ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಬದುಕೆಂದರೆ...??!!!

ಬದುಕು... ಮೂರಕ್ಷರದಲಿ ಅಡಗಿದೆ ಸುಖ,ದುಃಖ, ನೋವು,ನಲಿವು,ಹೋರಾಟ,ಬವಣೆ,ಆಸೆ,ನಿರಾಸೆ,ಮೋಹ,ಪಾಶ,ಪ್ರೀತಿ,ಕನಸು,ನನಸು ಎಲ್ಲಾ..ಅಕ್ಷರ ಮೂರೇ ಆದರು ಇದರ ಮರ್ಮವ ಬಲ್ಲರು ಯಾರು ಇಲ್ಲ..ಇದೊಂದು ಸುಂದರ, ಆಳವಾದ ಸಮುದ್ರದ ಮೇಲಿನ ಯಾನ. ಕೆಲವೊಬ್ಬರಿಗೆ ಇದು ಸುಂದರ ಅಲೆಗಳನ್ನೇ ಹೊತ್ತು ತಂದರೆ, ಇನ್ನೊಬ್ಬರಿಗೆ ದಾಟಲಾರದ ಸುಳಿಯ ಭಯಂಕರ ಕಡಲು..ಇದೊಂದು ಸ್ವಯ೦ ಕ್ರತ ಪಾಠಶಾಲೆ..ಇಲ್ಲಿ ವಿಧಿಯೇ ಗುರು.ಅನುಭವವೇ ಪಾಠ.ಆಯಸ್ಸಿನ ಪ್ರತಿಯೊಂದು ವರ್ಷಗಳು ಬೆಳವಣಿಗೆಯ,ಜ್ಞಾನದ ಇಯತ್ತೆಗಳು..ಇಲ್ಲಿ ಸೋತು ಫ್ಹೇಲ್ ಆಗುವ, ಗೆದ್ದು ಪಾಸಾಗುವ ಪರಿಯು ಇದೆ.ನಮ್ಮ ಫಲಿತಾಂಶಕ್ಕೆ ನಾವೇ ಕಾರಣರು.ನಮ್ಮ ಪ್ರಗತಿಗೆ ನಾವೇ ರೂವಾರಿಗಳು..ಬದುಕಿನ ಬಗ್ಗೆ ಬರೆಯಲು ನಾನಿನ್ನು ಚಿಕ್ಕವಳು...ಇನ್ನು ಇದರ ಉದ್ದಗಲವನ್ನು ಅಳೆಯುತ್ತಿರುವವಳು..ಆದರೆ ಬದುಕು ಎಂದರೇ, ಹೀಗೆಯೇ ಇದ್ದರೇ ಚೆನ್ನ ಎಂದು ತುಂಬಾ ಪುಸ್ತಕದಲ್ಲಿ ಓದಿದ್ದೇನೆ..ಹಲವರಿಂದ ಕೇಳಿದ್ದೇನೆ...ಕೆಲವೊಬ್ಬರು ಬದುಕನ್ನು ದೂರದ ಯಾನಕ್ಕೆ ಹೋಲಿಸಿದರೆ, ಮತ್ತೊಬ್ಬರು ಅಗೆಯುವ ಭೂಮಿಗೆ ಹೋಲಿಸುತ್ತಾರೆ..ದೂರದ ಯಾನದಲ್ಲಿ, ಮಾಡುವ ಪಯಣದಲ್ಲಿ ಸಿಗುವ ಹಲವಾರು ನಿಲ್ದಾಣಗಳ ಸಂಗಮವೇ ಬದುಕೆಂದರೆ, ಅಗೆಯುತ್ತ ಹೋದಂತೆ ಕಲ್ಪಿಸಿಕೊಳ್ಳಲಾಗದ ಆಶ್ಚರ್ಯ,ತಿರುವು ಗಳ ಸಂತೆ ಈ ಜೀವನ.ಇಲ್ಲಿ ಯಾರು ಶಾಶ್ವತವಲ್ಲ,ಯಾವದು ಊಹೆಗೆ ನಿಲುಕಿದ್ದಲ್ಲ.ಪ್ರಯತ್ನ ಮಾತ್ರ ಪಡೆಯಲು,ಉಳಿವಿಗಾಗಿ ಹೋರಾಡಲು ನಿರಂತರ.ಈ ಕಟ್ಟಡದ ಅಡಿಪಾಯದಿಂದ ಹಿಡಿದು ಇದರ ಭವಿಷತ್ತಿನ ಮಹಡಿಯ ನಿರ್ಮಾಣದ ತುದಿಯವರೆಗಿನ ಶಿಲ್ಪಿಗಳು ಅವರವರೆ.ಇಲ್ಲಿ ಸಮಯಕ್ಕಾಗಿ ಪರದಾಟ,ಸ್ವಾರ್ಥಕ್ಕಾಗಿ ಹೊಡೆದಾಟ,ತಮ್ಮದೆನ್ನುವುದಕ್ಕೆ ಜಗ್ಗಾಟ,ತಮ್ಮ ಕಾಯಕದ ಫಲ ಅನುಭವಿಸಲು ಒದ್ದಾಟ,ತಮ್ಮ ಇರುವಿಕೆಯ ಹಂಗಿಗಾಗಿ ಕಸಿದು ಕೊಳ್ಳುವ ಇನ್ನೊಬ್ಬರ ಊಟ,ಕೊಂದಾದರು ಸರಿಯೇ ತಾನು ಬದುಕ ಬೇಕೆಂಬ ಹಠ ಹೀಗೆ ವಿಧಿಯ ದೊಂಬರಾಟದ ಪಾತ್ರಧಾರಿಗಳು ನಾವು.  

