ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಮಡಿಲು...











ನಿನ್ನ ನೋವಿನಲಿ ನನ್ನ ನಗು ಅಡಗಿತ್ತು
ಹೊತ್ತು ಹೆತ್ತು ನೀ ಜಗಕೆ ನನ್ನ ತಂದಾಗ

ಸುತ್ತ ಜನ ನೂರು,ಸಂತಸದಿ ನಲಿವಾಗ
ನನ್ನ ಅಳು ಅಡಗಿತ್ತು ನೀ ಸವರಿದಾಗ...

ಲಾಲಿ ಕೇಳುತ ನನ್ನೇ ನಾ ಮರೆತಿದ್ದೆ
ನಿನ್ನ ನಿದ್ದೆಯ ಕದ್ದು ನಾ ಮಲಗುವಾಗ....

ಹತ್ತು ಜನರ ನಡುವೆ ಮತ್ತೆ ನಾ ಹುಡುಕಿದ್ದೆ
ನಗುವೊಂದು ಮೊಗದಲ್ಲಿ ನಿನ್ನ ಕಂಡಾಗ..

ಉರುಳಲಿ ವರುಷ,ಬದಲಾಗಲಿ ಎಲ್ಲ
ನಿನ್ನ ಪ್ರೀತಿಯಲಿ ಮಾತ್ರ ಕಲ್ಮಷವೇ ಇಲ್ಲ....

ಜಗನಾಳುವ ದೇವ,ಸೂಚಿಸಿದ ತನ್ನ ಇರುವ
ನಿನ್ನ ತೋಳಲಿ ತುಂಬಿ ಮಾಸದ ಮಮತೆ ಒಲವ....

ನೂರು ಜನುಮವೇ ಬರಲಿ,ಕೋರುವೆನು ಅವನಲ್ಲಿ
ಮತ್ತೆ ಹುಟ್ಟುವೆನು ನಾ ನಿನ್ನ ಮಡಿಲಿನಲ್ಲಿ....... 







[ಅಮ್ಮಂದಿರ ದಿನದ ಸಲುವಾಗಿ ಬರೆದ ಈ ಕವನ ನನ್ನ ಪ್ರೀತಿಯ ಅಮ್ಮನಿಗೆ ಪುಟ್ಟ ಕಾಣಿಕೆ...]

26 comments:

Mast iddu :) raashi khushi aatu odi....Superr..

 

ಹೆಯ್.....
ತುಂಬಾ ಚಂದಿದ್ದು.... ಇದನ್ನು ಮನೆಗೋದಾಗ ಅಮ್ಮಂಗೆ ಓದಿ ಕಾಣ್ಸು... ತುಂಬಾ ಖುಷಿ ಪಡ್ತು...
ತನ್ನ ಬಗ್ಗೆ ಬರ್ದಿದ್ದು ಅನ್ನೊದಕ್ಕಿಂತ..... ತನ್ನ ಮಗಳು ಬರ್ದಿದ್ದು ಅ>ತಾ....

ಖುಷಿ ಆತು ಓದಿ....

 

Hi vanishree, I am Subramanya from Vijayanagar, Bangalore. I accidentally opened your blog.. It is simply superb... You are software engineer by profession, but your writings in kannada are very nice... Congratulations, keep it up... I also saw "adige recepie", it is very nice and also very helpful for me since I have to prepare food myself... Thank you.. bye..

 

superrrrr.... amma yavaglu ammane...

 

ನೂರು ಜನುಮವೇ ಬರಲಿ,ಕೋರುವೆನು ಅವನಲ್ಲಿ
ಮತ್ತೆ ಹುಟ್ಟುವೆನು ನಾ ನಿನ್ನ ಮಡಿಲಿನಲ್ಲಿ.......


nice :)

 

ಉತ್ತಮ ಕವನ. ಚನ್ನಾಗಿದೆ.

 

ಅಮ್ಮನಿಗೆ ಒ೦ದು ಸ೦ತಸದ ಕೊಡುಗೆ. ಚೆ೦ದವಿದೆ. ಅಭಿನ೦ದನೆಗಳು.

