ಏನೆಂದು ಕರೆಯಲಿ ನಿನ್ನ?? ಚಿನ್ನ ಎನ್ನಲೇ,ಮುದ್ದು ಎನ್ನಲೇ,ಗೆಳೆಯ ಎನ್ನಲೇ....?? ಅಥವಾ ಹೆಸರಿಂದಲೇ ಹಿಡಿದು ಸಂಭೋದಿಸಲೇ...??? ಸುಮ್ಮನೆ ಹಾಯ್ ಎಂದೆನೆಂದು ಬೇಸರ ಮಾಡಿ ಕೊಳ್ಳಬೇಡ.ನೀನು ನನ್ನವನಾದ ಮೇಲೆ ಇಡಿ ಜಗತ್ತಿನ ಎಲ್ಲಾ nickname ಗಳನ್ನೂ ನಿನಗೇ ಇಟ್ಟುಬಿಡುತ್ತೇನೆ. ಹೇಗಿದ್ದೀಯ? ತುಂಬಾ ದಿನದಿಂದ ನಿನಗೊಂದು ಪತ್ರ ಬರಿಯಬೇಕೆಂದು ಅಂದು ಕೊಳ್ಳುತ್ತಿದ್ದೆ.. ಕೆಲಸದ ಒತ್ತಡ ದಲ್ಲಿ ಆಗಲೇ ಇಲ್ಲ..ಇಂದಾದರೂ ಬರಯಲೇ ಬೇಕೆಂದು ಕುಳಿತು ಕೊಳ್ಳುತ್ತಿದ್ದಂತೆ ನೋಡು ನನ್ನ ಮನಸ್ಸಿನ ಮಾತುಗಳೆಲ್ಲ ಸುಂದರ ಅಕ್ಷರಗಳಾಗಿ ಮೂಡುತ್ತಿವೆ.ಮುಸ್ಸಂಜೆ ಮಳೆಯಂತೆ ಬಂದ ನಿನ್ನ ನೆನಪು ಸುರಿದು ಭೂಮಿಯಲ್ಲಿ ಇಂಗಿ ಹೋಗುವುದಕ್ಕಿಂತ ಮೊದಲು ಅದನ್ನು ಬೊಗಸೆಯಲ್ಲಿ ಹಿಡಿದು ನಿನ್ನ ಮುಂದಿಡುವಾಸೆ...ಪೂರಕವೋ ಎಂಬಂತೆ ಸಂಜೆಯ ಸೋನೆಮಳೆ ಸುರಿಯುತ್ತಲಿತ್ತು..ಬಸ್ಸನ್ನೇರಿ ನನ್ನ ಮೆಚ್ಚಿನ ಸೀಟ್ ನ ಕಿಟಕಿಕಯ ಪಕ್ಕ ಕುಳಿತು ಆ ತಂಪು ಗಳಿಗೆ ಮುಖ ನೀಡಿದೆ ನೆಂದರೆ ನನ್ನನ್ನೇ ನಾನು ಮರೆತು ಬಿಡುತ್ತೇನೆ. ನನ್ನ ಜೀವನದಲ್ಲಿ ಬರುವುದಕ್ಕಿಂತ ಮೊದಲು ಯಾವ ಹುಡುಗರ ಬಗ್ಗೂ ತಲೆ ಕೆಡಿಸಿಕೊಂದವಳಲ್ಲ ನಾನು..ಹಾಗೆಂದ ಮಾತ್ರಕ್ಕೆ ನನಗೆ ಹುಡುಗರಲ್ಲಿ ಸ್ನೇಹಿತರೂ ಇಲ್ಲವೆಂದಲ್ಲ.ಹಲವಾರು ಜನ ಆತ್ಮೀಯರಿದ್ದಾರೆ.ಆದರೆ ನಿನ್ನ ಬಗ್ಗೆ ಸೆಳೆತ ಉಂಟಾಗಿದ್ದುನಾನುನಿನ್ನಬಗ್ಗೆಯೋಚಿಸಲು ಆರಂಬಿಸಿದಮೇಲೆ.ಮನಸೋಮ್ಮೆ ಹೇಳಿತ್ತು ನೀನ್ಯಾಕೆ ಅವನ ಬಗೆಗೊಮ್ಮೆ ಯೋಚಿಸ ಬರದು ಅಂತ.
