ಮೊದಲದಿನದಿಂದ ಕೊನೆಯವರೆಗೂ ಅದು ನನ್ನಬದುಕಿನ ಬಣ್ಣದ ಪುಟಗಳು.ಅಲ್ಲಿ ಕಳೆದ ಪ್ರತಿಯೊಂದು ಕ್ಷಣವೂ ಹಸಿರು.seniorsನ ರಾಗಿಂಗ್ಗೆಹೆದರಿ ಹರಸಾಹಸ ಪಡುತ್ತಿದ್ದ ದಿನಗಳಿಂದ ಹಿಡಿದು ನಾವು juniorsಗಳಿಗೆ ರಾಗಿಂಗ್ಮಾಡಿದ ದಿನದವರೆಗೂ.ಮೊದಲ ವರ್ಷಕಳೆಯುವದರೊಳಗೆ ನಮ್ಮಲ್ಲೇ ಒಂದು ಗುಂಪು ಉಂಟಾಗಿ ಎರಡನೇ ವರ್ಷರಾಗಿಂಗ್ ಗೆತಯಾರಿ ನಡೆಸಿದ್ದ ನಮಗೆ ಅಲ್ಲಿ ಸಿಕ್ಕ ಮಜಾ ಇದನೆಲ್ಲ ಮರೆಯಲು ಸಾದ್ಯವೇ ಇಲ್ಲ.ಜೊತೆಗೆ ಓದಲ್ಲೂ ಮುಂದಿದ್ದ ನಾವುwardenಗೆಸುಳಿವೇ ಕೊಡದಂತೆ ಮಾಡುತ್ತಿದ್ದ ಚೆಷ್ಟೇಗಳಿಗಂತೂ ಲೆಕ್ಕವೇ ಇಲ್ಲ ಬಿಡಿ.
ನಾನು ಯಾವಾಗಲು ಅಂದು ಕೊಳ್ಳುತ್ತೇನೆ .ಒಮ್ಮೆಯಾದರೂ students life ನ್ನು ಹಾಸ್ಟೆಲ್ನಲ್ಲಿ ಕಳೆಯಬೇಕೆಂದು. ಅದರ ಮಜನೆ ಬೇರೆ .ಅಲ್ಲಿ ಸಿಗುವ ಮಜಾ mostly ಇನ್ನೆಲ್ಲೂ ಸಿಗೊದಿಲ್ಲವೇನೋ .Sem exam ಬಂತೆಂದರೆ ರಾತ್ರಿ ಹಗಲು ಊಟ ನಿದ್ರೆ ಬಿಟ್ಟು ಓದುತ್ತಿದ್ದವರು ಒಂದೆಡೆಯಾದರೆ ,ಗಂಟೆಗಟ್ಟಲೆ ಫೋನಿನಲ್ಲಿ ಎಲ್ಲೆಂದರಲ್ಲಿ (bathroomnnu) ಬಿಡದೆ ಹರಟುತ್ತಿದ್ದ ಹುಡುಗಿಯರು ಒಂದೆಡೆ ,ಮತ್ತೊಂದೆಡೆ ಪ್ರಾಜೆಕ್ಟ್ completion ನ ಭರಾಟೆಯಾದರೆ ಇನ್ನೊಂದೆಡೆ ಇಂಟರ್ನಲ್ಸ್ ಗಾಗಿ ಪೇಚಾಟ .ಪ್ರತಿಯೊಂದು ಗಳಿಗೆಯನ್ನು ಸವಿದಮೇಲೆ ಅನಿಸುತ್ತಿದ್ದೆ ಮತ್ತೊಮ್ಮೆ ಆ ಜೀವನ ಬರಬಾರದಿತ್ತ.!!! ಯಾರದ್ರು ಒಬ್ಬರು commit ಆದರೆ ಅದರ ಬಗ್ಗೆ ಒಂದಿಷ್ಟು ವಿಮರ್ಶೆ ,ಕಾಲೇಜ್ ನಲ್ಲಿ ಹೊಸ ರೂಲ್ಸ್ ಬಂದರೆ ಸಾಕು ಒಂದಿಷ್ಟು ಕಾಮೆಂಟ್ಸ್ ಗಳು ,ಮನೆಯ ನೆನಪಾದರೆ ಸಾಂತ್ವನ ನೀಡುತ್ತಿದ್ದ ಸ್ನೇಹಿತೆಯರ ಮದಿಳುಗಳು ,ಮೂವಿ ಗಾಗಿ bunk ಮಾಡಿ ಆಮೇಲೆ ಒಳ್ಳೆ ಹುಡುಗರಂತೆ phose ಕೊಡುತ್ತಿದ್ದ ದಿನಗಳನ್ನು ನೆನೆದಾಗ ಕಣ್ಣಂಚಲ್ಲಿ ನೀರು ಅರಿವಿಲ್ಲದಂತೆ ಮೂಡುತ್ತದೆ . ಕನಸು ಕಾಣುತ್ತ ಯಾವುದರ ಪರಿವಿಲ್ಲದಂತೆ ಬೆಳೆದಿದ್ದೆ ಗೊತ್ತಾಗಲಿಲ್ಲ .
