ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ನಲ್ಲೆ..

ಮುಂಜಾನೆಯ ಸೂರ್ಯನ ಕಿರಣಗಳು ಭುವಿಯ
ಬಂದು ಚುಂಬಿಸಿ ರಮಿಸುಂತೆ,
ನಲ್ಲೆಯ ಕೆನ್ನೆಗಿತ್ತ ಮುದ್ದಾದ ಮುತ್ತೊಂದು
ಇಬ್ಬನಿ ಕರಗುವ ಪರಿಯಲ್ಲಿ ಅವಳ
ಕೋಪವ ಕರಗಿಸಿತ್ತು......

ಬಿಸಿಲ ಝಳದಲ್ಲಿ ಕಾದು
ಬೇಯುವ ಧರೆಯಂತೆ,
ವಿರಹ ಬೇಗುದಿಯಲ್ಲಿ ಮನ ಬೆಂದಿತ್ತು....

ಬಿದ್ದ ಕಿರಣಗಳಿಗೆ ಸೋತು ಮೈದುಂಬಿ
ಅರಳುವ ಹೂವುಗಳ ಸಾಲೊಂದು,
ಅವಳಲ್ಲಿ ಬಯಕೆಯ,ಕೋರಿಕೆಯ
ಪರಿಮಳವ ಪಸರಿಸಿತ್ತು.....

ಬೆಳಗಿನ ಸೊಭಗಲ್ಲಿ ಹಾರುವ
ಹಕ್ಕಿಗಳ ಹಿಂಡೊಂದು,
ಅವಳ ಕನಸಿನ ಸಂತೆಯ
ಸಾಲನ್ನು ನೆನಪಿಸಿತ್ತು.....

ಪಡುವಣ ಬಾನಿನ ಅಂಚಿಗೆ
ಜಾರುತ್ತ ರವಿ ಸರಿದು ಚೆಲ್ಲುವ ಕೆಂಪಿನಂತೆ,
ಮುತ್ತಿನ ಮತ್ತಿಗೆ,ಅನುರಾಗದ ತುತ್ತಿಗೆ
ಅವಳ ಕೆನ್ನೆಯು ರಂಗೇರಿತ್ತು.....

ಬೆಳದಿಂಗಳ ರಾತ್ರಿ ತಂಪನ್ನು
ಹೊತ್ತು ಬಂದ ಚಂದಿರನ ಹೊಳಪಲ್ಲಿ,
ಇಳೆಯ ಚಂದ್ರಮುಖಿಯ ಹೊಂಬಣ್ಣದ
ಕಾಂತಿಯು ನಾಚಿ ನೀರಾಗಿ ಶರಣಾಗಿತ್ತು......

[ekanasu.com ನಲ್ಲಿ ಪ್ರಕಟಗೊಂಡ  ನನ್ನ ಮೊದಲ ಕವನ..
http://www.ekanasu.com/search/label/%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF]

11 comments:

he he chennagide...hakkiya hindu haagu kanasina santhe..comparison is good

 

Wow! Awesome!! ತುಂಬಾ ಮಧುರವಾಗಿದೆ.. ಆ ಪ್ರಕೃತಿಯ ಹೋಲಿಕೆಗಳು ಅದ್ಭುತವಾಗಿ ಮೂಡಿಬಂದಿದೆ..

 

sundaavagide...

prukrutiya jotege nalleya varnane sundaravaagide...

danyavadagalu...

 

nice one vaani :) ಹೋಲಿಕೆಗಳು ಸಹಜ ಸುಂದರ :)

 

mast one Vani...

ಬೆಳಗಿನ ಸೊಭಗಲ್ಲಿ ಹಾರುವ
ಹಕ್ಕಿಗಳ ಹಿಂಡೊಂದು,
ಅವಳ ಕನಸಿನ ಸಂತೆಯ
ಸಾಲನ್ನು ನೆನಪಿಸಿತ್ತು.....

tumba ista atu

 

ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು..ನಿಮ್ಮೆಲ್ಲರ ಪ್ರೊತ್ಸಾಹ ನಿರಂತರವಾಗಿರಲಿ...

 

sobhagu or sobagu?... kavite tumbaa chennagide.. hadi hareyadavara manadalli mane maadiruva naachikeyannu yathvathaagi heliddiri... keep it... up

 

ನಿರಂತರತೆಯನ್ನೇ ಹೇಳುವ ಕವನ ಚೆನ್ನಾಗಿದೆ ..

 

ekanasu.ಕಂ ನಲ್ಲಿ ನಿಮ್ಮ ಕವನ ಓದಿದ್ದೆ...ಇಷ್ಟ ಪಟ್ಟಿದ್ದೆ, ಆದರೆ ನಿಮ್ಮ ಬ್ಲಾಗ್ ಇರುವ ವಿಷಯ ತಿಳಿದಿರಲ್ಲಿಲ್ಲ... ಈಗಷ್ಟೇ ನಾನು ಹೊಸದಾಗಿ ಆರಂಬಿಸಿರುವ ಬ್ಲಾಗಿಗೆ ಸದಸ್ಯರಾಗಿ..,ಪ್ರೋತ್ಸಾಹ ನೀಡುತ್ತಿದ್ದಿರಿ,, ತುಂಬ ಧನ್ಯವಾದಗಳು... ಕವನ ದ ಬಗ್ಗೆ ಹೇಳಲು ಮಾತಿಲ್ಲ..ಬಹಳ ಚೆನ್ನಾಗಿದೆ...ಬರವಣಿಗೆ ನಿರಂತರವಾಗಿರಲಿ...
ಸಾದ್ಯವಾದರೆ, http:/kanasukangalathumbaa.blogspot.com ಇಲ್ಲಿಗೂ ಒಮ್ಮೆ ಹೋಗಿ ಬನ್ನಿ...
ಮತ್ತಷ್ಟು ಬರಹಗಳ ನೀರೀಕ್ಷೆಯೊಂದಿಗೆ...
ನಿಮ್ಮವಳೇ ಸುಷ್ಮಾ...

 

Nice one.... your topics and contents are soooper... all the best.... keep it up.

 

Post a Comment