ಅದಕ್ಕಿಂತ ಮೊದಲು ಯಾವಾಗಲೂ ನೀನು ನನ್ನ ಕೇಳಿಕೊಳ್ಳುತ್ತಿದ್ದೆ
"ನನ್ನ ಬಗ್ಗೆ ಸ್ವಲ್ಪ ಯೋಚಿಸಮ್ಮ " ಎಂದು.ನಾನು ಆ ಪ್ರಯತ್ನವನ್ನೇ ಮಾಡಿರಲಿಲ್ಲ.ಆದರೆ ಅಂದೇಕೋ ನನ್ನ ಮನದಲ್ಲಿ ನೀನು ಸುಳಿದಾಡುತ್ತಿದ್ದೆ. ಮೊದಲ ಬಾರಿ ನಿನ್ನೊಂದಿಗೆ ನಾನು ಮಾತನಾಡಿದಾಗ ನನ್ನ ಮನ ಗೊತ್ತಿಲ್ಲದೇ ನನಗೆ ಹೇಳಿತ್ತು ನೀನು ನಿನ್ನ ಹುಡುಗಿಗೆ comfortನೀಡಬಲ್ಲೆ ಅಂತ...ನಿನ್ನ ಭೇಟಿ ಕೆಲವೇ ನಿಮಿಷದಲ್ಲಗಿದ್ದರೂ ನೀನು ನನ್ನ ತುಂಬಾ ಹಚ್ಚಿಕೊಂಡು ಬಿಟ್ಟಿದ್ದೆ…
ಅದಕ್ಕೆ ತಾನೇ ನೀನು ಅದನ್ನು ಹೇಳಲು ಎಷ್ಟೊಂದು ಹರಸಾಹಸ ಮಾಡಿದ್ದು… ಮೊನ್ನೆ ಕೊನೆಗೂ ಧೈರ್ಯ ಮಾಡಿ ರಾತ್ರಿ 12 ಗಂಟೆಗೆ ಫೋನ್ ಮಾಡಿದ್ದು … ನಿನ್ನ ಸ್ವರವನ್ನ ಮೊದಲ ಬಾರಿ ಫೋನ್ ನಲ್ಲಿ ಕೇಳಿದ್ದೆ ಆಗ… !! ನಿನ್ನ ಧ್ವನಿ ನಡಗುತ್ತಿದ್ದರೆ ನಾನು ನಗುತ್ತಿದ್ದೆ.. ಹೇಳಲೋ ಬೇಡವೋ ಎಂದು ಪರದಾಡಿ ಕೊನೆಗೂ ನನಗೆ ತಿಳಿಸಿ ಬಿಟ್ಟಿದ್ದೆ… ಹುಡಗನೋಬ್ಬನಿಂದ propose ಮಾಡಿಸಿ ಕೊಳ್ಳುವುದು ಹೊಸತೇನಲ್ಲ ನನಗೆ …ನಾನೇನೂ ಹೇಳದೆ ಮೌನವಾಗಿ ಬಿಟ್ಟಿದ್ದೆ .. ನೀನು ಕಾಯುತ್ತೇನೆಂದು phone ಇಟ್ಟು ಬಿಟ್ಟಿದ್ದೆ …ಆದರೆ ನಿನ್ನಲ್ಲೇನೋ ಸೆಳೆತ ಕಂಡಿದ್ದು ಆವತ್ತು ನಾನು ನಿನ್ನ ಬಗ್ಗೆ ಯೋಚಿಸಲು ಶುರು ಮಾಡಿದಾಗ…
ನಿನ್ನೆಲ್ಲ ಆಸೆಗಳಿಗೆ ಸದಾ ಪ್ರೋತ್ಸಾಹದ ಚಿಲುಮೆ ಯಾಗಿ ನಾನಿರುತ್ತೇನೆ...ನೋವು ನಲಿವಿನ ಹಾದಿಯಲಿ ನಿನ್ನ ಹೆಜ್ಜೆಯೊಂದಿಗೆ ನನ್ನ ಗೆಜ್ಜೆ ದನಿಯನ್ನು ಬೆಸೆಯುತ್ತೇನೆ..ನಿನ್ನ ಆಗಮನ ನನ್ನ ಬದುಕನ್ನು ಎಷ್ಟು ಸುಂದರ ಮಾಡಿದೆ ಎಂದರೆ ನಾನು ದಿನ ನಿತ್ಯ ಮಾಡುವ ಚಿಕ್ಕ ಪುಟ್ಟ ಕೆಲಸ ಗಳು ತುಂಬಾ ಸುಂದರ ಅನಿಸುತ್ತಿವೆ ಗೊತ್ತಿಲ್ಲದೇ ಮನ ಪ್ರತಿಯೊಂದರಲ್ಲೂ ನಿನ್ನ ಜೊತೆಯನ್ನುಕಲ್ಪಿಸಿ ಕೊಳ್ಳುವಾಗ..
