| ವರುಷದ ತುದಿಯಲ್ಲಿ ತಿರುಗಿನೋಡಿದಾಗ.... |
ಹೌದು,ಕೊನೆಗೂ 2010 ಮುಗಿದೇ ಬಿಟ್ಟಿತು.ಮಾನವ ಜೀವನದ ನನ್ನ ಆಯಸ್ಸಿನ ಒಂದು ವರ್ಷ ನನ್ನ ಕೈ ಬಿಟ್ಟು ಜಾರಿತು.2009 ರ ಕೊನೆಯ ದಿನಗಳು.ನನ್ನ ಅತ್ಮೀಯರೆಲ್ಲ ಕೈಯಲ್ಲಿ ಸಂಬಳ ಹಿಡಿದು ನಿಂತಿದ್ದರು.ಕಾಲೇಜು ಜೀವನಕ್ಕೆ ವಿದಾಯ ಹೇಳುವಾಗ Highest Package ನ ಆಫರ್ ಕೈಯಲ್ಲಿ ಹಿಡಿದೂ call ಗಾಗಿ wait ಮಾಡ್ತಾ ಇದ್ದೆ..ನಮ್ಮ ಗ್ರಹಚಾರನೋ ಏನೋ ಎಲ್ಲಾ ಕಡೆಯ ದಾರಿಯು ಮುಚ್ಚಿ ಬಿಟ್ಟಿತ್ತು.ನಾನು ತುಂಬಾನೇ ಕುಗ್ಗಿ ಹೋಗಿದ್ದೆ.ಕೈ ಅಲ್ಲಿ ಮಾರ್ಕ್ಸ್ ಇದ್ದರೂ ಪ್ರಯೋಜನವಿರಲಿಲ್ಲ.ಸದಾ ಇತರರಿಗೆ ಆತ್ಮವಿಶ್ವಾಸದಲ್ಲಿ ಮಾದರಿಯಾಗಿದ್ದ ನಾನು ನನ್ನನ್ನೇ ಕಳೆದು ಕೊಂಡು ಬಿಟ್ಟಿದ್ದೆ.2010 ನನ್ನ ಪಾಲಿಗೆ ಒಳ್ಳೆಯದಾಗಿರಬೇಕೆಂದು ಬಯಸಿದ್ದೆ,ಬೇಡಿದ್ದೆ.ನನ್ನ ಬೇಡಿಕೆ ಸುಳ್ಳಾಗಲಿಲ್ಲ.ನಿಜ 2010 ನನ್ನ ಪಾಲಿನ ಮಹತ್ತರ ದಿನಗಳನ್ನು ಹೊತ್ತ ವರ್ಷ.ಈ ವರ್ಷದಲ್ಲಿ ಹಲವುಗಳು ನನ್ನ ಅಂತರಂಗದ ನೆನಪುಗಳ ಸಾಲಿಗೆ ಸೇರಿವೆ. ಮನದ ಪುಸ್ತಕದಲ್ಲಿ ಭದ್ರವಾಗಿ ಕುಳಿತಿವೆ.ಇಷ್ಟಪತ್ತಿದ್ದನ್ನೆಲ್ಲ ಎತ್ತಿಟ್ಟಿದ್ದೇನೆ.
