ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಸುಂದರ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ,ಅಪ್ಪ ಅಮ್ಮನ ಮುದ್ದಿನ ಮಗಳು.ಕನಸು ನನಸಾಗಿ ವ್ರತ್ತಿಯಲ್ಲಿ ಇಂಜಿನಿಯರ್.ಹವ್ಯಾಸವಾಗಿ ನನ್ನೊಡನೆ ಬೆರೆತಿದ್ದು ಬರವಣಿಗೆ.ಅದಕ್ಕೊಂದು ವೇದಿಕೆ ಒದಗಿಸುವ ಚಿಕ್ಕ ಪ್ರಯತ್ನವೇ ಈ ಮಾನಸರಂಗ...
ಮನಸಿನ ಭಾವನೆಯ ಚಿತ್ತಾರ ಬಿಡಿಸಲು ಮಾತಿಗಿಂತ ಬರಹವೇ ಉತ್ತಮ ಎನ್ನುವುದು ನನ್ನ ಭಾವನೆ.ಇಲ್ಲಿ ನನಗರಿವಿಲ್ಲದಂತೆ ನನ್ನಲ್ಲಿರುವ ಬರಹಗಾರ್ತಿ ಒಮ್ಮೊಮ್ಮೆ ಇಣುಕಿ ನೋಡುತ್ತಾಳೆ.. ಅದು ಅವಳಲ್ಲಿನ ಕಲ್ಪನೆಯೋ, ಇತರರ ಪ್ರೇರೇಪಣೆಯೋ, ಓದಿ ತಿಳಿದ ಮಾಹಿತಿಯೋ,ನೋಡಿಕಲಿತ ಅನುಭವವೋ ಆಗಿರಬಹುದು..ಇಲ್ಲಿ ಮೆಚ್ಚಿದ ಹಾಡಿಗೆ ನೆಚ್ಚಿ ಬರೆದ ಸಾಲುಗಳಿವೆ.ಒಂಟಿಮನಸಿನಲ್ಲಿ ಜಂಟಿ ಅದ ಕನಸುಗಳಿವೆ..ಅಂತರಂಗದಲ್ಲಿ ಇಂಗಿಹೋದ ನೆನಪುಗಳಿವೆ..ಮಾನಸರಂಗದ ಹುಚ್ಚುಕೋಡಿ ಮನಸಿನ ಕನವರಿಕೆಗೆ ಭಾವಗಳ ಬೆಸುಗೆ ಬೆಸೆದು,ನೀರೀಕ್ಷೆಯ ಗೆಜ್ಜೆಕಟ್ಟಿ ನಿಮ್ಮ ಮುಂದೆ ಇಡುವ ಹಠದ ಪ್ರಯತ್ನ.. .ಪ್ರೀತಿಯಿಟ್ಟು ಬರೆದಿದ್ದನ್ನು ಪ್ರೀತಿಯಿಂದ ಓದಿ ಪ್ರೋತ್ಸಾಹಿಸಿ...
5 comments:
ur blog is good:) keep going..
Good, waiting for few more
hey!! gud one!!!!!
photo ತುಂಬಾ ಚೆನ್ನಾಗಿದೆ..
realy nice k keep it up..
Ranjith Acharya
Post a Comment