ಮಾನಸರಂಗ

ಇದು ಮನಸಿನ ಮಾತಿಗೊಂದು ಜಾಗ...

ಮನ..ಸೆರೆಯಾದ ಕ್ಷಣ..


"ನೀನೆ ಫೋನ್ ಮಾಡಲಿ ಎಂದು ಕಾಯ್ತಾ ಇದ್ದೆ..ನನ್ನ ನೆನಪೇ ಆಗೋಲ್ಲ ನಿಂಗೆ " ಎಂದ ತಂಗಿಯ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ ಈ ಬಾರಿ..ಹೌದು ಎಲ್ಲೋ ಏನೋ ಮರೆಯುತ್ತಿದ್ದೇನೆ..ಮನಸ್ಸು ಕಳೆದು ಹೋಗ್ತಾ ಇದೆ..ಯಾಕೆ ಕಾರಣ ಮಾತ್ರ ನಂಗೆ ಗೊತ್ತಿಲ್ಲ..ನನಗೆಂದೆ ಮೀಸಲಿಟ್ಟ ನನ್ನ ದಿನ ನಿತ್ಯದ ಒಂದಿಷ್ಟು ಸಮಯವೂ  ನನಗರಿವಿಲ್ಲದಂತೆ ಕಳೆದು ಹೋಗ್ತಾ ಇದೆ..ಹಿಗೆ ಏನು ಗೊತ್ತಾಗ್ತಾ ಇಲ್ಲ..ನೆಮ್ಮದಿಯಿಂದ ಕುಳಿತಿದ್ದ ಮನಸ್ಸು ಯಾಕೋ ಗೊಂದಲದ ಗೂಡಾಗಿ ಬಿಟ್ಟಿದೆ..ಎಲ್ಲೋ ನನ್ನ ನೀರಿಕ್ಷೆ,ಕನಸುಗಳು ನನ್ನ ಬಿಟ್ಟು ಜಾರುವಂತೆ ಭಾಸವಾಗ್ತಾ ಇದೆ..ಎಲ್ಲಾ ಕಡೆಯಿಂದಲೂ ಒಂದೇ ಪ್ರಶ್ನೆ..ಉತ್ತರ ಮಾತ್ರ ನನಗೆ ಬಿಡಿಸಲಾಗದ ಒಗಟು..

ನನ್ನ ಆತ್ಮೀಯ ಗೆಳತಿಯಾದ ಓದು,ನನ್ನ ಗುನುಗುನಿಸುವಂತೆ ಮಾಡುವ ಹಳೆಯ,ನನ್ನಿಚ್ಚೆಯ ಹಾಡುಗಳು,ಪೇಪರ್ನಲ್ಲಿ ಬರುವ ತಪ್ಪದೆ ಓದುವ ಕಾಲಂಗಳು,ನನ್ನ ಪಕ್ಕಕ್ಕೆ ಪವಡಿಸುವ ನನ್ನ laptop ಚಿಂಟು,ಇವೆಲ್ಲದಕ್ಕೂ ನಾನು ಇತ್ತೀಚಿಗೆ ಪ್ರಶ್ನೆಯಾಗಿ ಬಿಟ್ಟಿದ್ದೇನೆ..ಮೊದಲಿನ ಚಿಟಿ ಚಿಟಿ ಮಳೆಯಂತ ಮಾತು ಒಮ್ಮೊಮ್ಮೆ ನನ್ನ ಮೌನದಲ್ಲಿ ಕಳೆದು ಹೋಗ್ತಾ ಇದೆ..ಅಪರಿಚತ ಭಾವವೊಂದು ನನ್ನನು ಕಾಡ್ತಾ ಇದೆ.ಗೊತ್ತಿಲ್ಲದೇ ಸದ್ದಿಲ್ಲದೇ ಯಾರೋ ಬಂದು ಕುಳಿತು ಬಿಟ್ಟಿದ್ದಾರೆ. ಈ ಬಾರಿ ಸಿಕ್ಕಿದಾಗ ನನ್ನ ಸ್ನೇಹಿತರು ಕೇಳಿದ ಪ್ರಶ್ನೆಗಳಿಗೆ ನನ್ನ ನಗುವೊಂದೇ ಉತ್ತರವಾಗಿ ಸಿಕ್ಕಿದ್ದು ಅವರಿಗೆ..ಓದಲೆಂದು ತಂದ ಪುಸ್ತಕಗಳು  ಸಪ್ಪೆ ಮೋರೆಯಲ್ಲಿ ಇಟ್ಟಲ್ಲೆ ತೆಪ್ಪಗೆ ಕುಳಿತಿವೆ..ಮನಸಿನ ಕನಸೊಂದು ಅರಳಲು ಸಮಯವಿಲ್ಲದೆ ಪರದಾಡುತ್ತಿದೆ..ನೆಮ್ಮದಿಯ ನಿದ್ದೆಯೊಂದು ಮತ್ತೆ ನನ್ನ ಮುಖದಲ್ಲಿನ ಹೂನಗೆಗೆ ಕಾಯುತ್ತಿದೆ..ಕಾಡುತ್ತಿರುವ ಗೊಂದಲಕ್ಕೆ ಪೂರ್ಣವಿರಾಮದ ನೀರಿಕ್ಷೆ..ಇದು ಆಕಸ್ಮಿಕವೋ, ಅನಿವಾರ್ಯವೋ ನಾ ತಿಳಿಯೆ.. 

