ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಹೂವು......

ಮೊಗ್ಗಾಗಿ ಮೂಡಿತು ಕನಸು...

ಭಾವಗಳ ಬಣ್ಣವ ತಳೆದು,

ಸೊಗಸಾಗಿ ಅರಳುವ ಸೂಚನೆಯ

ನಿರೀಕ್ಷೆಯ ಕಂಪು ನೆಟ್ಟವರ ಮನದಲ್ಲಿ......


ಒಂದೊಂದು ಎಸಳಲು ಒಂದೊಂದು ಭಾವ...

ಬಿಚ್ಚಿಕೊಳ್ಳುವ ಬಯಕೆ ಅರಳುವ ಮುನ್ನ..

ಬುಡದಲೇ ಸಡಿಲವಾಯಿತೆ ಅರಿವಿಲ್ಲದೆಯೆ...

ಮುದುಡಿತು ಉದುರುವ ಭಯದ ನಡುಕದಲ್ಲಿ....



ಯಾರದು ತಪ್ಪು, ಯಾರದು ಒಪ್ಪು...

ಮಣ್ಣೇ ಕ್ಷೀಣವೋ,ಬಿತ್ತಿದ್ದೇ ಸರಿಯಿಲ್ಲವೊ..

ಇಲ್ಲ ಎರೆದ ನೀರಿನಲ್ಲಿ ಹೊಕ್ಕಿದ ವಿಷವೊ....

ತಪ್ಪಿಲ್ಲದೆ ನರಳಿತು ಹೂವು ಮಾತ್ರ ಮ್ಲಾನದಲ್ಲಿ......

10 comments:

ಚಂದದ ಕವನ........
ಮನದ ಮೂಲೆಯಲ್ಲೆಲ್ಲೋ ಉತ್ತರ ಕಾಣದ ಪ್ರಶ್ನೆ ಇಣುಕುತ್ತದೆ.

 

chennagide kavana, bhaava lahari heege saagali.

 

ಯಾರದು ತಪ್ಪು, ಯಾರದು ಒಪ್ಪು...
ಮಣ್ಣೇ ಕ್ಷೀಣವೋ,ಬಿತ್ತಿದ್ದೇ ಸರಿಯಿಲ್ಲವೊ..
ಇಲ್ಲ ಎರೆದ ನೀರಿನಲ್ಲಿ ಹೊಕ್ಕಿದ ವಿಷವೊ....
ತಪ್ಪಿಲ್ಲದೆ ನರಳಿತು ಹೂವು ಮಾತ್ರ ಮ್ಲಾನದಲ್ಲಿ......

Nice Lines....Sogasaada kavana...

 

ಬರಿಯ ಹೂವಿಗೆ ಸೀಮಿತ ಗೊಂಡ ಕವನವಲ್ಲ ಇದು. ಇಲ್ಲಿ ಬದುಕಿದೆ, ಕನಸಿದೆ , ಭಾವಗಳಿವೆ , ನೋವು ನಲಿವುಗಳಿವೆ...

ಹೂವು ಎನ್ನುವ ಒಂದು ಪದಕ್ಕೆ ಇಡಿಯ ಬದುಕನ್ನು ಹೋಲಿಸಿ, ನೀವು ಕವನ ಕಟ್ಟಿ ಕೊಟ್ಟ ಬಗೆ ಅದ್ಭುತ....ತುಂಬಾ ಚೆನ್ನಾಗಿದೆ...

 

ಎರಡರ್ಥದ ಜೊತೆ ದ್ವಂದ್ವವೂ ಕಾಣ್ತಾ ಇದ್ದು.....
ನಾನು ಹೆಂಗ್ ಅರ್ಥ ಮಾಡ್ಕಳೆ ನೋಡ್ತಾ ಇದ್ದೆ....
ಕವನ ಚೊಲೋ ಇದ್ದು....

 

Tip of the iceberg..:).. nice wordings..:)

 

ಹೂವಿನ ಅಂತರಂಗದ ಭಾವವನ್ನ ಹೆಕ್ಕಿ ಹೆಕ್ಕಿ ತೆಗೆದಿದ್ದಿರಿ,
ತುಂಬ ಚೆನ್ನಾಗಿದೆ ...

 

ಕವನ ಚಲೋ ಇದ್ದು....
ಹಹಹ ಫಾರ್ ಎ ಚೇಂಜ್ ಹೀಗೆ ಪ್ರತಿಕಿಯೆ..
ನನಗಿಷ್ಟವಾದ ಸಾಲುಗಳು.....

ಒಂದೊಂದು ಎಸಳಲು ಒಂದೊಂದು ಭಾವ...

ಬಿಚ್ಚಿಕೊಳ್ಳುವ ಬಯಕೆ ಅರಳುವ ಮುನ್ನ..

 

Post a Comment