ಮುಂಗಾರಿನ ಅಭಿಷೇಕಕೆ ಮೆದುವಾಯಿತು ನೆಲವು
ಸಂಜೆಯಾಯಿತೆಂದರೆ ಸುರಿಯುವ ಮಳೆ, ತುಂಬಿ ತುಳುಕುವ ರಸ್ತೆಯ ಇಕ್ಕೆಲಗಳು, ಸಾಲದೆಂಬಂತೆ ರಸ್ತೆಯ ಮೇಲೂ ನೀರು, ಹೆಜ್ಜೆಯಿಡಲೂ ಹೇಸಿಗೆಯಾಗುವಂತೆ ರಸ್ತೆಯಲ್ಲಿ ಕೊಳಚೆ, ಓಲಾಡಿಕೊಂಡು ಸಾಗುವ ಬಸ್ಸು,ಮಾರು ಮಾರಿಗೆ trafiic ಜಾಮ್, ನಾನು ಹೇಳಹೊರಟಿರುವುದು ಬೆಂಗಳೂರಿನ ಮಳೆಗಾಲವನ್ನಲ್ಲ.!!!!!!! ನನ್ನ ನೆನಪಿನಲ್ಲಿ ಬೆರೆತುಹೋದ ನನ್ನ ಬಾಲ್ಯದೊಂದಿಗೆ ಬೆಸೆದುಹೋದ ಸುಂದರ ಮಲೆನಾಡಿನ ಮಳೆಗಾಲವನ್ನು..ಹೌದು ನಾನು ಹುಟ್ಟಿದ್ದೇ ಹಸಿರು ಹಾಸಿಗೆಯನ್ನು ಹಾಸಿ,ಸೌಂದರ್ಯವನ್ನು ತನ್ನ ಒಡಲಾಳದಲ್ಲಿ ಬಚ್ಚಿಟ್ಟುಕೊಂಡಿರುವ,ಆಕಾಶಕ್ಕೆ ಏಣಿ ಹಾಕುವಂತೆ ಬೆಳೆದ ಅಡಿಕೆ ಮರಗಳು,ಮೆಣಸು,ಏಲಕ್ಕಿಯ ಪರಿಮಳ ಉಸಿರಾಡುವ,ಉತ್ತರ ಕನ್ನಡವೆಂಬ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ..ನನ್ನ ಬಾಲ್ಯದ ನೆನಪು ನನ್ನಲ್ಲಿ ಇಂದಿಗೂ ಹಸಿರು..ನನ್ನೊಬ್ಬನದಲ್ಲ ಅಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬರೂ ಅವರ ಬಾಲ್ಯದ ಮಳೆಗಾಲವನ್ನು ಮರೆತಿರಲಾರರು.ಒಂದೆಡೆ ತುಂಬಿ ಹರಿಯುವ ಅಘನಾಶಿನಿ,ಅದರ ನೀರನ್ನು ಉಂಡು ಸೊಂಪಾಗಿ ಬೆಳೆದ ಬತ್ತದ ಗೆದ್ದೆಗಳು,ಜಲಪಾತದ ಸೊಭಗನ್ನು ನೆನಪಿಸುವ ಸಣ್ಣ ಝಾರಿಗಳು ಇವೆಲ್ಲದರ ನಡುವೆ ಕಳೆದ ನನ್ನ ಬಾಲ್ಯ..
