ಎಷ್ಟು ಸುಂದರ ಈ ಸಾಲುಗಳು.. ಅಮ್ಮ ,ತಾಯಿ ಅಕ್ಷರಗಳೆರಡೇ ಆದರೂ ವಿಶಾಲವಾದ ಅರ್ಥ ಈ ಪದಗಳಲಿ..ಜಗತ್ತಿನ ಪ್ರತಿಯೊಬ್ಬ ಜೀವಿಯ ಹುಟ್ಟಿನ ಹಿಂದಿರುವ, ತ್ಯಾಗ,ಕರುಣೆ ಮಮತೆಗಳ ಸಾಕಾರ ಮೂರ್ತಿ ಈ ಅಮ್ಮ. ಜಗತ್ತಿನ ಪ್ರತಿಯೊಬ್ಬ ಜೀವಿಯ ಹಿಂದಿರುವ ತ್ಯಾಗಮೂರ್ತಿ ಈ ತಾಯಿ .
ಎಷ್ಟು ವರ್ಣಿಸಿದರು ಬಣ್ಣಿಸಿದರು ನಿಲುಕದೆತ್ತರಕ್ಕೆ ಏರಿ ಬಿಡುತ್ತಾಳೆ ಈ ಮಾತೆ..
ಕೇವಲ ಮಾಂಸದ ಮುದ್ದೆಯಾದ ಬ್ರೂಣಕ್ಕೆ ಒಂದು ಆಕಾರ ಬರುವವರೆಗೂ ತನ್ನ ಉದರದಲ್ಲಿ ಪೋಷಿಸಿ,ತನ್ನ ಆಹಾರದಲ್ಲೇ ಪಾಲುನೀಡಿ ಒಂಬತ್ತು ತಿಂಗಳು ಹೊತ್ತು ಕೊನೆಗೆ ಯಮಯಾತನೆ ಯನ್ನು ಅನುಭವಿಸಿ
ಜಗತ್ತಿಗೆ ನಮ್ಮನ್ನು ತರುತ್ತಾಳಲ್ಲ ಹೇಗೆ ತೀರಿಸಲಮ್ಮ ನಿನ್ನ ಋಣವ..???ತನ್ನ ನಿದ್ದೆಯನ್ನು ಬಿಟ್ಟು ರಾತ್ರಿ ಅಳುವ ಕಂದನನ್ನು
ಸಮಾಧಾನಿಸಿ ಲಾಲಿ ಹಾಡುತ್ತಳಲ್ಲಆ ತಾಯಿಯ ಬಣ್ಣಿಸಲು ಸಾದ್ಯವೇ …
ಮಕ್ಕಳ ಸುಖದಲ್ಲಿ ತನ್ನ ನಗುವನ್ನು ಕಾಣುತ್ತಾಳಲ್ಲ ಜಗತ್ತಿನಲ್ಲಿ ಯಾವದಕ್ಕೂ ಸಮನಾಗದ ವ್ಯಕ್ತಿ ಈ ಮಾತೆ.…
“ಅಮ್ಮನಿಗಾಗಿ ಕರ್ಣ ಸೋತ,
ಅಪ್ಪನಿಗಾಗಿ ರಾಮ ಸೋತ,
ಹಾಲಿಗೆ ನಾನು ಸೋತೆ..
ಕಂದಾ ಎಂದಾ ನಾಲಿಗೆ ನಾನು ಸೋತೆ...."
ಎಷ್ಟು ಕವಿಗಳು ಗೀಚಿದರು ಹಾಡಿ ಹೊಗಳಿದರು ಈ ಪದದ ಅರ್ಥವನ್ನು ಹೇಳಲು ಸಾಧ್ಯವಿಲ್ಲ.ಒಮ್ಮೆ ಹೆಂಡತಿಯ ಆಸೆಗಾಗಿ ಮಗ ತನ್ನ ತಾಯಿಯನ್ನು ಕೊಂದು ಅವಳ ಹ್ರದಯ ವನ್ನು ಹಿಡಿದು ಓಡ ತೊಡಗಿದನಂತೆ.ಆಗ ತಾಯಿಯ ಹ್ರದಯ “ಕಂದ ಬಿಡದಿಯ ಜೋಪಾನ "ಎಂದಿತಂತೆ. ಅಂತಹ ನಿಸ್ವಾರ್ಥ ಪ್ರೇಮ ಆ ತಾಯಿ ಮನಸಿನದು. ಅದಕ್ಕೆ ಇರಬೇಕು ಶಂಕರಾಚಾರ್ಯರು ಹೇಳುತ್ತಾರೆ “ಕ್ವಚಿದಪಿ ಕುಮಾತ ನ ಭವತಿ ಅಂದರೆ ಈ ಪ್ರಪಂಹದಲ್ಲಿ ಯಾರು ಬೇಕಾದರೂ ಕೆಟ್ಟವರಾಗ ಬಹುದಂತೆ..ಆದರೆ ಆ ತಾಯಿ ಮಾತ್ರ ಕೆಟ್ಟ ವಳಾಗಲಾರಳು..
ಮಾತೆ ತನ್ನಕಂದನಿಗಾಗಿ ಏನೆಲ್ಲಾ ಮಾಡಲು ತಯಾರಾಗುತ್ತಾಳೆ..
