ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಭಾವ ಬಂಧಿಯಾದಾಗ...

[ಸುಮ್ಮನೆ  ಕುಳಿತವಳಿಗೆ  ತಟ್ಟನೆ  ನೆನಪಾದ ಸಾಲುಗಳಿವು..ಓದಿ ಹೇಗಿದೆ ಹೇಳಿ..]

ಅದೇ ಭೂಮಿ, ಅದೇ  ಭಾನು ಈ ನಯನ ನೂತನ....
ಅದೇ ದಾರಿ,ಅದೇ ತಿರುವು ಈ ಪಯಣ ನೂತನ...

ನಾನು ಪದೆ ಪದೆ ಕೇಳುವ 'ಈ ಬಂಧನ' ಸಿನೆಮಾದ ಹಾಡಿನ ಸಾಲುಗಳು ಹಳೆಯದಾಗಿದ್ದರೂ ಇಂದು ಹೊಸ ಅರ್ಥ ಪಡೆದಿದ್ದವು..ನಿಜ. ಪ್ರತಿಯೊಂದು ಹಾಗೆಯೇ ಇದೆ.ಆದರೆ ನನ್ನ ಬದುಕಿನ ತಿರುವು  ಹೊಸದಾಗಿದೆ.ಹೊಸತರಲ್ಲಿ ಏನೋ ಪುಳಕವಿದೆ.ಸ್ಪಷ್ಟ ವಾಗದ ಭಾವವಿದೆ.ಹೇಗೋ ಇದ್ದ ಅಷ್ಟೊಂದು ನಿನ್ನೆಗಳು ಇಂದಿನಲ್ಲಿ ಕನಸಂತೆ ಕರಗಿ ಹೋಗಿವೆ.ಆದರೂ ಹೊಸತನ್ನು ಸ್ವಾಗತಿಸಲು ಮನಸ್ಸಿನಲ್ಲೊಂದು ಸಣ್ಣ ಅಳುಕಿದೆ.ಅದಕ್ಕೆ ಕಾರಣವು ನೀನೆ,ಪರಿಹಾರವು ನೀನೆ.ಮೊದಲ ಬಾರಿಗೆ ನಾನು ಬೆಳೆದು ನಿಂತಂತೆ ಭಾಸವಾಗುತ್ತಿದೆ.ಹುಚ್ಚು ಮನಸ್ಸು ಲಗಾಮು ಬೇಡುತ್ತಿದೆ.ಪ್ರತಿಯೊಂದು ಪದಗಳಿಗೂ ಸುತ್ತಲಿನವರು ಅರ್ಥ ಕಲ್ಪಿಸುವಾಗ ಇದು ನಾನೇನ ಎನ್ನುವ ಸಂಶಯ ನನ್ನ ಕಾಡುತ್ತಿದೆ.ಸಂಶಯ ಸತ್ಯ ಅನ್ನೋದೇ ನನಗೆ ಅರಿವಾಗುವಾಗ ಲಜ್ಜೆಯೊಂದು ನನ್ನ ಕಾಡುತ್ತಿದೆ.ಒಂಟಿ ಕನಸುಗಳು ನಿನ್ನ ಕನಸುಗಳಿಗೆ ಜಂಟಿ ಯಾಗಿ ನಮ್ಮ ಕನಸಾಗಿ ನನಸಾಗುವ ಪರಿಯೇ ಹೀಗಿರಬೇಕು.ಅದರೂ ಇದು ಹೊಸತಾಗಿದೆ.ಹೊಸತನ್ನು ಸವಿಯುವ ಮನಸಾಗಿದೆ.

