ಮುಡಿದ ಮಾಲೆಯಲಿಮಲ್ಲಿಗೆಯ ಮೊಗ್ಗಾಗಿ ಸೇರಿಬಿಡು,
ಇರುಳಲ್ಲಿ ಬಾಡುವಂತೆ....
ನನ್ನ ಕಣ್ಣಿನ ರೆಪ್ಪೆಯಲಿ ಮುಚ್ಚಿಟ್ಟ
ಕನಸಾಗಿ ಸೇರಿಬಿಡು,
ಜಾರುವ ಕಣ್ಣೀರ ಹನಿಯಾಗುವಂತೆ....
ಏಳು ಬಣ್ಣಗಳ ಸರತಿಗೆ
ನೀನೊಂದು ಬಣ್ಣವಾಗಿ ಸೇರಿಬಿಡು,
ಮೂಡಿ ಮರೆಯಾಗುವ
ಕಾಮನಬಿಲ್ಲಿನಂತೆ...
ಕಾಮನಬಿಲ್ಲಿನಂತೆ...
ಸಂಜೆ ಸೋನೆ ಮಳೆಯಲ್ಲಿ
ಮಳೆ ಹನಿಯಾಗಿ ಸೇರಿಬಿಡು..
ಬಿದ್ದು ಇಂಗಿ ಹೋಗುವ ಪರಿಯಂತೆ....
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ...
[ಎಂದೋ ಬರೆದ ಕವನ ಹೀಗೆ ಹುಡುಕುತ್ತಿದ್ದಾಗ ಸಿಕ್ಕಿತು..ಬ್ಲಾಗ್ ನಲ್ಲಿ ಹಾಕುವ ಮನಸ್ಸು ಮಾಡಿದೆ...ಓದಿ ಹೇಗಿದೆ ಹೇಳಿ..]

23 comments:
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ...
ಎಲ್ಲಾ ಅರ್ಥವತ್ತಾದ ಸಾಲುಗಳ ತೂಕವನ್ನು ಹೊರಲು ಈ ಅಂತಿಮ ಸಾಲುಗಳಿಗೇ ಸಾಧ್ಯ...ಬಹಳ ಚನ್ನಾಗಿದೆ.
ಓದಿದೆ ವಾಣಿ,
ಬಹಳ ಚೆನ್ನಾಗಿದೆ.
ಒಮ್ಮೆಗೇ ಓದುವಾಗ ಅರ್ಥವಾಗಲಿಲ್ಲ.. ೨-೩ ನೆಯಬಾರಿಗೆ ಬಹಳ ಅರ್ಥಗಳು ಗೋಚರಿಸಿತು..
ನೀವ್ಯಾವ ಮನಸ್ಥಿಯಲ್ಲಿ ಬರೆದದ್ದೋ ಗೊತ್ತಿಲ್ಲ. ಆದರೆ, ಪರಮ ಆಧ್ಯಾತ್ಮವಂತೂ ತುಂಬಿದೆ ಕವನದಲ್ಲಿ.
ಶುಭ ಕಾಮನೆಗಳು. ಇನ್ನೂ ಬರೆಯುತ್ತಿರಿ.
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ...
It's nice
ಎಷ್ಟೋ ಬಂಧಗಳು ಹಾಗೆ ಬರೀ ನೆನಪಾಗಿದ್ದರೇನೆ ಚಂದ...
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ...
It's nice
ಎಷ್ಟೋ ಬಂಧಗಳು ಹಾಗೆ ಬರೀ ನೆನಪಾಗಿದ್ದರೇನೆ ಚಂದ...
ಕಾಡುವ ನೆನಪುಗಳ ಸರದಿಗೆ ಮತ್ತೊ೦ದು ಸು೦ದರ ನೆನಪನ್ನು ಸೇರಿಸಿ ಬರೆದ ಕವನ ಚೆ೦ದವಿದೆ.
ಅನ೦ತ್
ವಾಣಿಶ್ರೀ ರವರೆ,
ಕವನದ ಭಾವ ಚೆನ್ನಾಗಿ ಮೂಡಿಬಂದಿದೆ.
ಅಭಿನಂದನೆಗಳು
ಶ್ರೀ' ಮಾನ್ಯರೆ,
ಚಂದ ಇದೆ. ಕೊನೆ ಸಾಲಿನ ಬಗ್ಗೆ - ನೆನಪುಗಳು ಮತ್ತೆ ಮತ್ತೆ ನೆನಪಾದಾಗ ಮಾತ್ರ ಹಸಿರಾಗಿರುತ್ತವೆ.
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ... nice...ಕೆಲವೊಂದು ಮರೆತು ಹೋದ ನೆನಪುಗಳು ಯಾವಾಗಲಾದರೊಮ್ಮೆ ಕಾಡುತ್ತವೆ...
chennagide ri..... baritiri.....