ನಾವೆಲ್ಲ ಶಾಲೆಗೆ ಹೋಗುತ್ತಿದ್ದ ದಿನಗಳು..ಶಾಲೆಯೆಂದರೆ ಇಲ್ಲಿನವರಂತೆ ರಿಬೂಕ್ ಶೂ,ಬೆಲೆಬಾಳುವ uniform ಗಳು,ಒಂದು ರಾಶಿ ಪುಸ್ತಕಗಳು, ತಲೆ ಹತ್ತಿ ಕುಳಿತ ಒತ್ತಡ ಇವೆಲ್ಲ ನಮ್ಮದಾಗಿರಲಿಲ್ಲ.ಮಳೆಗಾಲಕ್ಕೆಂದೇ ತೆಗೆದುಕೊಂಡು ಎರಡು ವರ್ಷ ಜೋಪಾನ ಮಾಡಿದ ಚಪ್ಪಲ್ಲುಗಳು,ನೀಲಿ ಅಂಗಿ,ಬಿಳಿ ಬ್ಲೌಸ್, ಉದ್ದ ಕೋಲಿರುವ ಕಪ್ಪು ಕೊಡೆ, ಪೂರ್ತಿ ಒದ್ದೆಯಾಗುತ್ತಿದ್ದ ಪಾಟಿಚೀಲ,ದೂರದ ಕಾಲುಹಾದಿ ಹೀಗೆ ನಮ್ಮದೇ ಲೋಕ.ಅಲ್ಲೆಲ್ಲ ಮಳೆಗಾಲವೆಂದರೆ ತೋಟದಲ್ಲಿ ಬೆಳೆಯುತ್ತಿದ್ದ ಒಂದುಜಾತಿಯ ಗಿಡ ನಮ್ಮೆಲ್ಲರ ಪಾಲಿಗೆ ಸ್ಲೇಟ್ ಒರೆಸುವ ಮಾಧ್ಯಮ.ಅದನ್ನು ಕೊಯ್ದು,ಕವರ್ ನಲ್ಲಿ ತುಂಬಿ ಶೇಕರಿಸಿ ಇಡುತ್ತಿದ್ದೆವು.ಅರ್ಧದಿನ ಶಾಲೆಗೆ ರಜೆ ಜೋರು ಮಳೆಯಿಂದಾಗಿ.ಸಂಜೆ ಯಾಯ್ತೆಂದರೆ ಸುಡುತ್ತಿದ್ದ ಹಲಸಿನ ಬೇಳೆ(ಮಳೆಗಾಳಕ್ಕೆಂದೇ ಅಲ್ಲಿಯ ಜನ ಶೇಕರಿಸಿ ಇಡುತ್ತಾರೆ),ಗೇರು ಬೀಜ.ದೀಪದ ಬೆಳಕಿನಲ್ಲಿ ಕುಳಿತು ಮನೆಯವರೆಲ್ಲ ಸವಿಯುತ್ತಿದ್ದೆವು.ಆ ಕಾಲಕ್ಕೆ ಸರಿಯಾಗಿ ಬೆಟ್ಟದಲ್ಲಿ ಬಿಡುತ್ತಿದ್ದ ಚಳ್ಳೆ ಹಣ್ಣು, ಪಿಳ್ಳೆ ಹಣ್ಣು, ಊರಿನ ಮಕ್ಕಳೆಲ್ಲ ಶನಿವಾರ ಭಾನುವಾರ ಅದರ ಹುಡುಕಾಟದಲ್ಲೇ..ಓದು ನಮ್ಮ ಪಾಲಿಗೆ ಏನಿದ್ದರೂ secondary.ಹೊರಗಡೆ ಬರಲಾರದಷ್ಟು ಮಳೆ ಸುರಿಯುತ್ತಿದ್ದರೆ,ಮನೆಯ ಮುಂದಿನ ಕಾಲುವೆಯಲ್ಲಿ ನಾವು ದೋಣಿ ಬಿಡುತ್ತಿದ್ದೆವು.ಆ ದಿನಗಳನ್ನು ನಾನು ತುಂಬಾ ನೆನಪಿಸಿ ಕೊಳ್ತಿನಿ.
ಶಾಲೆಯೂ ಬದಲಾಯಿತು.ದಿನ ಬಸ್ಸಿನಲ್ಲಿ ಪ್ರಯಾಣ.ಮಳೆಗಾಲದಲ್ಲಿ ಮರೆಯಾಗುತ್ತಿದ್ದ ನಮ್ಮೂರ ಬಸ್ಸು ಆಗೊಮ್ಮೆ ಈಗೊಮ್ಮೆ ಮುಖ ತೋರಿಸಿದರೆ ನಮ್ಮ ಪುಣ್ಯ..ಆ ದಿನ ನಮ್ಮದು ಕಾಲು ನಡಿಗೆಯಲ್ಲೇ 7km ಪ್ರಯಾಣ..ಆ ದಿನ ಅರ್ಧ ಶಾಲೆ ನಮ್ಮ ನಡಿಗೆಯಲ್ಲೇ ಮುಗಿದಿರುತ್ತಿತ್ತು..ಇನ್ನೊಂದಷ್ಟುದಿನ ಅಘನಾಶಿನಿ ತನ್ನ ಒಡಲನ್ನು ತುಂಬಿ ಹರಿದು ದಾರಿಯನ್ನು ಮುಚ್ಚಿ ಬಿಡುತ್ತಿತ್ತು..ಆದರೂ ಅದರ ಸೌಂದರ್ಯವನ್ನು ನೋಡಲು ನಾವು ಹೋಗುತ್ತಿದ್ದೆವು..ಸುತ್ತ ಮುತ್ತಲಿನ ಹಳ್ಳಿಗೆ ಇರುವುದೊಂದೇ ಹೈಸ್ಕೊಲ್ .ನಮ್ಮ ಊರಿನ ಬಸ್ಸು ಶಾಲೆಯ ಮಕ್ಕಳಿಂದಲೇ ತುಂಬಿ ಬಿಡುತ್ತಿತ್ತು..ದಿನ ಇತರ ಪ್ರಯಾಣಿಕರಿಂದ ಬೈಗುಳ ಇದ್ದಿದ್ದೆ ನಮಗೆ..ಆ ದಿನಗಳು ತುಂಬಾ ಸುಂದರ ವಾಗಿದ್ದವು ನಮ್ಮ ಪಾಲಿಗೆ..
