ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಆದರದ ಆಮಂತ್ರಣ..

ಪ್ರಹವಿಸಲಿ ಪ್ರೀತಿ ಬಾಳೆಂಬ ಯಾನದಲಿ....
ಹಚಾರಿ ನೀನಾಗು ನಾ ನಡೆವ ಹಾದಿಯಲಿ ನಿ
ನ್ನ ಸುಖ ಕಷ್ಟದಲಿ ಸಮಪಾಲು ನನಗಿರಲಿ...
ವಾಸವಾಗಲಿ ನಲಿವು ನಮ್ಮಿಬ್ಬರ ಜೊತೆಯಲ್ಲಿ...ಕ್ಷ
ಣಿಕವಾಗಲಿ ನೋವು ನಿನ್ನ ಸಹಮೈತ್ರಿಯಲಿ
ಶ್ರೀಹರಿಯ ದಯವಿರಲಿ ಮುಂಬರುವ ದಿನಗಳಲಿ...
ಏಳು ಬಣ್ಣಗಳ ಮೂಲ ಒಂದೇ ಬಣ್ಣವಂತೆ..
ಏಳು ಹೆಜ್ಜೆಗಳ ನಂಟು ಏಳು ಜನುಮಕಂತೆ...
ಹೆಜ್ಜೆಗಳ ಬೆಸೆದು ಜೀವ ಒಂದಾಗೋ ಸಮಯ..
ತಾಳಿ, ಕಾಲುಂಗುರ, ತಿಲಕ, ಮಂಗಳ ವಾದ್ಯ,
ಗುರು-ಹಿರಿಯರ ಮಂತ್ರಘೋಷ, ಇಷ್ಟದೇವತೆಯ ಅಭಯ ವಾಣಿ
ಜೊತೆಯಾಗಲು ಹೊಸ ಬಂಧವು, ಮನಸಾಗಲಿ ಪ್ರಸನ್ನ