ಈ ಎಲ್ಲಾ ಆಸೆಯನ್ನೂ ಪೂರೈಸುವೆ ಎಂದು ನನ್ನ ಕಣ್ಣಲ್ಲಿ ಕಣ್ಣಿಟ್ಟು ಒಮ್ಮೆ ಹೇಳಿಬಿಡು
ಈ ಬಾರಿ ನೀನು ಇಲ್ಲಿಗೆ ಬಂದಾಗ ಅದೇನೋ ಹೇಳಿದೆ ಯಂತಯಲ್ಲ ಅವಳು ಈ ಬಾರಿ ಬರದಿದ್ದರೆ ಹಾರಿಸಿಕೊಂಡು ಹೋಗುತ್ತೇನೆಂದು ನೀನು ಹಾರಿಸಿ ಕೊಂಡು ಹೋಗುವ ಮೊದಲೇ ನಾನು ನಿನಗೇ ಶರಣಾಗುತ್ತೇನೆ…ನಿನ್ನ ಮೆಚ್ಚಿನ ಮಡದಿಯಾಗಿ ,ಅತ್ತೆ ಮಾವಂದಿರಿಗೆ ಮಗಳಾಗಿ ನಿನ್ನ ಗೂಡಿಗೆ ನಾನೂ ಹಾರಿ ಬಂದುಬಿಡುತ್ತೇನೆ.ನಿನ್ನ ಹಾದಿ ಕಾಯುತ್ತಿರುತ್ತೇನೆ.ನಿನ್ನ ಕಾತುರತೆಯ ಕಂಗಳಲೋಮ್ಮೆ ನನ್ನ ಪ್ರೀತಿ ಕಾಣುವ ಆತುರತೆ ನನ್ನದು..ತುಂಬಾ ಕಾಯಿಸಬೇಡ.......