ಮಳೆಬಂದರೆ ನೆನೆಯಬಾರದೆಂದು ಬಸ್ಸಸ್ಟ್ಯಾಂಡ್ ನಲ್ಲಿ ಕೊಡೆ ಹಿಡಿದು ಕಾಯುತ್ತಿದ್ದ ಅಪ್ಪ ಇಲ್ಲಿ ನಾನು ಕೊಡೆ ಮರೆತು ಮಳೆಯಲ್ಲಿ ನೆನೆದು ಮನೆ ತಲುಪುವಾಗ ನೆನಪಾಗುತ್ತಾರೆ.ಕುರು ಕುರು ತಿಂಡಿ ಮಾಡಿ ಬಾಗಿಲಲ್ಲೇ ನನ್ನ ಕಾಯುತ್ತಿದ್ದ ಅಮ್ಮ ಇಂದು ಹಸಿವೆ ಇಂದ ಬೇಯುವಾಗ ಕಾಡುತ್ತಾರೆ..ಸಮಯದ ಪರಿವೆಯೇ ಇಲ್ಲದೆ ಬೆರೆಯುತ್ತಿದ್ದ ನನ್ನ ಸ್ನೇಹಿತರು ಮುಂಗಾರಿನ ಮಳೆಯಲ್ಲೊಮ್ಮೆ ನೆನಪಾಗುತ್ತಾರೆ..ಪುಟ್ಟ ಪುಟ್ಟ ಚಪ್ಪಲ್ಲುಗಳು,ಉದ್ದ ಕೋಲಿನ ಕೊಡೆ ನನ್ನ ಅಣಕಿಸುತ್ತವೆ.ಚಳ್ಳೆ ಪಿಳ್ಳೆ ಹಣ್ಣುಗಳು ನೆನಪಾಗಿ ಬಾಯಲ್ಲಿ ನೀರು ತರಿಸುತ್ತವೆ..ಒಟ್ಟಿನಲ್ಲಿ ನಮ್ಮೂರ ಮಳೆಗಾಲವನ್ನು ನಾನು ತುಂಬಾ miss ಮಾಡಿ ಕೊಳ್ಳುತ್ತಿದ್ದೇನೆ.
ಮಳೆಬಂದರೆ ನೆನೆಯಬಾರದೆಂದು ಬಸ್ಸಸ್ಟ್ಯಾಂಡ್ ನಲ್ಲಿ ಕೊಡೆ ಹಿಡಿದು ಕಾಯುತ್ತಿದ್ದ ಅಪ್ಪ ಇಲ್ಲಿ ನಾನು ಕೊಡೆ ಮರೆತು ಮಳೆಯಲ್ಲಿ ನೆನೆದು ಮನೆ ತಲುಪುವಾಗ ನೆನಪಾಗುತ್ತಾರೆ.ಕುರು ಕುರು ತಿಂಡಿ ಮಾಡಿ ಬಾಗಿಲಲ್ಲೇ ನನ್ನ ಕಾಯುತ್ತಿದ್ದ ಅಮ್ಮ ಇಂದು ಹಸಿವೆ ಇಂದ ಬೇಯುವಾಗ ಕಾಡುತ್ತಾರೆ..ಸಮಯದ ಪರಿವೆಯೇ ಇಲ್ಲದೆ ಬೆರೆಯುತ್ತಿದ್ದ ನನ್ನ ಸ್ನೇಹಿತರು ಮುಂಗಾರಿನ ಮಳೆಯಲ್ಲೊಮ್ಮೆ ನೆನಪಾಗುತ್ತಾರೆ..ಪುಟ್ಟ ಪುಟ್ಟ ಚಪ್ಪಲ್ಲುಗಳು,ಉದ್ದ ಕೋಲಿನ ಕೊಡೆ ನನ್ನ ಅಣಕಿಸುತ್ತವೆ.ಚಳ್ಳೆ ಪಿಳ್ಳೆ ಹಣ್ಣುಗಳು ನೆನಪಾಗಿ ಬಾಯಲ್ಲಿ ನೀರು ತರಿಸುತ್ತವೆ..ಒಟ್ಟಿನಲ್ಲಿ ನಮ್ಮೂರ ಮಳೆಗಾಲವನ್ನು ನಾನು ತುಂಬಾ miss ಮಾಡಿ ಕೊಳ್ಳುತ್ತಿದ್ದೇನೆ.
