ಅತ್ತಣದಿಂದ ಒಂದು, ಇತ್ತಣದಿಂದ ಒಂದು
ಮನದಿ ಮೂಡಿದ ಕಲ್ಪನೆಗೆ ಇಹುದು ಅರ್ಥವೊಂದು
ಹಠ ಬಿಡದೆ ಹಿಡಿದು,ಭಾವ ಮುಷ್ಟಿಯಲಿ ಪಿಡಿದು
ಸುರಿದು ಪೋಣಿಸಿದರೆ ಮೂಡಿತ್ತು ಪದವೊಂದು....
ಕಾಡುತ್ತ ಇಣಕಿದವು ಬೆಂಬಿಡದೆ ಮನಸಲ್ಲೂ
ಸಾಲಾಗಿ ನಿಲ್ಲಿಸಲು,ಸಾಲೊಂದ ಸ್ರಷ್ಟಿಸಲು
ಸಾಲಾಗಿ ನಿಲ್ಲಿಸಲು,ಸಾಲೊಂದ ಸ್ರಷ್ಟಿಸಲು
ಭಾವಗಳ ಪರಿಮಳವೇ ಪ್ರತಿ ಎಸಳಿನಲ್ಲೂ.....
ಬನ್ನಿರಿ ಸಾಲುಗಳೇ,ಸಾಲಾಗಿ ನಿಲ್ಲಿರಿ
ಕಟ್ಟಿಹಾಕುವೆ ನಿಮ್ಮ ನನ್ನದೇ ಪರಿಯಲ್ಲಿ
ಪ್ರೀತಿಯಲಿ ಕರೆಯಲು ನಾನಿಟ್ಟ ಹೆಸರಿನಲಿ...
ಸಾರಿರಿ ಹೊಸತನವ ಒಂದಾಗಿ ಬರಹದಲಿ...
ಪ್ರೀತಿಯಲಿ ಕರೆಯಲು ನಾನಿಟ್ಟ ಹೆಸರಿನಲಿ...
ಸಾರಿರಿ ಹೊಸತನವ ಒಂದಾಗಿ ಬರಹದಲಿ...
[ಕೊಂಚ ದಿನಗಳ ಬರವಣಿಗೆಯಿಂದ ವಿರಾಮ ಪಡೆದಿದ್ದರೂ ಬರೆಯುತ್ತಿಲ್ಲವೆಂಬ ಕೊರಗು ಕಾಡುತ್ತಲೇ ಇತ್ತು..ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಗದೇ ಮನಸ್ಸು ಪರದಾಡುತ್ತಿತ್ತು.. ದಿನ ಬ್ಲಾಗ್ ತೆರೆದು ನಿಮ್ಮ ಬರಹ ಗಳನ್ನೂ ಓದಿ,ನನ್ನ ಬ್ಲಾಗ್ ನ ಮೇಲೊಮ್ಮೆ ಕಣ್ಣು ಹಾಯಿಸುವಾಗ ನನಗೆ ಗೊತ್ತಿಲ್ಲದೇ ಬರುತ್ತಿದ್ದ ಅಸಹಾಯಕತೆಯ ನಿಟ್ಟುಸಿರು ಒಂದು ನೀರವ ಭಾವ ತರುತ್ತಿತ್ತು.. ಬರಹ ಟೆಕ್ಸ್ಟ್ ತೆಗೆದು ಬರೆಯದೆ ಮುಚ್ಚಿಡುವಾಗ ಬರೆಯುವುದೇ ಮರೆತು ಹೋಯಿತೇ ಎಂಬ ಭಾವ.. ಏನೋ ತಿಳಿಯದೆ ಹೀಗೆ ಬಂದ ಸಾಲುಗಳನ್ನು ಬರಹ ಎಂಬ ಹೆಸರಿನಲ್ಲೇ ನಿಮ್ಮ ಮುಂದಿಡುತ್ತಿದ್ದೇನೆ..ಮತ್ತೆ ಏನೋ ಬರೆದಿದ್ದೇನೆ ಎಂಬ ಸಮಾಧಾನ ದಿಂದ ಮತ್ತೆ ಬ್ಲಾಗ್ ಗೆ ವಾಪಾಸ್ಸಗಿದ್ದೇನೆ....]


