ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ನೀ ಹಿಂಗ ನೋಡ ಬ್ಯಾಡ ನನ್ನ!!!



ಇದು ನಾನು ತುಂಬಾ ದಿನದಿಂದ ನಿನ್ನ ಜೋಡಿ ಕೆಳಬೇಕೆಂದು ಕೊಂಡಿರುವ ಪ್ರಶ್ನೆ.ಮುಂಜಾನಿಎದ್ದು ತಯಾರಿಯಾಗಿ ಕೆಲಸಕ್ಕ ಬರೊ ಅವಸರದಾಗೂ ಗೊತ್ತಿಲ್ಲದ ನನ್ನ ಕಣ್ಣು ನಿನ್ನ ಮೇಲೆ ಬಿದ್ದಿರ್ತದ.ಯಾಕ ಅಂತ ಮಾತ್ರ ನನ್ನ ಕೇಳಬ್ಯಾಡ.ನನ್ನ ಜೋಡಿ ಉತ್ತರನೂ ಇಲ್ಲ. ಅದು ಹಂಗ.ಬದುಕಿನ್ಯಾಗ ಕೆಲವೊಂದಕ್ಕ ಕಾರಣ ಅಂತ ಇರೂದಿಲ್ಲ.ಸುಮ್ನ್ ಯಾವದೋ ಮನಸಿಗೆ ಬಂದು ಕೂತಿರ್ತದ.ತಲಿಗೆ ಹೊಳಿಯೊದರ ಒಳಗ ನಾವು ಅದರಲ್ಲಿ ಬಿದ್ದಾಗಿರ್ತದ.ನಾನು ನಿನ್ನ ಬಗ್ಗ ಆಸಕ್ತಿ ತೋರಿಸಿ ಬಿದ್ದಿದ್ದು ಹಿಂಗೆನ.ನಮ್ಮ ಬಸ್ಸಿನ ಯಾವ ಮೂಲೆಯಲ್ಲಿ ನಾನು ಕುಂತಿದ್ರೂ ನೀನು ನಿಲ್ಲೊ ಜಾಗ ಬರ್ತದ ನೋಡ ಆವಾಗ ಒಮ್ಮೆ ಕಣ್ಣು ನಿನ್ನ ಮೇಲೆ ಹಾದಿರ್ತದ.ಯಾಕ ನೀನು ನನ್ನ ಕಾಡ್ತಿಯ ಅಂತ ಮನಸ್ಸು ಕೇಳಿರ್ತದ.ಹಂಗಂತ ನೀನೆನು ನನ್ನ ಕಲ್ಪನೆಯಲ್ಲಿರುವ ನನ್ನವನಂತನೂ ಇಲ್ಲ.ಮತ್ತ ಮತ್ತ ನೋಡೋವಷ್ಟು ಚಂದನೂ ಇಲ್ಲ ಬಿಡ.