ಈ ಬಾರಿ ಮನೆಗೆ ಹೋದಾಗ ನಾನು ಮತ್ತೆ ನನ್ನ ಫ್ರೆಂಡ್ ರಾಘಣ್ಣ ಸುರಿವ ಮಳೆಯಲ್ಲಿ ವಯಸ್ಸಿನ್ನು ಮರೆತು ಕೊಡೆ ಹಿಡಿದು ಹಳ್ಳಕ್ಕೆ ನೀರಾಡಲು ಬಂದಾಗ ಪಕ್ಕದ ಮನೆಯ ರಾಧಕ್ಕ ಮಗಳಿಗೆ "ನೋಡು ಕೂಸೇ ಅವು ದೊಡ್ಡ ನೌಕರಿ ಅಲ್ಲಿದ್ರು ಎಷ್ಟು ಸಿಂಪಲ್ ಇದ್ದ,ನೀನು ಕಾಲೇಜ್ ಗೆ ಹೊಪಲೆ ಹಣಕಿ ಎರಡು ವರ್ಷ ಆಗಿದ್ದೆ ತಡ ಭೂಮಿ ಮೇಲೆ ಇಲ್ಲೇ" ಎಂದಾಗ ನಮಗೆ ಕೂಗಿ ಹೇಳಬೇಕು ಎಂದು ಅನ್ನಿಸಿತ್ತು..
"ಬಂದಿತು ಮಳೆಗಾಲ..ನೆನಪಾಗುತ್ತಿದೆ ನನ್ನ ಬಾಲ್ಯ..."




29 comments:
ಹಲಸಿನ ಕಾಯಿ ಸನ್ಡಿಗೆ, ಹಲಸಿನ ಹಣ್ಣಿನ ಕಡುಬು,
ನೇರಳೆ ಹಣ್ಣು, ಕೌಳಿ ಹಣ್ಣು, ಜೀರಿಗೆ ಮಾವಿನ ಮಿಡಿ,
ನಮ್ಮ ಬದಿಗೆ ಮಳೆಗಾಲ ಅಂದ್ರೆ ಎಂಥ ಸಂಭ್ರಮ ಅಲ್ದ?
ಶಾಲೆಗೆ ಸಂಕ ದಾಟಿ ಹೋಗಕಾಗ್ತಿತ್ತು, ಜೊರ್ ಮಳೆ ಬಂದ್ರೆ
ನೀರು ಸಂಕ ಮುಚ್ ಬಿಟ್ ರಜೆ ಕೊಡ್ತಿದ್ದ, ಅದ್ಕೆ ನಂಗ ಯಾವಾಗ್ಲೂ ಜೊರ್ ಮಳೆ ಬರಲಿ ಹೇಳಿ ಕೆಲ್ತಿದ್ಯ.
ಉರಿಂದ ದೂರ ಬಂದು ಅದ್ನೆಲ್ಲ ಮಿಸ್ ಮಾಡ್ಕಂಡಾಗ್ತು :-(
ನಿಮ್ಮ ನೆನಪುಗಳನ್ನು ಓದ್ತಾ ನನ್ನ ನೆನಪುಗಳು ಬಿಚ್ಚಿಕೊಂಡವು. ಧನ್ಯವಾದಗಳು
ಮಾಗೋಡು ಜಲಪಾತ ಮತ್ತು ಹಲವು ಮಲೆನಾಡ ಸು೦ದರ ಮಳೆಗಾಲದ ಚಿತ್ರಗಳೊ೦ದಿಗೆ ತಮ್ಮ ಬಾಲ್ಯದ ಮಲೆನಾಡ ಮಳೆಗಾಲದ ಚಿತ್ರಣವನ್ನ ನೆನಪಿ೦ದ ಹೆಕ್ಕಿ ಸು೦ದರವಾಗಿ ವಿವರಿಸಿದ್ದಿರಾ.. ಧನ್ಯವಾದಗಳು.