ನನ್ನ ಸುತ್ತಮುತ್ತಲಿನ ಕೆಲವೊಂದಿಷ್ಟು ಜನರ ಬಗ್ಗೆ ,ಅವರ ಮಾತಿನ ಬಗ್ಗೆ ಆಶ್ಚರ್ಯವಾಗುತ್ತದೆ ನನಗೆ.ನಾನು ನನ್ನ ಅನುಭವದಲ್ಲಿ ನೋಡಿರುವದು ನನ್ನ ಒರಿಗೆಯವರನ್ನು,ನನ್ನ ಜೀವನ ಶೈಲಿಯಲ್ಲೇ ಇರುವವರನ್ನು..ಇಲ್ಲಿ ಸಮಯವಿಲ್ಲ,ಒಂದು ಆತ್ಮೀಯತೆಯ ಭಾವವಿಲ್ಲ.ಬರಿ ದುಡ್ಡು,ದುಡ್ಡು.[ನಾನು ಯಾರೊಬ್ಬರ ಬಗ್ಗೆ ಹೇಳುತ್ತಿಲ್ಲ.ನನ್ನ ಉದ್ಯೋಗದಲ್ಲೇ ಇರುವವರ ಸಾಮಾನ್ಯ ಲಕ್ಷಣದ ಬಗ್ಗೆ ಅಷ್ಟೇ.ಇಲ್ಲೂ ಗೆದ್ದವರಿದ್ದಾರೆ.ಹೊರತಾದವರಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ].Dude i don't have time man! Only Tension. I cant complete it, I cant bear this tension.I am waiting for weekend.I want to get out from this.You are lucky da (ಬೇರೆ domain,ಕ್ಷೇತ್ರ ದಲ್ಲಿರುವವರನ್ನು ನೋಡಿ)ಎನ್ನುವುದು ಕೆಲವೊಂದಿಷ್ಟಾದರೆ, Which mall is for this weekend?,I am waiting for the month salary, Credit card is there Know? Don't worry ಹೀಗೆ ಇದು ನಾನು ಕೇಳಿದ್ದು,ನೋಡಿದ್ದು.ಇದೆಲ್ಲ ಬಯಸಿದ್ದು,ಪಡೆದಿದ್ದು ನಮ್ಮ ಇಚ್ಹೆಯಿಂದಲೇ ತಾನೇ.ಮತ್ತೇಕೆ ವ್ಯಥಾ ಚಿಂತೆ.ಕಾಲಹರಣದ ಕನವರಿಕೆ.ಇರುವುದೆಲ್ಲವ ಬಿಟ್ಟು ಜೀವ ಇನ್ಯಾವದಕ್ಕೋ ಜೀವ ತುಡಿಯುವುದು ಏಕೋ? ಈ ಸಮಯದಲ್ಲಿ ನಾನು ಓದಿದ ಒಂದು ಬರಹ ನೆನಪಾಗುತ್ತಿದೆ..