ನಾನು ಮತ್ತೆ ವಾಪಸ್ಸಾಗ ಬೇಕಿದೆ..ಮತ್ತೆ ಅದೇ ಸುಂದರ ನಿನ್ನೆಗಳಿಗೆ..ಮರೆತ ಪ್ರತಿಯೊಂದನ್ನು ಕಾಳಜಿಯಿಂದ ಎತ್ತಿ ಮತ್ತೆ ಮೊದಲಿನಂತೆ ಮುದ್ದಿಸಬೇಕಾಗಿದೆ..ಇಂದಿನ ನಗುವಿನ ಹಿಂದೆ ಮರೆಯಾದ ಅಂದಿನ ನನ್ನ ತರಹ ತರಹದ ನಗುವಿಗೆ ಹೊಸ ಭಾಷ್ಯ ಕೊಡಬೇಕಾಗಿದೆ..ಸ್ನೇಹಿತರ ಗುಂಪಿನ ನಡುವೆ ಕುಳಿತು ಮತ್ತೆ ಕಾಡಿಸಿಕೊಳ್ಳಬೇಕಾಗಿದೆ..ಹುಸಿ ಮುನಿಸಿನಿಂದ ನಾಚಿಕೊಂಡು ಮತ್ತೆ ಕೆಂಪಗಾಗಬೇಕಾಗಿದೆ..ಹೊಸವರುಷವನ್ನು ಮತ್ತೆ ಹೊಸ ಹುರುಪಿನೊಂದಿಗೆ ಆರಂಭಿಸಬೇಕಿದೆ..ಮೊಗ್ಗಾಗಿ ಅರಳಿದ ಕನಸೊಂದಕೆ ಸೊಗಸಾಗಿ, ನನಸಾಗಿ ಅರಳುವ ಮನಸಾಗಿದೆ..ಉಂಟಾದ ಗೊಂದಲಕ್ಕೆ ಮಂಗಳ ಹಾಡುವ ನೀರಿಕ್ಷೆ..ಹೊಸ ಉತ್ಸಾಹ,ಹೊಸ ಲವಲವಿಕೆಯ ಒಗ್ಗೂಡಿಸಿ ಕೊಳ್ಳುವ ಬಯಕೆ..ಮರೆತ ಅಕ್ಷರಗಳಿಗೆ,ಮೂಡಿದ ಬರಹಗಳಿಗೆ ಅಂತಿಮ ರೂಪ ಕೊಡಬೇಕೆಂಬ ಹಠದೊಂದಿಗೆ..