ಈ ಕೂತುಹಲ ನಂಗ ನೀನು ಬಂದು ನಿಲ್ಲಲು ಶುರುಮಾಡಿದಾಗಿನಿಂದ ನನ್ನ ತಲೆಯೊಳಗ ಇತ್ತ.ದಿನಾ ಒಂದೊಂದು ಚೊಲೊ ಅರಿವಿಯಲ್ಲಿ ಮಿಂಚತಾ ಇದ್ರ ನಾನ್ ಕಣ್ಣು ತೆಗೆಯೊದು ಆದ್ರು ಹೆಂಗ ಹೇಳು?!ಯಾರೂ ನಿನ್ನ ನೊಡ್ತಿದ್ರೊ ಇಲ್ಲೋ ನಾನ್ ಮಾತ್ರ ನಿನ್ನ ನೋಡೊದ್ ಬಿಟ್ಟಿರಲಿಲ್ಲ.ನನ್ ಕಣ್ಣಿಗ ನೀ ಕಾಣೊ ಮಟ ನನ್ನ ದ್ರಷ್ಟಿ ಇರ್ತಿದ್ದು ನಿನ್ನ ಮ್ಯಾಲ.ಎನೇ ಹೆಳ ನಿನ್ನ ಚಂದ ದಿನ ಹೊದಾಂಗ ಹುಣ್ಣಿಮೆ ಚಂದ್ರ ಬೆಳಿತಾನಲ್ಲ ಹಂಗ ಬೆಳಿತಾನೇ ಹೊಗ್ತಿದ.ಮೊದ ಮೊದಲು ನೀನಾರು,ಯಾಕ ನನ್ನ ನೊಡ್ತಿ ಅಂತ ಅನಿಸ್ತಿತ್ತು.ಒಮ್ಮೊಮ್ಮೆ ಬಸ್ಸಿನಿಂದ ಇಳಿದು ನಿನ್ನ ಕೂಡ ನಾನು ಕೇಳಿಯೇ ಬಿಡೊಣು ಅಂತ ಅನಿಸ್ತಿತ್ತು.ಅದ್ರ ನಿನ್ನ ಸುತ್ತ ಮುತ್ತ ಅಷ್ಟೋಂದು ಜನ ಇರೊದು ನೋಡಿ ನಂಗ ನಾಚಿಕೆಯಾಗಿ ಬೇಡ ಬಿಡು, ಮುಂದೆ ತಿಳಿದೇ ತಿಳಿತದ ಅಂತ ಸುಮ್ಮನಾಗಿದ್ದೆ ನಾನು ಗೊತ್ತೇನು?!.ಅದೂ ಅಲ್ದ ಈ ಹುಡುಗಿಗೆ ಯಾಕ ಇವನ ಮ್ಯಾಲ ಇಷ್ಟೊಂದು ಅಕ್ಕರೆ ಅಂತ ಒಡಾಡೊ ಜನ ನನ್ನ ನೋಡಿ ತಪ್ಪು ತಿಳಿದ್ರ ಅಂತ ಭಯ ಕೂಡ ಇತ್ತು.ಆದ್ರು ನನ್ನ ಗೆಳತಿ ಜೋಡಿ ನಿನ್ನ ಬಗ್ಗೆ ಪ್ರಶ್ನೆ ಕೇಳೊದು ಮಾತ್ರ ತಪ್ಪಿರಲಿಲ್ಲ.ಅವಳಿಗೂ ಎನು ಗೊತ್ತಿರ್ತದ ನಿನ್ನ ಬಗ್ಗೆ? ಪಾಪ ನಮ್ಮಿಬ್ಬರ ಕಲ್ಪನೆಗೂ ನೀನು ಸಿಕ್ಕಿರಲಿಲ್ಲ. ಎಲ್ಲರಂತೆ ನೀನು ಒಬ್ಬವ ಅಂತ ಒಪ್ಪಿಕೊಳ್ಳೊಕು ನಾನು ತಯಾರಿ ಇರಲಿಲ್ಲ.ದಿನಾ ನಾನು ಜಲದಿ ಬರಲಿ, ತಡಾ ಮಾಡಲಿ ನೀನು ನನ್ನ ಕಣ್ಣಿಗೆ ಬಿಳದೇ ಹೊಗ್ತಿರಲಿಲ್ಲ. ಕೆಲಸದ ಮಧ್ಯ ನಂಗ ನೀನು ನೆನಪಾಗಿದ್ದು ನೆನಪಿಲ್ಲ ಬಿಡು.ಮತ್ತ ಸಂಜಿ ಕೂಡ ನಾನು ಬರೋ ಮೊದ್ಲ ನೀನು ಅದೇ ದಾರಿಲಿ,ಅದೇ ಜಾಗದಲ್ಲಿ ನಂಗ ಕಾಯ್ತಿದ್ರ ಮತ್ತ ನನ್ನ ಕಳ್ಳ ನೋಟ ನಿನ್ನ ಮೇಲ.ಮತ್ತೆ ನನ್ನ ಬುದ್ದಿಯಲ್ಲಿ ಮತ್ತೆ ಶುರುವಾಗುತ್ತಿದ್ದ ತರ್ಕ.ನೀನಾರು?