ವರ್ಷದ ಆರಂಭದಲ್ಲಿ  ಸ್ನೇಹಿತರೆಲ್ಲಾ ಸೇರಿದ್ದ ಮದುವೆಯ ಸಂದರ್ಭದಲ್ಲಿ ನನ್ನ ಕೇಳಿದ ಪ್ರಶ್ನೆಗೆ ನಾನು ತಿರುಗಿ ಉತ್ತರಿಸಿದ್ದು ಇನ್ನೊಂದು ವರ್ಷ ಆ ಬಗ್ಗೆ ಯೋಚನೆ ಇಲ್ಲ, ಮನೆಯಲ್ಲಿ ಹೇಳಿ ಅಗಿದೆ ಏಂದಿದ್ದು ಸುಳ್ಳಲ್ಲ..ಹೇಳಿದ ಮೂರು ತಿಂಗಳೊಳಗೆ,ಒಂದು ಬೆಳಗ್ಗೆ ಹತ್ತಿರದವರಿಗೆಲ್ಲ ಈ ವರ್ಷದ ಕೊನೆಯಲ್ಲಿ ಮದುವೆ ಅಗುತ್ತಿದ್ದೆನೆ ಎಂದಿದ್ದು ಸುಳ್ಳಲ್ಲ. ಹೌದು ಕೊನೆಗೂ ಮಾನಸರಂಗದ ಒಂಟಿ ಮನಸು ಇನ್ನೊಬ್ಬರ ಕನಸಿನೊಂದಿಗೆ ಜಂಟಿ ಆಗಿ ಮದುವೆಯೆಂಬ ಮಧುರ ಬಾಂಧವ್ಯದ ಹೊಸ್ತಿಲಲ್ಲಿ ನಿಂತಿದೆ. ತುಂಬಾ ದಿನ ಬಾಕಿ ಇದೆ ಎಂದು ಹಾರಾಡಿ ಕೊಂಡಿದ್ದ, ಅಂಕೆಯಿಲ್ಲದ ಮನಸು ಮದುವೆ ಹತ್ತಿರ ಬಂದಂತೆ ಅರಿವಾಗುತ್ತಿರುವ , ಮುಂದೆ ಸ್ವಾಗತಿಸುತ್ತಿರುವ ಹೊಸ ಜವಾಬ್ಧಾರಿ,ಹೊಸ ವಾತಾವರಣ,ಹೊಸ  ಕನಸುಗಳ ನಡುವೆ ಇಣುಕಿ ಗೊಂದಲ.ತಳಮಳಗಳ ಸಾಮೀಪ್ಯದಿಂದ ಜೀವನದ ಹೊಸ ಮಜಲನ್ನು ಸ್ವಾಗತಿಸಲು ಸಜ್ಜಾಗಿದೆ.ಮೂರು ಗಂಟಿನೊಂದಿಗೆ ಜೀವನದ ನಂಟು ಬೆಸೆಯುವ ದಿನ ಗೊತ್ತಾಗಿದೆ.ಹತ್ತಿರದವರ, ಅತ್ಮೀಯರ ಬಳಿಗೆ ಕರೆಯೋಲೆಯನ್ನು ನಾನಾ ತರದಲ್ಲಿ ತಲುಪಿಸಿ ಆಗಿದೆ.ಜೀವನವನ್ನು ಹಂಚಿಕೊಳ್ಳುವ ದಿನ ಕೂಡ ಹತ್ತಿರವಾಗಿದೆ.ಇಷ್ಟು ದಿನದ ಕಾಲ್ಪನಿಕ ಬರವಣಿಗೆಗೆ ವಾಸ್ತವಿಕವಾಗಿ ಒಬ್ಬನು ಬಂದು  ನಿಂತಾಗಿದೆ.ಗೆಳತಿಯರ/ಗೆಳೆಯರ ತಮಾಷೆ,ಹಿರಿಯರ ಸಲಹೆ,ಮನದ ಕಲ್ಪನೆ ಎಲ್ಲವನ್ನೂ ಬುತ್ತಿಯಲ್ಲಿ ತುಂಬಿ ಕೊಳ್ಳುತ್ತ, ನಾನು ಮುಂದೆ ಇಡುವ ಹೆಜ್ಜೆಗಳನ್ನು ,ಅವನ ಹೆಜ್ಜೆಯ ಸಪ್ಪಳದೊಂದಿಗೆ ಬೆಸೆಯುವ ಭರವಸೆ ನೀಡಿಆಗಿದೆ.ನನ್ನಂತೆ ಅವನನ್ನೂ ನೋಡಿ ಕೊಳ್ಳುವ ಮಾತು ಕೊಟ್ಟಾಗಿದೆ.ನಿಮ್ಮನ್ನು ಕರಿಯುದಕ್ಕೆ ಇಷ್ಟೆಲ್ಲ ಪೀಠಿಕೆ ಇಟ್ಟಾಗಿದೆ.ಆ ದಿನ ನಿಮ್ಮನ್ನು ಕಣ್ಣುಗಳು ನೀರಿಕ್ಷಿಸುತ್ತಿರುತ್ತವೆ ಎಂಬುದನ್ನು ಕೂಡ ಪರೋಕ್ಷವಾಗಿ ಹೇಳಿ ಆಗಿದೆ.ನಗರದ ಜಂಜಾಟಗಳ ನಡುವೆ ನಿಮಗೆ ಹೀಗೆ ಕರೆಯುತ್ತಿರುವುದನ್ನು ಮನ್ನಿಸಿ,ನಿಮ್ಮ ಮನೆಯವರೊಂದಿಗೆ ಮದುವೆಯ ದಿಬ್ಬಣಕ್ಕೆ ಬಂದು ನಮ್ಮನ್ನು ಹರಸಿ ಹಾರೈಸಿ.
 
ದಿನಾಂಕ: 1-12-2011
ನೀರಿಕ್ಷೆಯಲ್ಲಿ..
ನಿಮ್ಮವಳು..

21 comments:

ಮದುವೆಗೆ ಬಹಳ ಚೆನ್ನಾಗಿ ಕರೆಯುತ್ತಿದ್ದೀರಾ!!!!!
ನಾನು ಬರ್ತೀನಿ :)

 

ಮನಸಾಯಿತು ಪ್ರಸನ್ನ !!!! :P

 

ನಿಮ್ಮ ವೈವಾಹಿಕ ಬದುಕು ಸುಖಮಯವಾಗಿರಲಿ ಎಂದು ಹಾರೈಕೆ :-)

 

ವಿಭಿನ್ನ ಮದುವೆ ಕರೆಯೋಲೆ. ಖಂಡಿತ ಬರುತ್ತೇನೆ.

