ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಹೇಳಿ ಹೋಗು ಕಾರಣ...


ಈ ಜಗತ್ತಿನಲ್ಲಿ ಪ್ರೀತಿ ಮತ್ತು ಸ್ನೇಹ ಹೇಗೆ ಹುಟ್ಟುತ್ತದೆ, ಯಾವಾಗ ಚಿಗುರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ..ಇದೊಂದು ಅರಿಯಲಾಗದ ವಾಸ್ತವ..ಆದರೆ ಒಳ್ಳೆಯ ಸ್ನೇಹವಿದ್ದಲ್ಲಿ ಪ್ರೀತಿ ಮೂಡಿ ಕಲ್ಮಷವಾಗಬಾರದು ಹೀಗೆ ಏನೇನೋ ಆದರ್ಶಗಳನ್ನು ಇಟ್ಟುಕೊಂಡು ತನ್ನದೇ ಕಲ್ಪನಾ ಲೋಕದಲ್ಲಿ ಬದುಕುತಿದ್ದವಳು ಅವಳು..ಅವನು ಕೂಡ ಯಾವದೇ ಹುಡುಗಿಯರ ಗೆಳೆತನವಿಲ್ಲದೆ, ತನ್ನದೇ ಲೋಕದಲ್ಲಿ ವಿರಹಿಸುತ್ತಿದ್ದ..ಹುಡುಗಿಯರೆಂದರೆ ಅವನಿಗೆ ಆಗದು..ಅವರು ಮೋಸ ಮಾಡುವವರು, ಸಮಯ ಸಾಧಕರು ಹೀಗೆ ಅವನದೇ ಹುಚ್ಚು ಪ್ರಪಂಚ..ಅವಳು ಕೂಡ ಒಂದುದಿನವು ಹುಡುಗರನ್ನು ಹತ್ತಿರದಿಂದ ಮಾತನಾಡಿಸಿರಲಿಲ್ಲ..ಹಾಗೆಂದ ಮಾತ್ರಕ್ಕೆ ಅವಳಿಗೆ ಹುಡುಗರ ಬಗ್ಗೆ ಕೆಟ್ಟ ಕಲ್ಪನೆಗಳೆನು ಇರಲಿಲ್ಲ.. ಅವಳು ಬೆಳೆದದ್ದೇ ಹಾಗೆ...ಆದರೆ ವಿಧಿಯ ಮುಂದೆ ಯಾರು ಸಮಾನರಲ್ಲ.. ಅದರ ಇಚ್ಛೆ ಬೇರೇನೆ  ಇರುತ್ತದೆ.