ಒಂದು ಬಾರಿ ಒಳ್ಳೆಯ ಹುದ್ದೆ ಸೇರಿ, ಜೀವನ ನಡೆಸುತ್ತಿರುವ ಗೆಳೆಯರೆಲ್ಲ ತಮ್ಮ ಗುರುಗಳನ್ನು ಭೇಟಿಯಾದರು.ಮಾತನಾಡುತ್ತ,ತಮ್ಮ ಸ್ಥಾನ ಮಾನ,ತಮ್ಮ ಕೆಲಸ, ತಾವು ಅನುಭವಿಸುತ್ತಿರುವ ಒತ್ತಡ,ಸಮಯದ ಅಭಾವ ಹೀಗೆ ತಮ್ಮ ಕಷ್ಟ,ಸುಖ ವನ್ನು ತಮ್ಮ ನೆಚ್ಚಿನ ಗುರುಗಳ ಮುಂದೆ ಹಂಚಿಕೊಳ್ಳತೊಡಗಿದರು.ಮಾತಿನ ಮಧ್ಯ  ಗುರುಗಳು ಕುಡಿಯಲು ಕಾಫಿಯನ್ನು,ಮತ್ತು ಬೆಲೆಬಾಳುವ ಹಾಗು ಸಾಮಾನ್ಯ ಕಪ್ ಸಾಸರ್,ಗಳನ್ನೂತಂದಿತ್ತರು. ತಮ್ಮ ಶಿಷ್ಯರಿಗೆ ಕಾಫಿ ತೆಗೆದುಕೊಳ್ಳಲು ಹೇಳಿ ನೋಡುತ್ತಾ ಕುಳಿತರು.ಎಲ್ಲರೂ ಕಾಫಿಯನ್ನು ಬೆಲೆಬಾಳುವ ಕಪ್ ಸಾಸರ್ ಗಲ್ಲಿ ತೆಗೆದು ಕೊಂಡರು.ಮತ್ತೆ ತಮ್ಮ ಮಾತುಕತೆಯನ್ನು ಮುಂದುವರೆಸಿದರು.ಇದನ್ನು ಗಮನಿಸುತ್ತಿದ್ದ ಗುರುಗಳು ಶಿಷ್ಯರನ್ನು ಕುರಿತು "ನಿಮ್ಮೆಲ್ಲ ಸಮಸ್ಯೆಗಳು ಏನೆಂದು ನನಗೆ ಈಗ ಅರಿವಾಯಿತು.ನಿಮಗೆ ನಾನು ಕಾಫಿ ತೆಗೆದುಕೊಳಲು ಹೇಳಿದಾಗ ನೀವು ಬೆಲೆಬಾಳುವ ಕಪ್ ತೆಗೆದು ಕೊಂಡಿರೆ ಹೊರತು ಸಾಮಾನ್ಯವಾದುದನ್ನು ನಿರ್ಲಕ್ಷಿಸಿದಿರಿ.ನಿಮ್ಮ ಅರಿವಲ್ಲಿ ಕೊರತೆ ಇರುವುದು ಇಲ್ಲೇ!.ನೀವು ಕಪ್ ಗೆ ಬೆಲೆಕೊಟ್ಟಿರೆ ಹೊರತು ಕುಡಿಯುವ ಕಾಫಿಗಲ್ಲ.ಕಪ್ ಎನ್ನುವುದು ಕಾಫಿಯನ್ನು ಹಿಡಿದಿಟ್ಟು ಕೊಳ್ಳುವ ಸಾಧನವೇ ಹೊರತು ಮತ್ತೇನು ಅಲ್ಲ.ಇಲ್ಲಿ ಪ್ರಾಮುಖ್ಯತೆ ಇರುವುದು ಕುಡಿಯುವ ಕಾಫಿಗೆ ಹೊರತು ಕಪ್ ಗಲ್ಲ.ಜೀವನವು ಇಷ್ಟೇ.ಇಲ್ಲಿ ಯಾವುದಕ್ಕೆ ಬೆಲೆ, ಯಾವುದಕ್ಕಲ್ಲ ಎನ್ನುವುದು ನಿಮಗೆ ತಿಳಿದಿದ್ದರೆ ನಿಮಗೆ ಈ ಸಮಸ್ಯೆ ಇರುತ್ತಿರಲಿಲ್ಲ.ಬೆಡಗಿನ ಬದುಕಿಗಿಂತ ಮಾನವತೆಯ ಮೌಲ್ಯ ದೊಡ್ಡದು" ಎಂದರು.

