ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ನಾವೇಕೆ ಕೆಲವೊಂದನ್ನು ಮರೆಯುತ್ತೇವೆ?!!

[ಇದು ಯಾರನ್ನೋ ಮನದಲ್ಲಿಟ್ಟು ಕೊಂಡು ಬರೆದ ಲೇಖನವಲ್ಲ..ನಾನು ನೋಡಿದ,ಕೇಳಿದ,ನನ್ನ ಅನುಭವದ ಕೆಲವೊಂದು ಸತ್ಯಗಳಿಗೆ ಅಕ್ಷರ ರೂಪ ಕೊಡುವ ಸಣ್ಣ ಪ್ರಯತ್ನ ಮಾಡಿದ್ದೇನೆ ಅಷ್ಟೇ ..]

ಮರೆವು ಎನ್ನುವುದು ಮನುಷ್ಯನಿಗೆ ಹೇಗೆ ವರದಾನವೋ ಹಾಗೆ ಶಾಪವು ಹೌದು..ಒಳ್ಳೆಯದನ್ನು ಮರೆಸಿ ನೋವನ್ನು ಮಾತ್ರ ನೆನಪಿಸುವುದು..ಮನುಷ್ಯನ ಸ್ವಭಾವವೇ ಹಾಗೆ.ಒಳ್ಳೆಯದನ್ನು ನಮಗೆ ಒಳ್ಳೆಯದನ್ನು ಬಯಸಿದವರನ್ನು ಬೇಗನೆ ಮರೆತು ಬಿಡುತ್ತೇವೆ.ಜೀವನದ ಪಯಣದಲ್ಲಿ ಪಕ್ಕದಲ್ಲಿ ಬಂದು ಕೂತು, ಇದ್ದು ಹೋದ ಹಲವಾರು ವ್ಯಕ್ತಿಗಳಲ್ಲಿ ಮರೆಯದೆ ನೆನಪಾಗುವರು ಕೇವಲ ಬೆರಳೆಣಿಕೆಯಷ್ಟು..ಅಂಥವರ  ಸಹಾಯ ನಮಗೆ ಒಳ್ಳೆಯದಗುವ ತನಕ ಎಂಬಂತೆ ಬದುಕಿ ಬಿಡುತ್ತೇವೆ..ಸ್ವಹಿತದಲ್ಲಿ ಸ್ವಂತದವರನ್ನು ಕಡೆಗಣಿಸುತ್ತೇವೆ...ಎಂದೋ ಬಂದ ಹುಡುಗ/ಹುಡುಗಿಯ ನೆಪದಲ್ಲಿ ಸದಾ ನಮ್ಮ ಜೊತೆಗೆ ಇದ್ದು ಬಿದ್ದು ಏಳುತ್ತಿದ್ದಾಗಿನಿಂದ ಕೈಹಿಡಿದು ನಡೆಸಿದ ತಂದೆತಾಯಿಯ ನೆನಪು ಮಾಸುತ್ತದೆ.  ಒಮ್ಮೆ ಯಾವನೋ ಒಬ್ಬ ತೋರಿಸಿದ ಅಕ್ಕರೆಯಿಂದ,ಕಾಳಜಿಯ ಮುಂದೆ  ವಿದ್ಯೆಯನೀಡಿ ಜೀವನ ಪಥವನ್ನು ತೋರಿದ ಪಾಲಕರ ಪ್ರೀತಿ ಮರೆತುಹೋಗುತ್ತದೆ..ಕೊನೆಯಕಾಲದಲ್ಲಿ ಕೊನೆತನಕ ಬಂದವರ ಮರೆತುಬಿಡುತ್ತೇವೆ..ಅವರ ನೋವಿಗಿಂತ ಯಾವನೋ ಒಬ್ಬನ ನೋವೆ ನಮಗೆ ಹೆಚ್ಚಾಗಿ ಬಿಡುತ್ತದೆ..ಹಾಗೆಂದ ಮಾತ್ರಕ್ಕೆ ಯಾರನ್ನು ಕಡೆಗನಿಸಬೇಕೆಂದಲ್ಲ..ಗುರಿಯ ಹುದುಕಾಟದ್ದಲ್ಲಿದ್ದಾಗ ಗುರಿತೊರಿದ  ಗುರುವನ್ನು ಮರೆತಂತೆ,ಜೀವಕ್ಕೆ ಜೀವ ಕೊಡುವ ಜೀವದ ಗೆಳತಿಯನ್ನು ಕಡೆಗಣಿಸಿದಂತೆ, ಅತ್ತಾಗ ಸಮಾಧಾನ ಮಾಡಿದ ಗೆಳೆಯರನ್ನು ,ಕೆಲಸ ದೊರಕಲು ಸಹಾಯ ಮಾಡಿದ ವ್ಯಕ್ತಿಯನ್ನು ನಮಗೆಲ್ಲ ದೊರೆತಾಗ ಗೊತ್ತಿಲ್ಲದೇ ಮರೆತು ಬಿಡುತ್ತೇವೆ..' ಭದ್ರಬುನಾದಿಯಿಂದಲೇ ಸುಭದ್ರ ಕಟ್ಟಡ' ಎಂಬ ಮಾತೇ  ಮರೆತುಹೋಗುತ್ತದೆ..ಕೊನೆಗೆ ಇವೆಲ್ಲದಕ್ಕೆ ಕಾರಣನಾದ ದೇವರು ಮರೆತುಹೊಗುತ್ತಾನೆ...