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ...
.....
Nice Lines....Kavana tumbaa sundaravagide...
ಚಂದದ ಕವನ.
ಹೂಂ... ನೆನಪುಗಳ ಸರದಿಯಲ್ಲಿ ಎಷ್ಟೊಂದು ವೈವಿದ್ಯತೆ...
ಅರಿಯದಿರೋ ಬೇಸರಕೋ.... ಅನುಭವಿಸುವ ಸಂತಸಕ್ಕೋ.. ಮೂಡಿದ ಭಾವಗಳಿಗೋ.. ಹೀಗೆ ಎಲ್ಲದಕ್ಕೂ ಒಂದೊಂದು ಉದಾಹರಣೆ ನೀಡುತ್ತಾ.....
ಮತ್ತೆ ಮತ್ತೆ ಮೂಡುವ... ಕಾಡುವ ನೆನಪುಗಳು..
ಹೆಜ್ಜೆಗಳ ಗುರುತು ಆರಿದರೂ ಪಾದದ ಸ್ಪರ್ಶ ಇನ್ನೂ ಅಲ್ಲೇ ಉಳಿದಂತೆ....
ತುಂಬಾ ಚಂದಿದ್ದು...
ಕವನದ ಜೊತೆ, ಜೊತೆಯಾದ ಫೋಟೋ ಕೂಡಾ....
itz nice...i liked the last paragraph much..
nanna anisikegalannu ashtondu chennagi teredidalu aaguttilla. but good one.
ವಾಣಿ...
ಸೊಗಸಾಗಿದೆ ಕವನ...
ಪ್ರತಿಸಾಲುಗಳೂ ಇಷ್ಟವಾದವು..
ಅಭಿನಂದನೆಗಳು ಸೊಗಸಾದ ಕವನಕ್ಕೆ..
nenapanuu nenapaagisi,nenapaagittukondu, nenapina naaveyalli saaguvude jeevanaa.... anuuvudu nana anisike
vanishri yavare
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ
tumba chennagiddu salugalu. manasige tumba hidistu..
Kavi Nisar Ahmad baritaare "ella marethiruvaga illa sallada nevava needi baradiru mathe haleya nenape"....nenapugalu oodinakaddiya haage...uriduhodamelu parimala ellede ulidiruttade
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
tumba artha garbita saalugalu
'ಶ್ರೀ ಮಾನ್ಯರೆ',
ಈ ಕವನ ಮತ್ತೊಮ್ಮೆ ಓದಿದೆ. ಒಂದು ಪ್ರಶ್ನೆ. ಮಲ್ಲಿಗೆ ಮೊಗ್ಗು, ಕಾಮನ ಬಿಲ್ಲು, ಮಳೆ ಹನಿ- ಇವೆಲ್ಲ ನಮಗೆ ಹಿತಾನುಭವ ನೀಡಿ ಮರೆಯಾಗುತ್ತವೆ. ಕಣ್ಣೀರ ಹನಿ ಸಹ ಮರೆಯಾಗುತ್ತದೆ.
ಆದರೆ ನೆನಪುಗಳು ಮತ್ತೆ ಮತ್ತೆ ನೆನಪಾಗಿ, ಕಳೆದುಹೋದ ಸುಂದರ ಕ್ಷಣಗಳು ಮರುಕಳಿಸುವಂತೆ ಮಾಡುತ್ತವೆ, ಮತ್ತದೇ ರೋಮಾಂಚನ ನೀಡುತ್ತವೆ.
ಇದು ನಿಮ್ಮ ಕವನದ ತಾತ್ಪರ್ಯ ಇರ ಬಹುದೇ?
chennagide kavana
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ..
super lines kane
keep going
ಸಾಲು ಸಾಲಾಗಿ ಕಾಡುವ ನೆನಪುಗಳ ಸರದಿಗೆ
ನೀನೂ ಒಂದು ನೆನಪಾಗಿ ಸೇರಿಬಿಡು,
ಮತ್ತೆ ನೆನಪಾಗುವಂತೆ...
ಸೊಗಸಾಗಿದೆ ಕವನ...
ಪ್ರತಿಸಾಲುಗಳೂ ಇಷ್ಟವಾದವು..
ವಾಣಿಶ್ರೀ....
ಮಧುರವಾದ ಭಾವನೆಗಳನ್ನು ಅತ್ಯಂತ ಸರಳ ಪದಗಳಲ್ಲಿ ಸೆರೆಹಿಡಿದು, ಕವಿತೆಯಲ್ಲಿ ನವಿರಾಗಿ ನಿರೂಪಿಸಿದ್ದೀರಿ. ಅಭಿನಂದನೆಗಳು
Post a Comment