ಪ್ರತಿಷ್ಠಿತ IT ಕಂಪನಿಯ ಗೇಟ್ ಮುಂದೆ ಇಂಟರ್ವ್ಯೂ ಗೆಂದು ಬಂದಾಗ ನಾನು ಇಲ್ಲಿಗೆ ತಕ್ಕವಳಾ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡಿದ್ದೇನೆ.ಹಲವಾರು ಜನರನ್ನು ದಾಟಿ ಅದು ನನಗೆ ಒಲಿದಾಗ ಖುಷಿಯಿಂದ ಬೀಗಿದ್ದೇನೆ.ದೇವರು ಕೊನೆಗೂ ನನ್ನ ಬೇಡಿಕೆಯನ್ನು ಹೊಸವರ್ಷದ ತಿಂಗಳೊಳಗೆ ಪೂರೈಸಿದಾಗ ಮನದಲ್ಲೇ ಥ್ಯಾಂಕ್ಸ್ ಅಂದಿದ್ದೇನೆ.GATE RANKERS ಗಳ ಪಟ್ಟಿಯಲ್ಲಿ ನನ್ನ ಹೆಸರನ್ನು ಹಠದಿಂದ ಸೇರಿಸಿ ಕೊಂಡಿದ್ದೇನೆ.ಹತ್ತಿರದವರ ವಿಶ್ವಾಸ ಗಳಿಸಿದ್ದೇನೆ.ಬಹಳಷ್ಟನ್ನು ಕಲಿತಿದ್ದೇನೆ,ಕಲಿಸಿದ್ದೇನೆ.ಬಾಲ್ಯದ ನನ್ನ ವೈದ್ಯೆ ಯಾಗುವ ಕನಸನ್ನು ನನ್ನ ತಂಗಿ ಪೂರೈಸಿದಾಗ ಹೆಮ್ಮೆಯಿಂದ ಅವಳ ಭುಜ ತಟ್ಟಿದ್ದೇನೆ.ನನ್ನ ಸಂಗೀತದ ಪಟ್ಟಿ ಮುಟ್ಟಿ ಬೈಸಿಕೊಳ್ಳುತ್ತಿದ್ದ ನನ್ನ ಚಿಕ್ಕ ತಂಗಿ ಹತ್ತಾರು ವೇದಿಕೆಗಳಲ್ಲಿ ಹಾಡುತ್ತಿದ್ದರೆ ಕಣ್ಮುಚ್ಚಿ ತಲೆದೂಗುವ ಜನಗಳನ್ನು ಕಂಡು ಖುಷಿಯಿಂದ ಕಣ್ಣೀರಾಗಿದ್ದೇನೆ.ಮೊದಲ ಸಂಬಳವನ್ನು ಹೆತ್ತವರ ಕೈಗಿತ್ತಾಗ ಹೆಮ್ಮೆಯಿಂದ ಮೈಸವರಿದ, ಅವರ ಕಣ್ಣುಗಳಲ್ಲಿ ಕಂಡ ಸಾರ್ಥಕತೆಯ ಭಾವವನ್ನು ನನ್ನ ನೆನಪಿನಾಳದಲ್ಲಿ ಬಚ್ಚಿಟ್ಟು ಕೊಂಡಿದ್ದೇನೆ.ನನ್ನ ಕನಸಿನ ಕೂಸಾದ 'ಮಾನಸರಂಗ'ವನ್ನು ಕಟ್ಟಿ ಬೆಳೆಸಿದ್ದೇನೆ.ಬ್ಲಾಗ್ ಎಂಬ ಅದ್ಭುತ ಲೋಕಕ್ಕೆ ಅಂಬೆಗಾಲಿಡುತ್ತ ಬಂದಿದ್ದೇನೆ.ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸುವರನ್ನು ಪಡೆದಿದ್ದೇನೆ.ಬರೆಯುತ್ತ ಎಡವಿದ್ದೇನೆ,ಎಡವುತ್ತಾ ಕಲಿತಿದ್ದೇನೆ.ನೆನಪುಗಳನ್ನು ಬಿಚ್ಚಿ ನನ್ನ ನೆಚ್ಚಿನವರನ್ನ ಭೇಟಿಯಾಗಿದ್ದೇನೆ.ಬಹಳಷ್ಟು ವರ್ಷಗಳ ನಂತರವೂ ಅವರಲ್ಲಿ ಹಾಗೆಯೇ ಉಳಿದ ಆತ್ಮೀಯತೆಯನ್ನು ಕಂಡಿದ್ದೇನೆ.ನನ್ನ ಕೈಲಾದ ಸಹಾಯ ಮಾಡಿದ್ದೇನೆ.ಸಹಾಯ ಪಡೆದು ನನ್ನ ಕಡೆಗಣಿಸಿದವರನ್ನು ಕಂಡು ಪಶ್ಚಾತ್ತಾಪ ಪಟ್ಟಿದ್ದೇನೆ. ಹೊಟ್ಟೆ ನೋವಾಗುವಷ್ಟು ನಕ್ಕಿದ್ದೇನೆ. ಒಮ್ಮೊಮ್ಮೆ ನನ್ನಲ್ಲೇ ನಾನು ಬಿಕ್ಕಿದ್ದೇನೆ.ಜನರ ಒಡನಾಟದಿಂದ ಬದುಕಿನ ಒಳ-ಹೊರಗಿನ ಕಾಳಷ್ಟನ್ನಾದರೂ ಅರಿತಿದ್ದೇನೆ.ನನ್ನಲ್ಲೇ ಬಹಳಷ್ಟು ಬದಲಾವಣೆಗಳನ್ನು ಅನಿವಾರ್ಯವಾಗಿ ತಂದು ಕೊಂಡಿದ್ದೇನೆ. ಈ ಶಹರದಲ್ಲೂ ರಕ್ತ ಸಂಬಂಧವಲ್ಲದ ಬಂಧುಗಳನ್ನು ಪಡೆದಿದ್ದೇನೆ.