ಎಂತಹ ಅದ್ಭುತವಾದ ಮಾತುಗಳು.ಹೌದು ನಮ್ಮ ಗೊಣಗಾಟಕ್ಕೆ ನಾವೇ ಹೊಣೆ.ಫಲವು ಸಿಹಿಯೋ,ಕಹಿಯೋ ಅದಕ್ಕೆ ನೀರೆರೆದವರು ನಾವೇ.ಒಳ್ಳೆಯದೋ,ಕೆಟ್ಟದ್ದೋ ಅದು ನಮ್ಮದೇ.ಅದನ್ನು ನಾವು ಸ್ವಾಗತಿಸಲೇ ಬೇಕು.ಇರುವುದರಲ್ಲೇ ನೆಮ್ಮದಿ,ಸಾರ್ಥಕತೆಯನ್ನು ಹುಡುಕ ಬೇಕು.ಒಬ್ಬ ಎಷ್ಟು ವರ್ಷ ಬದುಕಿದ ಎಂಬುದು ಇಲ್ಲಿ ಮುಖ್ಯವಲ್ಲ.ಹೇಗೆ ಬದುಕಿದ ಎನ್ನುವುದೇ ಮಾನದಂಡವಾಗುತ್ತದೆ.ಮೂರು ದಿನದ ಬಾಳಾದರೂ ನೂರು ಮಂದಿ ನೆನೆಯುವಂತೆ ಬದುಕಿದ್ದರೆ ಅದು ಸಾರ್ಥಕ.ಪ್ರೀತಿ,ಕ್ರತಜ್ನತೆ,ಸಹಾಯ,ಅನುಕಂಪ,ಮಿಡಿಯುವ ಮನಸ್ಸು ಇಲ್ಲಿ  ಗೆಲ್ಲುತ್ತದೆಯೇ  ಹೊರತು ದ್ವೇಷ,ಅಸೂಯೆ,ಸುಲಿಗೆ ಅನಾಚಾರಕ್ಕೆ ಇಲ್ಲಿ ನೆಲೆಯಿಲ್ಲ.ರೂವಾರಿಯ ಕೈಯಲ್ಲಿ ಅಡಗಿದೆ ಕಟ್ಟಡದ ಸುಂದರತೆ. ಬೆಲೆಕೊಡುವ ಮನಸಲ್ಲಿ ಅಡಗಿದೆ ಬದುಕಿನ ಭಾಂದವ್ಯತೆ.ಪ್ರತಿಯೊಬ್ಬರಲ್ಲೂ ಬೆಳೆಯಲಿ ವೈಚಾರಿಕತೆ, ಮೂಡಲಿ ಎಲ್ಲರಲು ಸಮರಸದ ಸಾಮ್ಯತೆ ಎನ್ನುತ್ತಾ ಮತ್ತೊಮ್ಮೆ ಆಶಿಸುತ್ತೇನೆ.ಗೊತ್ತಿರಲಿ ನಿಮಗೆ ಇಲ್ಲಿ ನಿಮ್ಮ ಗಮನ ಇರಬೇಕಾಗಿದ್ದು ಕುಡಿಯ ಬೇಕಾದ ಕಫಿಗೋ?? ಇಲ್ಲ ಕಪ್ ಸಾಸರ್ ಗೋ ??  ಮತ್ತೊಮ್ಮೆ ಮಗದೊಂದು ಬರಹದೊಂದಿಗೆ ವಾಪಾಸ್ಸಾಗುತ್ತೇನೆ.......


