ಮೊನ್ನೆ ಮೊನ್ನೆ ಮನೆಗೆ ಹೋದಾಗ ಜೋಪಾನವಾಗಿ ತೆಗೆದಿರಿಸಿದ್ದ ನನ್ನ ಆಟೋಗ್ರಾಪ್ ಬುಕ್ ನ ಮೇಲೊಮ್ಮೆ ಮಮತೆಯಿಂದ ಕೈಯಾಡಿಸಿ ಮೊದಲಬಾರಿ ಓದುತ್ತಿರುವೇನೋ ಎನ್ನುವಂತೆ ಕುಳಿತು ಓದತೊಡಗಿದೆ..ಈ ಆಟೋಗ್ರಾಪ್ಗಳೇ ಹಾಗೆ ಎಷ್ಟು ಬಾರಿ ಓದಿದರೂ ಮೊದಲಸಾರಿ ಓದುತ್ತಿರುವ ಕೂತುಹಲವನ್ನೇ ಬಚ್ಚಿಟ್ಟು ಕೊಂಡಿರುತ್ತವೆ.ನಾನು ನನ್ನ ಎಲ್ಲಾ ಶಾಲೆ,ಕಾಲೇಜ್ ಗಳಲ್ಲಿ ತಪ್ಪದೆ maintain ಮಾಡಿದ ಬುಕ್ ಎಂದರೆ ಇದೆ ಇರಬೇಕು..ಬಣ್ಣ ಬಣ್ಣದ ಪೆನ್ಸಿಲ್ ಗಳಿಂದ,ಚಿತ್ರಗಳಿಂದ ಕೂಡಿದ ಪುಸ್ತಕ ಓದುವುದೆಂದರೆ ,ಅದರಲ್ಲೋ ಎಲ್ಲಕ್ಕಿಂತ ಮಿಗಿಲಾಗಿ ಬಣ್ಣದ ದಿನಗಳ ನೆನಪನ್ನು ಹೊತ್ತ ಪುಸ್ತಕ ಎಂದರೆ ಯಾರು ತಾನೇ ಓದಲು ಇಷ್ಟಪಡುವುದಿಲ್ಲ ಹೇಳಿ...ನಮ್ಮ ಆತ್ಮೀಯರೂ,ನೆನಪನ್ನು ನಮ್ಮಜೊತೆ ಹಸಿರಾಗಿರುವಂತೆ ಮಾಡಿರುವ,ಕೈ ಅಕ್ಷರಗಳಲ್ಲಿ ತಿದ್ದಿ,ತೀಡಿ ಬರೆದ ಆ ಪುಸ್ತಕ ಈಗಿನ SMS,CHATTING,MAIL ಯಾವದಕ್ಕೂ ಸಮನಾಗಲಾರದು..ಓದು ಓದುತ್ತಿರುವಂತೆ ಒಬ್ಬೊಬ್ಬರು ನನ್ನ ವ್ಯಕ್ತಿತ್ವವನ್ನು ವಿವರಿಸಿದ ರೀತಿ,ನಾವು ಮಾಡುತ್ತಿದ್ದ ಚೆಸ್ಟೆಗಳು,ಬೇಸರಿಸಿಕೊಂಡು ಮಾತು ಮರೆತ ಕ್ಷಣಗಳೂ ಮತ್ತೊಮ್ಮೆ ನನ್ನ ಆ ದಿನಗಳಿಗೆ ಕರೆದೊಯ್ದವು..ಶಾಲೆಯ ಕೊನೆಯದಿನಗಳಲ್ಲಿ ನಮಗೆ ಓದುವುದನ್ನು ಬಿಟ್ಟು ಆಟೋಗ್ರಾಪ್ ಬರೆಯುವದೇ ಒಂದು ದೊಡ್ಡ ಕೆಲಸ..ಮನೆಯಲ್ಲಿ ಎಷ್ಟೋ ಬಾರಿ ಬೈದಿದ್ದಾರೆ..ಅಂದೆನಾದರೂ ನಾವು ಬರೆಯದೆ ಎದ್ದರೆ ಎಂತಹ ಸುಂದರ ಪುಸ್ತಕವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದು ಅನಿಸಿದ್ದಿದೆ..ಎಲ್ಲೋ ಒಂದುಕಡೆ ನನ್ನಲ್ಲೇ ಅದ ಬದಲಾವಣೆ ಏನೆಂಬುದಕ್ಕೆ ಕನ್ನಡಿಹಿಡಿದಂತಿದೆ..ಮತ್ತೊಮ್ಮೆ ಆ ದಿನಗಳಿಗೆ ಮರಳುವ ಮನಸಾಗಿದೆ.. ಬಿಡುವಿರದ ಬದುಕಿನಲ್ಲಿ ಎಷ್ಟೋ ಚಿಕ್ಕ ಪುಟ್ಟ ವಿಷಯಗಳನ್ನೆಲ್ಲ ನಮ್ಮ ಸ್ಮ್ರತಿ ಪಟಲದಿಂದ ಸರಿಸಿರುತ್ತೇವೆ..ಇಂತಹ ಪುಸ್ತಕಗಳಿಂದ ನಾವು ಮರೆತ ಆ ಕ್ಷಣಗಳ ನೆನಪಾದಾಗ ಒಂದೊಮ್ಮೆ ಅತ್ತರೆ ನಮಗರಿವಿಲ್ಲದಂತೆ ನಗು ಉಕ್ಕುತ್ತದೆ..