ನನ್ನ ಈ ವರ್ಷದ ಖುಷಿಯಲ್ಲಿ ಪಾಲುದಾರರು ಹಲವರು..ಸದಾ ನನ್ನ ಆಸೆಗಳಿಗೆ ನೀರೆರೆವ ಅಪ್ಪ-ಅಮ್ಮ,ಚಿಕ್ಕವರಾದರೂ ಕೆಲವೊಂದಕ್ಕೆ ನನ್ನ ಮಾರ್ಗದರ್ಶಿಗಳು ಮತ್ತು ನನ್ನ ಕ್ಲೋಸ್ ಫ್ರೆಂಡ್ಸ್ ಗಳಾದ ನನ್ನ ತಂಗಿಯರು, ಏಳು ವರ್ಷಗಳಿಂದ ಸಹಮನಸಿಗಳಾಗಿ ನನ್ನ ಸುಖ-ದುಃಖ ಅರಿತ ಆತ್ಮೀಯ ಗೆಳತಿ,ಪಯಣಕ್ಕೆ ಜೊತೆಯಾಗಿ ಭಾಂಧವ್ಯ ಬೆಸೆದ roommate ,ಮಗಳಂತೆ ನೋಡಿಕೊಂಡ ಅಕ್ಕ-ಭಾವ,ನನಗೆ ಹೊರೆಯಾಗದಂತೆ ನೋಡಿಕೊಂಡ ಆಫೀಸ್ ಟೀಮ್ ,ಕೆಲಸದ ಜೊತೆಗೆ ಬದುಕನ್ನು ತಿಳಿ ಹೇಳುವ ನನ್ನ ಗುರು,ಮನ ತಟ್ಟಿದ,ಮನೆಯವರಂತಾದ PG ಅಂಕಲ್ -ಆಂಟಿ,ಕಾಲೇಜಿನ ಗೆಳೆಯರನ್ನು ನೆನಪಿಸುವ ಆಫೀಸ್ ಫ್ರೆಂಡ್ಸ್ ಗಳು,ಹಲವು ವರ್ಷಗಳ ನಂತರ ಸಿಕ್ಕ ನನ್ನ ಆತ್ಮೀಯರು, ಪ್ರತಿ ಭೇಟಿಯಲ್ಲೂ ಆ ದಿನಗಳ ಮರುಕಳಿಸುವಂತೆ ಮಾಡುವ ದೋಸ್ತರು ,ನನ್ನ ಮನಸಿನ ಭಾವಗಳ ಕನವರಿಕೆಗೆ ವೇದಿಕೆಯಾದ ಬ್ಲಾಗ್ ಪ್ರಪಂಚ,ಮೆಚ್ಚಿ ಓದುವ ಸಹ ಬ್ಲಾಗಿಗರು,ಹಚ್ಚಿಕೊಂಡ ಕೆಲ ಬ್ಲಾಗ್ ಮಿತ್ರರು ಹೀಗೆ ಉದ್ದ ಪಟ್ಟಿಯೇ ಇದೆ.ಇವರೆಲ್ಲರೂ ನನ್ನ ಈ ವರ್ಷದ ಪುಟಗಳಿಗೆ ಬಣ್ಣ ಹಚ್ಚಿದವರು.ಸುಖವನ್ನು ಹಂಚಬೇಕಂತೆ,ದುಃಖವನ್ನು ನುಂಗಬೇಕಂತೆ. ಅಲ್ಲೋ,ಇಲ್ಲೋ ಬಂದ ದುಃಖದ ಕ್ಷಣಗಳು ಈ ಸಂತಸದಲ್ಲಿ ಇಂಗಿ ಹೋಗಿವೆ.ಮತ್ತೆ ಎತ್ತುವ ಪ್ರಯತ್ನ ನನ್ನದಲ್ಲ.ಅಂತೂ 2010 ನ್ನು ಮುಗಿಸಿದ್ದೇನೆ.2011ನ್ನು ನೀರಿಕ್ಷೆಯ ಕಣ್ಣುಗಳಿಂದ ನೋಡುತ್ತಿದ್ದೇನೆ.2011 ರ ಪಾಲಿಗೆ ಕೆಲವೊಂದು ಕನಸುಗಳನ್ನು ಎತ್ತಿಟ್ಟಿದ್ದೇನೆ.