25 comments:
Good one! Keep writing :)
Very nice :) Ishta aatu 'Baraha..' !
liked it....ಚೆನ್ನಾಗಿದೆ 'ಬರಹ'
arthagarbhita kavana...tumba chennagide gide
ಆಟದ ಮೈದಾನದಲ್ಲಿ ಪುಟ್ಟ ಮಕ್ಕಳನ್ನು ಆಟವಾಡಿಸುವ ಅಮ್ಮನ ಕಲಾವಂತಿಕೆ ನಿಮ್ಮಲ್ಲಿದೆ. ಪದಗಳ ಬಳಕೆ ನಿಮಗೆ ಲೀಲಾಜಾಲ.
ಏನೂ ಬರೆಯಲಾಗಲಿಲ್ಲವಲ್ಲ ಎನ್ನುವ ಹಪಹಪಿಯೇ ಕಾವ್ಯದ ಉತ್ಪತ್ತಿ.
ಇತ್ತೀಚೆಗೆ ನಾನು ಮೆಚ್ಚಿದ ಒಳ್ಳೆಯ ಕವಿಯತ್ರಿ ನೀವು.
ನೈಸ್!
ಚೆಂದದ ಸಾಲುಗಳು! ಇತ್ತೀಚಿನ ದಿನಗಳಲ್ಲಿ ನಾನು ಇಂತಹುದೇ ಪರಿಸ್ಥಿತಿಯಲ್ಲಿದೇನೆ.. ಆದ್ದರಿಂದ ನಿಮ್ಮ ಕವನದ ಕೆಳಗಿನ ಸಾಲುಗಳು ಹಿಡಿದಿದವು!
ಕೊನೆಯ ಸಾಲುಗಳಂತೂ ತುಂಬಾನೇ ಹಿಡಿಸಿದವು
ಅಕ್ಷರಗಳನ್ನು ಹಿಡಿದು ಪೋಣಿಸಿ, ಅವುಗಳನ್ನ ಕರೆಯುವ ರೀತಿಯ ಕಲ್ಪನೆಯೇ ರೋಮಾಂಚಕ,
ತುಂಬಾ ಸುಂದರ ಕವನ
ಇದೊಂದು ಅತ್ಯುತ್ತಮ ಭಾವಗೀತೆ..:)
'ಶ್ರೀ'ಮಾನ್ಯರೆ,
ನಿಮ್ಮ ಬೆಸ್ಟ್ ಫ್ರೆಂಡ್ 'ಮಾನಸರಂಗ' ನ ನೀವು ಹೆಚ್ಚು ದಿನ ಬಿಟ್ಟಿರಲು ಸಾಧ್ಯವಿಲ್ಲ ಅಲ್ವೇ ?
ಬರೆಯಲೇ ಬೇಕೆಂಬ ಉತ್ಕಟ ಹಂಬಲ ರಂಗದಲ್ಲಿ ಅಕ್ಷರಗಳ ರಂಗು ರಂಗಿನ ರಂಗೋಲಿ ಅರಳಿಸಿದೆ..ಮನಕ್ಕೆ ಮುದ ನೀಡಿದೆ..
ಅಕ್ಷರಗಳು ನಿಮ್ಮ ಮಾತನ್ನು ಶಿಸ್ತಿನಿಂದ ಕೇಳುತ್ತಿವೆ..ನೀವು ಅಕ್ಕರೆಯ ಟೀಚರ್ ಆಗಿದ್ದೀರಿ..
ಕವನ ನಿಮ್ಮಲ್ಲಿನ ಹೊಸತನಕ್ಕೆ ನಾಂದಿ ಹಾಡಿದೆ..ಶುಭವಾಗಲಿ :)
ಮೆಚ್ಚುಗೆಯಾಗುವ ಸಾಲುಗಳು
ಒಂದೊಂದಾಗಿ ಪೋಣಿಸಿ ಸೇರಿಸಿ ಕೂಡಿಸಿಟ್ಟ ಪದಗಳ ಸಾಲು.............!
ಚೆನ್ನಾಗಿದೆ.
ಮಳೆಗಾಲ ಪುನಃ ಬಂದಂತಾಯಿತು :) ಚೆನ್ನಾಗಿದೆ.!
