ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಮರೆಯುವುದೇಕೆ ಅರಿಯುವುದನ್ನು...



 ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ,ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ....
 
ಅದ್ಭುತವಾದ ಅರ್ಥಪೂರ್ಣ ಸಾಲುಗಳು.ಪ್ರತಿಬಾರಿಯೂ ಈ ಹಾಡು ಕೇಳಿದ ಐದು ನಿಮಿಷ ನನ್ನನ್ನೇ ಮರೆಸುವ ಸಾಲುಗಳಿವು.ಹೌದು.ಈ ಜೀವನದ ಹಲವಾರು ಸನ್ನಿವೇಶಗಳಲ್ಲಿ,ಹಂತದಲ್ಲಿ ಅರಿತು ಕೊಳ್ಳುವುದು ಎನ್ನುವುದು ಎಷ್ಟು ಮುಖ್ಯವಾಗಿರುತ್ತದೆ ಎನ್ನುವುದು ಕೆಲವೊಮ್ಮೆ ನಮ್ಮ ಅನುಭವಕ್ಕೆ ಬಂದಾಗಲೇ ಅರ್ಥವಾಗುವಂತದ್ದು.ಮೊನ್ನೆ ನನ್ನ ಗೆಳೆಯನೊಬ್ಬ ’ಅರಿತು ಕೊಳ್ಳುವುದು ಎಂದರೇನು,ಇದು ಅನಿವಾರ್ಯ ಎಂದೆಕೆ ನಾವು ಅಂದು ಕೊಳ್ಳುತ್ತೇವೆ?’ ಹೀಗೆ ಆಕಸ್ಮಿಕವಾಗಿ ನನ್ನ ಕೇಳಿದಾಗ ಮತ್ತೆ ನನಗೆ ಈ ಹಾಡು ನೆನಪಾಗಿತ್ತು.ಆ ಕ್ಷಣದಲ್ಲಿ ನಾನು ಉತ್ತರಕ್ಕಾಗಿ ಹುಡುಕಾಡಿದರೂ ದಿನ ಮುಗಿಯುವುದರಲ್ಲಿ ನಾನು ತಕ್ಕ ಮಟ್ಟಿನ ಉತ್ತರ ನೀಡುವಲ್ಲಿ ಸಫಲಳಾಗಿದ್ದೆ.ಆದರೆ ಉತ್ತರ ನೀಡಿದ ಮೇಲೂ ಈ ಪ್ರಶ್ನೆ ನನ್ನ ಕಾಡುವುದನ್ನು ನಿಲ್ಲಿಸಲಿಲ್ಲ.