ನನಸು ಮಾಡಿಕೊಳ್ಳಲೇ ಬೇಕೆಂಬ ಛಲವಿದೆ.ಸೋತು ಎಲ್ಲಿ ಶರಣಾಗುವೆನೋ ಎಂಬ ಭಯದ ಮನವೂ ಇದೆ.ಹೊಸ ಆಸೆ,ಕಲ್ಪನೆ,ಲವಲವಿಕೆ ಕನಸು ಕಂಗಳೊಂದಿಗೆ ಹೊಸವರ್ಷವನ್ನು ಸ್ವಾಗತಿಸಲು ಮನಸ್ಸು ಸಜ್ಜಾಗಿದೆ. ಡಿವಿಜಿ ಯವರ ಕಗ್ಗವೊಂದು ನೆನಪಾಗ್ತಾ ಇದೆ.
ಹುಲ್ಲಾಗು ಬೆಟ್ಟದಡಿ,ಮನೆಗೆ ಮಲ್ಲಿಗೆ ಯಾಗು
ಕಲ್ಲಾಗು ಕಷ್ಟಗಳ ವಿಧಿಯ ಮಳೆ ಸುರಿಯೆ|
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ||
ಹೊಸ ವರ್ಷದ ಹೊಸ ಮುಂಜಾವು
ತರಲಿ ನಿಮ್ಮ ಬಾಳಲ್ಲಿ ಎಲ್ಲಿಲ್ಲದ ಗೆಲುವು
ನನಸಾಗಲಿ ಕನಸು,ಹಸನಾಗಲಿ ಮನಸು
ಚಿಗುರಲಿ ಬಾಳಲ್ಲಿ ನವೋಲ್ಲಾಸ
ಮೂಡಲಿ ಎಲ್ಲರಲಿ ಒಂದೇ ಎಂಬ ಸಮರಸ
***"ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು"***


29 comments:
ವಾಣಿಶ್ರೀ,
ಪ್ರಥಮವಾಗಿ ನೀಡುತ್ತಿರುವ ಪ್ರತಿಕ್ರಿಯೆಯಲ್ಲಿ ಹೊಸ ವರುಷಕ್ಕಾಗಿ ತಮಗೂ ಸಹ ಖುಷಿಭರಿತ ಶುಭಾಶಯಗಳನ್ನ ತಿಳಿಸುತ್ತಿದ್ದೇನೆ.
ಹೌದಲ್ವಾ? ಹೇಗೆ ಹೊಸ ಹೊಸ ಉಲ್ಲಾಸವನ್ನ ನಮ್ಮಲ್ಲಿ ಈ ಹೊಸ ವರ್ಷವು ಹುಟ್ಟಿಸುತ್ತದೆಯೋ, ಹಾಗೆಯೇ ಸಹ
ಅಯ್ಯೋ ಮತ್ತೊಂದು ವರ್ಷ ಇಷ್ಟು ಬೇಗನೆ ಕಳೆದು ಹೋಯಿತೇ, ಮನಸ್ಸು ಮಾಡಿದ್ರೆ ಹಾಗು ಹೆಚ್ಚಿನ ಶಿಸ್ತಿನಿಂದ
ಸಮಯ ಪಾಲನೆ ಮಾಡಿದ್ದಿದ್ರೆ ಮತ್ತಷ್ಟು ಸಾಧನೆಗಳನ್ನ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದಿತ್ತಲ್ಲ ಎಂಬ ಬೇಸರ ಸಹ
ಮನದ ಮೂಲೆಯಲ್ಲಿ ಗೋಚರಿಸುತ್ತೆ.