ಜೀವನದಲ್ಲಿ ಪ್ರತಿಯೊಬ್ಬರೂ ಬೆಳೆದಂತೆ,ಅವಶ್ಯಕತೆಗಿಂತ ಜಾಸ್ತಿ ಬದಲಾದಂತೆ,ಮತ್ತೆ ಮತ್ತೆ ನಮ್ಮನ್ನು ನಮಗೆ ನೆನಪಿಸುವವು ಇಂತಹ ಪುಸ್ತಕಗಳು..ಕೇವಲ ಅವು ಪುಸ್ತಕಗಳಾಗಿರದೆ ಜೀವಂತಿಗೆಯ ಬರಹಗಳಾಗಿ ನಮ್ಮಡೋನೆ ಇರುತ್ತವೆ..ಮುಗ್ದತೆಯ ಬರಹದಲ್ಲೊಮ್ಮೆ ಅಲ್ಲಲ್ಲಿ ಇಣುಕುವ ವೈಚಾರಿಕತೆಯ ವಿಮರ್ಶಿಸುವ ಮಾತುಗಳು...ಎಲ್ಲರೂ ನಿಮ್ಮಲ್ಲಿ ಇಂತಹ ಪುಸ್ತಕಗಳಿದ್ದರೆ ಒಮ್ಮೆ ತೆರೆದು ನೋಡಿ.. ಮರೆತಿರುವ ಚಿಕ್ಕ ಪುಟ್ಟ ವಿಷಯಗಳನ್ನು ನೆನಪಿಸಿಕೊಳ್ಳಿ..ನಿಮ್ಮ ಹಳೆಯ ಸ್ನೇಹಿತರನ್ನ ಮತ್ತೆ ನೆನಪಿಸಿಕಕೊಳ್ಳಿ.. ಅವರನ್ನ ಸಂಪರ್ಕಿಸಿ..ನಿಮ್ಮಲ್ಲೊಮ್ಮೆ ಹೊಸ ಉತ್ಸಾಹ ಉಂಟಾಗಿ ಮನಸ್ಸು ಪ್ರಪುಲ್ಲವಾಗಿ ಅರಳುತ್ತದೆ...ಮತ್ತೊಮ್ಮೆ ಮತ್ತೊಂದು ಬರಹದೊಂದಿಗೆ ವಾಪಾಸ್ಸಗುತ್ತೇನೆ...ಮತ್ತೆ ಹೊಸ ನೆನಪುಗಳೊಂದಿಗೆ.,ಆಶಯದೊಂದಿಗೆ...
17 comments:
>>ಕೈ ಅಕ್ಷರಗಳಲ್ಲಿ ತಿದ್ದಿ,ತೀಡಿ ಬರೆದ ಆ ಪುಸ್ತಕ ಈಗಿನ SMS,CHATTING,MAIL ಯಾವದಕ್ಕೂ ಸಮನಾಗಲಾರದು<<..how true!!!
ಸವಿ ಸವಿ ನೆನಪು, ಸಾವಿರ ನೆನಪು...:-)
nice one..
nice wordings vaani.. keep it up..
ಸವಿ ನೆನಪುಗಳ ಬಚ್ಚಿಡುವ ,ಬೇಕೆಂದಾಗ ತೆರೆದುಕೊಳ್ಳುವ ಆಟೋಗ್ರಾಫ್ ಎಷ್ಟು ಚೆಂದ!ನಿಮ್ಮ ಲೇಖನ ಚೆನ್ನಾಗಿ ಮೂಡಿ ಬಂದಿದೆ.ನನ್ನ ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.
nenapu madhura.....
baraha sundara......