ಹೌದಲ್ಲವೇ ಎಷ್ಟೋ ಸಂಗತಿಗಳನ್ನು ಅರಿಯುವದನ್ನು ನಾವು ಮರೆಯುತ್ತೇವೆ.ಮರೆತು ಪೇಚಾಡುತ್ತೇವೆ.ಅರಿತು ಕೊಳ್ಳುವುದು ಎನ್ನುವುದು ಮೇಲ್ನೊಟಕ್ಕೆ ಸರಳವಾಗಿ ಕಂಡರೂ, ಸಂಬಂಧಗಳ ಪರಿಧಿಯಲ್ಲಿ ಬಂದಾಗ ಇದು ಅತ್ಯಂತ ಸೂಕ್ಷ್ಮವಾದ,ಒಮ್ಮೊಮ್ಮೆ ಬಿಡಿಸಲಾಗದ ಕಗ್ಗಂಟು.ಮಾತು ಎನ್ನುವುದು ಮನುಷ್ಯನಿಗೆ ತನ್ನ ಭಾವನೆಗಳನ್ನು ಒಂದರ್ಥದಲ್ಲಿ ಹೊರ ಹಾಕಲು ಅನುವು ಮಾಡಿ ಕೊಟ್ಟರೂ ಎಲ್ಲವನ್ನು ಮಾತಿನಲ್ಲಿ ವ್ಯಕ್ತಪಡಿಸಲು,ಹೊರ ಪ್ರಪಂಚಕ್ಕೆ ತಿಳಿಯಪಡಿಸಲು ಅವನು ಅಸಮರ್ಥ.ಮೌನವೇ ಕೆಲವೊಂದಕ್ಕೆ ಉತ್ತರ.ಹೀಗಿರುವಾಗ ಅರಿವುದು, ನಾವು ನಿಮ್ಮ ಅರಿತಿದ್ದೇವೆ ಎನ್ನುವುದು ಮತ್ತೊಬ್ಬರ ಕ್ರತಿಯ ಮೂಲಕವೇ ಹೊರಬರಬೇಕು.ನಾವು ನಿತ್ಯ ಹಲವಾರು ಜನರನ್ನು ನೋಡುತ್ತೇವೆ.ಒಬ್ಬರು ಮತ್ತೊಬ್ಬರಿಗಿಂತ ಭಿನ್ನರು.ಒಂದಿಷ್ಟು ಜನ ತಮಗೆ ಅನ್ನಿಸಿದ್ದನ್ನು ಹೇಳಬಲ್ಲರು,ಮತ್ತೊಂದಷ್ಟು ಜನ ತಮ್ಮಲ್ಲೇ ಅನಿಸಿಕೆಯನ್ನು ಇಟ್ಟು ಕೊಳ್ಳುವವರು.ಇಂತಹ ವಿಭಿನ್ನತೆಗಳ ಮಧ್ಯವೇ ನಮ್ಮ ಬದುಕು ಸಾಗಬೇಕು.ಇಂತಹ ಸ್ಥಿತಿಯಲ್ಲಿ ಈ ಅರಿತುಕೊಳ್ಳುವುದು ಎನ್ನುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ.ಅನಿವಾರ್ಯ ಎನಿಸುತ್ತದೆ.