ನಾನು ಬಯಸುವ ಎಲ್ಲಾ ಗುಣಗಳು ನಿನ್ನಲ್ಲಿದ್ದವು.ಓದು,ಒಳ್ಳೆಯ ಕೆಲಸ,ಸ್ವಲ್ಪ ಹೆಚ್ಚೇನೋ ಎನ್ನುವ ತುಂಟತನ,ರೆಪ್ಪೆಯಲ್ಲಿ ಮುಚ್ಚಿತ್ತು ಕಾಯುವಷ್ಟು ಪ್ರೀತಿ, ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಗುಣ , ಎಲ್ಲಾ ...ಒಬ್ಬ ಹುಡುಗಿ ಬಯಸುವ ಎಲ್ಲಾ ಗುಣಗಳು ನಿನ್ನಲ್ಲಿದ್ದವು.ನಿನ್ನ ಬೇಡ ಎನ್ನಲೂ ನನ್ನಲ್ಲಿ ಕಾರಣಗಳೇ ಇರಲಿಲ್ಲ ಕಣೋ..ಆದರೂ ನನ್ನದೊಂದಷ್ಟು ಚಿಕ್ಕ ಪುಟ್ಟ ಆಸೆ ಗಳಿವೆ.ಸುರಿವ ಸೋನೆಮಳೆಯಲ್ಲಿ ನಾನು ನೀನು ಜೋರಾಗಿ bike ನಲ್ಲಿ ಲಾಂಗ್ ಡ್ರೈವ್ ಹೋಗಬೇಕು … ಮಾತನಾಡಿದರೆ ಕೇಳಿಸಲಾಗದಷ್ಟು ಮುಖಕ್ಕೆ ಮುತ್ತಿಡುವ ತಂಪಾದ ಗಾಳಿಯಲ್ಲಿ ನಾನು ನಿನ್ನ ಕಿವಿಯಲ್ಲೊಮ್ಮೆ “ನೀನಂದ್ರೆ ನನಗೆ ಇಷ್ಟ ಕಣೋ “ಎನ್ನಬೇಕು … ನೀನು ತಿರುಗಿ ನಾನೂ ಕಣೆ ಎನ್ನಬೇಕು … ಯಾರಿಲ್ಲದ ಹಾದಿಯಲಿ ರಾತ್ರಿ ನಾನು ನಿನ್ನ ಕೈ ಹಿಡಿದು ನಡೆಯಬೇಕು …ನಾನು ನಿನ್ನ ಗೆಳತಿಯಾಗಿ ನನ್ನ ಭಾವನೆಯನ್ನು ಹಂಚಿ ಕೊಳ್ಳಬೇಕು...ಅಮ್ಮನ ನೆನಪಾದಾಗ ನಿನ್ನ ಮಡಿಲು ನನ್ನದಾಗ ಬೇಕು… ಪುಟ್ಟದಾದ ಮನೆಯ ನನ್ನ ಆರೈಕೆಯಲ್ಲಿ ಬೆಳೆದ ಹೂದೋಟದಲ್ಲಿ ನಾನು ನೀನು ಬೆಳದಿಂಗಲಿನೂಟ ಮಾಡಬೇಕು … ನನ್ನ ಅಪ್ಪ ಅಮ್ಮನ ನಿನ್ನ ತಂದೆ ತಾಯಿಯರಂತೆ ಗೌರವಿಸಬೇಕು ...ಮುಂದೆ ಯಾವತ್ತೋ ನನ್ನ ಆಯ್ಕೆ ಇನ್ನೂ ಚೆನ್ನಾಗಿರ ಬಹುದಿತ್ತು ಎಂದು ನನಗನ್ನಿಸಬಾರದು.ಇಷ್ಟೇ ಚಿಕ್ಕ ಪುಟ್ಟ ಆಸೆಗಳು ನನ್ನದೂ...
ನಿನ್ನೆಲ್ಲ ಆಸೆಗಳಿಗೆ ಸದಾ ಪ್ರೋತ್ಸಾಹದ ಚಿಲುಮೆ ಯಾಗಿ ನಾನಿರುತ್ತೇನೆ...ನೋವು ನಲಿವಿನ ಹಾದಿಯಲಿ ನಿನ್ನ ಹೆಜ್ಜೆಯೊಂದಿಗೆ ನನ್ನ ಗೆಜ್ಜೆ ದನಿಯನ್ನು ಬೆಸೆಯುತ್ತೇನೆ..ನಿನ್ನ ಆಗಮನ ನನ್ನ ಬದುಕನ್ನು ಎಷ್ಟು ಸುಂದರ ಮಾಡಿದೆ ಎಂದರೆ ನಾನು ದಿನ ನಿತ್ಯ ಮಾಡುವ ಚಿಕ್ಕ ಪುಟ್ಟ ಕೆಲಸ ಗಳು ತುಂಬಾ ಸುಂದರ ಅನಿಸುತ್ತಿವೆ ಗೊತ್ತಿಲ್ಲದೇ ಮನ ಪ್ರತಿಯೊಂದರಲ್ಲೂ ನಿನ್ನ ಜೊತೆಯನ್ನುಕಲ್ಪಿಸಿ ಕೊಳ್ಳುವಾಗ..