ಸರ್ವರಿಗೂ ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು..
ಎಲ್ಲೂ ಬೆಲ್ಲದ ಪರಿ,ನಿಮ್ಮಲ್ಲಿ ಒಳ್ಳೇ ಮಾತುಗಳನ್ನು ಮೂಡಿಸಲಿ... 

23 comments:

ಒಳ್ಳೆಯ ಬರಹ, ಹಾಗೇ ಈಕನಸಿನಲ್ಲಿ ಪ್ರಕಟವಾದ ಕವನಕ್ಕೂ ಕಂಗ್ರಾಟ್ಸ್..

 

ಕೆಲವೊಬ್ಬರಿಗೆ ಇದು ಸುಂದರ ಅಲೆಗಳನ್ನೇ ಹೊತ್ತು ತಂದರೆ,
ಇನ್ನೊಬ್ಬರಿಗೆ ದಾಟಲಾರದ ಸುಳಿಯ ಭಯಂಕರ ಕಡಲು

ಜೀವನದ ಬಗ್ಗೆ ಚನ್ನಾಗಿ ಬರೆದಿದ್ದೀರಿ.............

 

ಬದುಕಿನ ಬಗ್ಗೆ ಸು೦ದರವಾಗಿ ಬರೆದಿದ್ದೀರಿ.ಸ೦ಕ್ರಮಣ ಸ೦ತ್ರುಪ್ತಿ ತರಲಿ..ಹೊಸ ನಡೆ ನಿಮ್ಮದಾಗಲಿ..
ಎಲ್ಲರಿಗೂ ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು.

 

My observation is the mad rush in people's mind...ability of listening,reviewing is a forgotten art...hence no reflection :(
Anyways, Sankranthiya haardhika shubhashayagalu

 

oLLeya baraha..
illi ellarigu, coffee ginta cup ge mahatva koDuttaare...

chennaagide baraha..

 

ಒಳ್ಳೆಯ ಬರಹ.ಸಂಕ್ರಾಂತಿಯ ಶುಭಾಶಯಗಳು.

 

ಬದುಕು ಸಂಕೀರ್ಣವಾಗಿದೆ. ಹಣ ಅದರ ಅವಿಭಾಜ್ಯ ಅಂಗ...! ಆದರೆ ನಾವು ಅದರ ಹಿಂದೆ ಹೋದರೆ ಬದುಕಿನ ಸುಂದರ ಘಳಿಗೆಗಳಿಂದ ವಂಚಿತರಾಗುತ್ತೇವೆ.

ನಿಮ್ಮ ಬರಹ ಅರ್ಥಪೂರ್ಣವಾಗಿದೆ. ಸಂಕ್ರಾಂತಿ ನಿಮಗೆ ಶುಭವನ್ನು ತರಲಿ

 

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ.
neevu innu hecchu baragalanna post madi nimma baravanige bahala chennagide superb...

 

nice write up Vaani...ತುಂಬಾ ಚೆನ್ನಾಗಿದೆ. ಬದುಕಿನ ಬಗ್ಗೆ ಈಗಿನಿಂದಲೇ ಈ ರೀತಿ ಯೋಚಿಸುತ್ತಾ ಹೊದರೆ ಮುಂದಿನ ಬದುಕೂ ನಿಮ್ಮ ಜೊತೆ ಸಹನೀಯವಾಗಿರುತ್ತದೆ...:)

ತಡವಾಗಿಯಾದರೂ.... ಸಂಕ್ರಾಂತಿಯ ಶುಭಾಶಯಗಳು.

 

ನಿಜ, ಬದುಕು ನಾವು ಹೇಗೆ ರೂಪಿಸುತ್ತೇವೋ ಹಾಗೆ ಬಾಳುತ್ತೇವೆ. ಸುಂದರವಾದ ಬರಹ. ಒಳ್ಳೆಯ ಫೋಟೋ ಕೂಡಾ :)

 

