ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ನಿನಗೂ ಕೂಡ ಹೀಗೆನಾ....!!!!???

[ತುಂಬಾ ದಿನಗಳ ಮೇಲೆ ಬರೆಯುತ್ತಿದ್ದೇನೆ..ಬರೆಯಬೇಕೆಂದು ಕೊಂಡಾಗ ತಟ್ಟನೆ ಮೂಡಿದ ಒಂದಿಷ್ಟು ಸಾಲುಗಳು ಇವು...]


ನೆನಪುಗಳ ಮಾತು ಮಧುರ...
ಪ್ರೀತಿ ಮಧುರ..


ಯಾಕೋ ಬೋರ್ ಅದ ಮನಕ್ಕೆ ನಿನ್ನ ನೆನಪಿನೊಂದಿಗೆ ಬಂದ ಹಾಡು ಇದು..ಹೊರೆಯಾದ ಕೆಲಸದ ನಡುವಿನಲ್ಲೂ ಇಣುಕುವ ನಿನ್ನ ನೆನಪಿಗೆ ನೆನಪಾಗುವವು ಸಾವಿರಾರು ಸಾಲುಗಳು..ನಿನ್ನ ನೆನಪೇ ಹಾಗಿರಬೇಕು..ನೆನಪಾದೊಡನೆ ನಗುವೊಂದು ನನ್ನ ಮೊಗದಲ್ಲಿ..ಮೂಡುವ ಪ್ರತಿ ಕಿರುನಗೆಯಲ್ಲೂ ನಿನ್ನದೇ ಛಾಯೆ..ಅರೆ ಮುಚ್ಚಿದ ಕಣ್ಣುಗಳಲ್ಲಿ ಮೂಡುವುದು ನಿನ್ನ ಪ್ರತಿಬಿಂಬ..ಬೆಳಗ್ಗೆ ಎದ್ದೊಡನೆ ನೀನು ಬರುವ ದಿನ ಹತ್ತಿರವಾಗುವುದೆಂಬ ಭಾವ.. ನನ್ನೊಡನೆ ನೀನು ಇದ್ದಿಯೆಂಬ ಅವಿನಾಭಾವ ಸಂಬಂಧ..ನೋವಿನಲ್ಲೂ  ನಿನ್ನ ನಗೆಗಾಗಿ ಕಾಯುವ ರಾಧೆಯ ಪ್ರೀತಿ..ಯಾಕೋ ತುಂಬಾ ನೆನಪಾಗ್ತಿಯ ಕಣೋ ಎಂದು ಕೂಗಿ ಹೇಳುವ ಮನಸ್ಸು ..ಎಲ್ಲಿ ನನ್ನ ನಾನೂ ಮರೆತು ಬಿಡುತ್ತೇನೋ ಎಂಬ ಸುಂದರವಾದ ಹೆದರಿಕೆ..ದಾರಿಯಲ್ಲಿ ಕೈ ಹಿಡಿದು ನಡೆಯುವ ಜೋಡಿಗಳಲ್ಲಿ ಅರಿವಿಲ್ಲದೆ  ನಮ್ಮ ಕಾಣುವ ಹುಚ್ಚು  ಕಲ್ಪನೆ, ಆ ಕಲ್ಪನೆಗೆ ಅರಿವಿಲ್ಲದೆ ಮೂಡುವ ತುಂಟ ನಗೆ,ಮತ್ತೊಮ್ಮೆ ನಿನ್ನ ಬರುವಿಕೆ ಯನ್ನು ಕಾದು ಕಾದು ಸಾಕಾಗಿ ಬರುವ ಹುಸಿ ಕೋಪ ,ನೀನಿಲ್ಲವೆಂಬ ಶೂನ್ಯವನ್ನು ಅರಗಿಸಿಕೊಳ್ಳಲಾಗದ ಅಸಹನೆ, ನನ್ನ ಸಮಾಧಾನ ಮಾಡುವ ನಿನ್ನ ಮಾತುಗಳು, ಕಣ್ಮುಂದೆ ಬರುವ ನನ್ನನ್ನೇ ಕರಗಿಸಿದ,ಸೆಳೆದ ನಿನ್ನ ತುಂಟ ನೋಟ,ಹೋಗುವಾಗ ದೊರೆತ ನಿನ್ನ ಬಿಸಿಯಪ್ಪುಗೆ,ಅದ ನೆನೆದು ಮೂಡುವ  ಕಣ್ಣೀರು. ನನ್ನ ಹುಚ್ಚು ತನಕ್ಕೆ ಇತರರು ನಕ್ಕಾರೆಂಬ ತವಕ, ನನ್ನ ಮನದ ಅಲ್ಲೋಲ ಕಲ್ಲೋಲವನ್ನು ನಿನ್ನೊಡನೆ ಹೇಳಬೇಕೆಂಬ ಗಡಿಬಿಡಿ, ನಿನ್ನ ಫೋನ್ ಗಾಗಿ ಕಾಯುವ ಕ್ಷಣಗಳು, ನೀನು ಲೈನ್ ನಲ್ಲಿದ್ದಾಗ ಎಲ್ಲಾ ಮರೆತು ನಿನ್ನ ಧ್ವನಿಯನ್ನೇ ಆಲಿಸುವ ನನ್ನ ಹುಚ್ಚುತನ ಹೀಗೆ ಉರುಳುತಿರುವ ದಿನಗಳು..ಕಾಯುತ್ತಿರುವ ಕ್ಷಣಗಳು..ಒಂದೇ ಪ್ರಶ್ನೆ ಕಣೋ ನಿನಗೂ ಕೂಡ ಹೀಗೆನಾ .....???!!!!!!!!!!!

