“ಮಾಮರವೆಲ್ಲೋ ಕೊಗಿಲೆಯಲ್ಲೋ ಎನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ ”
ಎಂದು ಪ್ರಖ್ಯಾತ ಕವಿಯೊಬ್ಬರು ಬರೆದಿರುವ ಹಾಡು ರೇಡಿಯೋ ದಲ್ಲಿ ಮೂಡಿ ಬರುತ್ತಿರಲು ಅಲ್ಲೇ ಕುಳಿತು ಓದುತ್ತಿದ್ದ ನನ್ನ ಮನವು ಹಿಂದಿನದನ್ನು ಮೆಲುಕು ಹಾಕತೊಡಗಿತು.. ಬದುಕು ಸುಂದರ ಅನಿಸುವಾಗ ಸಾಕೋ ಸಾಕು ಎನ್ನುವಂತೆ,
ಇನ್ನೇನು ಏನೂ ಇಲ್ಲ ಎನುವಾಗ ಬೇಕಿತ್ತು ಅನ್ನುವಂತೆ ಜೀವನದಲ್ಲಿ ಕೆಲವೊಂದು ದಿನಗಳು ಹಾಗೆ ಇದ್ದು ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು
ಅಲ್ಲವೇ…..ನೀನು ನಾನು ಜೊತೆಯಾಗಿ ಕಳೆದ ಎಷ್ಟೊಂದು ದಿನಗಳ ಸಾವಿರಾರು ಕ್ಷಣಗಳ ನೆನಪು ಮೂಡಿದಾಗ ನನಗೆ ನಾನೇ
ಅಂದುಕೊಂಡಿದ್ದಿದೆ.. ಜಗತ್ತು ಬದಲಾಗ ಬಾರದಿತ್ತು...!!! ಕೆಲವೊಮ್ಮೆ ಅಂದುಕೊಳ್ಳುತ್ತೇನೆ ನಿನಗೆ ನನ್ನ ನೆನಪೇ
ಬರುವುದಿಲ್ಲವೇನೋ?? ಹಾಗೆಂದುಕೊಂಡಾಗ ನನಗೆ ನನ್ನ ಮೇಲೆ ಬೇಸರವಾಗಿದ್ದಿದೆ…ಮತ್ತೊಮ್ಮೆ ಅಂದುಕೊಳ್ಳುತ್ತೇನೆ ,
ಈ ಹಾಳಾದ ನೆನಪು ನನ್ನಬದಲಾದರೂ ಬಿಡುತ್ತಿಲ್ಲವಲ್ಲ…ಮರೆಯಬೇಕೆಂದು ಅಂದು ಕೊಂಡಂತೆ ಮತ್ತೆ ಮತ್ತೆ ಮರುಕಳಿಸುವ ಸುಂದರ ನೆನಪುಗಳು.. ಒಮ್ಮೆಲೇ ಮನದಲ್ಲಿ ಕಾಮನಬಿಲ್ಲು,ಮತ್ತೆ ಚಿಂತನ ಮಂಥನ ನನ್ನಲ್ಲೇ.…!!!

"ಇಗೇಕೆ ಆ ನೆನಪು ಬಂದೆನ್ನ ಕಾಡಿದೆ
ಎದೆಯ ಆಳದಲ್ಲಿ ವಿಷಾದ ಮೂಡಿದೆ "
ಏನೋ ಸೆಳೆತ ಇದೆ ಕಣೆ ಗೆಳತಿ ನಿನ್ನ ಸ್ನೇಹದಲ್ಲಿ...ನಿನ್ನನೆನಪುಗಳೆಲ್ಲ ಆಯಸ್ಕಾಂತದಂತೆ ನನ್ನ ಸೆಳೆಯುತ್ತವೆ..ಕೇವಲ ನಗುವಿನಲ್ಲಿ ಪರಿಚಯವಾದ ನಾನು ನೀನು ಎಷ್ಟೊಂದು ಆತ್ಮೀಯರಾಗುತ್ತೆವೆಂದು ಬಹುಷ: ನಾವಿಬ್ಬರೂ ಅಂದುಕೊಂಡಿರಲಿಲ್ಲ…
ಆದರೂ ಮರೆಯಲಾಗದ ಒಂದು ಬಂಧ ನಮ್ಮನ್ನು ಬಂದಿಸಿ ಬಿಟ್ಟಿದ್ದು ವಿಪರ್ಯಾಸವೇ.….??ನಿನಗೂ ಹಾಗೆ ಅನಿಸಿದ್ದರೆ ನೀನುನನ್ನಿಂದ ಮಾನಸಿಕವಾಗಿ ಬಹುದೂರ ನಡೆದು ಬಿಡುತ್ತಿರಲಿಲ್ಲ ಅಲ್ಲವೇ.…
"ಬಣ್ಣ ಬಣ್ಣದ ಚಿತ್ರ ಬರೆದು
ಹೋದಳೆನ್ನ ತೊರೆದು
ಚಿತ್ರಕ್ಕೆ ಮಸಿ ಬಳಿದು "
ನಿನಗೆ ನೆನಪಿದೆಯೇ...ಎಷ್ಟೊಂದು ಕ್ಷಣಗಳು ನಾವಿಬ್ಬರೂ ಜೊತೆಯಾಗಿ ನಡೆದಿಲ್ಲ.…ಸುಂದರ ಇರುಳಿನಲ್ಲಿಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿಲ್ಲ...ಎಷ್ಟೊಂದು ವಿಷಯ ಚರ್ಚಿಸಿಲ್ಲ.ನಾನು ಪಟಪಟನೆ ಮಾತನಾಡುತ್ತಿದ್ದರೆ ಸುಮ್ಮನೆ ಹಸನ್ಮುಖಿಯಾಗಿ ಆಲಿಸುತ್ತಿದ್ದ ನಿನ್ನ ಮುಖ, ನಿನ್ನ ಕಣ್ಣುಗಳು ಈಗಲೂ ನೆನಪಿದೆ... ಇವತ್ತಿಗೂ ನಾನೂ ಮಾತನಾಡುತ್ತೇನೆ... ಆದರೆ ಆಲಿಸಲು ನೀನಿಲ್ಲ ಪಕ್ಕದಲ್ಲಿ ಇಷ್ಟೇ ಬದಲಾಗಿದೆ ಜೀವನ..