ಅರಿತು ಕೊಳ್ಳುವುದು ಎನ್ನುವುದಕ್ಕೆ ಅರ್ಥ ಹುಡುಕುವುದು ಸ್ವಲ್ಪ ಕಷ್ಟವೇ.ಕೆಲವೊಮ್ಮೆ ಅರಿವನ್ನೆ ಅರಿತುಕೊಳ್ಳಲು ನಾವು ಹೆಣಗಾಡುತ್ತೇವೆ.ಪ್ರತಿಯೊಬ್ಬನೂ ಅರಿವುದನ್ನು ತಮ್ಮ ಹತ್ತಿರದವರಿಂದ,ಅತ್ಮೀಯರಿಂದ ಒಂದಲ್ಲ ಒಂದು ರೀತಿಯಲ್ಲಿ ಬಯಸುತ್ತಾನೆ.ಛೇ ಅವರು ನನ್ನ ಅರ್ಥ ಮಾಡಿಕೊಳ್ಳುವುದೇ ಇಲ್ಲ ಎಂದು ಅಲವತ್ತು ಕೊಳ್ಳುತ್ತಾನೆ.ನಿಜ. ಸಂಪೂರ್ಣವಾಗಿ ನಾವು ಇನ್ನೊಬ್ಬರ ಮನಸನ್ನು ಅರಿಯಲು ಸಾಧ್ಯವಿಲ್ಲ.ಅದರಂತೆ ಅಲ್ಪವನ್ನಾದರೂ ಅರಿಯದೇ ಹೋಗಲೂ ಸಾಧ್ಯವಿಲ್ಲ.ಅದರ ಪ್ರಮಾಣ ಸಂಬಂಧದ ಅಳೆತೆ ಗೋಲಿನ ಮೇಲೆ ನಿರ್ಧಾರವಾಗುತ್ತದೆ. ಅರಿವುದನ್ನೇ ಮರೆತದ್ದರಿಂದ ಎಷ್ಟೊ ಸಂಬಂಧಗಳು ಹಳಸಿದ್ದನ್ನು,ಮುರಿದದ್ದನ್ನು ನಾವು ಕಾಣುತ್ತೇವೆ,ಕೇಳುತ್ತೇವೆ.ಅರಿತು ಕೊಳ್ಳುವುದು ಎನ್ನುವುದು ಒಂಥರ  Inbuilt Expectations. .ಇದು ಇರಲೇ ಬೇಕು. ಆದರೆ ಅತಿಯಾದರೇ ಅಮ್ರತವು ವಿಷವಂತೆ.ಎದುರಿಗಿರುವ ವ್ಯಕ್ತಿ ನಮ್ಮನ್ನೂ ಸಂಪೂರ್ಣವಾಗಿ ಅರಿಯಲಾರ ಎನ್ನುವ ಸತ್ಯದ ಅರಿವು ನಮಗಿರಬೇಕು.ಬಯಸುವುದು ಕೇವಲ ಕೋರಿಕೆಯಾಗಿರಬೇಕೆ ಹೊರತು ಹೇರುವಿಕೆ ಆಗಬಾರದು.ಪರಿಸ್ಥಿತಿ,ಕಾಲ,ಸಮಾಜ ಇವೆಲ್ಲದರ ಮಧ್ಯೆ ನಾವಿದ್ದಾಗ ನಮ್ಮತನದೊಂದಿಗೆ ಇತರರ ಮನಸ್ಸನ್ನೂ ನಾವು ಅರಿತಾಗ ಬದುಕು ಹಸನಾಗುವುದರಲ್ಲಿ ಸಂದೇಹವಿಲ್ಲ.ಇದೊಂದು ಉತ್ತರವಿಲ್ಲದ ಪ್ರಶ್ನೆಯೋ ಅಥವಾ ಉತ್ತರವನ್ನು ಅರಿತುಕೊಳ್ಳುವಲ್ಲಿ ನಾವು ಹೆಡ್ಡರೋ ಇದು ಇನ್ನೂ ನನ್ನಲ್ಲಿ ಪ್ರಶ್ನೆಯೆ.ಹೌದು ನಮ್ಮ ಎಷ್ಟೋ ಪ್ರಶ್ನೆಗಳಿಗೆ ನಮ್ಮಲ್ಲೇ ಉತ್ತರವಿಲ್ಲ.