ತನ್ನಸುಖವನ್ನೆಲ್ಲ ಬದಿಗೊತ್ತಿ ತನ್ನಕಂದನಿಗೆ ಸುಪ್ಪತ್ತಿಗೆಯ ಬಾಳನ್ನು ಕಟ್ಟಿಕೊಡಲು ಅಣಿಯಾಗುತ್ತಾಳೆ.. ಆಕೆ ಏನನ್ನು ಬೇಕಾದರೂ ಸಹಿಸಿಯಾಳು..ಆದರೆ ತನ್ನ ಕಂದನ ಕಣ್ಣಲ್ಲಿ ನೀರು ಬಂದರೆ ತಾನೂ ಕಣ್ಣಿರಿಡುತ್ತಾಳೆ.ಆ ಮಾತ್ರಪ್ರೇಮ ಆಕೆಯ ಕೊನೆ ಉಸಿರುರುವರೆಗೂ ಜಾಗ್ರತವಾಗಿರುತ್ತದೆ.
ಆದರೆ ನಮ್ಮಲ್ಲಿ ಇರುವ ಎಷ್ಟುಮೂಢಮಕ್ಕಳು ತಮ್ಮ ಕಾಲ ಮೇಲೆನಿಲ್ಲುತ್ತಿದ್ದಂತೆ ಎಲ್ಲವನ್ನು ಮರೆತು ತಾಯಿ ತಂದೆಯರನ್ನು ಮೂಲೆ ಗುಂಪ ಗಿಸಿ ಕೈ ತೊಳೆದು ಕೊಳ್ಳುತ್ತಿದ್ದಾರೆ . ಮೊನ್ನೆ ಬೀದಿಯಲ್ಲಿ ನಡೆಯುತ್ತಿದ್ದಾಗ ಒಬ್ಬ ಅಜ್ಜಿ ರೋಡ್ ಕ್ರಾಸ್ ಮಾಡಲು ಹೆದರುತ್ತಿದ್ದನ್ನು ಕಂಡು ಅಯ್ಯೋ ಎನಿಸಿ help ಮಾಡೋಣವೆಂದು ಹೋದೆ. ಯಾಕೆ ಯದೋ ಎಳಿವಯಸ್ಸು.ಅಜ್ಜಿನೀವ್ಯಾಕೆಬರಲು ಹೋದಿರಿ ಆರಾಮಾಗಿ ಕುಳಿತು ಕೊಂಡುಇರುವುದನ್ನು ಬಿಟ್ಟು ಎಂದಾಗ ಆ ಅಜ್ಜಿ ನಗುತ್ತ ಉತ್ತರಿಸಿದರು . ತಂಗಿ tablet ಬೇಕಾಗಿತ್ತು .. ಮನೆಯಲ್ಲಿ ಮಗನಿಗೆ ಒಂಚೂರು ಬಿಡುವಿರಲಿಲ್ಲ ಭಾನುವಾರವೆಂದು ಸೆನೆಮ ನೋಡಲು ಹೋಗಿದ್ದಾರೆ ಅದಕ್ಕೆ ನಾನೆ ಬಂದೆ ಎಂದು..ಅಂತ ಸ್ಥಿತಿಯಲ್ಲೂ ಆಕೆ ತನ್ನ ಮಗನನ್ನು ಬಿಟ್ಟುಕೊಡಲು ತಯಾರಿರಲಿಲ್ಲ . ಆ ಮಾತ್ರ ಪ್ರೇಮಕ್ಕೆ ಹೇಳಲು ನನ್ನಲ್ಲಿ ಪದಗಳಿರಲಿಲ್ಲ.ಅಂತ ಮಕ್ಕಳಿಗೆ ದಿಕ್ಕಾರ ವಿರಲಿ..
“ಕಡಿಯಲೋಲ್ಲೆ ನೀ ಕರುಳ ಬಳ್ಳಿ
ಒಲವೂಡುತಿರುವ ತಾಯೇ ಬಿಡದಿ ಭೂವಿಯ ಮಾಯೆ "
ಒಮ್ಮೆ ಯೋಚಿಸಿ ನೋಡಿ . ಒಂದು ವೇಳೆ ಆ ತಾಯಿ ಎನ್ನುವವಳು ತನ್ನ ಸುಖದ ಬಗ್ಗೆ ಯೋಚಿಸಿದ್ದರೆ ನಾವಿಂದು ಈ ಭೂಮಿಯ ಮೇಲೆ ಬರುತ್ತಿರಲಿಲ್ಲ.ಉದರ ದಲ್ಲಿದ್ದಾಗಲೇತೊಂದರೆ ಎಂದು ಹೊಸಕಿ ಹಾಕಿದ್ದರೆ ನಾವಿಂದು ಕಾಣುತ್ತಿರಲಿಲ್ಲ ಈಮಾಯಲೋಕವ ?? ಎಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವೇ ಇರಲಿಲ್ಲ ???? ಹೇಗೆ ಬಣ್ಣಿಸುತ್ತಾ ಹೋದರೆ ಪದಗಳಿಗೆ ಸಿಲುಕಾದಷ್ಟು,ಕಲ್ಪನೆಯನ್ನು ಮೀರುವಷ್ಟು ಆ ತಾಯಿ ಎಂಬ ಪದ ವಿಸ್ತಾರ ವಾಗುತ್ತದೆ ಅಮ್ಮ ಹೇಗೆ ಬಣ್ಣಿಸಲಮ್ಮ ನಿನ್ನ ...?? ಆ ಮಮತಾ ಮೂರ್ತಿಗೆ ನನ್ನ ಕೋಟಿ ನಮನ....ಮಾ…. ತುಜ್ಹೆ ಸಲಾಂ.........