ಮೊದಲ ಬಾರಿ ಹುಡುಗನೊಬ್ಬನಿಂದ ಕೆಂಪು ಗುಲಾಬಿ ಪಡೆದಾಗ ಉಂಟಾಗಿದ್ದ ಪುಳಕ ,ಮೊದಲಬಾರಿ ಕಾಲೇಜ್ bunk ಮಾಡಿ ಮೂವಿ ನೋಡಿದ ದಿನ ,ಮೊದಲಬಾರಿ ಇಂಟರ್ನಲ್ಸ್ ನಲ್ಲಿ fail ಆಗಿ ಅತ್ತು ಕರೆದ ಗಳಿಗೆ ,ಮೊದಲಬಾರಿಗೆ ಕಂಪನಿ ಅಲ್ಲಿ place ಆಗಿಎಲ್ಲರಿಂದ ಮೆಚ್ಚುಗೆ ಪಡೆದು ರೋಮಾಂಚನ ಅನುಬವಿಸಿದ ಕ್ಷಣ ಇವೆಲ್ಲ ಮರೆಯಬೇಕೆಂದು ಅಂದು ಕೊಂದರು ಮರೆಯಲಾಗದ ಕ್ಷಣಗಳು .
ಎಂದು ಅಂದುಕಂಡಿದ್ದ ಕನಸುಗಳೆಲ್ಲ ನನಸಾಗಿದೆ .ಹೆಸರಾಂತ ಕಂಪನಿಯಲ್ಲಿ ಉದ್ಯೋಗಿಆಗಿ ಐದಂಕಿಯ ಸಂಬಳ ಬ್ಯಾಂಕ್ ಅಕೌಂಟ್ ಸೇರಿದೆ .ಇಷ್ಟಪಟ್ಟಿ ದ್ದನ್ನೆಲ್ಲ ಕೊಂಡುಕೊಳ್ಳುವ ಕಾಲ ಬಂದಾಗಿದೆ .ಆದರೆ ಏನೋ ರುಚಿಯಿಲ್ಲ ಈ ಜೀವನದಲ್ಲಿ .ಜೊತೆಯಾಗಿದ್ದ ಜೀವಗಳೆಲ್ಲ ಒಂದೊಂದು ಕಡೆ .ಫೋನ್ ಮೆಸೇಜ್ ಗಳಲ್ಲೇ ಮಾತುಕತೆ .ಬಯಸಿದರು ಯಾವ ಸ್ನೇಹಿತರ ತೋಳು ಸಿಗಲಾರದು ಬೇಕೆಂದಾಗ .ಒಂದೇ ಕಡೆ ಇದ್ದು ಮೀಟ್ ಆಗಲಾಗದ ಪರಿಸ್ಥಿತಿ , ಗಾಂದಿಕ್ಲಾಸ್ಸ್ ನಲ್ಲಿ ಕುಳಿತು ಸಿನಿಮಾ ನೋಡುತ್ತಿದ್ದ ವರಿಗೆ ಇಂದು ಮಲ್ಟಿಪ್ಲೆಕ್ಸ್ ನಲ್ಲಿ ಕುಳಿತು ಸಿನಿಮಾ ನೋಡಿದರು ಆ ದಿನಗಳ ರುಚಿಯಿಲ್ಲ .ಯಾಕೆ ಹೀಗೆ? ಬದುಕೆಂದರೆ ಹೀಗೆ ಇರಬೇಕು .ಆದಿನಗಳು ನಮ್ಮ ಪಾಲಿಗೆ ಮುಗಿದಿವೆ . ಹೊಸದನ್ನು ಸ್ವಾಗತಿಸುವುದು ಅನಿವಾರ್ಯ .ಯಾಂತ್ರಿಕ ಬದುಕಿಗೆ ಅಡಿಯಿಟ್ಟೂ ಆಗಿದೆ .ಜವಾಬ್ದಾರಿಗಳು ಹೆಗಲೆರಿವೆ .ನಮ್ಮದೇ ಅದ ಕಟ್ಟುಪಾಡುಗಳಿಗೆ ಬೆಲೆ ಕೊಡಲೇ ಬೇಕಾಗಿದೆ .ಮುಂದೊಂದು ದಿನ ಬದುಕಿನ ಪುಸ್ತಕದ ಪುಟ ತೆರೆದಾಗ ಚಿತ್ತಾರ ಗಳಿಂದಲೇ ಕೂಡಿದ ಅಧ್ಯಾಯ ನಮ್ಮ ಪಾಲಿಗಿದೆಯಲ್ಲಾ ಎಂಬುದೇ ಸಮಾಧಾನ . ಹಿಂದಿನದನ್ನು ನೆನೆಯುತ್ತ ಹೋದರೆ ಸಮಯದ ಪರಿವೆ ಬರುವುದಿಲ್ಲ . ಮತ್ತೆ ಕೆಲಸದ ಕರೆ ಬರುತ್ತಿದೆ .ವಾಸ್ತವ ಕರೆಯುತ್ತಿದೆ ಹೋಗಿಬರಲೇ..….!!!?




9 comments:
ಬರವಣಿಗೆ ತುಂಬಾ ಚನ್ನಾಗಿದೆ.
"ಮುಂದೊಂದು ದಿನ ಬದುಕಿನ ಪುಸ್ತಕದ ಪುಟ ತೆರೆದಾಗ ಚಿತ್ತಾರ ಗಳಿಂದಲೇ ಕೂಡಿದ ಅಧ್ಯಾಯ ನಮ್ಮ ಪಾಲಿಗಿದೆಯಲ್ಲಾ ಎಂಬುದೇ ಸಮಾಧಾನ "
Nice sentence. Good. Keep it up.
Good Beginning. Keep going
thank u harsha and ravindra sir
Hey really good ya... keep going...
thank you veeresh
everything getting computerized ...... all books r restored at corner of rooms ....
keep going good :)
thank you vijay.. think as an engineer:-)
ನೆನಪು ಯಾವಾಗಲೂ ಮಧುರ!, ಈಗಿನ ದಿನಗಳೂ ಮುಂದೊಂದು ದಿನ ನೆನಪುಗಳಾಗುತ್ತವಲ್ಲ!
nijavaagiyoo houdu...
Post a Comment