VaNIshree, tumbaa chenaagi baradiddiree.. litereally reminds me of my school days in HUbli :)
Great one... :) Manasina matugalu malegalada Jhariyante haridide :)
Namasthe Sister....
nimma baraha tumbaa ista aithu...odutta hodanthe nanna shala/highschool dinagalu nenapaadavu...aa nenpugale est madhura alvaa...tumbaa chennagide .....Thank u....
ಅದೇನೋ ಸರಿ, ಆದ್ರೆ, ಬೆಂಗಳೂರಿನ ಮಳೆಗಾಲವು ನೀವು ಚಿತ್ರಿಸಿರುವಂತೆ ಆಗಿರುವುದು ಈಗ್ಗೆ ಕೆಲವು ವರ್ಷಗಳಿಂದಲೇ ಹೊರೆತು, ಮೊದಲು ಹೀಗಿರಲಿಲ್ಲ. ಬಹಳ ಸುಂದರವಾಗಿತ್ತು.. ಮಳೆಗಾಲವೇ ಏನು, ಬೇಸಗೆಯು ಕೂಡ ತಂಪಾಗಿತ್ತು.
ಮಲೆನಾಡಿನ ಮಳೆ ಬಿಡಿ, ಅದಕ್ಕೆ ಹೋಲಿಕೆಯೇ ಇಲ್ಲ! ನೆನೆಯೋಕೆ ಅಂತಲೇ ಇಲ್ಲಿಂದ ಅಲ್ಲಿಗೆ ಹೋಗುತ್ತೇವೆ ನಾವಂತೂ!
sarvarigoo dhnyavaadagalu..
ವಾಣಿಶ್ರೀ, ಮಲೆನಾಡಿನ ಜೀವನ, ಮಳೆ, ಅಡಿಕೆ ತೋಟ, ಆ ನೆನಪೇ ಸೊಗಸು. ಧೋ ಎಂದು ಸುರಿಯುವ ಮಳೆ, ಹಲಸಿನ ಹಪ್ಪಳ, ಚನ್ನೆಮಣೆ ಸುಂದರ ನೆನಪು.
ಚೆನ್ನಾಗಿದೆ ಚೆನ್ನಾಗಿದೆ.. ನನ್ನ ಬಾಲ್ಯದ ನೆನಪು ಕೆದಕಿ ತೆಗೆದರೆ... ಕಪ್ಪೇ ವೆಟ್ರ್ಗಟ್ಟೋ ಸಿಂಫನೀ, ನೆಂದ ಟೆನ್ನಿಸ್ ಬಾಳಿನಲ್ಲಿ ಚೂರ್ಚಂಡು, ಮಲ್ಲೇಶ್ವರ ೧೦ತ್ ಕ್ರಾಸ್ ಹುರ್ಗಾಳು ಅಂಗಡಿಯ ಹುರ್ಗಾಳು ಹಾಗೂ ಬೆಂಗಳೂರಿನಲ್ಲಿದ್ದ ಗುಬ್ಬಿಯ ಚಿವ್ ಚಿವ್...ಹಾಗೂ ಮಲ್ಲೇಶ್ವರಕ್ಕೆ ಸೀಮಿತವಾಗಿದ್ದ ಕತ್ತೆಗಳ ಕೂಗಾಟ..ಪಾಪ ಚಳಿಯಲ್ಲಿ ನೆಂದ ಬಡ್ಡೆತ್ತವು. ನಮ್ಮ ಕಾಲದಲ್ಲಿ ಪಾದ ರಕ್ಷಣೆಗೆ ಇದ್ದದ್ದು ಒಂದೇ ಒಂದು - ಬಾಟ
ಗುಡ್ ರೈಟೆಯಪ್... ಬರೀತಾ ಇರಿ
ತುಂಬಾ ಆಪ್ತವಾಗಿದೆ ಅನುಭವ ಕಥನ. ನನಗೂ ನನ್ನ ಬಾಲ್ಯ ಹಾಗೂ ರಜೆ ಬಿದ್ದ ಕೂಡಲೇ ಉ.ಕ.ದಲ್ಲಿರುವ ನನ್ನಜ್ಜನ ಮನೆಗೆ ಓಡುತ್ತಿದ್ದ ದಿನಗಳು ನೆನಪಾದವು. ಎಲ್ಲಕ್ಕಿಂತ ಹೆಚ್ಚು ನೆನಪಾಗಿ ಬಾಯೂರಿದ್ದು ಸುಟ್ಟ ಗೇರುಬೀಜದ ರುಚಿ.... ಅದರ ಪರಿಮಳವನ್ನೂ ಕೇಳದೇ ತುಂಬಾ ದಿವಸವಾಗಿದೆ :(
ಮಳೆಗಾಲದಾರಂಭಕ್ಕೆ ಉತ್ತಮ ಲೇಖನ. ಚೆನ್ನಾಗಿದೆ.