ನಿಮ್ಮ ಪ್ರಯಾಸ ಹಾಗು ಪ್ರಯತ್ನಗಳಿಗೆ ಈ ಹೊಸ ವರುಷವು ಮತ್ತಷ್ಟು ಉತ್ತಮ ಅವಕಾಶಗಳನ್ನ ತರಲಿ, ಹಾಗು ಮನಃ
ಮೆಚ್ಚುವಂತ ಸತ್ಸಂಗ ಹಾಗು ಒಡನಾಟ ದೊರೆಯಲಿ ಎಂದು ಹಾರೈಸುತ್ತೇನೆ...
ಜೈ ಹೋ..
chennagide chennagide...let the new year be different, challenging and more satisfying...
ಸುಂದರವಾಗಿ ಬರದ್ದೆ ವಾಣಿ, 2011 ಕೂಡ ನಿನಗೆ ಶುಭವನ್ನು ತರಲಿ, ನೀನು ಎತ್ತಿಟ್ಟ ಕನಸುಗಳೆಲ್ಲ ನನಸಾಗಲಿ :)
ನಿಜವಾಗ್ಲೂ ಎಸ್ಟ್ ಬೇಗ ವರ್ಷ ಕಳ್ದು ಹೋಗ್ತಾ ಇದ್ದು. ನಿನ್ನ ಬರಹದ ಶೈಲಿ ರಾಶಿ ಚೊಲೋ ಇದ್ದು. ನೀನು ಉಜಿರೆಯಲ್ಲಿ ಓದಿದ್ದ? Wish you the same happiness in 2011!!
ಚೊಲೋ ಬರದ್ದೆ. ಒಂದು ವರ್ಷದಲ್ಲಿ ಇಷ್ಟೆಲ್ಲಾ ಆತ, ಇಷ್ಟ ಬೇಗೆ ಮುಗ್ದೆ ಹೋತ.. ಹೇಳಿ ಒಂದ್ಸಲಿ ಯೋಚನೆ ಬಂತು ನಿನ್ನ ಬರಹ ನೋಡಿ... ಚೊಲೋ ಬರಿತೆ... keep it up..
ಹೊಸ ವರ್ಷದ ಶುಭಾಶಯಗಳು...[ivatte helta iddi]
೨೦೧೧ ಇನ್ನು ಹೆಚ್ಚು ಸ೦ತಸ ಕೊಡಲಿ...
Great writing... Keep it up.
Hope you experienced a great year. Now coming new year for experiencing more...!!
Happy New Year 2011.....:)
ವಾಣಿ,
ನಿನಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು. ಮುಂಬರುವ ವರುಷ ನಿನಗೆ ಇನ್ನಷ್ಟು ಪ್ರೀತಿ, ಹರುಷ, ನೆಮ್ಮದಿಯನ್ನು ತರಲಿ. ಕಂಡ ಕನಸೆಲ್ಲವೂ ನನಸಾಗಲಿ... ಮತ್ತಷ್ಟು ಕನಸುಗಳು ಬೆಳಗಲಿ... ಶುಭ ಹಾರೈಕೆಗಳು..
Happy New Year and wish you all the best!!
good writing keep it up.. grt new year.. gud luck:)
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನಿಂಗೂ ಕೂಡ.. ತುಂಬಾ ಒಳ್ಳೆಯ ರೀತಿಯಲ್ಲಿ ಬನ್ನಿಸಿದ್ದೀಯಾ..
ಭಾವಪೂರ್ಣ ಬರಹದ ಮೂಲಕ ಹಳತಿಗೆ ವಿದಾಯ ಹಾಗೂ ಹೊಸತನಕ್ಕೆ ಸ್ವಾಗತ ಕೋರಿದ್ದು ಇಷ್ಟವಾಯ್ತು. ಅಷ್ಟೇ ಮಾರ್ಮಿಕವಾದ ಚಿತ್ರಕೂಡ ಇಷ್ಟವಾಯ್ತು :)
ಹೊಸ ವರುಷ ತರಲಿ ಹರುಷ.