ಈ ಎಲ್ಲಾ ಆಸೆಯನ್ನೂ ಪೂರೈಸುವೆ ಎಂದು ನನ್ನ ಕಣ್ಣಲ್ಲಿ ಕಣ್ಣಿಟ್ಟು ಒಮ್ಮೆ ಹೇಳಿಬಿಡು
ಈ ಬಾರಿ ನೀನು ಇಲ್ಲಿಗೆ ಬಂದಾಗ ಅದೇನೋ ಹೇಳಿದೆ ಯಂತಯಲ್ಲ ಅವಳು ಈ ಬಾರಿ ಬರದಿದ್ದರೆ ಹಾರಿಸಿಕೊಂಡು ಹೋಗುತ್ತೇನೆಂದು ನೀನು ಹಾರಿಸಿ ಕೊಂಡು ಹೋಗುವ ಮೊದಲೇ ನಾನು ನಿನಗೇ ಶರಣಾಗುತ್ತೇನೆ…ನಿನ್ನ ಮೆಚ್ಚಿನ ಮಡದಿಯಾಗಿ ,ಅತ್ತೆ ಮಾವಂದಿರಿಗೆ ಮಗಳಾಗಿ ನಿನ್ನ ಗೂಡಿಗೆ ನಾನೂ ಹಾರಿ ಬಂದುಬಿಡುತ್ತೇನೆ.ನಿನ್ನ ಹಾದಿ ಕಾಯುತ್ತಿರುತ್ತೇನೆ.ನಿನ್ನ ಕಾತುರತೆಯ ಕಂಗಳಲೋಮ್ಮೆ ನನ್ನ ಪ್ರೀತಿ ಕಾಣುವ ಆತುರತೆ ನನ್ನದು..ತುಂಬಾ ಕಾಯಿಸಬೇಡ.......

25 comments:
'ಹಾಗೇ ಸುಮ್ಮನೆ' ಹಾಗೇ ಸುಮ್ಮನೆ ಇಷ್ಟವಾಯ್ತು.ಬರಹದ ಶೈಲಿ,ಬರಹದಲ್ಲಿನ ಭಾವ ಚೆಂದ ಚೆಂದ :)
Vani
good one
keep going
Tumba chennagide,,nimma blog ella post hidisidavu,,
nanna blog gu bheti kodtira alva?
Follower aagta iddi, nivu agtira ankanji.
ellarigu tumba dhanyavaadagalu
sundara bhaavanegala abhivyakti....... munduvarisi................ dhanyavaada.....
nimma presenting style tumbaa ishta aytu....
good luck......
Ravikiran Bhat
ravikiran.pearl@gmail.com
ವಾಣಿಯವರೇ...ಚನ್ನಾಗಿದೆ ಪ್ರಕಟಪಡಿಸಿದ ಭಾವದ ಶೈಲಿ....ಅಮ್ಮನಿಗೆ ನಿಮ್ಮ ಲೇಖನದ ಮುಖೇನ ಕಳುಹಿಸಿದ ಪ್ರೀತಿಯ ಸಂದೇಶವೂ (ಹಿಂದಿನ ಪೊಸ್ಟ್) ಹಿಡಿಸಿತು...
dhanyavaadagalu ravikiran sir haagu jalanayan sir
I liked your writing style. aadre..
chennaagide . . . .
dhanyavaadagalu
chennagidhe...
keep writing....
ವಾಣಿ ಇದು ತುಂಬಾ ಅನ್ಯಾಯ ಕಣ್ರಿ . .ಇಂಥಹ ಒಂದು ಬರಹವನ್ನು ನಾನು ಬರೆಯಬೇಕೆಂದು ತುಂಬಾ ದಿನದಿಂದ ಕಾಯ್ತಾಯಿದ್ದೆ . . ಆದರೆ ಅದನ್ನಾ ನೀವು ಅದನ್ನಾ ನಾನು ಬರೆಯೋ ಮುಂಚೆನೆ ಬರೆದು ಬಿಟ್ಟಿದ್ದಿರಾ .
