹಲವರಿದ್ದರು.  ಸರಿ ಬರೆದೆ ಬಿಡಬೇಕು  ಎಂದರೆ ಅವತ್ತೇ ಕನ್ನಡ ಎಡಿಟರ್
ಬರದೆ ಇರಬೇಕೆ. ಅದೇ ಬರುತ್ತಿಲ್ಲವೇ ಅಥವಾ ನನಗೆ ಎಲ್ಲಿದೆ ಎಂದು ನೆನಪಗುತ್ತಿಲ್ಲವೆ..   ಸರಿ ಬಂದಿದ್ದ ಒಂದಿಷ್ಟು ಕಾಮೆಂಟ್ 
ಗಳನ್ನೂ ನೋಡಿ ಮತ್ತೆ ತಿರುಗಿ ನೋಡಿದರೆ ಹೌದು ಇದೆ ಜಾಗದಲ್ಲಲ್ಲವೇ  ಇದ್ದಿದು . ಹೌದು ಇಂದು ಬರುತ್ತಿಲ್ಲ. ಎಂದು ನನಗೆ ಸಮಾಧಾನ ಮಾಡಿಕೊಂಡೆ. ಅಕ್ಷರ ಹುಡುಕುವ  ಕ್ಷಣದಲ್ಲಿ ಒಂದು ಭಾರಿ ತಾರೆ ಜಮೀನ ಪರ ನ ಹುಡುಗ ನೆನಪಾಗಿದ್ದ. 
 
ಸರಿ ಇದಲ್ಲದರೆನಂತೆ ಕನ್ನಡ ಬರಹ ಸಾಫ್ಟ್ವೇರ್ ಇಲ್ಲವೇ ನನ್ನ ಲಾಪಿ  ಯಲ್ಲಿ. ಅದರಲ್ಲೇ ಏನಾದರೂ ಕುಟ್ಟೋಣ  ಅಂದು ಕೊಂಡು  ಇದ್ದ ಒಂದಿಷ್ಟು ಆಫೀಸ್ ಕಡತ ಗಳ ನಡುವೆ ಕಳೆದು ಹೋಗಿದ್ದ ಬರಹವನ್ನು ಹುಡಕಿ ಓಪನ್ ಮಾಡಿದರೆ 'Software
corrupted' ಎಂದು ಬೈದು ಬಿಡಬೇಕೇ. ಸಾಫ್ಟ್ವೇರ್  ಇರುವುದು ಬೇಕಾದಾಗ ಕೈ ಕೊಡಲು ಅಯ್ಯೋ ಇದು ಇಲ್ಲದರೆ ಏನಂತೆ online ಎಡಿಟರ್ ಅಲ್ಲಿ ಬರೆದು ಬಿಡ್ತೀನಿ  ಎಂದು ಅಂದು ಬರೆಯಲು ಶುರುಮಾಡಿ  ೧೦ ವಾಕ್ಯ ಆಗಿ ಇನ್ನೇನು ಬರಹ ಸರಾಗವಾಗಬೇಕು ಎನ್ನಲೂ ಎಡಿಟರ್ ಹ್ಯಾಂಗ್  ಆಗಲು ಸರಿ ಅಯಿತು. ತಥ್  ಇವತ್ತಿನ ದಿನವೇ ಸರಿ ಇಲ್ಲ ಎಂದು ಎಲ್ಲವನ್ನು ಕ್ಲೋಸ್  ಮಾಡಿ ಮತ್ತೆ ಆವತ್ತಿನ ದಿನವನ್ನು  ಎಂದಿನಂತೆ ಕಳೆದು ಬಿಟ್ಟಿದ್ದೆ 
 
ಮತ್ತೆ ನಿನ್ನೆ ಇದೆ ವಿಷಯ ಬಂದು ನನಗೆ ನನ್ನ ಬ್ಲಾಗ್ ನೆನಪಾಗಲು  ಬ್ಲಾಗ್ ವಿಳಾಸ ಕ್ಯಾಶೆ ಮೆಮೊರಿ ಅಲ್ಲೇ ಇದ್ದಿದ್ದರಿಂದ 
ಓಪನ್ ಮಾಡಿ ಶುರು ಮಾಡಿದಾಗ ಎಲ್ಲವು ಸರಿ ಆದಂತಿತ್ತು . ತುಂಬಾ ದಿನಗಳಾಗಿದ್ದರಿಂದ ವಿಷಯದ ಅಭಾವ ಉಂಟಾಗಿ 
ಇದೆ ವಿಷಯವನ್ನೇಕೆ ಬರೆಯ ಬಾರದೆನ್ನಿಸಿ ಬರೆದಿದ್ದು ಅಯಿತು. 
 