@ sudharhana- ಧನ್ಯವಾದಗಳು.. ನಿಮಗೂ ಹೊಸ ವರ್ಷದ ಶುಭಾಶಯಗಳು..
@ಬೆಂಗಳೂರು ರಘು- ನಿಮ್ಮ ಹಾರೈಕೆಗೆ ಧನ್ಯವಾದಗಳು..
@ಸೌಮ್ಯ - ನಿನ್ನ ಹಾರೈಕೆ ಅಂತೆ ಆಗಲಿ..
@ವಿದ್ಯಾ- ಹೌದು.. ನಾನು ಪಿ ಯು ಸಿ ಮಾಡಿದ್ದು ಉಜಿರೆಯಲ್ಲಿ..ನನ್ನ ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು..
@ಕಾವ್ಯ- ಧನ್ಯವಾದಗಳು..
@ ಕವಿತಾ -ನಿಮ್ಮ ಕೋರಿಕೆಯಂತೆ ನನ್ನ ಮುಂದಿನ ವರ್ಷ ವಿರಲಿ..
@ರವಿ,ಶರಶ್ಚಂದ್ರ- ಧನ್ಯವಾದಗಳು..
@ಜಗಲಿ,ಕಾಂತೆಶ್,ಪ್ರವೀಣ್- ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ..
@ತೇಜಕ್ಕ-ಧನ್ಯವಾದ..ಹೌದು ಹೊಸ ವರುಷ, ಎಲ್ಲಾರಿಗೂ ತರಲಿ ಹರುಷ..
ಹೈ ವಾಣಿ......ನಿಜವಾಗಲು ಭಾರಿ ಚಲೋ ಬರದಿರಿ....ನನಗ ಭಾಳ್ ಎಸ್ಟ್ಟ ಆಇಥ್ರೆ.....ನಿಮಗೆ ಮುಂದಿನ ವರ್ಷಾನು ಚನ್ನಾಗಿ ಇರಲಿ ಎಂದು ಹರೈಸುತೇನೆ.....ಹೊಸ ವರುಷದ ಶುಬಷಯಗಳು ......ಎಂಜಾಯ್ ಮಾಡಿ......
U R Simply GR8
Nice Article....
Wish you happy new year and have a great success in 2011...:)
Awesome blog!!!
೨೦೦೯ ನಲ್ಲಿ ಸಿಕ್ಕಾಪಟ್ಟೆ sorry ಸಿಕ್ಕಿತು , ೨೦೧೦ ತುಂಬ ಕಡಿಮೆ....... ೨೦೧೧ ನಲ್ಲಿ ಆ ನಂಬರ್ ೦ ಆಗ್ಲಿ ....... ಮತ್ತ ನನ್ ಕಡೆಯಿಂದ ಬರೊ please ಜಾಸ್ತಿ ಆಗ್ಯಾವ . . . ಸ್ವಲ್ಪ ಸಹಾಯ ಅದು ಮಾಡ್ರಿ :) ... ಮತ್ತ ನಿನ್ನ ಯಲ್ಲ ಕನಸು ನನಸು ಆಗ್ಲಿ ಅಂತ ಹಾರೈಸ್ತೀನಿ .....
ಹೊಸ ವರುಷವನ್ನು ಪ್ರೀತಿ,ಏಕತಾ ಭಾವದಿಂದ, ದ್ವೇಷ-ರೋಷಗಳನ್ನು ದೂರ ಮಾಡುತ್ತಾ, ಹರುಷದಿಂದಲೇ ಸ್ವಾಗತಿಸೋಣ. ಕಳೆದ ವರ್ಷದಲ್ಲಿ ಆಗಿಹೊದ ಕೆಟ್ಟ ಘಟಣೆಗಳನ್ನು ಮರೆತು ಮನಸ್ಸನ್ನು ಶುಭ್ರಗೊಳಿಸಿ ಆಗದೇ ಇದ್ದ ಕನಸನ್ನು ನನಸಾಗಿಸಿಕೊಳ್ಳಲು ಮತ್ತೊಂದು ವರ್ಷ ಬಂದಿದೆ ಎನ್ನುತ್ತಾ ಮುಂದಡಿಯಿಡೋಣ.