ಅಲ್ಲಾರಿ ನಿಮ್ಮ ಬರಹದಲ್ಲಿ ಮೂಡಿರುವ ಎಲ್ಲ ಭಾವನೆಗಳು ನನ್ನೊಳಗೂ ಮೂಡಿದ ಹಾಗಿದೆ, Infact ಅವು ಎಲ್ಲರಲ್ಲೂ ಮೂಡುವ ಭಾವನೆಗಳೆ . .ಎಲ್ಲರಲ್ಲೂ ಮೂಡಿದ ಭಾವನೆಗಳ ಪರವಾಗಿ ನೀವು ಬರೆದ ಬರಹ(ಪ್ರೇಮ ಪತ್ರ) ತುಂಬಾನೆ ಹಿಡಿಸಿತು . .Rally Good One . .Keep going . .ALl the best . :)
Very good one ...nicely written ...keep writing ..
Nimma nechina hudaga nimage sigale anta haraisuttene ...
chennagide ri..higeye bareyuttiri..
wow,, ತುಂಬಾ ಚೆನ್ನಾಗಿ ಮನಸಿನ ,, ಭಾವನೆಗಳನ್ನು ಮೂಡಿಸಿದ್ದಿರ.... ಬರಹದ ರೂಪದಲ್ಲಿ ತುಂಬಾ ಚೆನ್ನಾಗಿ ,, ಸವಿಯಾಗಿ,,, ಮೂಡಿ ಬಂದಿದೆ..... ನಾನು ನನ್ನ ಹುಡುಗಿಯಿಂದ ಯಾವಾಗ ಈ ರೀತಿ ಪತ್ರ ಬರೆಸಿಕೊಳ್ಳುತ್ತೇನೋ ಅಂತ ಅನ್ನಿಸಿದೆ... (ಆದರೆ ಅವಳು ಎಲ್ಲಿದ್ದಾಳೋ ಇನ್ನು ಗೊತ್ತಿಲ್ಲ...) :-)
ನೈಸ್ ಒನ್ ವಾಣಿಶ್ರಿ...
ellarigoo dhanyavaadagalu
ಆ ನವಿರಾದ ಭಾವನೆಗಳನ್ನು ನೀವು ಬರಹಕ್ಕಿಳಿಸಿದ ರೀತಿ ತುಂಬಾ ಇಷ್ಟವಾಯ್ತು. ಆ ಭಾವನೆಗಳ ಜೊತೆ commitments ನ್ನೂ ಸೇರಿಸಿದ್ದಿರಲ್ಲ ಅದು ಇನ್ನೂ ಇಷ್ಟವಾಯ್ತು. (ನಿನ್ನ ಅಪ್ಪ ಅಮ್ಮನಿಗೆ ಮಗಳಾಗಿ ಬರುವೆ ಎಂಬ ಭಾವನೆ ಅದ್ಬುತ).
Hmmmm!!!!!! Nice words Vani... Inmunde ond kan ittirakathu... (Anju)
good one..chennagide nimma lekhana..
Raaghu.
ವಾಣಿಶ್ರೀ, ಮಳೆಯ ಮುದ ಬೇಸಿಗೆಯಿಂದ ಬೆಂದವರಿಗೆ...ಅದೇ ಅತಿವೃಷ್ಠಿ...ಬೇಜಾರಾಗುತ್ತೆ...ಅದಕ್ಕೆ ಹೇಳೋದು ಏನಾದ್ರೂ ಹಿತ-ಮಿತವಾಗಿರಬೇಕು ಅಂತ....ಒಳ್ಳೆಯ ಭಾವಪೂರಿತ ಲೇಖನ
ನಿಮ್ಮ ಬರಹ ಚನ್ನಾಗಿದೆ
ಹೊನ್ನ ಹನಿ
http://honnahani.blogspot.com
Hey Vani..realy superb.Nange ninu yaro heli gottille bt i got this blog link from my friend..
Idanna odta iddaga inta bavanegalidda gelati nangu sigabarada ansta ittu..
Thank you.
Post a Comment