Good one..:)
ಬರೆಯುವ ಮನಸ್ಸಿರುವವರಿಗೆ ಹಾಗೆ ನಿಲ್ಲಿಸಲು ಸಾಧ್ಯವಿಲ್ಲ. ಒಂದು ತುಡಿತವಿರುತ್ತದೆ. ಮತ್ತೆ ಬರೆಯಲು ಶುರು ಮಡಿದರಲ್ಲ, ಅದು ಒಳ್ಳೆಯದೆ
ಅಬ್ಬಾ..ಕವನ ಬರೆಯೋಕೆ ಹೆಂಗ್ ಶುರು ಮಾಡ್ಬೇಕು ಅನ್ನೋ ಯೋಚ್ನೆ ಮಾಡೋದನ್ನೇ ಒಂದ ಕವನ ಮಾಡ್ ಬಿಟ್ರಿ... ತುಂಬಾ ಇಷ್ಟಾ ಆಯ್ತು..
ಬನ್ನಿರಿ ಸಾಲುಗಳೇ,ಸಾಲಾಗಿ ನಿಲ್ಲಿರಿ
ಕಟ್ಟಿಹಾಕುವೆ ನಿಮ್ಮ ನನ್ನದೇ ಪರಿಯಲ್ಲಿ
ತುಂಬಾ ಹೊತ್ತು ಓದಿದ ಸಾಲುಗಳು...ಪ್ರತಿಸಲ ಓದಿದಾಗಲೂ ಹೊಸ ಹೊಸ ಅರ್ಥ ಕಾಣಿಸುತ್ತಿದೆ...
ಈ ರೀತಿಯೂ ಕವನ ಬರೆಯಬಹುದು ಅಂತಾ ತಿಳಿಸಿ ಕೊಟ್ಟ ನಿಮಗೆ ಒಂದ್ ಸಲಾಮ್.....
ಬರುತ್ತಿರಿ ನಮ್ಮನೆಗೂ ಎಂದಿನಂತೆ,ನನ್ನನ್ನು ಪ್ರೋತ್ಸಾಹಿಸುತ್ತಿರಿ
ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್
ಹೂಂ..ಹೂಂ...ಸರಳ ಸುಂದರ ಸಾಲುಗಳು,,,ಅದರಲ್ಲೂ ಕಡೆಯ ನಾಲ್ಕು...ಹಾಗೇ ಹಿಡಿದಿಟ್ಟು ಮನ ಕದಡುವ ಪಾದಗಳು,,,,ಅಭಿನಂದನೆ ವಾಣಿಶ್ರೀ.
ಹೂಂ..ಹೂಂ...ಸರಳ ಸುಂದರ ಸಾಲುಗಳು,,,ಅದರಲ್ಲೂ ಕಡೆಯ ನಾಲ್ಕು...ಹಾಗೇ ಹಿಡಿದಿಟ್ಟು ಮನ ಕದಡುವ ಪಾದಗಳು,,,,ಅಭಿನಂದನೆ ವಾಣಿಶ್ರೀ.
ಹೂಂ..ಹೂಂ...ಸರಳ ಸುಂದರ ಸಾಲುಗಳು,,,ಅದರಲ್ಲೂ ಕಡೆಯ ನಾಲ್ಕು...ಹಾಗೇ ಹಿಡಿದಿಟ್ಟು ಮನ ಕದಡುವ ಪಾದಗಳು,,,,ಅಭಿನಂದನೆ ವಾಣಿಶ್ರೀ.
ವಾಣಿಶ್ರೀ,
ತುಂಬಾ ಚಂದವಾಗಿ ಮೂಡಿಬಂದಿದೆ. ಕರೆದಾಗ ಮಗುವಂತೆ ಬರುವ ಪದಗಳನ್ನು ಮುದ್ದಿನ ಮುತ್ತುಗಳಾಗಿ ಪೋಣಿಸುವುದು ಅಂದ.
Welcome back!
Very nice... !!
welcome back Vani :)
tumbaa chennagide..manasige tumbaa hidisitu..
ಹಠ ಬಿಡದೆ ಹಿಡಿದು,ಭಾವ ಮುಷ್ಟಿಯಲಿ ಪಿಡಿದು...' ಬರೆದರೂ ಉತ್ತಮವಾಗೇ ಕವನಿಸಿದ್ದೀರಿ ವಾಣಿಶ್ರೀಯವರೇ, ,ಅಭಿನಂದನೆಗಳು. ನನ್ನ ಬ್ಲಾಗ್ ಗೆ ಭೇಟಿಕೊಡಿ.
Nice one...Keep up...All the best...go ahead with ur thoughts.....Writing very nicely.
Post a Comment