ಅನ೦ತ್

 

Awesome Dear....:):):)

 

'ಶ್ರೀ' ಮಾನ್ಯರೆ,
ಮಾತೆಯ ಮಡಿಲ ಚಿತ್ರಣ ಸಹಜ, ಸರಳ, ಸುಂದರವಾಗಿ ಮೂಡಿಬಂದಿದೆ.
'ತಾಯಿ' ಸದಾ ಪೂಜ್ಯ. ನಮ್ಮನ್ನು ಸಲಹುವ ದೇವತೆ. ಜಗತ್ತಿನ ಸರ್ವ 'ಶ್ರೇಷ್ಠ' ವ್ಯಕ್ತಿಗೆ ನನ್ನದೊಂದು ನಮಸ್ಕಾರ

ಅಮ್ಮನಿಗೆ ಈ ಕವನ ಉತ್ತಮ ಕಾಣಿಕೆ. ಇದನ್ನು ನೋಡಿ ಖಂಡಿತ ಹೆಮ್ಮೆಪಡುತ್ತಾರೆ :)

 

ನಿಮ್ಮಲಿ ಮೂಡಿದ ಸಂತಸ ಚಂದ
ತಾಯಿಯ ಮಡಿಲದು ಪರಮಾನಂದ
ಅವಳ ಪ್ರೀತಿಯ ಮಾತು ಮಕರಂದ
ಸಾಗರದ ಆಳವದು ಸಂಭಂದ
ಮಮತೆಯ ಸುರಿದ ನಿಮ್ಮ ತಾಯಿಗೆ ಶರಣೆನ್ನುತಿಹನು ಈ ಕಂದ

ನಿಮ್ಮ ಅರ್ಥ ಭರಿತ ಸಾಲುಗಳನ್ನು ನೋಡಿ ಅತ್ಯಂತ ಖುಷಿ ಆಯಿತು

 

nice lines.. Mothers' Day wishes to your mom from my side also!

 

ನಿಮ್ಮಿಂದ ಇಂತಹ ಸುಂದರ ಕವನ ಬರೆಸಿಕೊಂಡ ಆ ತಾಯಿಯ ಹೃದಯವೂ ಎಷ್ಟು ಸುಂದರವಾಗಿರ ಬಹುದು, ಎನ್ನುವುದು ಸಲೀಸಾಗಿ ಊಹಿಸಬಹುದು ಮೇಡಮ್. ಸೂಪರ್...

 

Super.. Bhavane chennagi moodi bandide...!!!

 

ವಾಣಿ...

ಅಮ್ಮ ಎಂದರೆ ಮಮತೆ ವಾತ್ಸ್ಯಲ್ಯ... ಪ್ರೇಮ ದೇವತೆ....

ಚಂದದ ಕವನಕ್ಕೆ ಅಭಿನಂದನೆಗಳು..

 

ಕವನ ತುಂಬಾ ಚೆನ್ನಾಗಿದೆ .

ಲಾಲಿ ಕೇಳುತ ನನ್ನೇ ನಾ ಮರೆತಿದ್ದೆ
ನಿನ್ನ ನಿದ್ದೆಯ ಕದ್ದು ನಾ ಮಲಗುವಾಗ....
favourite ಸಾಲುಗಳು.

 

ಲಾಲಿ ಕೇಳುತ ನನ್ನೇ ನಾ ಮರೆತಿದ್ದೆ
ನಿನ್ನ ನಿದ್ದೆಯ ಕದ್ದು ನಾ ಮಲಗುವಾಗ....

ಅಕ್ಕಯ್ಯ ಚೊಲೊ ಇದ್ದು ಅಮ್ಮನ್ ನೆನ್ಪಾತು ರಾಶಿಯ

 

Hai Vanishree....
Very Nice Poem towards "MOTHER"..... ..

Super Like for this Poem... .. .

 

Chennagide... Khushiyaagide

 

Super :) Very much impressed with your Writings, Keep Going ...

 

ಅಮ್ಮಂದಿರೇ ಹಾಗೆ. ಮಮತೆಯ ಗಣಿ. ಪ್ರೀತಿಯ ಧ್ವನಿ. ಅಮ್ಮನ ಕುರಿತು ಮನದ ಬಾವದಅಭಿವ್ಯಕ್ತಿ ಸುಂದರವಾಗಿದೆ

 

Post a Comment