ಇಷ್ಟು ಕಾಲ ಒಟ್ಟಿಗಿದ್ದೂ ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವಾ....??!!!!!

ಮತ್ತೊಮ್ಮೆ ಮತ್ತೊಂದು ಬರಹದೊಂದಿಗೆ ವಾಪಸ್ಸಾಗುತ್ತೇನೆ.

16 comments:

ವಾಣಿ..

ನಮ್ಮ ಹಿರಿಯರು ಹೇಳುತ್ತಾರೆ ನಿರೀಕ್ಷೆಯನ್ನು ಇಟ್ಟುಕೊಳ್ಳದ ಸಂಬಂಧಗಳು ಬಲು ಕಾಲ ಬಾಳುತ್ತವೆ..
ಸಂಬಂಧಗಳಲ್ಲಿ ನಿರಿಕ್ಷೆಯೆ ಇರದಿದ್ದಲ್ಲಿ ಅದು ಒಂಥರಾ "ವೈರಾಗ್ಯ" ತಾನೆ?

ತುಂಬಾ ಉತ್ತಮವಾದ ಲೇಖನ

ಅಭಿನಂದನೆಗಳು..

 

ತುಂಬಾ ಚೆನ್ನಾಗಿ ಬರದ್ದೆ... ಇಷ್ಟವಾಯ್ತು. ಆತ್ಮೀಯರ ಸಬಲತೆ ಹಾಗೂ ದೌರ್ಬಲ್ಯ ಎರಡೂ ಅರಿತರೆ ಅವರೊಡನೆ ಬಾಂಧವ್ಯ ಮತ್ತಷ್ಟು ಬಿಗಿಯಾಗುವುದು ಎನ್ನುತ್ತಾರೆ. ಅದು ತಕ್ಕಮಟ್ಟಿಗೆ ನಿಜ ಕೂಡ. ಆದರೆ ಒಮ್ಮೊಮ್ಮೆ ನಮ್ಮ ದೌರ್ಬಲ್ಯವು ಇತರರಿಗೆ ಅರಿವಾದರೆ ಅಪಾಯವೂ ತಪ್ಪಿದ್ದಲ್ಲ. ಸಬಲತೆ ಸದಾ ಗೋಚರಿಸುವಂತಿದ್ದು.. ದೌರ್ಬಲ್ಯದ ಅರಿವು ಅರಿವಾಗದಿದ್ದರೆ ಆದಷ್ಟು ಒಳ್ಳೆಯದೇ. ನಮ್ಮ ನಮ್ಮ ದೌರ್ಬಲ್ಯ ನಮ್ಮೊಳಗೇ ನಮ್ಮರಿವಿಗೆ ಮಾತ್ರ ನಿಲುಕಿದ್ದರೆ ಸಾಕು. :)

 

ತುಂಬಾ ಚೆನ್ನಾಗಿದೆ ನಿಮ್ಮ ಬರಹ, ನನಗೆ ಈ ಹಾಡಿನ ಸಾಲುಗಳು ತುಂಬಾನೇ ಇಷ್ಟ... ಯಾವುದೇ ಸಂಬಂಧಗಳಲ್ಲಿ ಒಬ್ಬರನ್ನೊಬ್ಬರು ಪೂರ್ಣಪ್ರಮಾಣದಲ್ಲಿ ಅರಿತುಕೊಳ್ಳುವುದು ಕಷ್ಟದ ಕೆಲಸವೇ ಸರಿ.

 

Vani,

Good one. The expressions are very deep and true.

 

ನನ್ನ ಇಷ್ಟದ ಹಾಡು... ಇದು ತುಂಬಾ ತರ್ಕಕ್ಕೆ ಇಡು ಮಾಡುತ್ತದೆ... ನಮ್ಮ ಅಳತೆಗೋಲು ನಮ್ಮ ನೀರಿಕ್ಷೆಗಳ ಮೇಲೆ ನಿರ್ಧರಿತವಗುವದರಿಂದ ಯಾವದೇ ಮಾಪನ ನಮ್ಮದಾಗುತ್ತದೆ ಹೊರತು ಸಾರ್ವತ್ರಿಕ ಸತ್ಯವಾಗದು.. ಲೋಕೋ ಭಿನ್ನರುಚಿ.. ಹಾಗೆ ಅಳತೆಗೋಲು.. ಅದರಂತೆ ಒಬ್ಬಬ್ಬರ ಮಾಪನ ಒಂದರ ಮೇಲೆ ಭಿನ್ನ...
ಚೆಂದದ ಲೇಖನ.

 

ಇಷ್ಟು ಕಾಲ ಒಟ್ಟಿಗಿದ್ದೂ ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವಾ....?? nice line:) good write up:)keep it up.

 

Vani,
nija, naavu aritante daddaraagutteve, tilidante sannavaraagutteve. ariyalu prayatnisidante jnaanada mahaa saagarada bindu aagutteve,
adbhuta baraha

 

'ಶ್ರೀ'ಮಾನ್ಯರೇ ,

ಮೇರು ಚಿಂತನೆಗೆ ಹಚ್ಚುವ ಪ್ರಬುದ್ಧ ಲೇಖನ..ಉನ್ನತ ಆಲೋಚನಾ ಲಹರಿ! ನಿಮ್ಮ ಅನನ್ಯ ಛಾಪು ಮತ್ತೆ ಕಾಣಿಸುತ್ತಿದೆ..ಇದು ಖುಷಿಯ ವಿಚಾರ :)