21 comments:

ಪ್ರೀತಿಯಲ್ಲಿ ಇರುವ ಎಲ್ಲರ ಭಾವನೆ ಇದೇ ಇರುತ್ತೆ ಅನ್ನೋದು ನನ್ನ ಭಾವನೆ ...ಚನ್ನಾಗಿದೆ
-- Day dreamer

 

tumbaa dinagala nantara ondu sundara baavanaatmaka barahadinda bandiddeeraa,
heege baruttirali
baavanegalige beliyunte?
tumbaa chennaagide.

 

ಪ್ರೀತಿ ಎಷ್ಟು ಮಧುರ ಅಲ್ವ ಮೇಡಂ. ಕಾಯುವುದೂ ಒಂದು ಪ್ರೇಮ ತಪನೆಯೇ... ಒಳ್ಳೆ ಪುಟ್ಟ ಬರಹ.
ನನ್ನ ಬ್ಲಾಗಿಗೂ ಬನ್ನಿ.

 

e chikka barahadalli istondu weightage...aa.....superb

 

sooooooooooooooo nice keep writing .............

 

wa super nanu modala sala internet nali read madhidu neema e bharaha


nanna email velasa rao.rajesh362@gmail.com

 

ವಾಣಿಶ್ರೀ ಮೇಡಮ್,
ತುಂಬಾ ಚೆನ್ನಾಗಿದೆ..... ಕೆಟ್ಟಿ ಹೋದ ಮೂಡನ್ನು ಸರಿ ಮಾಡಲು ಹೀಗೆ ಮಾತನಾಡಬೇಕಂತೆ ನಮ್ಮೊಡನೆ.... ಹಾಗೇ ಇತ್ತು ನಿಮ್ಮ ಬರಹ....

 

ನೀನು ರಾಶೀ ಚೊಲೋ ಬರೀತೆ....
ನಂಗೆ ನಿನ್ blog ಓದೂದೊಂದೇ ಕೆಲ್ಸಾ ಆಗೋಯ್ದು......

 

ಪ್ರತಿಕ್ರಯಿಸಿದ ಎಲ್ಲಾರಿಗೂ ಧನ್ಯವಾದಗಳು..ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ..

 

ತು೦ಬಾ ಭಾವನಾತ್ಮಕವಾಗಿ ಬರೆದಿದ್ದೀರ. ಪ್ರೀತಿಯ ಬಾವನೆಗಳ ಹರಿವು ಹೀಗೆಯೇ ನಿರ೦ತರವಾಗಿರಲಿ..
ಶ್ರೀ..:-)

 

ತುಂಬಾ ಆಪ್ತಭಾವಗಳು. ಸುಂದರವಾಗಿ ಅಕ್ಷರದಲ್ಲಿ ಹಿಡಿಯಲಾಗಿದೆ. ಬರೆಯುತ್ತಿರಿ ಹೀಗೆ...

 

ಅದ್ಭುತ ಪ್ರೇಮಾಭಿವ್ಯಕ್ತಿ. ಸುಂದರವಾಗಿ ಉತ್ಕಟ ಪ್ರೀತಿ ಮತ್ತು ವಿರಹವನ್ನ ಹಿಡಿದಿಟ್ಟಿದ್ದಿರಾ...

 

Vani,chanaagi baritiya.Frequent aagi baritaa iru. Nice write up.. :-) odake kushi aagatte..

 

hrudayadallina bhaavanegaLannu chendavaagi aksharagalalli teredittiddiri.nice..keep writing.

 

A very comprehensive enunciation of desolate state of mind.

Considering not just limiting to person in flesh, many a times our mind will sink into such hopelessness that our soul keeps craving for a speck of a spark to light our spirits floating in dusk..

A touching one after a long while.. My compliments to the same..

 

ಮನಸಿಗೆ ಹತ್ತಿರವಾಗುವ ಭಾವಗಳ ನಿರೂಪಣೆ ಸೊಗಸಾಗಿದೆ.

ಶುಭಾಶಯಗಳು
ಅನ೦ತ್

 
This comment has been removed by the author.
 

Post a Comment