ನಾನು ಇದ್ದಲ್ಲಿ ನೀನು ನೀನು ಇದ್ದಲ್ಲಿ ನಾನೂ ಎಲ್ಲವೂ ಜೊತೆಯಾಗಿ ಮಾಡುತ್ತಿದ್ದ ನಾವು ಇಂದು ನನಗೆ ನೀನು ನಿನಗೆ ನಾನು..ನೆನಪಾದರೆ ನಿನಗೆ ನಾನು ಸಿಗಲೇ ಬಾರದಿತ್ತು ಇಂದು ಕೂಡ ಅನಿಸಿದ್ದಿದ್ದೆ ನನಗೆ.…ಎಷ್ಟೊಂದು ಕಾಡಿಸಿದ್ದಿದೆ ನಾನು ನಿನಗೆ.…ನೆನೆದಂತೆ ಮನದಲ್ಲಿ ಅರಿವಿಲ್ಲದಂತೆ ಒಂದೊಂದೇ ಪುಟಗಳು ತೆರೆಯುತ್ತ ಹೋಗುತ್ತವೆ.…ನಿನ್ನ ಮಾತು ಮೀರಿದರೆ ನೀನು ಗದರಿಸುತ್ತಿದ್ದ ರೀತಿ “ಅಬ್ಬಾರೆ !!!!”ಎಂದು ಕಣ್ಣು ಬಿಡುತ್ತಿದ್ದ ಮುಖ ಇಂದಿಗೂ ಕೂಡ ನನ್ನ ಮನದಲ್ಲಿ ಅಚ್ಚಾಗಿ ಉಳಿದುಬಿಟ್ಟಿದೆ.…ಯಾರ ಕಣ್ಣುಬಿತ್ತೋ ಏನೋ ಇಂದು ಎಲ್ಲಾ ಸುಳ್ಳೇನು ಅನಿಸುವಷ್ಟರ ಮಟ್ಟಿಗೆ ಬದಲಾಗಿದೆ.…
ಒಂದು ದಿನ ನೋಡದಿದ್ದರೂ ಏನೋ ಕಳೆದು ಕೊಂಡಂತೆ ಭಾಸವಾಗುತ್ತಿದ್ದ ನಮಗೆ ಇಂದು ಫಾರ್ಮಾಲಿಟಿಯ ಮಾತಷ್ಟೇ ಉಳಿದಿದ್ದರೆ
ಜಗತ್ತು ಜೀವನ ಎಂತಹವೈಪರೀತ್ಯಗಳನ್ನು ಸ್ರಷ್ಟಿಸುತ್ತೆ ಅನಿಸುತ್ತದೆ ಅಲ್ಲ..!!ಆದರೂ ಯಾಕೋ ಕಣೆ ನಿನ್ನ
ತುಂಬಾ ಜ್ಞಾಪಿಸಿಕೊಳ್ಳುತ್ತಿನಿ ..ಮರೆತರೂ ನೆನಪಿಸಿಕೊಳ್ಳಲು ಇಷ್ಟಪಡುತ್ತಿನಿ …
““ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು
ಅರಿತೆವೇನು ನಾವು ನಮ್ಮ ಅಂತರಾಳವ”

ಎಷ್ಟು ಕಾಲ ಒಟ್ಟಿಗಿದ್ದ ನಮಗೆ ಇನ್ನಷ್ಟು ಸಮಯ ಒಟ್ಟಿಗೆ ಇರಬಹುದಿತ್ತು..ಇರುತ್ತೆನೆಂದು ನೀನು ನನ್ನ ನಂಬಿಸಿಬಿಟ್ಟಿದ್ದೆ. .. ಆದರೆ ಕ್ರಮೇಣ ನೀನು ಮರೆತೂ ಬಿಟ್ಟೆ...ಅವಕಾಶವಿದ್ದರೂ ಬೇಡವೆಂದು ದೂರ ಸರಿಯುತ್ತಲೇಬಂದೆ...ಎಷ್ಟು ಹತ್ತಿರ ಬಂದರೂ ಬೇಡವೆಂದು ದೂರವಾಗುತ್ತಲೇ ಹೋದೆ..ಇದೆಲ್ಲ ಅರಿವಾದಾಗ ನಾನು ಕಂಪಿಸಿಬಿಟ್ಟಿದ್ದೆ..ಈಗ ಅನಿಸುತ್ತದೆ ನಮ್ಮಲ್ಲಿದ್ದಿದು ಸ್ನೇಹಾನ ಅಥವಾ ಅದೇನೋ NEEDಅನ್ನುತ್ತಾರಲ್ಲ ಅದಾ...???!!!ಇನ್ನು ಉತ್ತರ ಮಾತ್ರ ಸಿಕ್ಕಿಲ್ಲ..!!! ಕೇಳಿದರೆ ನಿನ್ನಿಂದ ಅದೇ ಮೌನ.