ನಿಮ್ಮವಳು...

27 comments:

ನಮಸ್ತೆ.
ಬರಹ ಚೆನ್ನಾಗಿದೆ. ಇಂದಿನ ವೇಗದ ಯುಗದಲ್ಲಿ ಎಷ್ಟೆಲ್ಲಾ ಮರೆಯುತ್ತಿದ್ದೇವೆ ಎಂದು ಒಂದು ಕ್ಷಣ ಯೋಚಿಸುವಂತೆ ಇದೆ.

ಧನ್ಯವಾದಗಳು.

 

ವಾಣಿಯ ಕಳೆದು ಹೋದ 'ವಾಣಿ' ಗಾಗಿ ಹುಡುಕಾಟ ಶುರುವಾಗಿದೆ ಆಸಕ್ತಿಯಿದ್ದಲ್ಲಿ ನೀವೂ ಭಾಗಿಯಾಗಿ :) :)

 

ನೀವು ನಿಮ್ಮ ಹಠದಲ್ಲಿ ಯಶಸ್ವಿಯಾಗಲಿ ಎಂದು ನನ್ನ ಹಾರೈಕೆ.. ಮುಂಗಡವಾಗಿ ಹೊಸ ವರ್ಷದ ಶುಭಾಶಯಗಳು.. :)

 

ಯಾ೦ತ್ರಿಕ ಬದುಕಿನಲ್ಲಿ ಕಳೆದು ಹೋದ ಸ೦ತಸದ ಕ್ಷಣಗಳ ನಿಮ್ಮ ಹುಡುಕಾಟ ಫಲಪ್ರದವಾಗಲಿ. ಒಳತೋಟಿಯನ್ನು ಚೆನ್ನಾಗಿ ನಿರುಪಿಸಿದ್ದೀರಿ. ಅಭಿನ೦ದನೆಗಳು.

 

nanu geddiddene emba bhrameyalliddene ...neevu gelli...good luck..

 

ಗೊ೦ದಲಕ್ಕೆ ಬೇಗ ಮ೦ಗಳ ಹಾಡು ವಾಣಿ..
ಹೊಸ ಉತ್ಸಾಹ ಬೇಗ ಚಿಮ್ಮಲಿ ಎ೦ದು ಹಾರೈಸುತ್ತೇನೆ.
ನಾನೂ ಒಮ್ಮೆ ಹೀಗೆ ಕಳೆದುಹೋಗಿದ್ದೆ... ಬೇಗ ಹೊರಬ೦ದೆ...

 
This comment has been removed by the author.
 

ವಾಣಿಶ್ರೀ,

ಮಸ್ತಾಗಿ ಬರದ್ದೆ,
ಮನಸೂರೆ ಗೊಳಿಸುವಂತ ಬರಹ.
Title Photo is nicely matching with your article ......excellent

 

@ kavita,

ವಾಣಿಶ್ರೀ, ಗೊಂದಲಕ್ಕೆ ಮಂಗಳ ಹಾಡಿದರೆ ...... ನಾವು ಅವಳ ಬರಹವನ್ನು miss ಮಾಡಿಕೊಳ್ಳುವದು ನಿಶ್ಚಿತ.....ಇನ್ನು ಸ್ವಲ್ಪ ಕಾಲ ಬರೆಯುತ್ತಿರಲೆಂದು ಆಶಯ!!!

 

ನನಗೆಂದೆ ಮೀಸಲಿಟ್ಟ ನನ್ನ ದಿನ ನಿತ್ಯದ ಒಂದಿಷ್ಟು ಸಮಯವೂ ನನಗರಿವಿಲ್ಲದಂತೆ ಕಳೆದು ಹೋಗ್ತಾ ಇದೆ..
ನನ್ನದೂ ಇದೆ ಕಥೆ,ಚಂದ ಇದ್ದು ಬರೀದೆ.