ವಾಣಿಶ್ರೀ ಮೇಡಂ,
ಸತ್ಯದ ಮಾತು.... ಆಟೋಗ್ರಾಪ್ಹ್ ಹಿಡಿದಾಗ ಒಂದೊಂದೇ ನೆನಪು ಹುಡುಕುತ್ತಾ ಬಂದುಬಿಡತ್ತೆ..... ಉತ್ತಮ ಬರಹ...ನನ್ನ ಬ್ಲಾಗ್ ಗೆ ಬನ್ನಿ
ನೆನಪಿನ ಬಾಗಿಲು..ಆಟೋಗ್ರಾಪ್ಹ್
ನಿಮ್ಮವ,
ರಾಘು.
ನನ್ನ ಆಟೋಗ್ರಾಫ಼್ ಪುಸ್ತಕ ತೆಗೆದು ನಾನು ಓದುತ್ತಿರುತ್ತೆನೆ. ಅದೊ೦ದು ಮಧುರ್ ಅನುಭವ. ಆ ಆನ೦ದ ಹೇಳಲಸದಳ. ಮತ್ತೆ ತೆಗೆದು ನೋಡಬೇಕೆನಿಸಿದೆ ತಮ್ಮ ಲೇಖನ ಓದಿದ ಮೇಲೆ. ಹಳೆಯ ಸುಮಧುರ ಬಾಲ್ಯದ ನೆನಪು ಮಾಡಿಕೊಟ್ಟಿದ್ದಕ್ಕೆ ತಮ್ಮ ಲೇಖನಕ್ಕೆ ಧನ್ಯವಾದಗಳು.
ನಿಜ,, ಬಾಲ್ಯವೇ ಸುಂದರ,, ಅದರ ನೆನಪುಗಳು ಇನ್ನೂ ಸುಂದರ..
ಅವೆಲ್ಲವನ್ನೂ ನಿಮ್ಮ 'ಆಟೋಗ್ರಾಫ್' ಬರಹದ ಮೂಲಕ ನೆನಪಿಸಿದ ನಿಮಗೆ ಧನ್ಯವಾದಗಳು..
ಆಟೋಗ್ರಾಪ್ ಗಳ ನೆನಪಿನ ಕ್ಷಣಗಳೇ ಹಾಗೆ. ಅತೀ ಮಧುರ...
ನಿಮ್ಮ ಈ ಲೇಖನ ಓದಿ ನಾನೂ ನನ್ನ ಆಟೋಗ್ರಾಪ್ ಪುಸ್ತಕ ತೆರೆದು ಕುಳಿತಿದ್ದೇನೆ.
thank you for reminding........
Great.
You are very good in Kannada wordings.
Nice blog.
ಪ್ರತಿಕ್ರಯಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು..
ವಾಣಿಶ್ರೀ...ನಿಮ್ಮ ಲೇಖ್ನ ನೋಡಿ ನನಗೂ ನನ್ನ ಕಾಲೇಜಿನ ವಿದ್ಯಾಭ್ಯಾಸದ ಕಡೆಯ ಘಟ್ಟ ನೆನಪಾಯ್ತು....ಹೌದು ಆಟೋಗ್ರಾಫ್ ಮೇಲೆ ಅನಿಸಿಕೆಗಳನ್ನು ತೆಗೆದುಕೊಂಡು ಬಹಳ ವರ್ಷಗಳ ನಂತರ ನೋಡಿದ್ರೆ ನಮ್ಮ ಬಾಲ್ಯದ ಚಿತ್ರಗಳನ್ನು ನೋಡಿ ಅನಂದಿಸುವ ಅನುಭವ...ಅಲ್ವಾ..?
beutiful n very true
Analogous to autograph book what reminds me is the old photo collection in albums. It was so much fun to take fotos in 36mm roll and wait for days to see its print coming out. I take that each and every foto clicked will be remembered and commented by all of us. Contrastingly, the digital era has destroyed the very charm of photography, wherein we spend a few seconds on hundreds of fotos taken(recklessly) on every occasion! I still have pleasure in shooting with the old analog camera and awaiting for the prints..
Dunno where we are heading towards.. Its a big qtn mark!
Madam,
Tumbaa sundara baraha...ista aitu...
ಬಹಳ ಚೆನ್ನಾಗಿದೆ ವಾಣಿಶ್ರೀ ಮೇಡಂ , ಧನ್ಯವಾದ
ಸುಮಧುರ ಸುಂದರ ನೆನಪನ್ನು ತುಂಬಿರುವ ಆಟೋಗ್ರಾಪ್ಹ್ ,,,,,,ಕಳೆದ ನೆನಪುಗಳನ್ನು ಮೆಲಕು ಹಾಕಲು ,,ನಮಗಿರುವ ಒಂದು ಅದ್ಭುತ ಸಾಧನ ....ಲೇಖನ ಚೆನ್ನಾಗಿದೆ .........
Post a Comment