ಇಲ್ಲೊಂದು ಭಾವವಿದೆ...ದೊಡ್ಡ ಜನರಾದಂತೆ ಮೌಲ್ಯಕ್ಕೆ ಬೆಲೆಯಿಲ್ಲ. ಇಲ್ಲಿರುವುದು ಅಂತಸ್ತು ಮತ್ತು ಹಣಕ್ಕೆ ಮಾತ್ರ ಸಿಗುತ್ತದೆ. ವಿಷಾದ ಭಾವ. ಈ ಬರಹದಲ್ಲಿ ನೀವು ನಿಮ್ಮ ಸುತ್ತ ಕಂಡ ಪರಿಸರದ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಿರಿ. ಕಾಲ ಬದಲಾಗುತ್ತದೆ. ಅಥವಾ ಅಂಥವರನ್ನು ಕಾಲವೇ ಬದಲಿಸುತ್ತದೆ. ನಾನು, ನಂದು ಎಂದು ಬಂದಾಗ ಇಂಥ ಸನ್ನಿವೇಶ ಎದುರಾಗುತ್ತದೆ. ಅದೇಲೆ ಇರಲಿ. ಲೇಖನ ಚೆನ್ನಾಗಿದೆ. ಬರೆಹದ ಶೈಲಯೂ ಚೆನ್ನಾಗಿದೆ.

 

Srinivasa Dk ಇವರು ಕಳಿಸಿರುವುದು..

ನಮಸ್ಕಾರರೀ,

ಲೇಖನ ತುಂಬಾ ಚೆನ್ನಾಗಿದೆ. ಅದಕ್ಕೆ ತಕ್ಕನಾದ ಫೋಟೋನು ಚೆನ್ನ.(ಫೋಟೋಗ್ರಫಿನು ಬರುತ್ತೆ ನಿಮಗೆ ಅನ್ನಿ) ಲೇಖನ ಚಿಕ್ಕದಗಿ ಚೊಕ್ಕವಾಗಿದೇ. ಒಂದೇ ಉಸಿರಿಗೆ ಓದ್ಬಿಡ ಬಹುದು. ನೋ ಬೋರಿಂಗ್. ಸಂಕ್ರಾಂತಿ ಹಬ್ಬಕ್ಕೆ ಒಳ್ಳೆ ಸಂದೇಶ ಕೊಟ್ಟಿದಿರಿ. "ಇಲ್ಲಿ ಸೋತು ಫ್ಹೇಲ್ ಆಗುವ, ಗೆದ್ದು ಪಾಸಾಗುವ ಪರಿಯು ಇದೆ" ಇದು ಒಂದು ಲೈನ್ ಅರ್ಥ ಹಾಗಲಿಲ್ಲ ವಾಣಿಶ್ರೀ. ಸೋಲು- ಫೈಲ್ ಎರಡು ಒಂದೇ ಅಲ್ವ. ಇದು "ಸೋತು ಗೆಲ್ಲುವ, ಗೆದ್ದು ಸೋಲುವ ಪರಿ" ಹಂತ ಇರ ಬೇಕಿತ್ತೆನೋ.

ಹೌದು, ನಿಮ್ಮ ಲೇಖನಗಳಿಗೆ ಯಾರು ವಿಮರ್ಶೆ ಮಾಡಲ್ವ! ಸುಮ್ನೆ ಕೇಳ್ತಿರೋದು ತಪ್ಪು ತಿಳಿಬೇಡಿ.

ನಿಮಗೆ ಒಳ್ಳೆ ಕಲೆ ಸಿದ್ದೀಸಿದೆ ರೀ ನಿಮಗೆ ವಾಣಿಶ್ರೀ. ಒಳ್ಳೆ ವಿಷಯಗಳನ್ನ ತುಂಭ ಚೆನ್ನಾಗಿ ಬರಿರೀ!

-DK

 

ಚಂದ ಬರದ್ದೆ ವಾಣಿ...:-)
ಕಥೆಯೂ ಸಖತ್ ಇಷ್ಟ ಆತು.ಕುಡಿಯದು ಕಾಪಿನೆ ಆದರೂ..ಲೋಟ ನೋಡುಗರನ್ನ ಮನ ಸೆಳೆಯುತ್ತವೆ. ಅದಕ್ಕೆ ಜನ ದುಡ್ಡಿನ ಹಿಂದೆ ಬಿದ್ದಿರದು.ಏನೋ cant say ....ಯಾವುದು ಸರಿ ಯಾವುದು ತಪ್ಪು ಅಂತ.Keep writing

 

chennagide title with sub title iddre badukina meragu hecchirtitteno.....