 

How ironic it is Vani, that we tend to crib upon present moments, and then crave for those lost past moments which we could have cherished so much. Then suddenly we feel so alone and lonely when we get into a state of voidness. But repenting is of no use. It shall be a futile effort to recall old memories/ activities, but this can act like a spark of ignition to put us on alert and realize the importance of our valuable moments and carry forward with nitty gritties of life. Its a bitter feeling to lose those lovely past moments, but at the same time, recalling those will try to get away from the present state of despair a bit.
Thank you for giving a good article where in, readers should realize the importance of present time.

 

@ ಕ್ಷಣ ಚಿಂತನೆ..-ಓದಿ ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು...

@ಅಂಜು - ಖಂಡಿತ ನೀನು ಭಾಗಿಯಾಗ ಬಹುದು...:) :)

@ಮಂಜು- ನಿಮಗೂ ಕೂಡ ಹೊಸವರ್ಷದ ಶುಭಾಶಯಗಳು..

@ಪ್ರಭಾಮಣಿ ನಾಗರಾಜ್- ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಯಿಸಿದ್ದಕ್ಕೆ ತುಂಬಾ ಸಂತಸವಾಯಿತು..

@ಅಮಿತ-ಗೆಲ್ಲುತ್ತೇನೆಂಬ ಭರವಸೆ ನನಗೂ ಇದೆ...

@ಕವಿತಾ- ಖಂಡಿತವಾಗಿಯೂ ಹೊರಬರುತ್ತೇನೆ...

@ಸಂತೋಷ- ಮನಸಾರೆಯಾಗಿ ಮೆಚ್ಚಿದ್ದಕ್ಕೆ ಧನ್ಯವಾದಗಳು..ಹಂಗೇನಿಲ್ಲ..ಗೊಂದಲದ ಹೊರತಾಗಿಯೂ ಒಲ್ಲೆ ಬರಹವನ್ನು ನೀಡುವ ಪ್ರಯತ್ನ ಮಾಡುತ್ತೇನೆ...

@ವೆಂಕಟ್- ಲೈಫ್ ಇಷ್ಟೇನೆ..ನಮ್ಮ ಲೈಫ್ ಹಿಂಗೆನೆ...:) :)

@Sudarshan- Thank you very much for your comments.. keep visiting my blog...

@ಕನಸು ಕಂಗಳ ಹುಡುಗ- ಹೊಟ್ಟೆಕಿಚ್ಚು ಪಟ್ಟಾದರೂ ಇಷ್ಟಪಟ್ಟಿದ್ದಿರಲ್ಲ..ಇಷ್ಟವಾಯಿತು ಓದಿ...

 

ಕಾಲ ಎಲ್ಲವುದನ್ನೂ ಸರಿ ಮಾಡುವುದು... ಇಂದಿರುವ ಗೊಂದಲ.. ಮುಂದಿರದು. ತಾಳ್ಮೆಯಿಂದ ಇದ್ದರೆ ಒಳಿತು ನಮ್ಮನ್ನರಸಿ ಬರುವುದು...:)

 

thumba chennagide...idu nangu experience aagide aadre neevu adanna chennagi varnisiddeeri, thumba ishta aythu.

 

ಸುಂದರವಾದ ಬರಹ ...ಮರೆತ ಪ್ರತಿಯೊಂದನ್ನು ಕಾಳಜಿಯಿಂದ ಎತ್ತಿ ಮತ್ತೆ ಮೊದಲಿನಂತೆ ಮುದ್ದಿಸಬೇಕಾಗಿದೆ..ಇಂದಿನ ನಗುವಿನ ಹಿಂದೆ ಮರೆಯಾದ ಅಂದಿನ ನನ್ನ ತರಹ ತರಹದ ನಗುವಿಗೆ ಹೊಸ ಭಾಷ್ಯ ಕೊಡಬೇಕಾಗಿದೆ...ಎಂಬ ಸಾಲುಗಳು ಇಷ್ಟವಾಯಿತು

 

