ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ನಿನಗೂ ಕೂಡ ಹೀಗೆನಾ....!!!!???

[ತುಂಬಾ ದಿನಗಳ ಮೇಲೆ ಬರೆಯುತ್ತಿದ್ದೇನೆ..ಬರೆಯಬೇಕೆಂದು ಕೊಂಡಾಗ ತಟ್ಟನೆ ಮೂಡಿದ ಒಂದಿಷ್ಟು ಸಾಲುಗಳು ಇವು...]


ನೆನಪುಗಳ ಮಾತು ಮಧುರ...
ಪ್ರೀತಿ ಮಧುರ..


ಯಾಕೋ ಬೋರ್ ಅದ ಮನಕ್ಕೆ ನಿನ್ನ ನೆನಪಿನೊಂದಿಗೆ ಬಂದ ಹಾಡು ಇದು..ಹೊರೆಯಾದ ಕೆಲಸದ ನಡುವಿನಲ್ಲೂ ಇಣುಕುವ ನಿನ್ನ ನೆನಪಿಗೆ ನೆನಪಾಗುವವು ಸಾವಿರಾರು ಸಾಲುಗಳು..ನಿನ್ನ ನೆನಪೇ ಹಾಗಿರಬೇಕು..ನೆನಪಾದೊಡನೆ ನಗುವೊಂದು ನನ್ನ ಮೊಗದಲ್ಲಿ..ಮೂಡುವ ಪ್ರತಿ ಕಿರುನಗೆಯಲ್ಲೂ ನಿನ್ನದೇ ಛಾಯೆ..ಅರೆ ಮುಚ್ಚಿದ ಕಣ್ಣುಗಳಲ್ಲಿ ಮೂಡುವುದು ನಿನ್ನ ಪ್ರತಿಬಿಂಬ..ಬೆಳಗ್ಗೆ ಎದ್ದೊಡನೆ ನೀನು ಬರುವ ದಿನ ಹತ್ತಿರವಾಗುವುದೆಂಬ ಭಾವ.. ನನ್ನೊಡನೆ ನೀನು ಇದ್ದಿಯೆಂಬ ಅವಿನಾಭಾವ ಸಂಬಂಧ..ನೋವಿನಲ್ಲೂ  ನಿನ್ನ ನಗೆಗಾಗಿ ಕಾಯುವ ರಾಧೆಯ ಪ್ರೀತಿ..ಯಾಕೋ ತುಂಬಾ ನೆನಪಾಗ್ತಿಯ ಕಣೋ ಎಂದು ಕೂಗಿ ಹೇಳುವ ಮನಸ್ಸು ..ಎಲ್ಲಿ ನನ್ನ ನಾನೂ ಮರೆತು ಬಿಡುತ್ತೇನೋ ಎಂಬ ಸುಂದರವಾದ ಹೆದರಿಕೆ..ದಾರಿಯಲ್ಲಿ ಕೈ ಹಿಡಿದು ನಡೆಯುವ ಜೋಡಿಗಳಲ್ಲಿ ಅರಿವಿಲ್ಲದೆ  ನಮ್ಮ ಕಾಣುವ ಹುಚ್ಚು  ಕಲ್ಪನೆ, ಆ ಕಲ್ಪನೆಗೆ ಅರಿವಿಲ್ಲದೆ ಮೂಡುವ ತುಂಟ ನಗೆ,ಮತ್ತೊಮ್ಮೆ ನಿನ್ನ ಬರುವಿಕೆ ಯನ್ನು ಕಾದು ಕಾದು ಸಾಕಾಗಿ ಬರುವ ಹುಸಿ ಕೋಪ ,ನೀನಿಲ್ಲವೆಂಬ ಶೂನ್ಯವನ್ನು ಅರಗಿಸಿಕೊಳ್ಳಲಾಗದ ಅಸಹನೆ, ನನ್ನ ಸಮಾಧಾನ ಮಾಡುವ ನಿನ್ನ ಮಾತುಗಳು, ಕಣ್ಮುಂದೆ ಬರುವ ನನ್ನನ್ನೇ ಕರಗಿಸಿದ,ಸೆಳೆದ ನಿನ್ನ ತುಂಟ ನೋಟ,ಹೋಗುವಾಗ ದೊರೆತ ನಿನ್ನ ಬಿಸಿಯಪ್ಪುಗೆ,ಅದ ನೆನೆದು ಮೂಡುವ  ಕಣ್ಣೀರು. ನನ್ನ ಹುಚ್ಚು ತನಕ್ಕೆ ಇತರರು ನಕ್ಕಾರೆಂಬ ತವಕ, ನನ್ನ ಮನದ ಅಲ್ಲೋಲ ಕಲ್ಲೋಲವನ್ನು ನಿನ್ನೊಡನೆ ಹೇಳಬೇಕೆಂಬ ಗಡಿಬಿಡಿ, ನಿನ್ನ ಫೋನ್ ಗಾಗಿ ಕಾಯುವ ಕ್ಷಣಗಳು, ನೀನು ಲೈನ್ ನಲ್ಲಿದ್ದಾಗ ಎಲ್ಲಾ ಮರೆತು ನಿನ್ನ ಧ್ವನಿಯನ್ನೇ ಆಲಿಸುವ ನನ್ನ ಹುಚ್ಚುತನ ಹೀಗೆ ಉರುಳುತಿರುವ ದಿನಗಳು..ಕಾಯುತ್ತಿರುವ ಕ್ಷಣಗಳು..ಒಂದೇ ಪ್ರಶ್ನೆ ಕಣೋ ನಿನಗೂ ಕೂಡ ಹೀಗೆನಾ .....???!!!!!!!!!!!