 

Congratulations madam...

Wishing you a very happy married life :)

 

Vaani,

Congrats & All the best :) Nice poem too :-p :)

 

ಹೇಯ್ ತುಂಬಾ ಚನ್ನಾಗ್ ಬರದ್ಯೆ.....

ಸಕತ್ತಾಗಿದ್ದು.....

ಪ್ರಸನ್ನನೂ ಪ್ರಸನ್ನ.......

ಮೊದಲ ಕವನ ಚನ್ನಾಗ್ ಪೋಣಿಸಿದ್ದೆ.....
ಕವನ ಅಲ್ಲಾ ಅದು... ನಿನ್ನ ಭಾವ....

happy journey of life....

ಬಾಳು ಮಧುರವಾಗಿರಲಿ...

 

akka aamantraNa chennaagide... kalpana vaaNi, vaastava vaaNi, 2 prasanna , vaagirali... :) shubhaashayagalu munchitavaagi :)

 

kavana ishta aatu... :)
ಏಳು ಬಣ್ಣಗಳ ಮೂಲ ಒಂದೇ ಬಣ್ಣವಂತೆ..
ಏಳು ಹೆಜ್ಜೆಗಳ ನಂಟು ಏಳು ಜನುಮಕಂತೆ...
ಹೆಜ್ಜೆಗಳ ಬೆಸೆದು ಜೀವ ಒಂದಾಗೋ ಸಮಯ
super lines... :)
All the best & happy married life in advance... :)

 

congrats..hosa jeevana nimage shuba neeDali

 

ಹೀಗೆ ಮದುವೆಗೆ ಕರೆದರೆ ಬರದೇ ಇರುವುದಾದರೂ ಹೇಗೆ?:):) ನವಜೀವನಕ್ಕೆ ಶುಭಹಾರೈಕೆಗಳು ವಾಣಿ .

 

wish you happy married life.....

subhavaagali....

 

ಶುಭಾಶಯಗಳು ವಾಣಿ ಶ್ರೀ :)

 

ಮುಗಿದು ಒಂಟಿ ಜೀವನ
ಬಾಳಾಗಲಿ ವೃಂದಾವನ
ಪ್ರೀತಿ ಅಮೃತ ಸುಧೆಯಲಿ
ಶಾಂತಿ ಜೀವ ತುಂಬಲಿ
ಶುಭ ಹಾರೈಕೆಗಳು.....

 

wand wand line'u mast bardiri neevu..

 

tumba chenaagide kareyole.
shubhashayagaLu :)

 

ನಿಮ್ಮ ವೈವಾಹಿಕ ಬದುಕು ಸುಖಮಯವಾಗಿರಲಿ ಎಂದು ಹಾರೈಕೆ :-)

 

aadarada aamantrana tumba sogasagi moodide. nimma hosa jeevanakke nanna harda shubhashayagalu.neevu malenaadinavaru antha thilidu aatmeeyate moodie.malenaadinalli saakashtu odadiddene.
essel bhyrappanavara mandra pustakada munnudiyalli nanna mattu nannavala hesaranna esselb kaanisiddare.nanna vaasa dakshina kyaliforniadalli.
ananth hosakere
ps: ee hosakere NR puradinda eradu milee dooradalli.

 

NIMMA KAREYOLE TUMBA UNIQUE AAGIDE.NIMMA VYAVAAHIKA JEEVANAKKE HAARDA SHUBHASHAYAGALU.JOTEGE NEEVU MALENAADINAVARU ANTA AKKARE.BARAVANIGEYA DHAATU TUMBA CHENNAGIDE.DEVARU NIMMIBARANNU CHENNAGI ITTIRALI.NANNA HESARINA HOSAKERE NR PURADINDA ERADU MILEE DOORADALLI.NIMAGE NAMMA ESSELB AVARA MANDRA PUSTAKA ISTAVADADDU ANTA NIMMA BIO INDA TILEETU. AA PUSTAKADA MUNNUDIYALLI NANNA MATU NANNAVALA HESARU KANISIDDARE.
INTEE PREETI, VISWASADALLI
ANANTHA HOSAKERE

 

Post a Comment