ಕೊನೆಗೂ ನಿಂಗ ನನ್ನ ಮೇಲೆ ಕನಿಕರ ಬಂತು ಅಂತ ಕಾಣ್ತದ.ನಾನು ಕೇಳೋ ಮೊದಲ ನೀನು ನೀನಾರೆಂಬ ನನ್ನ ಪ್ರಶ್ನೆಗೆ ಉತ್ತರ ಹೇಳಿ ಬಿಟ್ಟಿದ್ದಿ.ನನ್ನ ಚಡಪಡಿಕೆಗೆ ಉತ್ತರ ಸಿಕ್ಕಿತ್ತ.ಅವತ್ತೊಂದು ದಿನ ಬೆಳಗ್ಗೆ ನಾನು ನಿನ್ನ ನೋಡುವಾಗ ಕೆಂಪು ಬಣ್ಣದ ಅಂಗಿಯಲ್ಲಿ ನಿಂತಿದ್ದಿ.ದಿನಾ ಕಾಯುವ ನನ್ನ ಕಣ್ಣುಗಳಲ್ಲಿ ಒಮ್ಮೆಲೆ ಖುಷಿ ತುಂಬಿತ್ತು.ನಿನ್ನೊಂದಿಗಿದ್ದವರು,ನಿನ್ನ ಸುತ್ತ ಮುತ್ತ ಸದಾ ಅವಸರದಿಂದ ಓಡಾಡುತ್ತ ಬೆವರ ಹರಿಸುತ್ತಿದ್ದವರು ನಿಂಗೊಂದು ಹೆಸರ ಕೊಟ್ಟಿದ್ದರು."ಬೆಂಗಳೂರ್ ಸೆಂಟ್ರಲ್" ಅಂತ.ನಾನು ಒಮ್ಮೆಲೆ ನನ್ನ ಗೆಳತಿಯ ಕಡೆ ತಿರುಗಿ ಕಣ್ಣು ಹೊಡೆದಿದ್ದೆ.ಅವಳು ನನ್ನ ಮನ ಬಲ್ಲವಳಂತೆ ತಲೆಯಾಡಿಸಿದ್ದಳು.ಆದರೂ ನಂಗ ನಿನ್ನ ಮೇಲೆ ನೀನು ನನ್ನ ಅಷ್ಟುದಿನ ಕಾಡಿಸಿದ್ದಕ್ಕ,ತಲೆಯಲ್ಲಿ ಕೊರೆಯುವ ಸಮಸ್ಯೆಯಾಗಿ ಉಳಿದಿದ್ದಕ್ಕ ಕೋಪ ಐತಿ.ಭಾಳ ದಿನ ಇಲ್ಲ ಬಿಡ.ಒಮ್ಮೆ ಬರಾಕ ಹತ್ತಿನಿ.ನಿನ್ನ ಸಮೀಪದಾಗ ಕಂಡು ಭೇಟಿ ಮಾಡ್ಕೊಂಡ ಹೋಗಾಕಿ.ಎನೇ ಹೇಳ ನೀನು ನನ್ನ ಹಂಗ ನೋಡ್ತಿದ್ದು ತಪ್ಪಲ್ವ????!!!!!!!!


( ಗಂಭೀರ ವಿಚಾರಗಳ ಬಗ್ಗೆ ಬರೆಯುವದನ್ನು ಬಿಟ್ಟು ಈ ಭಾರಿ ವಿಭಿನ್ನ ಲೇಖನ ವನ್ನು ನೀಡುವ ಪ್ರಯತ್ನ. ಓದುಗ ಮಿತ್ರರ ಕೋರಿಕೆಯ ಮೇಲೆ ಉತ್ತರ ಕರ್ನಾಟಕ ಭಾಷೆಯ ಉಪಯೋಗ ನನಗೆ ತಿಳಿದ ಮಟ್ಟಿಗೆ ಮಾಡಿದ್ದೇನೆ.ತಪ್ಪಿದ್ದರೆ ಕ್ಷಮಿಸಿ.ಈ ಲೇಖನ ಸರ್ಜಾಪುರ ರೋಡ್ ನಲ್ಲಿ ತಲೆ ಎತ್ತಿ ನಿಲ್ಲುತ್ತಿರುವ ಬೆಂಗಳೂರು ಸೆಂಟ್ರಲ್ ಬಗ್ಗೆ ಬರೆದಿದ್ದು..) 

28 comments:

ಬಾಳ ಭಾರಿ ಅದ ರಿ.....ತುಂಬಾ ಧನ್ಯವಾದಗಳು .....ಹಿಂಗೆ ಉತ್ತರ ಕರ್ನಾಟಕ ಶೈಲಿ ಅಲ್ಲಿ ಇನ್ನು ಬರಿರಿ....ಥ್ಯಾಂಕ್ಸ್ ಫಾರ್ ರೆಸ್ಪೊಂಡಿಂಗ್.....

 

I enjoyed the article but not the post script. This is the precise essence of 77th Kannada Sahitya Sammelana...." Maatanaduva shaili byare byare...bareyuva shaili yavatthu onde"...We should be Kannadigas first vs south/north/malenadu/gadinadu/karavali etc etc

 

ಹೇಯ್ ಮಸ್ತ್ ಇದ್ದು .. very curious and interesting.. keep writing!!

 

ye bhaal mansig bandaitri... hashi gvaadi myaal hall ogdaang ait bidriii..... hingaa mat bariri haangaara... baronri!

 

ಲೇ ಭಾಳ್ ಚಲೋ ಐತಿ ಬಿಡಲೇ, ನಂಗಂತೂ ಮನ್ಸಿಗ್ ಬಂತು... ಮತ್ತ ಯಾವಾಗ್ ಹೋಗೋಣು? ನಾನಂತು ತುದಿಗಾಲಲ್ ನಿತ್ತೇನಿ ನೋಡ.. :)

 

Oh neevu hingu bereeterenri... chalo aitri .. hanga matte central ge hog bandmele helrala enatu anta.. adru doubt aiti nange .. nodid cental no illa cental pakka nintavanno anta.. yaradren baraha mast kateeri nodrala matte...

hinga baritirri...