ನನ್ನ ಬ್ಲಾಗ್ ಗೆ ಭೇಟಿ ಕೊಟ್ಟದ್ದಕ್ಕೆ ಧನ್ಯವಾದಗಳು. ಇತ್ತೀಚಿಗೆ ನನ್ನ ಬ್ಲಾಗ್ ಗೆ ಬರುತ್ತಿರುವ ಭೇಟಿಗಳೆಲ್ಲ ಮಲೆನಾಡಿನಿಂದ :-)

ಕನ್ನಡ ಬ್ಲಾಗ್ owners ಬಹಳಷ್ಟು ಮಲೆನಾಡಿನವರು. ಅಲ್ಲಿಯ ಪರಿಸರ, ಶಾಂತ ವಾತಾವರಣ ಬರವಣಿಗೆ, ಭಾವನೆ, ಚಿಂತನೆಗಳನ್ನು ಹೆಚ್ಚಿಸುತ್ತದೆಯೇನೋ. anyway nice knowing you. ನಿಮ್ಮ ಲೇಖನಗಳು ಬಹಳ ಚೆನಾಗಿವೆ. ಹೇಗೆ ಬರೆಯುತ್ತಿರಿ.

 

Hmm... channagi baradde... nimma parichaya nangille.. nanna blog odi, followers aagidke tanx..

 

Nimma kanasugalu nanasaagali.. :)
Happy New year..

 

ಹೊಸ ಬಯಕೆಗಳ ನೀರಿಕ್ಷೆಯಲ್ಲಿ ಹೊಸ ವಸಂತಕ್ಕೆ ಕಾಲಿಡುತ್ತಿರುವ ವಾಣಿಯವರಿಗೆ ಹೊಸ ವರ್ಷದ ಶುಭಾಶಯಗಳು ,,ಹಾಗು ಮೊಗ್ಗಾಗಿ ಅರಳಿದ ಕನಸೊಂದು ನನಸಾಗಿ ಅರಳಿ ..ಉಂಟಾದ ಗೊಂದಲಕ್ಕೆ ಮಂಗಳ ಹಾಡಿ .ಹೊಸ ಉತ್ಸಾಹ,ಹೊಸ ಲವಲವಿಕೆಯ ಒಗ್ಗೂಡಿಸಿ ..ಮರೆತ ಅಕ್ಷರಗಳಿಗೆ,ಮೂಡಿದ ಬರಹಗಳಿಗೆ ಅಂತಿಮ ರೂಪ ಕೊಡಬೇಕೆಂಬ ನಿಮ್ಮ ಹಟಕ್ಕೆ ಯಶಸ್ಸು ಸಿಗಲಿ ಸುಂದರ ಬಾಳು ನಿಮ್ಮನೂ ಅವರಿಸಿಕೊಳ್ಳಲಿ......ಒಳ್ಳೆಯ ಬರಹ,,,,,,,ಮತ್ತಷ್ಟು,,ಮಗದೊಷ್ಟು ಬರಹಗಳ ನೀರಿಕ್ಷೆಯಲ್ಲಿ ,,ನಿಮ್ಮ ಅಭಿಮಾನಿ ಗೆಳೆಯ,,,ಸತ್ಯ ಸಿಂಪ್ಲಿ ಸ್ಟುಪಿಡ್,,,,,

 

vaanishri yavare nimma aashaya kaiguudali.olleya lekhana.abhinandanegalu.

 

tumbaa cholo bariteeri.....nimma lekhaniyinda baruva aksharagalanna oduvadu namma suyoga.....thank u...

 

ಮೆಚ್ಚಿ ಪ್ರತಿಕ್ರಯಿಸಿದ ಪ್ರತಿ ಒಬ್ಬರಿಗೂ ಧನ್ಯವಾದಗಳು..

 

beautiful thinking on turn of life,,,
tumbaa chennagide ishta aaytu

 

hosa varushada shubhashayagalu..... biduvillada e dinagalali' bidisalarada nantugala{manasaranga} rangakke nanndondu namaste...mundina varushavu idakkinta harusha tarali...

 

Tumba Chennagide. Balu

 

Post a Comment