ಇವತ್ತು ನಿಮ್ಮ ಬ್ಲಾಗ್ ನೋಡಿದೆ. ಹೌದು ನಮ್ಮೂರಿನ ಮಳೆಗಾಲ ತುಂಬಾ ಚೆಂದ. ಕೊಡೆ ಕೊಡಿಸದ ಅಪ್ಪನ ಕುರಿತಾಗಿ ಸಿಟ್ಟಲ್ಲಿ ಮಳೆಯಲ್ಲೇ ನೆಂದುಕೊಂಡು ಹೋಗಿದ್ದು ನೆನಪಾಯ್ತು ನಂಗೆ ಈ ಬರಹ ಓದ್ತಾ ಇದ್ದ ಹಾಗೆ. ಒಳೆ ಬರಹ...
ಕೋಡ್ಸರ
ನೆನಪುಗಳೇ ಹಾಗೆ.. ಮೊಗೆದಷ್ಟು ಬರುವ ಅಂತರಗಂಗೆಯಂತೆ..ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..
nannadu malenaadu :)chennagide nimma vivaranegalu.
ವಾಣಿಶ್ರೀಯವರೇ, ನಿಮ್ಮ ಲೇಖನ ಓದಿ...ಬೆಂಗಳೂರು ಬಯಲು ತಾಲೂಕಿನವನಾದ ನಾನು ಜುರು-ಜುರು ಜಿನುಗುವ ಮಂಗಳೂರು ಮಳೆಯನ್ನು ನೆನಪಿಸಿಕೊಂಡೆ... ಚನ್ನಾಗಿದೆ ಲೇಖನ...
ಹಾಯ್,
ಹಾಗೆ ಸುಮ್ಮನೆ ಆಫೀಸಿನಲ್ಲಿ ಬಿಡುವಾದಾಗ ನಿಮ್ಮ ಬ್ಲಾಗ್ ಓದ್ತಿದ್ದೆ, ಲೇಖನ ತುಂಬಾ ಚನ್ನಾಗಿ ಮೂಡಿ ಬಂದಿದೆ. ಮತ್ತೆ ನಿಮ್ಮ ಲೇಖನದಿಂದ ನನ್ನ ಬಯಲು ಸೀಮೆಯ ಬಾಲ್ಯ ನೆನಪಿಗೆ ಬರುವಂತಾಯಿತು, ಆ ಹಳ್ಳಿಯ ಬಾಲ್ಯ ಪಡೆದ ನಾವೇ ಧನ್ಯರು. ಅದೇನೆ ಇರಲಿ "ರೀಬಾಕ್ ಶೂಸ್" ಅಥವಾ ನೈಕೀ ಹಾಕಿ ಶಾಲೆಗೆ ಹೋದೋರು, ಹತ್ತನೇ ತರಗತಿವರೆಗೂ ಚಪ್ಪಲಿ ಇಲ್ಲದೆ ಶಾಲೆಗೇ ಹೋದೋರು ನಾವೆಲ್ಲರೂ ಕೆಲಸಕ್ಕೆ ಸೇರಿದ್ದು ಮಾತ್ರ ಅವೇ ಒಂದೇ ಆಫೀಸಿನಲ್ಲಿ. ಅದ್ದರಿಂದ ಹಳ್ಳಿ ಎಂದೆಂದೂ ಹಳ್ಳಿಯೇ. "ಎನಿ ಸಿಟಿ ಕ್ಯಾನ್'ಟ್ ಬೀಟ್ ಎನಿ ವಿಲೇಜ್ ಇನ್ ಎನಿ ಸೆನ್ಸ್".
ಹೀಗೆ ನಿಮ್ಮ ಬರವಣಿಗೆ ಮುಂದುವರಿಯಲಿ.