ಈ ಇಬ್ಬರು ಪರಿಚಯವಾಗಿದ್ದು ಹಾಗೇನೆ..ಆಕಸ್ಮಿಕವಾಗಿ ಅನಿವಾರ್ಯವಾಗಿ ಪರಿಚಯ ವಾದವರು..ತಿಳಿದೋ,ತಿಳಿಯದೆನೋ ಅವನಿಗಿದ್ದ ತಪ್ಪು ಕಲ್ಪನೆ ಅವಳ ಸ್ನೇಹದಿಂದ ದೂರವಾಗಿತ್ತು..ತನ್ನ ಮನಸಿನ ಭಾವನೆಯ ಜೊತೆ ಹೆಜ್ಜೆಹಾಕಲು ಆತ್ಮೀಯ ಸ್ನೇಹಿತೆಯ ಅಗತ್ಯ ಅವನಿಗೆ ಅಪ್ಯಾಯಮಾನವಾಗಿತ್ತು...ಅವಳು ಕೂಡ ಅವನ ಸ್ನೇಹದ ಹುಚ್ಚಿನಲ್ಲಿ ಕೊಚ್ಚಿಹೊಗಿದ್ದಳು..ನೋವು,ನಲಿವು,ನಗು ಎಲ್ಲವು ಅವನಿಂದಾಗಿ ಹೊಸ ಅರ್ಥಪಡೆದು ಕೊಂಡಿತ್ತು..ಇಬ್ಬರು ತಮ್ಮ ಸ್ನೇಹವನ್ನು ಗೌರವಿಸುತ್ತಿದ್ದರು..ಜಗತ್ತಿನ ನಿಯಮಗಳಿಗೆ,ಸ್ನೇಹಿತರು ಪ್ರೇಮಿಗಳಾಗುತ್ತರೆಂಬ ಲೋಕೊಕ್ತಿಗೆ ಅವರು ಬಲಿಯಾಗಬರದೆಂದು ಸ್ನೇಹಿತರಾದದಿನವೇ  ತೀರ್ಮಾನಿಸಿದ್ದರು..ಒಂದು ದಿನ ಅವಳೊಂದಿಗೆ ಮಾತನಾಡದಿದ್ದರೆ ಅವ ಮೂಕನಾಗುತ್ತಿದ್ದ..ಅವರು ದಿನ ಕುಳಿತು ಮಾತನಾಡುವ ಸ್ಥಳ ಕೂಡ ಅವರ ಬರುವಿಕೆಯನ್ನು ಕಾಯುತ್ತಿತ್ತು..ಅವನು ಅವಳಿಗೆ ಹೋಲಿಸಿದರೆ ಸ್ವಲ್ಪ ಮೌನಿ..ಆದರೆ ಅವನ ಭಾವನೆಗಳು ಅವಳ ಮಾತಾಗುತ್ತಿದ್ದವು. ಅವನ ದನಿಗೆ ಅವಳು ಕೊರಳಾಗುತ್ತಿದ್ದಳು.ಮೊದಮೊದಲು ಅವನ ಹುಚ್ಚು ಕಲ್ಪನೆ ನೋಡಿ ಅವಳು ನಗುತ್ತಿದ್ದರೆ,ದಿನಕಳೆದಂತೆ ಅದನ್ನು ದೂರಮಾಡುವುದರಲ್ಲಿ ಸಫಲಲಾಗಿದ್ದಳು..

