ಕಣ್ಣು ಹಾಯಿಸಿದತ್ತ ಕಾಣುತಿರಲು ಕಪ್ಪು ಬಾನು..
ಚದುರಿರಲು ಅಲ್ಲಲ್ಲಿ ಮೋಡಗಳು ಚೂರಾಗಿ...
ಮಳೆಬರುವ ಸೂಚನೆಯೋ,ಇಲ್ಲ ಕವಿದ ಕತ್ತಲೆಯೊ
ಗುರುತಿಸಲು ಪರಿತಪಿಸೆ ಇದಾವದರ ಪ್ರತಿಬಿಂಬ..
ಉರಿವ ತಾಪವೇ ಮೇಲೇ ಸೂಚನೆ, ಯಾಚನೆಗಿಂತ..
ನಿಂತ ಕಾಲ-ಕನ್ನಡಿಯ ಕಣ್ಣು ಸೆರೆಹಿಡಿಯೆ ವಾಸ್ತವವ...
ಚದುರಿರಲು ಅಲ್ಲಲ್ಲಿ ಮೋಡಗಳು ಚೂರಾಗಿ...
ಮಳೆಬರುವ ಸೂಚನೆಯೋ,ಇಲ್ಲ ಕವಿದ ಕತ್ತಲೆಯೊ
ಗುರುತಿಸಲು ಪರಿತಪಿಸೆ ಇದಾವದರ ಪ್ರತಿಬಿಂಬ..
ಉರಿವ ತಾಪವೇ ಮೇಲೇ ಸೂಚನೆ, ಯಾಚನೆಗಿಂತ..
ನಿಂತ ಕಾಲ-ಕನ್ನಡಿಯ ಕಣ್ಣು ಸೆರೆಹಿಡಿಯೆ ವಾಸ್ತವವ...
ದ್ರಷ್ಟಿ ತಪ್ಪಿಸೆ ತಿರುಗಿ ,ಕೂಡಿಡಲು ಹನಿಯೊಂದ..
ಮತ್ತೆ ಗುಡುಗಿನ ಭಯವೇ ಬರಿ ಭುವಿಯ ತುಂಬ.....
ಧರೆಯ ಒಡಲಾಳದಲಿ ಎದ್ದ ಮಿಂಚಿನ ಭೀತಿ....
ಕರಗುವುದೇ ಕಾರ್ಮೋಡ ನವಿರಾದ ಹನಿಯಾಗಿ..
ಭೋರ್ಗರೆದು ಸುರಿಯುವುದೇ ಮತ್ತೆ ಬೇಡವಾದಂತೆ..
ನಿರೀಕ್ಷಣೆಯೋ,ನಿರಾಕರಣೆಯೋ ,ಕಣ್ಣಿನಲಿ ಮತ್ತೆ ಯಾವುದರ ಬಿಂಬ...

8 comments:
ದ್ರಷ್ಟಿ ತಪ್ಪಿಸೆ ತಿರುಗಿ ,ಕೂಡಿಡಲು ಹನಿಯೊಂದ..
ಮತ್ತೆ ಗುಡುಗಿನ ಭಯವೇ ಬರಿ ಭುವಿಯ ತುಂಬ.....
ಒಳ್ಳೆ ಬರದ್ಯೇ..... ತುಂಬಾ ಕಾಲ ಆಗಿತ್ತು......
ಬರ್ತಾ ಇರ್ಲಿ ಹೀಗೇ.......
ನಿರೀಕ್ಷೆ ತಾನು ಕಟ್ಟಿಕೊಡುವ ಸಶಕ್ತ ಪದ ಪೋಷಣೆಯಿಂದಲೇ ಗೆದ್ದಿದೆ. ಸೂಪರ್!
ನನ್ನ ಬ್ಲಾಗಿಗೂ ಬನ್ನಿರಿ:
www.badari-poems.blogspot.com
ಪ್ರತಿಯೊಂದು ಪದ ತನ್ನೊಡಲಲ್ಲಿ ಏನೋ ಇಟ್ಟುಕೊಂಡಿದೆಯೇನೋ ಎಂಬಂತೆ ಭಾಸವಾಗುತ್ತದೆ...... ಚೆಂದದ ಕಾವ್ಯ,,,,
chandavaagi kavanisiddiri Ma'am....
" ಕರಗುವುದೇ ಕಾರ್ಮೋಡ ನವಿರಾದ ಹನಿಯಾಗಿ..
ಭೋರ್ಗರೆದು ಸುರಿಯುವುದೇ ಮತ್ತೆ ಬೇಡವಾದಂತೆ.."
ಮೂರ್ನಾಕು ಬಾರಿ ಓದಿಸಿಕೊಂಡ ಸಾಲುಗಳು.. ಅದ್ಭುತ ಕಲ್ಪನೆ.
ಛೋಲೊ ಇದ್ದು..ಬರಿತಾ ಇರಿ.
ಧನ್ಯವಾದ..
ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್
tumba arthagarbhita padagalu..... salugala bhava manassina garbhada bhavanegalali vastavada drustiyanu, prakrutiya cheluvannu bimbisidantide thanks....
ಚೆನ್ನಾಗಿದ್ದು ಕವನ. ಚಿತ್ರನೂ :-)
ವಾಣಿಶ್ರೀ
ಅವ್ರೆ. ಕವನ ಸೊಗಸಾಗಿದೆ...
ನಿಮ್ಮ ಬರಹ ಕೃಷಿ ನಿರಂತರವಾಗಿರಲಿ..
ಶುಭವಾಗಲಿ......
Post a Comment