ಆತ್ಮೀಯ ಓದುಗರೆಲ್ಲರಿಗೂ ಹೊಸ ವರುಷವು ಶುಭ ತರಲಿ, ಜೀವನವನ್ನು ಬೆಳಗಲಿ, ಅಂದುಕೊಂಡ ಗುರಿ ಸಾಧನೆಯಾಗಲಿ, ಕನಸು ನನಸಾಗಲಿ, ಅದೇರೀತಿ ನಮ್ಮ-ತಮ್ಮೆಲ್ಲರ ಆರೊಗ್ಯ ಚೆನ್ನಾಗಿರಲಿ,. ಎಲ್ಲರಿಗೊ ಶುಭವಾಗಲಿ.
ವಾಣಿ ಮೇಡಂ,
ನಿಮಗೂ ಹೊಸ ವರ್ಷವು ಸುಖ ನಲಿವು ಸಂತೋಷವನ್ನು ತರಲಿ, ನೀವು ಕಂಡ ಕನಸುಗಳೆಲ್ಲಾ ಕೈಗೂಡಲಿ......
ಶುಭಾಶಯಗಳು.
ಸು೦ದರ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು.ನಿಮಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
ವಾಣಿಶ್ರೀ ಯವರೇ,
ನಿಮ್ಮ ಕನಸುಗಳು ನನಸಾಗಲಿ.ಶುಭವಾಗಲಿ.ಶುಭಾಶಯಗಳೊ೦ದಿಗೆ,
ನಮಸ್ಕಾರ.
Thanks Vani :).... Hosavarsha hosathanavannu, khushiyannu tharali endu haraisuva.......
ninna roommate
Anju
not just 2011, let each and every moment of ur life be filled with joy. sarthakateya baduku ninnadagali endu manadumbi hareisuva ninna atmeeya gelati
Nice one to read n recollect my writing..!!! after readung ur blog i remembered again that even i use to write blogs lol...
Nice way to chew back all memories, ups n downs n catch up in single article...n hoping more sucess,challenge, satisfaction for the forth coming year... :) Have a great Year My New Year Frn :)
ವಾಣಿಶ್ರೀ. ಹೊಸವರ್ಷದ ಶುಭಾಶಯಗಳು...
ನಿಮ್ಮೆಲ್ಲ ಆಸೆ ಆಕಾಂಕ್ಷೆ ಕನಸುಗಳ ಸಾಕಾರವಾಗಲಿ. ನಿಮ್ಮ ಪಯಣದ ಪ್ರತಿಹೆಜ್ಜೆಯನ್ನೂ ಬ್ಲಾಗ್ ದಾರಿಯನ್ನು ನೆನಪಿಸಿಕೊಂಡಿದ್ದೀರಿ..ಇಲ್ಲೂ ನಿಮ್ಮ ಮನದಾಳದ ಮಂಥನಕ್ಕೆ ಉತ್ತಮ ಪ್ರೋತ್ಸಾಹ ಸಿಗಲಿ.
saw your blog. its good, keep your good writings, I wish you success and growth
ನಿಮ್ಮ ಹಿಂದಿನ ವರ್ಷದ ಸಾಧನೆಗಳನ್ನು ಮೆಚ್ಚಬೇಕು ವಾಣಿ ಶ್ರೀಯವರೆ! ನಿಮಗೆ ಈ ಹೊಸ ವರ್ಷದಲ್ಲೂ ಇಂತಹ ನೂರಾರು ಕನಸುಗಳು ನನಸಾಗಲಿ ಎಂದು ಆಶಿಸುವೆ.
vani shri madam nimma hindina varshada avalokana chenagide, mechchuvantahadu...
Hosa varushada shubhavagirali.. mattastu sadanege mettilaagali....
late agi bandiddeni ksheme irali....
danyavadagalu...
ಹೊಸ ವರ್ಷ ಇನ್ನೂ ಹೆಚ್ಚು ಹೆಚ್ಚು ಸಂತೋಷವನ್ನು ತರಲಿ...
Post a Comment