 

ಚಿಂತನೆಗೆ ಹಚ್ಹುವ ಬರಹ..ತುಂಬಾ ಇಷ್ಟವಾಯಿತು.ಹಾಗೇ ಕಾರ್ ಓಡ್ಸೋ ಪಾಪುವಿನ ಫೋಟೋ ಕೂಡ.

 

ವಾಣಿಶ್ರೀ,

"ಜಿಂದಗಿ ಬಡೀ ಹೋನಿ ಚಾಹಿಯೇ ಲಂಬೀ ನಹಿ"
ಹ ಹ..
'ಹ್ರಿಶಿಕೇಶ್ ಮುಖರ್ಜಿ' ಅವರ 'ಆನಂದ' ಸಿನಿಮದ ಸಾಲುಗಳು..
ಬರಹ ಇಷ್ಟ ಆಯ್ತು :)

 

iruvudellavannu bittu..
iraduderage tulivude jivana....

ondu uttama lekhana mattu chintane...

navella adambarada bhadukige maarihogiddivi.. hogta iddivi.. . duradrusta.. .

danyavadagalu..

 

ವಾಣಿ ಶ್ರೀ, ಅರ್ಥಬದ್ದಾದ ಲೇಖನ, ಒಳ್ಳೆಯ ಸಂದೇಶ. ನಾವು ಸಣ್ಣ ಸಣ್ಣ ವಿಷಯದಲ್ಲೂ ತೃಪ್ತಿಯನ್ನು ಹುಡುಕಬೇಕು. ಅಷ್ಟೇ ಅಲ್ಲ ಭಗವಂತ ಭವಿಷ್ಯವನ್ನು ಚೆನ್ನಾಗಿಯೇ ಇಟ್ಟಿದ್ದಾನೆ ಎಂಬ ನಂಬಿಕೆ ಮೇಲೆ ನಡೆಸಬೇಕು.

 

ಕಾಫಿ ಭಾರಿ ಛಲೋ ಇತ್ತು...!!

Thanks,
giri

 

ನಂಗೆ ಇನ್ನೂ ಒಂದ್ ಕಪ್ ಕಾಫೀ......

 

ಬಹಳ ಸೊಗಸಾಗಿದೆ ನಿಮ್ಮ ಬರಹ. ವಾಸ್ತವದ ಸಂಗತಿಯನ್ನು ನೀವು ಬರೆದಿರುವೆ ರೀತಿ ಮನಸಿಗೆ ಹಿಡಿಸಿತು. ಬಿಡುವಾದಾಗ ನನ್ನ ಬ್ಲಾಗಿಗೆ ಒಮ್ಮೆ ಬೇಟಿ ಕೊಡಿ :)
http://srivathsasharma.blogspot.com/

 

ಇಷ್ಟ ಪಟ್ಟು ಓದಿ ಪ್ರತಿಕ್ರಯಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ತುಂಬಾ ಜನ ನಾನು ಈ ಪೊಸ್ಟ್ ಹಾಕಿದಾಗ ನನ್ನ ವಯಸ್ಸನ್ನೂ ಮೀರಿ ಬರೆದಿದ್ದೇನೆ ಎಂದು ಬಯ್ದರು. ಆದರೆ ಒಳ್ಳೆಯ ವಿಚಾರ ಮಾಡಲು ವಯಸ್ಸಿನ ಪರಿಧಿಯಿಲ್ಲ.ಬರಹ ಎನ್ನುವುದು ಲೇಖಕನ ಆವತ್ತಿನ ಮನಸ್ಥಿತಿ ಅನ್ನು ಅವಲಂಬಿಸಿರುತ್ತದೆ.ಅದರಂತೆ ಅಕ್ಷರಗಳು ಮೂಡುತ್ತವೆ.ಬರಹ ಹಾಗಿದೆ ಎಂದ ಮಾತ್ರಕ್ಕೆ ಯವತ್ತೂ ಗಂಭೀರ ವಿಚಾರ ಮಾಡುತ್ತೇನೆ ಎಂದಲ್ಲ.ಆಲೋಚನೆ ಅಲ್ಲಿಯವರೆಗೂ ಹರಿಯಬಹುದು ಎಂದರ್ಥ.

 

Post a Comment