ನನ್ನ ಪ್ರಪಂಚದಲ್ಲಿ ಬರಿ ನಾನಿದ್ದೆ,ಕೇವಲ ನನ್ನ ಅಸೆಗಳಿದ್ದವು.ನನ್ನದೇ ಕನಸುಗಳಿದ್ದವು.ಅದಕ್ಕೆ ನಾನೊಬ್ಬಳೇ ಕೊಡುತ್ತಿದ್ದ ಅರ್ಥಗಳಿದ್ದವು.ಪಯಣದಲ್ಲಿ ಬರಿ ನನ್ನ ಹೆಜ್ಜೆ ಗುರುತುಗಳಿದ್ದವು.ಎಲ್ಲದರಲ್ಲೂ  ಬರಿ ನಾನು ಮಾತ್ರ ಇದ್ದೆ.ಆದರೆ ಇಂದು ನಾನೆಂಬುದು ನಾವಾಗುತ್ತಿದೆ.ನನ್ನ ಪುಟ್ಟ ಪ್ರೀತಿಯ ಪ್ರಪಂಚಕ್ಕೆ ನಿನ್ನ ಮತ್ತು ನಿಮ್ಮವರ ಆಗಮನ ಮತ್ತಷ್ಟು ಖುಷಿಯನ್ನು ಕೊಟ್ಟಿದೆ.ನನ್ನ ಜಗತ್ತು ಹಿಂದಿಗಿಂತ ದೊಡ್ಡದಾಗಿದೆ.ನನ್ನ ಬದುಕಿನ ಖಾಲಿ ಜಾಗವೊಂದು ನಿನ್ನದಾಗಿದೆ.ಅದೆಷ್ಟೋ ಅಪೂರ್ಣ ಸಾಲುಗಳು ನಿನ್ನಿಂದ ಪೂರ್ಣವಾಗ ಬೇಕಿದೆ.ಅದೆಷ್ಟೋ ಸಂಜೆಗಳು ಸುಂದರವಾಗಿ ಅರಳಬೇಕಾಗಿದೆ..ಅದೆಷ್ಟೋ ಹಾದಿಗಳನ್ನು ಜೊತೆಯಾಗಿ ನಡೆಯಬೇಕಾಗಿದೆ..ಅದೆಷ್ಟೋ ಮೌನಗಳು ಮಾತಾಗಬೇಕಿದೆ.ಅದೆಷ್ಟೋ ಕನಸುಗಳು ನನಸಾಗಿ ಕರಗಬೇಕಾಗಿದೆ. ನಿನ್ನೆಯ ನಗು, ನಾಳೆಯ ನೀರಿಕ್ಷೆ,ಕಳೆಯುತ್ತಿರುವ ಇವತ್ತು ಎಲ್ಲಾ ಹೊಸತರಂತೆ ತೋರುತ್ತಿದೆ. ಹತ್ತಿರದವರ ಸಂಭ್ರಮ ನೋಡುವಾಗ ಮನಸ್ಸು ಮುಗುಳ್ನಗುತ್ತಿದೆ.ಮತ್ತೆ ಮತ್ತೆ ಅನುಮಾನ ನನ್ನ ಆವರಿಸುತ್ತಿದೆ.ಮನಸ್ಸು ಉತ್ತರ ಹುಡುಕಾಡುತ್ತಿದೆ..ಎಂದಿನಂತೆ ನೆಚ್ಚಿನ ಹಾಡಿನ ಸಾಲೊಂದು ನನ್ನ ಕಾಡುತ್ತಿದೆ.

ಇದು ಮೊದಲನೇ ಹಾಡು ಹೇಗೋ ಏನೋ ತಿಳಿಯೆ..
ನನ್ನ ನಲುಮೆಯ ಮಾತು,ರೀತಿ ನೀತಿ ಸರಿಯೇ...??

14 comments:

Nice one...:) E bandhana januma janumada anubandhana..:)

 

'ಶ್ರೀ' ಮಾನ್ಯರೆ,
ಒಳ್ಳೆ ಬರಹ. ಜೀವನದಲ್ಲಿ ಹೊಸತನ ಎಂಬುದು ಹರುಷವನ್ನು ಕೊಡುವಂತದು.
ನಿಮ್ಮ ಕನಸುಗಳೆಲ್ಲ ನನಸಾಗಿ, ನಿರೀಕ್ಷೆಗಳು ಅನುಭವ ವಾಗಿ, ಅನುಭವ ಸವಿ ಸವಿ ನೆನಪಾಗಿ, ಹರುಷ ಚಿರವಾಗಿರಲಿ ಎಂದು ಹಾರೈಸುವೆ.
We have to Expect less to Experience more :)
ಮತ್ತೊಮ್ಮೆ ಶುಭಾಶಯಗಳು

 

chennaagiddu :)bhaavakke bhandhanaviradirali :)

 

tumba chennagide... nimage shubhavagali harusha manemaadali

 

"nothing great was ever achieved without enthusiasm"

-- you have it, and you will win.
-- keep writing | we love reading

 

Enu madam,
eneno gunu gunista iddiraaa,
chenda baradye, inthaha barahagalu odale khushi agtu
late agi bandiddakke kshamisu

 

ಹಿಂಗಾಜು ಕತೆss..

 

Koneya salugalu mattu adakke suit aguvantha bhavachitra kooda ishtavayithu... ashte helalu bayasuttene sadyakke... :(

 

ವಾನಿಶ್ರಿ, ತುಂಬಾ ಚೆನ್ನಾಗಿ ಮೂಡಿಬಂದಿದೆ!!! ನಿಮ್ಮ ಜೊತೆ ಭಾವನೆಗಳನ್ನು ಹಂಚಿಕೊಳ್ಳುವವ ಅದೃಷ್ಟವಂತ :)

 

ಬದುಕಿನ ವಸಂತ ಕಾಲ...
ಒಂಟಿ ಮನವು ಜಂಟಿ ಬಯಸಿ ಗೂಡು ಕಟ್ಟುವ ಕಾಲ...
ಇನಿಯನಾಸರೆಯ ಬಯಕೆಯ ಹೂವು ಘಮಘಮಿಸುವ ಕಾಲ...
ಮನವು ಸಂಭ್ರಮಿಸುವ ಕಾಲ...
ಹೀಗೇ ಜಾರಿಯಲ್ಲಿರಲಿ ಸದಾ ಸರ್ವದಾ...

 

ಮಾತೃ ದೇವೋ ಭವ... ಅಮ್ಮನನ್ನು ಶಬ್ದದಲ್ಲಿ ಹಿಡಿದಿಡುವುದು ಕಷ್ಟ .. ತುಂಬಾ ಚೆನ್ನಾಗಿದ್ದು.. ಇಂತಾ ಗೆಳತಿಯನ್ನ ಕೊಟ್ಟ ಅಮ್ಮನಿಗೆ ನನ್ನದೊಂದು ನಮನ ...

 

Post a Comment