ಒಳ್ಳೆಯದರ ಬೆಲೆ ಅರಿವಾಗುವುದು ನಾವು ಅದನ್ನು ಕಳೆದುಕೊಂಡಾಗಲೇ.ಕಳೆದು ಕೊಳ್ಳುವ ಮುನ್ನ ಒಮ್ಮೆ ಯೋಚಿಸಿ.ತಂದೆತಾಯಿಯ ತ್ಯಾಗದ ಮುಂದೆ,ಪ್ರೀತಿಯ ಮುಂದೆ ಯಾವದು ದೊಡ್ಡದಲ್ಲ.ಇಂದು ಬಂದ ಪ್ರೀತಿಗಿಂತ,ಒಬ್ಬನಿಗಾಗಿ ಯೋಚಿಸುವ ಮುನ್ನ ನಿಮ್ಮವರ ನೆನಪಿಸಿಕೊಳ್ಳಿ.ಹಾಗೆಂದ ಮಾತ್ರಕ್ಕೆ ನಾನೇನು ಪ್ರೀತಿಯ ದ್ವೇಷಿಯಲ್ಲ.ಪಡೆಯುವ ಮಾರ್ಗ,ಪಡೆದಂತ ರೀತಿ ಒಳ್ಳೆಯದಾಗಿರಲಿ ಅಷ್ಟೇ.ಎಂದೋ ಕಲಿಸಿದ,ಗುರುತರವಾದ ಗುರುವನ್ನೊಮ್ಮೆ, ಜೀವಕ್ಕೆ ಜೀವವಾದ ಗೆಳೆಯರನ್ನೊಮ್ಮೆ, ಕೆಲಸ ದೊರೆಯಲು ಸಹಾಯ ಮಾಡಿ ಜೀವನ ತಿಳಿಸಿದ ವ್ಯಕ್ತಿಗಳನ್ನೊಮ್ಮೆ ನಿಮ್ಮ ಬಿಡುವಿನ ಸಮಯದಲ್ಲೊಮ್ಮೆ ನೆನಪಿಸಿಕೊಳ್ಳಿ. ಒಮ್ಮೆ ಸಂಪರ್ಕಿಸಿ.ಮುಚ್ಚಿಟ್ಟ ಪ್ರೀತಿಯನ್ನೊಮ್ಮೆ ಬಿಚ್ಚಿ ಎಲ್ಲಾರಿಗೂ ನೀಡಿ..ನಿಮ್ಮ ಬದುಕು ಇನ್ನಿಲ್ಲದಂತೆ ಹಸನಾಗುತ್ತದೆ..ಕ್ರತಜ್ನ ನಾದವನು ಕ್ರತಾರ್ಥನಾಗುತ್ತಾನೆ.ಜೀವನದ ಸಾರ್ಥಕತೆಯ ನೆಮ್ಮದಿ ನಿಮ್ಮದಾಗಲಿ.. ಮತ್ತೊಮ್ಮೆ ಮಗದೊಂದು ಲೇಖನದೊಂದಿಗೆ ವಾಪಸ್ಸಗುತ್ತೇನೆ.