ವಾಣಿಶ್ರೀ,
ನಿಮ್ಮೀ ಲೇಖನದಿಂದ ನನಗೆ ನೆನಪಾಗಿದ್ದು ಅಂದ್ರೆ ಕಂಬ್ಳಿ ಕೊಪ್ಪೆ ಮತ್ತೆ ತೋಟದಲ್ಲಿ ವಟರ್ ವಟರ್ ಗುಡ ಮರಜಿರಲೆ ಸಹ! ಸಂತಿಗೆ ಸಂಜೆ ಹೊತ್ತಿಗೆ ಚುಮ್ಣಿ ಗುಡ್ಡೆ ಸುತ್ಲೂ ಸುತ್ಗೆಂಬ ಹಾತೆ... ಆವಾಗಿನ್ ದಿವಸ್ದಲ್ಲಿ ಮನಿಗೆ ಕರೆಂಟ್ ಇಪ್ಪದೂ ಅಪರೂಪ. ಆಣೆಕಲ್ ಆರ್ಸಲೆ ಹೇಳಿ ಓಡಿ, ಓಡಿ ಹೋಪದು, ನೀವೇ ಬಣ್ಣಿಸಿದ ಉದ್ದ ಹಿಡಿಕೆ ಛತ್ರಿ ತಗಂಡು ಅದ್ರ ಮಗಚಿ ಆಣೆಕಲ್ ಹಿಡಿಯದು..
ಆದ್ರೆ ಹೊಳಿಗ್ ಹೋಪ ತಂಡಕ್ಕೆಂತು ನಿರಾಶೆ, ಎಂತಕ್ ಕೇಳಿರೆ ನೀರ್ ಗಣಕ್
ಹೋಗ್ತು ಹೇಳಿ! ರಸ್ತೆ ಇಳಕ್ಲಲ್ಲಿ ಮಳೆನೀರಿನ್ ಸಂತಿಗೆ ಹಾಳೆ ಮೇಲ್ ಕುತ್ಗಂಡು ಜಾರದು...ಎಣಸ್ತಾ ಹೋದ್ರೆ ಇನ್ನೆಷ್ಟು ಚೇಶ್ಟೆ ಹಂಬ್ಲಾಗ್ತೇನ... ಅದೆಷ್ಟು ಮನೋಹರ ಕ್ಷಣದಿಂದ ತುಂಬಿತ್ತು ಅಲ್ದ ಆಗಿನ ಬಾಲ್ಯ? ಈಗಿನ್ ಕಾಲದ್ city ಮೇಲ್ ಬೆಳಿಯ generations ಗೆ ಇದನ್ನೆಲ್ಲ ಹೇಳಿರೂ ಊಹಿಸ್ಕೆಂಬ್ಲೆ ಸಾಧ್ಯ ಆಗ್ತಿಲ್ಲೆ.. ಮಲೆನಾಡಿನ ಈ ಎಲ್ಲಾ ಸುಂದರ ಸೊಬಗನ್ನ ಅನುಭವಿಸಲೆ ಅವಕಾಶ ಮಾಡಿ ಕೊಟ್ಟಂತಹ ಆ ಭಗವಂತನಿಗೆ ನನ್ನ ನಮನಗಳು...
ಮಲೆನಾಡಿನ ಬಗ್ಗೆ ಮತ್ತಷ್ಟು ಈ ರೀತಿಯ ಮನೋಹರ ಲೇಖನಗಳು ನಿಮ್ಮೀ ಬ್ಲಾಗಲ್ಲಿ ಮೂಡಿ ಬರಲಿ ಹೇಳಿ ಆಶಿಸ್ತಿ..
PS:
ಬ್ಲಾಗ್ ಲೋಕದಲ್ಲಿ ಈ ರೀತಿ ಮತ್ತೊಂದು ಲೇಖನ ಸಿಕ್ಚು. ಅದ್ರ link
http://chitrahegde.blogspot.com/2008_08_01_archive.html
ನನ್ನ ಲೇಖನ ನಮ್ಮ ಊರಿನ ಬಹುಜನರ ನೆನಪನ್ನು ಕೆದಕಿದ್ದು ನೋಡಿ ತುಂಬಾ ಸಂತೋಷವಾಯಿತು.. ನಮ್ಮವರೆಲ್ಲ ಈ ಬ್ಲಾಗ್ ಮೂಲಕ ಪರಿಚಯವಾಗಿದ್ದಕ್ಕೆ ಧನ್ಯವಾದಗಳು..ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ.