…ಅದಕ್ಕೆ ನಾನೇ ಉತ್ತರ ಕಂಡು ಕೊಂಡಿದ್ದೇನೆ...ನಾನೆ ಹಿಂತಿರುಗಿ ಹೋಗುವ ಮನಸ್ಸು ಮಾಡಿದ್ದೇನೆ... ನೀನಿಲ್ಲದ ಬದುಕುಅಭ್ಯಾಸವಾಗಿಬಿಟ್ಟಿದೆ.ನಾನಿಲ್ಲದ ಬದುಕೇ ನಿನಗೆ ಸುಂದರವಾಗಿದ್ದರೆ ಅದು ಇನ್ನಷ್ಟು ಸುಂದರವಾಗಿರಲೆಂದು ನಾನು ಬಯಸುತ್ತೇನೆ…ಆ ದೇವರ ಹಾರೈಕೆ ಸದಾ ನಿನ್ನೊಂದಿಗಿರಲಿ.….ಅರಿವಿಲ್ಲದಂತೆ ಕಣ್ಣುಗಳಿಂದ ಹೊಂಗಿಲು ಉದುರಲು… ಅಷ್ಟರಲ್ಲಿ ಅಮ್ಮ ಕರೆದಂತಾಗಿ ನೆನಪಿನಿಂದ ಹೊರ ಬಂದಿದ್ದೆ … ಸಮಯಕ್ಕೆ ಸರಿಯಾಗಿ ನನಗಿಷ್ಟವಾದ
"ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಕೂಡಿ ಬರದಿರು ಮತ್ತೆ ಹಳೆಯ ನೆನಪೇ “
ಎಂಬ ಹಾಡನ್ನು ರೇಡಿಯೋದ ಜೊತೆಗೆ ನಾನು ಗುನುಗುನುಗುತ್ತಿದ್ದಂತೆ ನಗುವೊಂದು ನನ್ನಲ್ಲಿ ಮೂಡಿತ್ತು… ನಾನು ಅಮ್ಮನ ಕರೆಗೆ ಓಗೊಟ್ಟು ನನ್ನ ಕೆಲಸದ ಕಡೆಗೆ ಮುಖ ಮಾಡಿದೆ …….

12 comments:
ವಾಣಿ ಶ್ರೀ
ತುಂಬಾ ಸುಂದರ ಬರಹ
ಬದುಕೇ ಹಾಗೆ, ಹಳೆಯ ಅನುಭವಗಳ ಮೆಲುಕು, ಹೊಸ ಅನುಭವಗಳನ್ನು ಕೆದಕುತ್ತಾ ಸಾಗುತ್ತದೆ
ಅನುಭವಗಳು ಮಧುರವಾಗಿದ್ದರೆ ಬದುಕು ಚೆನ್ನ, ಇಲ್ಲದಿರೆ ಬದುಕು ಶೂನ್ಯ
Hi Vani,
Nice writing ya....
Liked it a lot!!!... :-)
ಧನ್ಯವಾದಗಳು ಮೂರ್ತಿ ಅಣ್ಣ ಹಾಗೂ ದಿವ್ಯ...
nice writing....
thank you
ಬರಹಗಳು ಚೆನ್ನಾಗಿ ಮೂಡಿ ಬಂದಿವೆ. ನಿಮ್ಮ ಒಳ್ಳೆಯ ಕೆಲಸ ಮುಂದುವರೆಯಲಿ. ಶುಭಮಸ್ತು
thank you raghu
ಗೆಳೆತನವೆ ಆಸ್ತಿ ಎಂದು ನೀನು ಸದಾ ಮಾಡಿದೆ ಅದರ ಸ್ಥುತಿ, ನೋಡು ಪುಟ್ಟಾ ಹೇಗೆ ಜನರನ್ನು ಬದಲಾಯಿಸುತ್ತೆ ಈ ಪರಿಸ್ಥಿತಿ......
nijavaagiyoo houdu nayan...
ತುಂಬಾ ಸುಂದರವಾದ ಲಹರಿ...... ಇಷ್ಟ ಆಯ್ತು...
THank you soumya
very intense feelings hudugi... :) keep going...
Post a Comment