ಆದರೆ ಸಮಾಜ ಹಾಗೆ ಯೋಚಿಸಬೇಕಲ್ಲ..ಅದರ ಕರಿ ನೆರಳು ಬಿದ್ದರೆ ಸಾಕು ಎಂತೆಂಥ ಆತ್ಮಸ್ಥೈರ್ಯವುಳ್ಳವರು ಕೂಡ ನಡುಗಿಹೋಗುತ್ತಾರೆ..ಇವರೇನೋ ತಮ್ಮ ಸ್ನೇಹದಲ್ಲಿ ಪ್ರೀತಿ ಸುಳಿಯದಂತೆ ನೋಡಿಕೊಂಡರೂ ಸುತ್ತಲಿನ ಪರಿಸರ ಹಾಗೆಂದು ಕೊಳ್ಳಲಿಲ್ಲ..ಇವರ ಬಗ್ಗೆ ಮಾತನಾಡಲು ಶುರು ಮಾಡಿದರು. ಅವರು ಯಾವುದರ ಬಗ್ಗು ತಲೆ ಕೆಡಿಸಿಕೊಳ್ಳಲಿಲ್ಲ..ಹಾಗೆಂದು ಹಾಗೆ ಬಿಟ್ಟು ಬಿಡಲು ಆಗಲಿಲ್ಲ ಹುಡುಗಿಯ ಕೈಯಲ್ಲಿ.. ಈ ಸಂಭಂದಗಳ ಪರಿದಿಯಲ್ಲಿ ಯಾವಾಗಲು ಸಿಲುಕಿ ನರಳುವವಳು ಹೆಣ್ಣು ತಾನೇ?..ಅವನು ಇದರ ಬಗ್ಗೆ ತನ್ನೊಡನೆ ಮಾತಾಡುವನೆಂದು ಕಾದಳು.ಏಕೆಂದರೆ ಈ ಗೊಸ್ಸಿಪ್ ಅವನ ಕಿವಿಗೂ ಮುಟ್ಟಿದೆಯೆಂದು ಅವಳಿಗೂ ಗೊತ್ತಿತ್ತು..ಅವನು ಏನೂ ಆಗೇ ಇಲ್ಲ ಎನ್ನುವಂತಿದ್ದ..ಅವಳಿಗೂ ಅವನ ಅತಿಯಾದ ಕಾಳಜಿಯ ಮೇಲೆ, ಅವನ ಭಾವನೆಯ ಮೇಲೊಮ್ಮೆ ಅನುಮಾನ ಮೂಡಿತು..ಅನುಮಾನ ಎನ್ನುವದಕ್ಕಿಂತ ಕೂತುಹಲ..ಅವನ ಮನಸ್ಸೇನಾದರೂ ತನ್ನೆಡೆಗೆ ಜಾರುತ್ತಿದೆಯೇ? ಸ್ನೇಹದಲ್ಲಿ ಅಪಾರವಾದ ನಂಬಿಕೆ ಇಟ್ಟವಳು..ಸದಾ ತನ್ನ ಆದರ್ಶದ ಬಗ್ಗೆ ಹೇಳುತ್ತಿದ್ದ ಅವಳಲ್ಲಿ ತನು ಸಣ್ಣವನಾದೆನೆಂಬ ಭಾವನೆ ಬಂದು ಹೇಳುತ್ತಿಲ್ಲವೇ.. ? ಹೀಗೆ ಉತ್ತರ ಸಿಗದ ಪ್ರಶ್ನೆಗಳಿಗೆ ಸೋತಳು..ಕೊನೆಗೂ ಧೈರ್ಯ ಮಾಡಿ ಅವನಲ್ಲಿ ಕೇಳಿದಳು..ಅವನು ಇವಳ ಮಾತಿಗೊಮ್ಮೆ ನಕ್ಕ..ತಿರುಗಿ ಅವಳಿಗೆ ಕೇಳಿದ್ದು ಒಂದೇ ಪ್ರಶ್ನೆ "ನಿನಗೇ ನನ್ನಲ್ಲಿ ನಂಬಿಕೆ ಇಲ್ಲವೇ?"..ಅವಳು ಉತ್ತರಕ್ಕಾಗಿ ತಡಕಾಡಿದಳು..ನಿಜವೆಂದರೆ ಅವಳು ಅವನ ಮನವನ್ನು ಬಲ್ಲಳು..ಆದರು ಹುಚ್ಚು ಮನಸು..ಒಂದೇ ಮಾತಾಡಿದ.."ನಿನ್ನ ಮೇಲೆ ಆ ಭಾವನೆ ಬಂದ ದಿನ,ನಮ್ಮ ಆದರ್ಶಗಳನ್ನು ಬದಿಗೊತ್ತಿ ಹ್ರದಯ ನಿನ್ನ ಬಯಸಿದ ಕ್ಷಣ, ನಾನು ನಿನಗೆ ಮುಖತೊರಿಸದೆ ನಿನ್ನ ಬದುಕಿಂದ ದೂರ ನಡೆಯುತ್ತೇನೆ.." ದಿನಗಳು ಉರುಳಿದವು.. ಜನ ಇವರನ್ನು ಮರೆತರು..ಯಾವ ಪರಿವೆ ಇಲ್ಲದೆ ಇವರ ಸ್ನೇಹ ಮುಂದುವರೆಯಿತು..ಒಂದೊಮ್ಮೆ ಅವ ಸ್ನೇಹಿತರೊಡನೆ ಆಗ್ರಾಕ್ಕೆ ಪ್ರವಾಸ ಹೊರಟ.. ಹೋಗುವ ಹಿಂದಿನ ದಿನ ಅವಳಲೋಮ್ಮೆ ಮನಸ್ಸು ಬಿಚ್ಚಿ ಗಂಟೆಗಟ್ಟಲೆ ಎಂದಿನಂತೆ ಮಾತಾಡಿದ..ಇವಳು ಸಣ್ಣ ಹುಡುಗಿಯಂತೆ ಅದು ಬೇಕು ಇದು ಬೇಕು ಎಂದು ತನ್ನ ಕೋರಿಕೆಯ ಪಟ್ಟಿಯನ್ನು ಅವನ ಮುಂದಿಟ್ಟಳು..ಎಲ್ಲಾ ತರುವುದಾಗಿ ಅವನೂ ಮಾತುಕೊಟ್ಟ..ಸಂತೋಷದಿಂದ ಅವನನ್ನು ಬಿಳ್ಕೋಟ್ಟಳು.
ಆದರೆ ಹೋದವನು ತಿರುಗಿ ಬಂದರು ಇವಳನ್ನು ಮಾತನಾಡಿಸಲಿಲ್ಲ..avoid ಮಾಡ ತೊಡಗಿದ..ಆಮೇಲೆ ಹೇಳದೆ ಇವಳನ್ನು ಬಿಟ್ಟು ಬೇರೆ ಊರಿಗೆ ಹೋದ..ಕಾರಣ ತಿಳಿಯದೆ ಪರದಾಡಿದಳು..ಎಲ್ಲಿ ತಪ್ಪಾಯಿತೆಂದು ಅರಿಯದಾದಳು...ಪದೆ ಪದೆ ಅವನ ಮಾತೇ ಪ್ರತಿಧ್ವನಿಸುತ್ತಿತ್ತು "ನಿನ್ನ ಮೇಲೆ ಆ ಭಾವನೆ ಬಂದ ದಿನ,ನಮ್ಮ ಆದರ್ಶಗಳನ್ನು ಬದಿಗೊತ್ತಿ ಹ್ರದಯ ನಿನ್ನ ಬಯಸಿದ ಕ್ಷಣ ,ನಾನು ನಿನಗೆ ಮುಖತೊರಿಸದೆ ನಿನ್ನ ಬದುಕಿಂದ ದೂರ ನಡೆಯುತ್ತೇನೆ.." ಮತ್ತೆ ಅವಳಲ್ಲಿ ಉಳಿದಿದ್ದು ಅದೇ ಉತ್ತರ ಸಿಕ್ಕದ ಪ್ರಶ್ನೆಗಳು.. ಅವನಿಗೆ ತನ್ನ ಮೇಲಿದ್ದುದು ಸ್ನೇಹಾನ ಇಲ್ಲ ಪ್ರೀತಿನಾ ?.. ತನ್ನ ಆದರ್ಶಗಳ ಹೆಸರಿನಲ್ಲಿ ತಾನು ಕಳೆದುಕೊಂಡಿದ್ದು ಒಳ್ಳೆ ಪ್ರೀತಿನಾ ಅಥವಾ ಉಳಿಸಿಕೊಳ್ಳಲು ಹೋಗಿ ಕಳೆದುಕೊಂಡ ಸ್ನೇಹಾನ? ಇದರಲ್ಲಿ ಜಯ ಯಾವುದಕ್ಕೆ ತಿಳಿಯದೆ ಹುಟ್ಟಿದ ಪ್ರೀತಿಗೋ ? ಸ್ನೇಹಕ್ಕೋ ? ತಾನು ನಿಜವಾಗಿಯೂ ಗೆದ್ದೆನೆ? ಅಥವಾ ಈ ಗೆಲುವು  ಈ ಆದರ್ಶಗಳಿಗೆ ಕಾರಣವಾದ ಸಮಜದ್ದಾ?

