ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಪ್ರೀತಿ...














ವರುಷದ ಹಿಂದೆ ಅರಿವಿಲ್ಲದೆ ನೀ ಬಂದಾಗ,ನೀನಾರೋ ನಾನಾರೋ ..
ಸಂಧಿಸುವಂತೆ ಮಾಡಿದ್ದು ಪರಿಸ್ಥಿತಿಯೋ,ಕಾಣದೆ ಕಾಯುವ ಕಯ್ಯೋ..
ಮನಸಿನಲ್ಲಿ ನನ್ನ ಆಗ ಕಾಡಿದ್ದು ಇದೆಲ್ಲ ಈಗಲೇ ಬೇಕೆ?...

ಕೇಳುವವರ ಕಣ್ಣ ತಪ್ಪಿಸಿ ನಾ ತಿರುಗುವಾಗ..
ಕನಸಲ್ಲೂ ಅದೊಂದೇ ಭೀತಿ, ನನ್ನ ಭವಿಷ್ಯವನ್ನಾಡಿದ ಅವನ ಮಾತಿನ ರೀತಿ..
ಗುರು ಬಲವು  ಹಿಂಬದಿಯಲ್ಲೇ ಇರುವಾಗ ಯಾವ ಹರನ ನಾ ಬೇಡಿದರೇನು..
ಅವ ತಾನೇ ಏನು ಮಾಡಿಯಾನು...

ಅಲ್ಲೇ ನಿಶ್ಚಯಿಸಿದಂತೆ,ನೀ  ಬದುಕಿಗೆ ಹೊಸ ಮುನ್ನುಡಿ ಬರೆದಾಗ
ಖಾಲಿಯಾಗಿದ್ದ ಮನಸಲ್ಲಿ ತುಂಬಿ ಕೊಂಡಿದ್ದು ಅದೇ ಹುಚ್ಚು ಪ್ರೀತಿ...
ನನ್ನ ನಾ ನೋಡಿಕೊಂಡಂತೆ ನಿನ್ನನ್ನೂ ಬೆಚ್ಚಗಿಡುವ ನೀತಿ....

ಮತ್ತೆ ಮುಂದಿನದು ಇಬ್ಬರಿಗೂ ಗೊತ್ತು,
ಹೇಗೆ ಕಳೆದವೋ..ವರುಷದ ಹನ್ನೆರಡರಲ್ಲಿ ಹತ್ತು...

ಮೊನ್ನೆ ಮೊನ್ನೆ ಅಷ್ಟೇ ನಿನ್ನೊಡನೆ ಏಳು ಹೆಜ್ಜೆ ಇಟ್ಟಾಗ..
ಸರಿದಾಡಿದ ರೇಶಿಮೆ ಸೀರೆಯ ಸದ್ದು ಇನ್ನು ನನ್ನ ಕಿವಿಯಲ್ಲಿ..
ಹತ್ತಿರಿದ್ದವರ ಕಣ್ಣ ತಪ್ಪಿಸಿ ಹಿಡಿದ ಕೈಯ್ಯ ಮೆದುವಾಗಿ
ಅದುಮಿದ ನೆನಪೇ ನನ್ನ ಇತ್ತೀಚಿನ ಕನಸುಗಳಲ್ಲಿ...

 ನಾ ಕಳೆದ ಎಷ್ಟೋ ಕ್ಷಣಗಳ ಮಧುರ ನೆನಪುಗಳು ನನ್ನ ಸೆರಗಿನಲ್ಲಿ..
ಬಾ ತುಂಬಿಕೊ ನೀನಗೂ ನೀಡುವೆ ಒಂದಿಷ್ಟ ನನ್ನ  ಪುಟ್ಟ ಬೊಗಸೆಯಲ್ಲಿ...

17 comments:

Superb poem Vaani... Pritiya anubhootiyalli muLugida kavite :) liked it very much :)

 

ಕೊನೆಯ ಎರಡು ಸಾಲುಗಳು ತುಂಬಾ ಚೆನ್ನಾಗಿವೆ....

 

ಇನ್ನು ಉಕ್ಕುವುದೆಲ್ಲ ಕವನಗಳೇ ಏನೋ.....

ಬದುಕಿನ ಸೊಗಸನ್ನು ಕವನಗಳೇ ನಿರೂಪಿಸುತ್ವೆ....

ಚನ್ನಾಗಿದ್ದು...

 

ಶುಭಾಶಯಗಳು
ಕವನ ಚೆನ್ನಾಗಿದೆ
ಸ್ವರ್ಣಾ

 

cholo barde... kannallina kanasu, preetiya anubhava kavanadalli gotagta iddu.. :) olledaagli.. :)

 

ತುಂಬಾ ಚನ್ನಾಗ್ ಇದ್ದು ಕವನ :)

 

ಹಿಡಿದ ಕೈಯಿ -
ಇಟ್ಟ ಏಳು ಹೆಜ್ಜೆಗಳಿಂದ -
ಬೆಸೆದ ಈ ಅನುಬಂಧ...
ಇರಲಿರಲಿ ನೂರ್ಕಾಲ ಬಲು ಚಂದ ಚಂದ...

Nice lines...

 

antoo bareyale Iga time sigtali, blog navara punya :)

cholo baradye koose

 

ಕವನ ಸುಂದರವಾಗಿದೆ . ಇಷ್ಟ ಆಯ್ತು ವಾಣಿ :)

 

ದಾಂಪತ್ಯ ಮತ್ತು ಸಂಗಾತಿಯ ಸಾಂಗತ್ಯದೆಡೆ ಬರೆದುಕೊಂಡು ಉತ್ಕಟ ಪ್ರೇಮ ಕಾವ್ಯ.

ಭಾವನಾತ್ಮವಾಗಿ ಮತ್ತು ಲಾಲಿತ್ಯ ಪೂರ್ಣವಾಗಿದೆ.

ನನ್ನ ಬ್ಲಾಗಿಗೂ ಸ್ವಾಗತ.

 

wow..preeti tumbi hogide.. sadaheege irali.. kavana tumba ista aytu

 

ತುಂಬಾ ಸುಂದರ ಕವನ....ನಿಮ್ಮ ಪ್ರೀತಿ ಸದಾ ಹಸಿರಾಗಿರಲಿ....ಶುಭಾಶಯಗಳು...

ನನ್ನ ಬ್ಲಾಗ್ ಗೂ ಬನ್ನಿ..

 

Sooper ree,, awesome.. i love to read this blog!! appreciate your effort.keep it up :)
Raghu

 

ನಾ ಕಳೆದ ಎಷ್ಟೋ ಕ್ಷಣಗಳ ಮಧುರ ನೆನಪುಗಳು ನನ್ನ ಸೆರಗಿನಲ್ಲಿ..
ಬಾ ತುಂಬಿಕೊ ನೀನಗೂ ನೀಡುವೆ ಒಂದಿಷ್ಟ ನನ್ನ ಪುಟ್ಟ ಬೊಗಸೆಯಲ್ಲಿ...

ಎಂತಹ ಮನೋಹರ ಸಾಲುಗಳು... ನಿಮ್ಮ ಸಂಗಾತಿಯೊಡನಿರುವ ಅಧಮ್ಯವಾದ ಪ್ರೀತಿ ಈ ಎರಡು ಸಾಲಲ್ಲೇ ವ್ಯಕ್ತ... ಶುಭವಾಗಲಿ..
http://nenapinasanchi.wordpress.com/

 

Post a Comment