 

ಉತ್ತಮ ಪ್ರಯತ್ನ .. ನಂಗೆ ಈ ಭಾಷೆಯಲ್ಲಿ ಬರೆಯಲು ಅಷ್ಟು ಸರಿಯಾಗಿ ಬರದು. ಓದಿ ಖುಶಿಯಾಯ್ತು.

 

ಕೆಟ್ಟ್ ಚೊಲೋ ಬರದಿ ನೋಡ್ ..:) ಖುಷಿ ಆತವಾ ಓದಿ ...:)

 

ತುಂಬ ಚೆನ್ನಾಗಿದೆ ಅನ್ನುವ ಮಂಗಳೂರು ಶೈಲಿಯ ಉತ್ತರ !! ಈ ಶೈಲಿಯಲ್ಲಿ ನಮಗೆ ಓದಲು ಸಾಧ್ಯ , ಬರೆಯಲು ಆಗುವುದಿಲ್ಲ ಮಾರಾಯ್ರೆ :)

 

ಚನಾಗ್ ಬರ್ದೀಯೇ! ಇಷ್ಟ ಆತು. :-)

 

swalpu accent upayogiseeri...aadra prayatna andeeri chalo aathu..illa andra nam mandi chakkadi katkondu barovraa...matha...baradovra "maari" nodlikka....:) haha keep going...!

ananth

 

ಮೇಡಮ್,
ದಿವ್ಯ ಬಜ್‍ನಲ್ಲಿ ಹಾಕಿದ್ದು ನೋಡಿ ಇಲ್ಲಿ ಬಂದೆ. ತುಂಬಾ ಚೆನ್ನಾಗಿ ಹೊಸ ಶೈಲಿಯಲ್ಲಿ ಬರೆದಿದ್ದೀರಿ. ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.

 

tumba chennagi baradye
uttara karnatakada neeru cholo hidisiddu ninge
good article

 

ಹೇ ಶರಣ್ರೀ! ಭಾರಿ ಚಲೋ ಐತ್ರೀ ನಿಮ್ ಬರವಣಿಗಿ... ಹೀಂಗ ಆಗಾಗ ಬರೀತಿರ್ರಿಯಪ್ಪಾ ಬರೋಣ್ರೀ...

 

ಖುಶಿ ಆತ್ರೀ....

 

ಚೆನ್ನಾಗಿದೆ.. ಇಷ್ಟವಾಯ್ತು...

 

ಭಾಳ್ ಚಂದಾ ಬರ್ದಿದಿ ಬಿಡವಾ. ಖುಷೀ ಆತು ಓದಿ :)

 

ಭಾಳ ಛೊಲೋತ್ನಂಗ ಬರ್ದಿ ನೋಡವ್ವಾ......
ಓದಾಕತ್ರ ಬೆಂಗ್ಳೂರಿಗ್ ಹೋದ್ ಧಾರವಾಡಾಕೀನ ಬರ್ದಂಗನಿಸ್ತದ...
ಬ್ಲಾಗಲ್ಲಿ ಬೇರೆ ಬೇರೆ ರುಚಿ ಕಾಣ್ಸಾಕತ್ತಿ....
ಒಳ್ಳೆ ರುಚಿ ಬಂದದ.....

 

Le...barvanigi balh chend bandaiti....uttara karnatakadaga swalp dina iddadku sartakatu nodh...! Adroo katiolgina kutuhala....!? bhesh aiti .

 
This comment has been removed by the author.
 

ಬಾಳ್ ಛೊಲೋ ಬರ್ದಿ ಬಿಡ..ಮನ್ಸಿಗ್ ಬಂತ್ ನೋಡ

 

ಭಾಳ್ ಚೊಲೋ ಬರ್ದೀರ್ ಬಿಡ್ರಿ..ಓದಿ ಮಸ್ತ್ ಖುಶಿ ಆಗೇತ್ ನೋಡ್ರಿ ನನಗಾ..
ನೀವ್ ಬರ್ದ್ ಭಾಷ್ಯಾದಾಗ ಬರೀಲಿಕ್ ಬರ೦ಗಿಲ್ಲಾ.. ಓದಿದ್ ಧಾಟೀನಾಗ ಹೀ೦ಗಾ ಬರ್ದ್ ಬಿಟ್ಟೇ ..
ತೆಪ್ ಇದ್ರಾ ಬ್ಯಾಸ್ರ ಮಾಡಬ್ಯಾಡ್ರೀ.. ಮತ್ತ.

 

tumba chennagide lekhana haage bhaashe kooda ista aytu..

 

ನನ್ನ ಬರಹ ಓದಿ ಮೆಚ್ಚಿದ್ದಕ್ಕ ಎಲ್ಲಾರಿಗೂ ನಾನು ಶರಣರಿ ಯಪ್ಪಾ

 

Post a Comment