Hi Vanishree,
Tumba chennagiddu.... hmm balya tumba kadtu.. nanu kooda balya malegala shale antella bareyakke shuru madiddi mugdada hakthi ... nodu..
matte malegala shuruvaydu . ivella nenapagta iddu.. idna odidaga mane innu tumba kadta iddu.. sadya hogbapde sai..
matte male hoyyutide ella nenapagutide..
pravi
ವಾಣಿಶ್ರಿ ,
ತುಂಬಾ ಚೆನ್ನಾಗಿ ಬರೆದಿದ್ದೀರಿ
ತಡವಾಗಿ ಓದಿದ್ದಕ್ಕೆ ಕ್ಷಮಿಸಿ
ನಿಮ್ಮ ಲೇಖನ ಮಲೆನಾಡಿನ ಮಳೆಗಾಲವನ್ನೂ , ಅದನ್ನು ಮನಸಾರೆ ಆನಂದಿಸುತ್ತ ಅನುಭವಿಸುತ್ತಿದ್ದ ಸಮೃದ್ಧ ಬಾಲ್ಯವನ್ನೂ ನೆನಪಿಸಿತು ವಾಣಿಶ್ರೀ , ಧನ್ಯವಾದಗಳು.
tumba chennagide nimma lekhana haagu chitragalu madam..:)
ವಾಣಿಶ್ರಿಯವರೇ,
ಮಲೆನಾಡಿನ ಮಳೆಗಾಲದ ಸೌಂದರ್ಯಕ್ಕೆ ಸಾಟಿಯೇ ಇಲ್ಲ! ನಾನೂ ಕೂಡ ಮಲೆನಾಡಿನ ಮಣ್ಣಿನಲ್ಲಿ ಹುಟ್ಟಿದವನು....... ನಿಮ್ಮ ಲೇಖನ ಓದಿ ನನ್ನ ಬಾಲ್ಯದ ನೆನಪುಗಳು ಅತಿಯಾಗಿ ಕಾಡಿದವು...
ಚಂದದ ಲೇಖನ.
ಒಮ್ಮೆ ನನ್ನ ಬ್ಲಾಗಿನತ್ತ ಬನ್ನಿ.....
http://pravi-manadaaladinda.blogspot.com
ನಿಮ್ಮ ಲೇಖನ ನನ್ನನ್ನೂ ನೆನಪುಗಳ ಲೋಕಕ್ಕೆ ಕರೆದೊಯ್ದಿತು.. ಬರಹ ಚೆನ್ನಾಗಿದೆ
ಮಳೆಗಾಲದ ಮಳೆ ಮಲೆನಾಡಲ್ಲೀ ಏಷ್ಟು ಸೊಗಸಾಗಿರುತ್ತದೆ. ಬಹಳ ಚೆನ್ನಾಗಿ ಹೇಳಿದ್ದೀರಿ.
ನಮ್ಮೂರ ಆ ಮುಂಗರಾನ್ನು ನೆನಪು ಮಾಡಿಕೊಟ್ಟಿದಕ್ಕೆ ...ನಿಮಗಿದೋ ಸಲಾಮ
ತುಂಬಾ ಚೆನ್ನಾಗಿದ್ದು ಆ ಮಳೆಗಾಲದ ಗಾಳಿ ,ಮಳೆ,ನೀರು, ಅಘನಾಶಿನಿ ಹೊಳೆ,ಜೊತೆಗೆ ಶಾಲೆಗೆ ಹೋದ ಆ ನೆನಪು ನಿಜಕ್ಕೂ ಸವಿಸವಿ ನೆನಪು
:)
good write-up
vaniakka..chanda eddu baraha.... malegaladalli ellara dweshi umbalada nenapagtu....joru gali bandre kode dish agogtittu.....bikke hannu...hulimajjige hannu...aha... manasannu becchagagisida malegalada nenapige..ondu sihi muttu....
ಸು೦ದರವಾದ ಲೇಖನ :)
ಒ೦ದೊ೦ದು ಸಾಲು, ನನ್ನನ್ನು ಬಾಲ್ಯಕ್ಕೆ ಹಿ೦ತಿರುಗುವ೦ತೆ ಮಾಡಿತು.
ಮಳೆಗಾಲದ ಚಿತ್ರಗಳು ಕಣ್ಣಿಗೆ ಕಟ್ಟಿದವು.
ಚೊಲೊ ಬರೆದ್ದೆ...ಹಿ೦ಗೇ ಬರಿತಾ ಇರು.
Hello
It is excellent description of Our Malenadu... I think we malnad people are most luckiest people. Kodagu, Kottigehara, Kalasa, SRINGERI, Koppa, Aagumbe,Thirthalli, Sagara, Sirsi,YELLAPUR are the most comfortable places for RETIRED Life.
Mithresh...
Post a Comment