27 comments:

ಚನ್ನಾಗಿದೆ ಬರಹ...
ಸ್ನೇಹವಾಗಲಿ, ಪ್ರೀತಿಯಾಗಲೀ.. ಅದಕ್ಕೆ ಆದರ್ಶದ ಚೌಕಟ್ಟು ಹಾಕಿದರೆ ಅದು ನೋವನ್ನೆ ತರುತ್ತದೆ...
ಅದನ್ನು ಅದರಷ್ಟಕ್ಕೆ ಬಿಡುವುದರಿ೦ದ... ಸಹಜತೆಗೆ ಚೆಲುವು ಹೆಚ್ಚಾಗುತ್ತದೆ...ಸು೦ದರವಾದ ಬರಹಕ್ಕೆ ಅಭಿನ೦ದನೆಗಳು.

 

ಪ್ರೀತಿ ಹುಟ್ಟೊದು ಸ್ನೇಹ ಆದ ಮೇಲೆ ತಾನೆ? ಅದಕ್ಕಿಂತ ಮೊದಲು ಪ್ರೀತಿ ಅಂದರೆ ಕೇವಲ ಆಕರ್ಷಣೆ ಅಲ್ವಾ?

ತುಂಬಾ ಚೆನ್ನಾಗಿದೆ ಲೇಖನ.