ನಾನೊಬ್ಬಳೆ ಅಲ್ಲ ನನ್ನಂತೆ ಹಲವರು  ಬರೆಯ ಬಲ್ಲವರು ಟಿ .ವಿ,  ಆಫೀಸ್, ವೀಕೆಂಡ್ , ಟ್ರಿಪ್ , ಫೇಸ್ಬುಕ್  ಅಂತ ಅವರದ್ದೇ ಪ್ರಪಂಚದಲ್ಲಿ ಕಳೆದು ಹೋಗಿ  ನಮಗೆ ಒಲಿದಿರುವ ಕಲೆಯನ್ನು ಮರೆಯುವಂತಾಗಿದೆ . ಕಲೆ ಎನ್ನುವುದು ಬೆಳೆಸಿದಂತೆ ಬೆಳೆಯುತ್ತದೆ , ಮರೆತರೆ ಅಲ್ಲೇ ಅಳಿಯುತ್ತದೆ . ಎಷ್ಟೋ ಬಾರಿ ಅನಿವಾರ್ಯತೆಯ ಕಾರಣದಿಂದಲೋ , ಸಮಯದ ಅಭಾವದಿಂದಲೋ ಹವ್ಯಾಸ ಕ್ಕೆ  ಸಮಯ ಮೀಸಲಾ ಗಿಡಲು  ಆಗದೇ  ಇರಬಹುದು.. ಅಲ್ಲೋ ಇಲ್ಲೋ ಸಮಯ ಸಿಕ್ಕಾಗ ಅದನ್ನು ಹಾಳು ಮಾಡದೇ ನಮಗೆಂದೇ ಮೀಸಲಿಟ್ಟರೆ  ಇಂಥ ಹಲವಾರು ಹವ್ಯಾಸಗಳನ್ನು ಬೆಳೆಸಿ ಉಳಸಿ  ಕೊಳ್ಳಲು ಸಾಧ್ಯ. 
 
ಇಷ್ಟು ದಿನ ಬಾರದೆ ಇದ್ದಿದ್ದಕ್ಕೆ, ಬರೆಯದೆ ಇದ್ದಿದ್ದಕ್ಕೆ ಕ್ಷಮೆ ಇರಲಿ. ಮತ್ತೊಮ್ಮೆ ಬೇಗ ವಾಪಾಸ್ಸಗುತ್ತೇನೆ ಎನ್ನುವ ವಿಶ್ವಾಸ ದೊಂದಿಗೆ, 
 
 
ನಿಮ್ಮವಳು 
 
 
 
 

7 comments:

ಚೆನ್ನಾಗಿದೆ....
ಅವನು ಹೇಳ್ದ ಅಂತಾದ್ರೂ ಬರೆದಿರಲ್ಲ!!!!!!! ಇನ್ಮೇಲಾದ್ರೂ ಆಗಾಗ ಬರೀತಾ ಇರಿ :)

 

nandu prasanna heldaangeya :)

 

Very true..many times we really find hard to get time for our hobbies :-(

 

ತುಂಬಾ ಚೆನ್ನಾಗಿದೆ. ಬಹಳ ಹಿಡಿಸಿದ್ದು ಈ ಲೈನ್ " ನೋಡುತ್ತಿರುವ ಒಂದು ಧಾರಾವಾಹಿಯೂ ಕೊನೆ ಕಾಣಲಿಲ್ಲ" :) ಒಂದ್ ಸಾರಿ ಸಮಯ ಮಾಡ್ಕೊಂಡು ನಿನ್ನ ಎಲ್ಲ ಬ್ಲಾಗನ್ನು ಓದ್ತೀನಿ.

 

ಸಾಪ್ಟವೇರ್ ಇರುವುದು ಬೇಕಾದಾಗ ಕೈಕೊಡಲು.... ಹ್ಹ ಹ್ಹಾ..... ಮಸ್ತ್ ಸಾಲು.

ಬ್ಲಾಗ್ ನ ಅಡ್ರೆಸ್ ನೇ ಮರೆತೆ... ಅದನ್ನ ಒಪ್ಪಿಕೊಳ್ಳಲೂ ಧೈರ್ಯ ಬೇಕು ಅಲ್ವಾ...???
supper....

 

Idu iwattina situation in namma benagluru :) http://manadamaatu1.blogspot.in/

 

ನನ್ನ ಬ್ಲಾಗ್ ಇದೆಯೇ ಅಥವಾ ಅದು ಹೊಸ ಹೊಸ ಬರಹಗಾರರ ನಡುವೆ
ಎಲ್ಲೋ ಕಳೆದು ತಳ ಸೇರಿದೆಯೇ?.. ಎನ್ನುವ ನಿಮ್ಮ ಮಾತನ್ನು ಓದಿದಾಗ ನನ್ನ ಬಗ್ಗೆ ಹೇಳಿದಿರೋ ಎಂದನಿಸಿತು.ತುಂಬಾ ಸಮಯದ ನಂತರ ಬರೆದ ನಿಮ್ಮ ಬರಹ ಓದಲು ಖುಶಿಯಾಯಿತು.

 

Post a Comment