[ಹೀಗೆ ಸಿಕ್ಕ ಚಿತ್ರ ನೋಡಿ ನಾನು ಬರೆದ ಸಾಲುಗಳಿವು...]
ಹಕ್ಕಿಯೊಂದು ಕಟ್ಟಿತ್ತು,ಹೊತ್ತು ತಂದ ಹುಲ್ಲಿನಲಿ
ಪುಟ್ಟದಾದ ಗೂಡೊಂದ ಬಲು ಜತನದಿಂದ.....
ಪ್ರತಿಯೊಂದು ಹುಲ್ಲಿಗೂ ಕನಸೆಂಬ ಉಸಿರಿತ್ತು
ನೆಯ್ದಿತ್ತು ಆಸೆಯಲಿ ,ತುಸು ಪ್ರೀತಿಯಿಂದ...
ತಿಳಿಯಿತು ಬದುಕೆಲ್ಲ,ಬೆಚ್ಚಗೆ ಹಸನಾಗುವುದಿಲ್ಲಿ
ಕಂಡೆಲ್ಲ ಕನಸುಗಳು ನನಸಾಗುವುದರಿಂದ.....
ಮಳೆ ಬರಲಿ,ಬಿಸಿಲಿರಲಿ,ಆಶ್ರಯವೊಂದೆನಗಿಹುದು
ಅಡಗುವೆನು ಗೂಡ ಮಡಿಲಲ್ಲಿ ನೆಮ್ಮದಿಯಿಂದ....
ಮರೆತಿತ್ತು ವಿಧಿಯನ್ನು,ಅದರ ಬಗೆ ಬೆರಿಹುದು
ಒಣಗಬಲ್ಲದು ಹುಲ್ಲಿನಂದದಿ ಕನಸು ಕಾಲನ ಕಣ್ಣಿನಿಂದ...
ತಾ ಕಟ್ಟಿದ ಗೂಡೇ ಕಣ್ಣಮುಂದೆ ಸೊರಗಿಹುದು
ಮತ್ತೆ ಆಶ್ರಯ ತನಗೆ ಕನಸಿನ ಮಾತಿಲ್ಲಿ....
ಜಾರುತಿಹ ಕಣ್ಣೀರ ಬಿಂದುವೆ ಕೇಳಿಲ್ಲಿ..
ಹೊರಗೆ ಇಣುಕುವ ಹಕ್ಕೂ ನೀ ಪಡೆದಿಲ್ಲ ಇಲ್ಲಿ.....


19 comments:
nice poem..
wow tumba chennagide kavana..touching
chanda aju....
-Anju
ವಾಹ್..!!!
ತುಂಬಾ ಚೆನ್ನಗಿದೆ. :)
Vanishri,
adbhuta kalpane mattu chandada kavite.
ವಾಣಿ ತುಂಬಾ ಚಂದ ಬರದ್ಯೇ......
ಹಾಗೇ photo ನೂ ಅದಕ್ಕೆ ತಕ್ಕಂತೆ ಸಕತ್ತಾಗಿದ್ದು.....
feeeeeeeeel...............
kavana tumba chennagide
super:)
chenda baradye, prati saalu artha poorna agiddu
ಚೆನ್ನಾಗಿದೆ.....!!!!
good one...
very nice poem..
Nimmava,
Raghu
ಕವನ ಚೆನ್ನಾಗಿದೆ 'ಶ್ರೀ'ಮಾನ್ಯರೆ..ಸಾಮಾನ್ಯವಾಗಿ ಹಕ್ಕಿಗಳು ಮರಿಗಳ ಪೋಷಣೆಗೆ ಗೂಡನ್ನು ಕಟ್ಟುತ್ತವೆ..ನೀವು ಹೇಳಿದಂತೆ ಆ ಗೂಡು ಕನಸುಗಳು ಅರಳಿ ನನಸಾಗುವ ತಾಣ, ನೆಮ್ಮದಿಯ ಸೂರು..ಇದು ಚೆನ್ನಾಗಿ ಪ್ರಕಟವಾಗಿದೆ..
ಈಗೀಗ ಮನುಷ್ಯನೇ ಹಕ್ಕಿಗಳ ಪಾಲಿಗೆ ವಿಧಿಯಾಗಿರುವುದು ದೊಡ್ಡ ವಿಪರ್ಯಾಸ!
*Kalakratiya Matu* cholo baredye...
hakkiya antaralada matu vaniya kavanodige.
'Kalakratiya Matu'cholo baredye..... Hakkiya antaralada matu vaniya kavanadondige.ya kavanadondige.
thumba chennagide
chendada kavana.
ಒಳ್ಳೆ ಕವನ :) ಖುಷಿಯಾಯ್ತು .
wow..superb very gud msg in ur words thanx madam
Post a Comment