 

ಪರಿಚಯದಿಂದ ಸ್ನೇಹ, ಸ್ನೇಹದಿಂದ ಸಲಗೆ, ಸಲಗೆಯಿಂದ ಪ್ರೀತಿ, ಇದೆಲ್ಲವೂ ಪ್ರಕೃತಿ ಸಹಜ ಅನ್ನೋದು ನನ್ನ ಭಾವನೆ. ಸಮಾಜ ಏನೆಂದುಕೊಳ್ಳುವುದೋ ಎಂದು ನಮಗೆ ಸ್ಪಂದಿಸುವ ಒಂದು ಮನಸ್ಸನ್ನ ದೂರ ಮಾಡಿಕೊಳ್ಳುವುದು ಮೂರ್ಖತನವೆನಿಸುತ್ತದೆ. ಪ್ರಕೃತಿಯ ವಿರುದ್ದ ನಡೆಯುವುದರಿಂದ ಚುಕ್ಕಿಚಿತ್ತಾರ ಅವರೂ ಸಹ ಹೇಳಿರುವ ಹಾಗೆ ದುರಂತಕ್ಕೆ ಕಾರಣವಾಗುವುದೆಂತು ಖಂಡಿತ ಸತ್ಯ. ನಾವೇನೇ ಮಾಡಿದ್ರೂ ಸಹ "The world is to comment" ಅನ್ನೋ ಮಾತು ಈ ಒಂದು ಸಂದರ್ಭದಲ್ಲಿ ಸಮಂಜಸವೆನಿಸುತ್ತೆ..

 

Good Vani... :-)
sakkat touching aagi baradde... I liked it...:-)

 

ಪ್ರತಿಕ್ರಯಿಸಿದ ಎಲ್ಲರಿಗು ಧನ್ಯವಾದಗಳು.. ಒಳ್ಳೆ ಸ್ನೇಹಿತರಾದವರು ಪ್ರೇಮಿಗಳಾಗಿ ಸೋತು ಸ್ನೇಹಿತರಾಗೆ ಉಳಿದ ಉದಾಹರಣೆಗಳು ಹಲವಾರು..ಅದನ್ನೇ ಮನದಲ್ಲಿಟ್ಟುಕೊಂಡು ಸಮಾಜದ ಕೊಂಕನ್ನು ಎತ್ತಿ ಹಿಡಿಯುವ ಸಣ್ಣ ಪ್ರಯತ್ನ ಮಾಡಿದ್ದೇನೆ.

 

ಸ್ನೇಹ,ಪ್ರೀತಿ ಒಲ್ಲೋ ಒಂದಕ್ಕೆ ಒಂದು ಸಂಬಂಧ..
ಸ್ನೇಹ ಆರಂಭ..ನಂತರ ಪ್ರೀತಿ..
ಇಲ್ಲಿ ಇದು ಸರಿ, ಇದು ತಪ್ಪು ಅಂತ ಹೇಳೋದು ಕಷ್ಟ ಅಲ್ವ..?
ಒಳ್ಳೆ ಲೇಖನ...
ನಿಮ್ಮವ,
ರಾಘು.

 
This comment has been removed by the author.
 

really nice one vaani.... cute and touching story....

 

Nice n Touching story... please continue it n make them meet again n give a happy ending to them... kathe ardhakke nintaagide...!!!

 

Che tragedy ending!!!!!!!!:( :( :( :(
ಆದರ್ಶದ ಹೆಸರಿನಲ್ಲಿ ಸಂಬಂದಗಳ ನಾಶವಾಗಬಾರದು ಹೇಳುವುದಕ್ಕೆ ಸುಂದರ ನಿದರ್ಶನ ...
So do not lose any of ur frens coz of any reasons..

 

Really touching.....very nice ....tumba chennagide...

