ನೂರಾರು ಹೊಸ ಕನಸುಗಳ ಸಾಲಾಗಿ ಜೋಡಿಸುತ್ತ
ಎಲ್ಲವನ್ನು ನನಸಾಗಿಸುವ ಹೊತ್ತಿಗೆ ದಿನ ಕಳೆದು ಹೋಗಿದ್ದೆ ಗೊತ್ತಾಗಿರಲಿಲ್ಲ..
ಎಲ್ಲಾ ಮೊಗ್ಗುಗಳು ಅರಳುವಂತೆ ಬದುಕು ಅರಳುತ್ತದಂತೆ
ಎಲ್ಲೋ ಓದಿದ ನೆನಪು ಮತ್ತೆ ನೆನಪಾದಂತೆ...
ಗುಂಡಿಗೆಯ ಮೂಲೆಯಲ್ಲಿ ಬಚ್ಚಿಟ್ಟಿದ್ದ ಕನಸಿನ ಮೂಟೆಯ ಬಿಚ್ಚುವ ಮನಸ್ಸಾಗಿತ್ತು..
ನೂರರುಗಳ ಮಧ್ಯ ತಡಕಾಡಿ ಹುಡುಕುವುದೆನು ಜಾಸ್ತಿ ಇರಲಿಲ್ಲ...
ಮೂಟೆಯ ತುಂಬೆಲ್ಲ ತುಂಬಿದ್ದ ಕನಸುಗಳು ನಿನ್ನ ವಿಳಾಸದಲ್ಲೇ ಇದ್ದವಲ್ಲ..
ಮತ್ತೆ ಹೊಸ ಕನಸುಗಳ ನಿನ್ನ ವಿಳಾಸಕ್ಕೆ ತಲುಪಿಸುವ ಹೊತ್ತಿಗೊಂದು ದಿನ ನಿಗದಿಯಾಗಿತ್ತು..
ನಾಚಿಕೊಂಡ ನನ್ನ ಕೆನ್ನೆಗಳೆರಡು ನೀನು ಆವತ್ತಿತ್ತ ಕೆಂಗುಲಾಬಿಯಂತೆ ರಂಗಾಗಿತ್ತು...
ಬದುಕು ಇಂದಿಗೂ ನೀನು ಅವತ್ತಿತ್ತ ಉಂಗುರದ 'ಬಿಳಿ' ಹರಳಿನಂತೆ ಮಿನುಗುತ್ತಿದೆ..
ಖುಷಿಯ ಬಿತ್ತಿ, ಬದುಕು ಹಸನಾದ 'ಹಸಿರು' ನಿನ್ನ ಕೈಗಳಲ್ಲಿ ಹೊಳೆಯುತ್ತಿದೆ..

5 comments:
ಅಕ್ಕಾ ಈ ಕವನದಲ್ಲಿ ನನಗರ್ಥವಾಗದ ಏನೋ ಒಂದು ಭಾವವಿದೆ..ಅದು ಏನು ಅಂತಾ ಗೊತ್ತಾಗ್ತಿಲ್ಲಾ....ಸುಮ್ನೆ ಓದಿ ಹೆಳದಾದ್ರೆ ಚೆನಾಗಿದೆ...
"ಮೂಟೆಯ ತುಂಬೆಲ್ಲ ತುಂಬಿದ್ದ ಕನಸುಗಳು ನಿನ್ನ ವಿಳಾಸದಲ್ಲೇ ಇದ್ದವಲ್ಲ.."
ಈ ಸಾಲು ತುಂಬಾ ಇಷ್ಟವಾಯ್ತು...
ಬರಿತಾ ಇರಿ..
ನಮಸ್ತೆ ..
ನಿನ್ನೆಯನ್ನು ಇಂದಿಗೆ ಸಮೀಕರಿಸಿದ ಪರಿ ಇಷ್ಟವಾಯಿತು.
www.badari-poems.blogspot.com
ಬದುಕು ಇಂದಿಗೂ ನೀನು ಅವತ್ತಿತ್ತ ಉಂಗುರದ 'ಬಿಳಿ' ಹರಳಿನಂತೆ ಮಿನುಗುತ್ತಿದೆ.
ಅಧ್ಭುತ ಸಾಲು. ಹೋಲಿಕೆ ಖುಷಿ ಕೊಟ್ಟತ್ತು...
ಒಂದು ಪದಕ್ಕೆ ಉತ್ಕೃಷ್ಟತೆ ತರೋದನ್ನ ನಿನ್ನತ್ರಿ ಕಲಿಯವು....
ಬದುಕು ಹಿಂಗಿದ್ದಾಗ ದಿನ ಕಳೆದದ್ದೆಲ್ಲಿ ಗೊತ್ತಾಗ್ತು ಹೇಳು...
ಚಂದಿದ್ದು ....
ನಿಜಕ್ಕು ಕನಸುಗಳ೦ಗೆ....ಕವನ ಕೂಡ ಮನಸ್ಸಿಗೆ ತಟ್ಟುತ್ತದೆ
ಚಿನ್ಮಯ ಹೇಳಿದಂತೆ ಅರ್ಥ ಆಗದೇ ಇರುವ ಭಾವಗಳು ಇದೆ ಅನುಸ್ತಾ ಇದ್ದು ನಂಗೂ :-( ಚೆನ್ನಾಗಿದ್ದು :-)
Post a Comment