ನಿಮ್ಮ ವಾದ ನಿಜ..ಅರಿವು, ನಿರೀಕ್ಷೆ ಎರಡೂ ಅತ್ಯಗತ್ಯ. ಇತರರನ್ನು ಅರಿತಾಗಲೇ, ಅವರಿಂದ ನಾವು ಯಾವುದನ್ನು, ಎಷ್ಟು ನಿರೀಕ್ಷಿಸಬೇಕು ಎಂಬುದು ಸ್ಪಷ್ಟವಾಗುತ್ತದೆ..
ನಿರೀಕ್ಷೆ ಇದ್ದಾಗಲೇ ನಾವು ಅವರನ್ನು ಇನ್ನೂ ಚೆನ್ನಾಗಿ ಅರಿಯುತ್ತೇವೆ..
ಹಲವು ಬಾರಿ ನಿರೀಕ್ಷೆಗಳನ್ನು ಪೂರೈಸಲು ಮನುಷ್ಯ ಬದಲಾಗುತ್ತಾನೆ, ಕೆಲವು ಬಾರಿ ಆದರ್ಶಗಳು ಬಲಿಯಾಗುತ್ತವೆ..
ಅವನು ಪರಿಸ್ಥಿತಿಯ ಕೈಗೊಂಬೆ..ಯಾರ ಮನಸ್ಸನ್ನು ನೋಯಿಸದೆ ಹಾಗು ತನ್ನ ಮನಸ್ಸಾಕ್ಷಿಗೆ ಪೆಟ್ಟಾಗದಂತೆ ಬದಲಾಗುವುದು ಒಳಿತು..
ಅಂತರ್ಮುಖಿಯಾಗುವುದರಿಂದ, ಇತರರ ಅಭಿಪ್ರಾಯಗಳನ್ನು ಗೌರವಿಸುವುದರಿಂದ ಅರಿವು ಹೆಚ್ಚುತ್ತದೆ...ಇದು ನಿರಂತರ ಕಾರ್ಯ ಎಂಬುದು ನನ್ನ ಭಾವನೆ..

ಅರಿವಿನ ವ್ಯಾಖ್ಯಾನ ತುಂಬಾ ಹಿಡಿಸಿತು...ಹೀಗೆ ಬರೆಯುತ್ತಿರಿ..

 

ಲೇಖನದ ಮೊದಲ ಸಾಲು ಬಹಳ ಹಿಡಿಸಿತು.. ನಿಜ.. ಇನ್ನೂಬ್ಬರನ್ನು ಅರ್ಥ ಮಾಡಿಕೊಳ್ಳುವುದು, ಇನ್ನೊಬ್ಬರು ನಮ್ಮನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದು ಬಹಳ ಮುಖ್ಯ!

 

ನಿಮ್ಮ ಬರಹ ಮತ್ತೆ ಮತ್ತೆ ಓದಿಸುತ್ತೆ... ಬರಿತಿರಿ....

 

@ ಪ್ರಕಾಶಣ್ಣ: ಹೌದು..ಸಂಬಂಧದಲ್ಲಿ ನೀರಿಕ್ಷೆಯೇ ಇಲ್ಲದಿದ್ದರೆ ಅದಕ್ಕೆ ಬೆಲೆಯೇ ಇಲ್ಲ.

@ತೇಜಕ್ಕ: ಧನ್ಯವಾದಗಳು..

@ ಮನಸು: ಧನ್ಯವಾದಗಳು.ಅರಿತು ಕೊಳ್ಳುವ ಪ್ರಯತ್ನವಾದರೂ ಇರಲಿ.

@ಸಂತೋಷ್: ಥ್ಯಾಂಕ್ಸ್.

@ಸೀತಾರಾಮ ಕೆ.: ಹೌದು ನೀರಿಕ್ಷೆ ಎನ್ನುವುದು ಸಂಬಂಧಗಳ ಅಳತೆ ಗೋಲಿನ ಮೇಲೆ ನಿರ್ಧಾರವಾಗುತ್ತದೆ.