 

ಸಮಾಜದಲ್ಲಿ ಆದರ್ಶತೆ ಉಳಿಸಕೊಳ್ಳಲು ಸ್ನೇಹ, ಪ್ರೀತಿಗಳ ಬಲಿಯೇ? ವಿಚಾರದ ಮ೦ಡನೆ ಸತ್ವಯುತವಾಗಿದೆ. ಚುಕ್ಕಿ ಚಿತ್ತಾರ ಅವರ "ಅದನ್ನು ಅದರಷ್ಟಕ್ಕೆ ಬಿಡುವುದರಿ೦ದ... ಸಹಜತೆಗೆ ಚೆಲುವು ಹೆಚ್ಚಾಗುತ್ತದೆ" ಎನ್ನುವ ವಿಮರ್ಶೆಯನ್ನು ನಾನು ಅನುಮೋದಿಸುತ್ತೇನೆ. ಕಥಾ ಚಿತ್ರಣ ತು೦ಬಾ ಚೆನ್ನಾಗಿದೆ ವಾಣಿಶ್ರೀ ಅವರೆ.

ಶುಭಾಶಯಗಳು
ಅನ೦ತ್

 
This comment has been removed by the author.
 

ಸ್ನೇಹದ ನಂತರ ಪ್ರೀತಿ.. ಸ್ನೇಹ ಪ್ರೀತಿಯಾಗಿ ಬದಲಾದ ಮೇಲೆ ಮತ್ತೆ ಬರೀ ಸ್ನೇಹಿತರು ಆಗಲು ಸಾಧ್ಯವಿಲ್ಲ, ತಪ್ಪು ಯಾರದ್ದು ಎಂದು ಹೇಳೋದು ಕಷ್ಟ, ಪ್ರೀತಿಸೋದು ತಪ್ಪಾ?.. ಉತ್ತರ ಸಿಕ್ಕಿಲ್ಲಾ... ಸುಂದರ ಲೇಖನ..

 

superb article,, nija ,,first friendship,n then,, preeti,, awesome,, but confusion yake antha gottagta illa,




***********************************
http://bhuminavilu.blogspot.com/
**********************************

 

ಲೇಖನ ಚೆನ್ನಾಗಿದೆ ವಾಣಿಶ್ರೀ ಮೇಡಂ, ಧನ್ಯವಾದಗಳು

 

hey awesome n touching articles!! Keep the same spiritn keep writing forever n ever!!

 

ಪ್ರೀತಿಗ್ಯಾವ ಬೇಲಿ? ಏಕೆ ಕಟ್ಟುವುದು ಸ್ನೇಹಕೂ ಅಂತದೋದು ಹೆಸರು?

ಶೈಲಿ, ಭಾಷಾ ಬಳಕೆ ಚೆನ್ನಾಗಿದೆ ಮೇಡಂ

ನನ್ನ ಬ್ಲಾಗಿಗೆ ಒಮ್ಮೆ ಬಂದು ಹೋಗಿ...

 

ನಾನು ನಿಮ್ಮ ಬ್ಲಾಗಿಗೆ ಇದೆ ಮೊದಲ ಬೇಟಿ ನೀಡಿದ್ದೇನೆ . ಸುಂದರ ಸಾಲುಗಳು ಮನಸ್ಸಿಗೆ ಮೃದು ನೀಡಿದವು . ಸುಂದರ ನಿರೋಪಣೆ ಚನ್ನಾಗಿದೆ ...... ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬೇಟಿ ಕೊಡಿ ....

SATISH N GOWDA
ನನ್ನ ಸ್ನೇಹಲೋಕ (ORKUT)
satishgowdagowda@gmail.com
ನನ್ನವಳ ಪ್ರೇಮಲೋಕ (my blog)
http://nannavalaloka.blogspot.com

 

ಆ ಭಾವನೆ ಬಂದ ದಿನ,ನಮ್ಮ ಆದರ್ಶಗಳನ್ನು ಬದಿಗೊತ್ತಿ ಹ್ರದಯ ನಿನ್ನ ಬಯಸಿದ ಕ್ಷಣ ,ನಾನು ನಿನಗೆ ಮುಖತೊರಿಸದೆ ನಿನ್ನ ಬದುಕಿಂದ ದೂರ ನಡೆಯುತ್ತೇನೆ.."
ee lines tumbaa chennagide,,good one keep writing

 

Chennagide...

Kelevomme uttara sigada prashnegalu tumbaa kaadi biduttave,,

Thanks:
http://marulupayaniga.blogspot.com/

 

awesome :)

 

Post a Comment