@ಕಾಂತೇಶ್ : ಧನ್ಯವಾದಗಳು.ಬರುತ್ತಿರಿ.

@ಗುರು ಅಣ್ಣ: ಥ್ಯಾಂಕ್ಸ್, ಅಭಿಪ್ರಾಯ ತಿಳಿಸುತ್ತಿರು.

@nsru: ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬರುತ್ತಿರಿ.

@ಪ್ರದೀಪ್: ಧನ್ಯವಾದಗಳು..

@ಪ್ರವರ ಕೆ.ವಿ: ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಖಂಡಿತ ಬರೆಯುವ ಪ್ರಯತ್ನ ಮಾಡುತ್ತೇನೆ.

 

ಅರಿಯುವ ವಿಚಾರ ಚೆನ್ನಾಗಿದ್ದು. ಸದಾ ಮನಸಿನಲ್ಲಿ ನಡೆಯುವ ಪ್ರಕ್ರಿಯೆ ಇದು.

 

ಸಂಬಂದಗಳನ್ನು ಬೆಳೆಸಿಕೊಳ್ಳಲು ಮತ್ತು ಗಟ್ಟಿಯಾಗಿ ಉಳೀಸಿಕೊಳ್ಳಲು ಅರಿವು ತುಂಬ ಮುಖ್ಯ.
ತುಂಬ ಚೆನ್ನಾಗಿದೆ.ನಿಮಗೆ ಶುಭವಾಗಲಿ.

 

ಅರಿತುಕೊಳ್ಳುವುದು ಮತ್ತೆ ಸರಿಯಾಗಿ ಅರಿತುಕೊಳ್ಳುವುದಕ್ಕೆ ಸುಮಾರು ವ್ಯತ್ಯಾಸ ಇದೆ ಅಲ್ವಾ...... ನಮಗೆ ಗೊತ್ತೆ ಆಗೋಲ್ಲಾ ಅನ್ನೋದಲ್ಲಾ.... ಗೊತ್ತಾಗಿದ್ದು ಎಷ್ಟೋ ಸಲ ಸರಿಯಾಗಿರೋಲ್ಲಾ..... ಎಷ್ಟೆಷ್ಟೋ ವಿಷಯಗಳು ನಮ್ಮ ಪಕ್ಕದಲ್ಲೆ ಇದ್ದು ನಮ್ಮ ಪರಿಧಿಗೆ ಸಿಗದೇ ಹೋಗಿಬಿಡುತ್ತವೆ..... ಕೊನೆಗೊಂದು ದಿನ "ನಾನಂದ್ಕೊಂಡಿರ್ಲಿಲ್ಲ.." ಅನ್ನೋ ಮಾತು ನಮ್ ಬಾಯಿಂದ ಬರೋ ಹೊತ್ತಿಗೆ ಗೊತ್ತಾಗೋದು ಅಂದುಕೊಂಡಿದ್ದು ತಪ್ಪಾಗೋಯ್ತು ಅಂತಾ..... ಬೇರೊಬ್ಬರನ್ನು ನಾವು ಅರಿತುಕೊಳ್ಳಬೇಕು ಅಂತಾದರೆ ನಾವು ಅವರಾಗಿ ಯೋಚಿಸಬೇಕು......... ನಾವು ನಾವಾಗಿ ಯೋಚಿಸಿದರೆ ಸರಿಯಾಗಲೂ ಬಹುದು... ಆಗದೆಯೂ ಹೋಗಬಹುದು....

ನೀನಂದಿದ್ದು ಸರಿಯಾಗಿದೆ..... ಅಥಱಬದ್ಧ ಸಾಲುಗಳು...
ಚನ್ನಾಗಿದೆ.

 

ಚೆನ್ನಾಗಿದೆ........
http://komal1231.blogspot.com/

 

chennagide nimma baraha.nimma barahada shaily thumbaane ishta aaythu.

 

Post a Comment